ತಮ್ಮ ದೇಹದಲ್ಲಿ ತೂಕ ಬದಲಾವಣೆ ಯಾವ ರೀತಿಯಲ್ಲಿ ಆಗುತ್ತದೆ ಎಂದು ವಿವರಿಸಿದ ತೇಜಸ್ವಿ ಪ್ರಕಾಶ್. ಅಲ್ಲದೆ ಜನರ ಕಾಮೆಂಟ್ ಬಗ್ಗೆ ವಿವರಿಸಿದ್ದಾರೆ.
ಹಿಂದಿ ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಮಾಸ್ಟರ್ ಚೆಫ್ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಗ್ ಬಾಸ್ ಟ್ರೋಫಿ ಹಿಡಿದ ಮೇಲೆ ತೇಜಸ್ವಿ ಪ್ರಕಾಶ್ ಹಣೆ ಬರಹ ಬದಲಾಗಿಬಿಟ್ಟಿತ್ತು. ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಸದಾ ಬೆನ್ನು ಹಿಂದೆ ಇರುವ ಪ್ಯಾಪರಾಜಿಗಳು..ಅಬ್ಬಬ್ಬಾ......ಆದರೆ ಇದೇ ನಟಿಗೆ ಹಲವರು ಬಾಡಿ ಶೇಮಿಂಗ್ ಮಾಡಿದ್ದಾರಂತೆ.
'ಏನ್ ಮಾಡಿದರೂ ಜನರು ದಪ್ಪ ಸಣ್ಣ ಅಂತ ಜಡ್ಜ್ ಮಾಡುವುದು ನಿಲ್ಲಿಸುವುದಿಲ್ಲ. ಅದರಲ್ಲೂ ನನಗೆ ಬಾಲ್ಯದಿಂದಲೂ ಮೈ ಕೈ ತುಂಬಾನೇ ಸಣ್ಣಗಿದೆ ಆದರೆ ಮುಖ ಮಾತ್ರ ತೀರ ದಪ್ಪಗಿರುತ್ತದೆ. ನನ್ನ ಫೋಟೋ ನೋಡಿದಾಗ ಏನ್ ಇವಳು ಇಷ್ಟು ದಪ್ಪಗಿದ್ದಾಳೆ ಅಂತಿದ್ರು ಆದರೆ ನೇರವಾಗಿ ನೋಡದ ಮೇಲೆ ಅಯ್ಯೋ ನೀನು ಸಣ್ಣಗಿರುವೆ ಅಂತಾರೆ. ತುಂಬಾ ವಿಚಿತ್ರ ಕಾಮೆಂಟ್‌ಗಳನ್ನು ಕೇಳಿದ್ದೀನಿ...ಫುಟ್‌ಬಾಲ್ ಅಂತ ಹೇಳಿದ್ದಾರೆ. ಜನರ ಕಾಮೆಂಟ್‌ಗಳನ್ನು ಓಪ್ಪಿಕೊಳ್ಳುತ್ತೀನಿ ಅದರಲ್ಲೂ ಕೆಲವೊಮ್ಮೆ ತೀರಾ ಸೀರಿಯಸ್ ಆಗಿ ಸ್ವೀಕರಿಸುತ್ತೀನಿ ಆದರೆ ನೆಗೆಟಿವ್ ಅಲ್ಲದೆ ಪಾಸಿಟಿವ್ ಆಗಿ ಸ್ವೀಕರಿಸುತ್ತೀನಿ' ಎಂದು ಹ್ಯೂಮನ್ಸ್ ಹ್ಯೂಮನ್ಸ್ ಆಫ್ ಬಾಂಬೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತೇಜಶ್ವಿ ಪ್ರಕಾಶ್ ಮಾತನಾಡಿದ್ದಾರೆ.
ಹುಡುಗರ ರೀತಿ ಹೇರ್‌ಕಟ್ ಮಾಡಿಸಿಕೊಂಡ್ರಾ ಕೀರ್ತಿ ಸುರೇಶ್; ಅತ್ತೆ-ಮಾವ ಗಂಡುಬೀರಿ ಅಂದಿಲ್ವಾ?
'ಡಯಟ್ ಮಾಡಬೇಕಾ? ದಪ್ಪಗಾಗಬೇಕಾ? ಪ್ರೋಟಿನ್ ತೆಗೆದುಕೊಳ್ಳಬೇಕಾ ಎಂದು ಪಾಸಿಟಿವ್ ಆಗಿ ಯೋಚನೆ ಮಾಡುತ್ತೀನಿ. ಬದಲಾವಣೆ ಮನುಷ್ಯ ಜೀವನದಲ್ಲಿ ಅಗ್ಯವಿದೆ ನಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬರಬೇಕು. ನಾನು ದಿನ ಫೇಸ್ ಯೋಗ ಮಾಡುತ್ತೀನಿ, ಕಾಂಟೋರಿಂಗ್ ಮಾಡುತ್ತೀನಿ ಹಾಗೂ ಕೂದಲಿನಿಂದ ಮುಖ ಮುಚ್ಚಿಕೊಳ್ಳುತ್ತೀನಿ. ಏನೂ ಮಾಡದೆ ಅಯ್ಯೋ ಇದು ದೇವರು ಕೊಟ್ಟಿರುವ ಆಶೀರ್ವಾದ ಅಂತ ಸುಮ್ಮನೆ ಕೂರುವುದಿಲ್ಲ.ಕೆಲವರು ಹೇಳುವ ಮಾತುಗಳು ಅರ್ಥಪೂರ್ಣವಾಗಿರುತ್ತದೆ ಆಗ ಕೇಳಿಸಿಕೊಂಡು ತಿದ್ದುಕೊಳ್ಳಬೇಕು ಅನಿಸುತ್ತದೆ. ಆದರೆ ಕಾಮೆಂಟ್ ಮಾಡುವವರು ಹೇಗೆ ಅಂದ್ರೆ ಅವರು ಬರೆದಿರುವ ಸಾಲುಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನೆಟ್ಟಗೆ ಬರೆಯಲು ಬರಲು ಆಗದೇ ಇರುವವರು ಕಾಮೆಂಟ್ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ತೇಜಸ್ವಿ ಹೇಳಿದ್ದಾರೆ.
ನಟ ಅಜಯ್ ರಾವ್ ಜೀವನದಲ್ಲಿ ಬಿರುಕು; ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ 'ಕೃಷ್ಣ'