ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ಅರ್ಥಾತ್ ಸುದರ್ಶನ್ ರಂಗಪ್ರಸಾದ್ ಅವರಿಗೆ ಈಗ ರಿಯಲ್ ಲೈಫ್ನಲ್ಲಿ ಎಂಟನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ದಂಪತಿ ಕುರಿತು ಕೆಲವು ಮಾಹಿತಿ...
ಸದಾ ಸಿಡುಕು ಮೋರೆ, ಹೆಂಡತಿ ಎಂದರೆ ಕಾಲ ಕಸಕ್ಕಿಂತ ಕಡಿಮೆ. 16 ವರ್ಷ ಸಂಸಾರದಿಂದ ಎರಡು ಮಕ್ಕಳಾದ ಮೇಲೆ ಲವರ್ ಹಿಂದೆ ಹೋಗಲು ಹವಣಿಸ್ತಿರೋ, ಪತ್ನಿಗೆ ಡಿವೋರ್ಸ್ ಕೊಡಲು ಇನ್ನಿಲ್ಲದ ಟ್ರೈ ಮಾಡ್ತಿರೋ ಗಂಡ ಯಾರು ಎಂದರೆ ಸೀರಿಯಲ್ ಪ್ರಿಯರ ಕಣ್ಣಮುಂದೆ ಬರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋ ಭಾಗ್ಯಲಕ್ಷ್ಮಿ ಸೀರಿಯಲ್‌ನ ಗಂಡ ತಾಂಡವ್. ಈ ಸೀರಿಯಲ್ ನಾಯಕನಾಗಿದ್ದರೂ ಧಾರಾವಾಹಿಯಲ್ಲಿ ತಾಂಡವ್ ಖಳನಾಯಕ. ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಇನ್ನೊಬ್ಬಳ ಸಹವಾಸ ಮಾಡಿದ್ದಾನೆ. ಈಗಂತೂ ಮನೆ ಬಿಟ್ಟು ಹೋಗಿ ಲವರ್ ಜೊತೆ ಬೇರೆ ಮನೆ ಮಾಡಿ ಸಂಸಾರ ಶುರುವಿಟ್ಟುಕೊಂಡಿದ್ದಾನೆ. ಇದೇ ಕಾರಣಕ್ಕೆ ತಾಂಡವ್ನನ್ನು ಕಂಡ್ರೆ ಸೀರಿಯಲ್ ಪ್ರಿಯರು ಉಗಿಯುತ್ತಿದ್ದಾರೆ. ಸಾಮಾನ್ಯವಾಗಿ ಖಳನಾಯಕ ಎಂದರೆ ಹೊರಗಡೆಯಲ್ಲಿಯೂ ಅವರನ್ನು ಬೈಯುವವರೇ ಹೆಚ್ಚು. ತಾವು ನೋಡುತ್ತಿರುವುದು ಧಾರಾವಾಹಿ, ಅದರಲ್ಲಿ ಇರುವುದು ಕಾಲ್ಪನಿಕ ಪಾತ್ರಗಳು ಎನ್ನುವುದನ್ನು ಮರೆತು, ಖಳನಾಯಕರನ್ನು ಚೆನ್ನಾಗಿ ಉಗಿಯುವುದೂ ಇದೆ. ಅದೇ ರೀತಿ ತಾಂಡವ್ ಪಾತ್ರಧಾರಿಯೂ ಅನುಭವಿಸುತ್ತಿದ್ದಾರೆ. ಅಂದಹಾಗೆ, ಖಳನಾಯಕನಾಗಿ ಮಿಂಚುತ್ತಿರುವ ತಾಂಡವ್ ಪಾತ್ರಧಾರಿಯ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್.
ಈ ಸಿಡುಕು ಮೋರಿ ಗಂಡನಿಗೆ ಇದೀಗ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಈಚೆಗಷ್ಟೇ ಭಾಗ್ಯಳ ಜೊತೆ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಯಾಗಿತ್ತು. ಆದರೆ ತಾಂಡವ್ ಅರ್ಥಾತ್ ಸುದರ್ಶನ್ ಮತ್ತು ಅವರ ರಿಯಲ್ ಪತ್ನಿ ಸಂಗೀತಾ ಅವರಿಗೆ ಈಗ ಎಂಟನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಏನೂ ಗೊತ್ತಿಲ್ಲದ, ಹೆಚ್ಚು ಕಲಿಯದ, ಈಗಷ್ಟೇ ವಿದ್ಯಾಭ್ಯಾಸ ಶುರು ಮಾಡಿರುವ ಭಾಗ್ಯ ತಾಂಡವ್ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್, ತಾಂಡವ್ ಅರ್ಥಾತ್ ಸುದರ್ಶನ ರಂಗಪ್ರಸಾದ್ ಅವರ ಪತ್ನಿ. ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು.
ಬಿಗ್ಬಾಸ್ ಓಟಿಟಿ ಷೋ ಡೇಟ್ ಫಿಕ್ಸ್? ಖಾಸಗಿ ವಿಡಿಯೋ ಲೀಕ್ ಬೆಡಗಿಗೆ ಸಿಕ್ಕೇಬಿಡ್ತು ಆಫರ್
ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ. ವಿವಾಹ ವಾರ್ಷಿಕೋತ್ಸವದ ಈ ಸಂದರ್ಭ ಸಂಗೀತಾ ಅವರು ಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಅವರು ಹಲವಾರು ಅನ್ಸೀನ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. 8 ವರ್ಷಗಳ ದಾಂಪತ್ಯ ಜೀವನ ಮುಗಿಸಿ 9ನೇ ವರ್ಷಕ್ಕೆ ಕಾಲಿಡುತ್ತಿರುವ ನಮಗೆ ಚಿಯರ್ಸ್. ನನ್ನ ಮುಂದಿನ ಎಲ್ಲಾ ಜೀವನದವನ್ನು, ಪ್ರತಿ ಉಸಿರನ್ನು ನಿನ್ನೊಂದಿಗೆ ಕಳೆಯಲು ಎದುರು ನೋಡುತ್ತಿದ್ದೇನೆ. ಕಷ್ಟ ಹಾಗೂ ಸುಖದ ಸಮಯದಲ್ಲಿ ನಿನ್ನೊಂದಿಗೆ ಕಲಿಯಲು, ಪ್ರೀತಿಸು, ಕಾಳಜಿ ವಹಿಸಲು, ಬೆಂಬಲಿಸಲು ಕಾಯುತ್ತಿದ್ದೇನೆ ಎಂದು ಸಂಗೀತಾ ಬರೆದುಕೊಂಡಿದ್ದಾರೆ.
ಪ್ರತಿ ಕ್ಷಣ ಕಳೆದಂತೆಯೂ ನಿನ್ನೊಂದಿಗೆ ಒಂದು ಕ್ಷಣವನ್ನು ಕೂಡಾ ಮಿಸ್ ಮಾಡಿಕೊಳ್ಳಬಾರದು ಎನ್ನುವ ಆಸೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ನಮ್ಮನ್ನು ಒಂದು ಮಾಡಿದ ಈ ಪ್ರಪಂಚಕ್ಕೆ ನಾನು ಅಭಾರಿ. ನನ್ನ ಜೀವವೇ, ನಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿನ್ನನ್ನು ಎಂದೆಂದೂ ಪ್ರೀತಿಸುತ್ತೇನೆ ಎಂದು ಸುದರ್ಶನ್ ರಂಗಪ್ರಸಾದ್ ಅವರ ಪತ್ನಿ ಸಂಗೀತಾ ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ. ಜೋಡಿಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ಕಿಡಿ ಕಾರೋದ್ರಲ್ಲಿ ಅತ್ತೆ ಜಯಾಗೆ ತಕ್ಕ ಸೊಸೆಯಾದ ಐಶ್! ಅಷ್ಟಕ್ಕೂ ಇಬ್ಬರ ಸಿಟ್ಟು ಯಾರ ವಿರುದ್ಧ?