ಗಂಡ ತಾಂಡವ್​ನನ್ನು ಸರಿಮಾಡೋಕೆ ಆಗ್ದೇ ತ್ರಿವೇಣಿ ಸಂಗಮದಲ್ಲಿ ಡುಮ್ಕಿ ಹೊಡೆದ ಭಾಗ್ಯ!

By Suchethana D  |  First Published Oct 7, 2024, 9:43 PM IST

ಅತ್ತ ಗಂಡ ತಾಂಡವ್​ನ ಅಸಲಿ ವಿಷಯ ತಿಳಿಯದೇ ಒದ್ದಾಡುತ್ತಿರುವ ಭಾಗ್ಯ, ಇತ್ತ ತ್ರಿವೇಣಿ ಸಂಗಮಕ್ಕೆ ಹೋಗಿ ಡುಮ್ಕಿ ಹೊಡೆದದ್ದು ಯಾಕೆ? 
 


ಭಾಗ್ಯಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಸತ್ಯ ತಿಳಿದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾಳೆ. ಮನೆಯಲ್ಲಿ ಹುಚ್ಚಿಯಂತೆ ಆಡುತ್ತಿದ್ದಾಳೆ. ಹೀಗ್ಯಾಕೆ ಮಾಡುತ್ತಿದ್ದಿಯಾ ಎಂದು ತಾಂಡವ್​ ಕೇಳಿದಾಗ ನನಗೆ ಸತ್ಯ ತಿಳಿಯಬೇಕಿದೆ ಎಂದಿದ್ದಾರೆ. ಮದುವೆಯಾಗಲು ಹೊರಟಿರೋ ತಾಂಡವ್​ಗೂ ವಿಚಿತ್ರ ಎಂದರೆ ಸತ್ಯ ಹೇಳಲು ಭಯ! ಇದೊಳ್ಳೆ ಹಾಸ್ಯಾಸ್ಪದವಾಗಿದೆ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು! ಅತ್ತೆ ಕುಸುಮಾ ಮತ್ತು ಭಾಗ್ಯ ಇನ್ನೂ ಸತ್ಯ ಮುಚ್ಚಿಡಲು ನೋಡ್ತಿದ್ದಾರೆ. ಮದುವೆ ಮನೆಗೆ ಭಾಗ್ಯ ಹೋದರೂ ಡೌಟೇ ಬರಲಿಲ್ಲ! ಅಲ್ಲಿ ದ್ವಾರದಲ್ಲಿಯೇ ತಾಂಡವ್ ಫೋಟೋ ಇದ್ದದ್ದೂ ನೋಡಲಿಲ್ಲ! ಸಾಲದು ಎಂಬುದಕ್ಕೆ ಗಂಡಿನ ಕಡೆಯವರು ಮದುವೆ ನಿಲ್ಲಿಸಿದ್ದು ಹಾಗೂ ಕುಸುಮಾ ಮತ್ತು ಪೂಜಾ ಬಂದು ಮದುವೆ ನಿಲ್ಲಿಸಿದ್ದು ಎನ್ನುವ ಮಾತಿಗೆ ತಾಳೆ ಹಾಕಿರುವ ಭಾಗ್ಯಳಿಗೆ ತಾಂಡವ್​ ಮೇಲೆ ಸಂದೇಹ ಬಂದಿದೆ ಅಷ್ಟೇ. ಆದರೆ ಇದುವರೆಗೂ ಅದು ಗಂಡನೇ ಎನ್ನುವುದು ಮಾತ್ರ ಗೊತ್ತಾಗಲಿಲ್ಲ! ಇದಕ್ಕೆ ಏನೆನ್ನಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮದುವೆ ಗಂಡು ಯಾರು ಎಂದು ಅತ್ತೆ ಮತ್ತು ತಂಗಿಯನ್ನು ಪೂಜಾ ಪ್ರಶ್ನಿಸುತ್ತಿದ್ದಾಳೆ. ಅತ್ತ ಅತ್ತೆ ಕೂಡ ಭಾಗ್ಯಳಿಗೆ ವಿಷಯ ಗೊತ್ತಾಗಬಾರದು ಎಂದು ಏನೇನೋ ಕಸರತ್ತು ಮಾಡುತ್ತಿದ್ದಾಳೆ.

ಇದರ ನಡುವೆಯೇ, ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ತ್ರೀವೇಣಿ ಸಂಗಮಕ್ಕೆ ಭೇಟಿ ಕೊಟ್ಟಿದ್ದಾಳೆ ಭಾಗ್ಯ ಅರ್ಥಾತ್​ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​. ಇದರ ವಿಡಿಯೋ ಅನ್ನು ಅವರು  ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಾಗ್ಯಳ ಸ್ಥಿತಿ ಕಂಡು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಗಂಡ ತಾಂಡವ್​ನನ್ನು  ಸರಿಮಾಡೋಕೆ ಆಗ್ದೇ  ತ್ರಿವೇಣಿ ಸಂಗಮದಲ್ಲಿ ಡುಮ್ಕಿ ಹೊಡೆದ್ರಾ ಎಂದು ಭಾಗ್ಯಳನ್ನು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು. ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮಕ್ಕೆ ಭೇಟಿ ಕೊಟ್ಟು ಅಲ್ಲಿ ಡುಮ್ಕಿ ಹೊಡೆದು ಈಗ ಬರುತ್ತಿದ್ದೇನೆ ಎಂದು ದೋಣಿಯ ಮೇಲಿನಿಂದ ಭಾಗ್ಯ ಅವರು ವಿಡಿಯೋ ಮಾಡಿದ್ದಾರೆ. ತಮ್ಮ ಎಂದಿನ ಹಾಸ್ಯದ ಸ್ಟೈಲ್​ನಲ್ಲಿ ಅವರು ಈ ವಿಡಿಯೋ ಮಾಡಿದ್ದಾರೆ. ಅದನ್ನು ಕೇಳಿ ಅಭಿಮಾನಿಗಳು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. 

Tap to resize

Latest Videos

undefined

ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಅವಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಇದರಿಂದಾಗಿ  ಸೀರಿಯಲ್ ಪ್ರೇಮಿಗಳಿಗೆ ಅಹಸ್ಯ ಹುಟ್ಟಲು ಶುರುವಾದಂತಿದೆ. ಭಾಗ್ಯಳಿಗೆ ಅಲ್ಲಿರೋ ಮದುವೆ ಗಂಡು ತನ್ನ ಗಂಡನೇ ಎಂದು ತಿಳಿಯದಷ್ಟು ಪೆದ್ದಿನಾ? ಇದು ಮುಗ್ಧತೆಯ ಪರಮಾವಧಿಯೋ, ಮೂರ್ಖತನದ ಪರಮಾವಧಿಯೋ ಒಂದೂ ಗೊತ್ತಾಗ್ತಿಲ್ಲ ಎನ್ನುವುದು ನೆಟ್ಟಿಗರ ಮಾತು. ಇದೀಗ ಭಾಗ್ಯಳಿಗೆ ಗಂಡನ ಮೇಲೆ ಡೌಟ್​ ಬಂದಿದೆ. ಅಷ್ಟು ಮಾತ್ರಕ್ಕೆ ಅವಳಿಗೆ ತಲೆ ಇದೆ ಎನ್ನುವುದನ್ನು ತೋರಿಸಿದ್ದಾರೆ. ಅದೇ ಇನ್ನೊಂದೆಡೆ ಸೊಸೆಯನ್ನು ಒಂದು ತಿಂಗಳಿನಲ್ಲಿ ಬದಲಿಸ್ತೇನೆ ಎಂದಿದ್ದಾಳೆ ಕುಸುಮಾ. ಅವಳು ಸಕ್ಸಸ್​ ಆಗ್ತಾಳಾ ನೋಡಬೇಕಿದೆ. ಗಂಡನ ಸಲುವಾಗಿ ಹೆಣ್ಣಾದವರ ತನ್ನ ಅಸ್ತಿತ್ವವನ್ನೇ ಬದಲಿಸಬೇಕಾ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. 

ಇನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.     

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ
 

click me!