ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ಚಿನ್ನುಮರಿ ಉರ್ಫ್ ಜಾಹ್ನವಿ ಹಚ್ಚಿದ ಲಿಪ್‌ಸ್ಟಿಕ್- ಹಣೆಬೊಟ್ಟಿಗೆ ಮಹಿಳೆಯರಿಂದ ಭಾರಿ ಬೇಡಿಕೆ ಶುರುವಾಗಿದೆ. ಏನಿದು ವಿಷ್ಯ?
ಲಕ್ಷ್ಮೀ ನಿವಾಸ ಸೀರಿಯಲ್ ಚಿನ್ನುಮರಿ ಜಾಹ್ನವಿ ನದಿಯಲ್ಲಿ ಬಿದ್ದು ಸತ್ತೇ ಹೋದಳು ಎನ್ನುವಾಗ ಎದ್ದು ಬಂದದ್ದೂ ಆಯ್ತು. ಸೈಕೋ ಗಂಡ ಜಯಂತ್‌ನ ಕಿರುಕುಳ ಹಾಗೂ ಅತಿಯಾದ ಪ್ರೀತಿಯಿಂದಾಗಿ ಭಾರೀ ನೋವು ಅನುಭವಿಸಿದ ಜಾನು, ಶ್ರೀಲಂಕಾದಲ್ಲಿ ಸಮುದ್ರಕ್ಕೆ ಹಾರಿದ್ದಳು. ಹೆಂಡತಿಗೆ ಪ್ರೀತಿ ಕೊಡುವುದಾಗಿ ಅತ್ಯಂತ ಕ್ರೂರವಾಗಿ ಕಿರುಕುಳ ಕೊಡುತ್ತಿದ್ದ ಸೈಕೋ ಗಂಡ ಜಯಂತನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಜಾಹ್ನವಿ ತುಂಬಾ ಪ್ರಯತ್ನ ಮಾಡುತ್ತಿರುತ್ತಾಳೆ. ಆದರೆ, ಈ ನಡುವೆ ಹೆಂಡತಿಯ ಕೋಪ ತಣಿಸಲು ಗಂಡ ಜಯಂತ್ ಶ್ರೀಲಂಕಾ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಜಾನು ಸಮುದ್ರಕ್ಕೆ ಜಿಗಿಯುತ್ತಾಳೆ. ಆಕೆ ಸತ್ತಿದ್ದಾಳೆಂದು ಸೈಕೋ ಜಯಂತ ಕಣ್ಣೀರಿಟ್ಟು ಗೋಳಾಡುತ್ತಿದ್ದಾನೆ. ಹುಚ್ಚನಂತೆ ಆಡುತ್ತಿದ್ದಾನೆ.
ಸಮುದ್ರದ ಮಧ್ಯದಲ್ಲಿ ಬೋಟ್‌ನ ಮಧ್ಯ ಭಾಗ ಗಂಡನನ್ನು ಚೇರಿನಲ್ಲಿ ಕೂರಿಸಿ ಕಟ್ಟಿಹಾಕಿ, ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ನೀವು ನನ್ನನ್ನು ಹೀಗೆಯೇ ಪ್ರೀತಿಯಲ್ಲಿ ಕಟ್ಟಿ ಹಾಕಿದ್ದೀರಿ. ಪ್ರೀತಿ ಅಂದ್ರೆ ಹೂವು ಅಂದ್ಕೊಂಡಿದ್ದೆ, ಅದರಲ್ಲಿ ಅಷ್ಟು ಮುಳ್ಳು ಇರುತ್ತೆ ಅಂತ ಗೊತ್ತೇ ಇರಲಿಲ್ಲ ಎನ್ನುತ್ತಾಳೆ. ಆಗ ಚಾಕು ಹಿಡಿದು ಗಂಡನಿಗೆ ಚುಚ್ಚಿ ಕೊಲೆ ಮಾಡಲು ಮುಂದಾಗುತ್ತಾಳೆ. ಆದರೆ, ಆಕೆಯ ಮನಸ್ಸೊಪ್ಪದೇ ಗಂಡನನ್ನು ಬಿಟ್ಟು ತಾನೇ ಬೋಟ್‌ನ ತುದಿಗೆ ಹೋಗುತ್ತಾಳೆ. ಅಲ್ಲಿ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಎಂದು ಕೂಗುತ್ತಾ, ಇವರ ಹುಚ್ಚು ಪ್ರೀತಿ ಸಹಿಸಿಕೊಳ್ಳಲಾಗುತ್ತಿಲ್ಲವೆಂದು ಹೇಳುತ್ತಾ ಸಮುದ್ರಕ್ಕೆ ಹಾರಿದ್ದಾಳೆ. ಕೊನೆಗೆ, ಆಕೆ ಚೆನ್ನೈ ಸಮುದ್ರದಲ್ಲಿ ಸಿಕ್ಕಿದ್ದಾಳೆ. ವಿಶ್ವನ ತಂದೆ ಕೆಲಸದ ನಿಮಿತ್ ಚೆನ್ನೈಗೆ ತೆರಳಿದ್ದಾರೆ. ಆ ಸಂದರ್ಭದಲ್ಲಿ ಜಾನು ಸಿಕ್ಕಿದ್ದಾಳೆ. ಆಕೆ ನೆನಪಿನ ಶಕ್ತಿ ಕಳೆದುಕೊಂಡಿದ್ದಾಳೆ ಎಂದುಕೊಂಡರೂ ಆಕೆಗೆ ಎಲ್ಲವೂ ನೆನಪಿದೆ. ನಾಯಕಿ ಬದುಕಿದ್ದಾಳೆ ಎಂದು ಅಭಿಮಾನಿಗಳು ನಿಟ್ಟುಸಿರು ಬಿಡುತ್ತಿದ್ದಾರೆ.
ಕಾಲುಂಗರ ಇಲ್ಲದೇ ನಿಧಿಯನ್ನು ಮನೆ ತುಂಬಿಸಿಕೊಂಡದ್ದೂ ಆಗೋಯ್ತು! ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತಾಯ?
ಆದರೆ ಶ್ರೀಲಂಕಾದ ಸಮುದ್ರದಲ್ಲಿ ಹಾರಿದಾಕೆ, ಚೆನ್ನೈನಲ್ಲಿ ಸಿಕ್ಕಿದ್ದು ಇದೀಗ ಭಾರಿ ಟ್ರೋಲ್ಗೆ ಕಾರಣವಾಗುತ್ತಿದೆ. ಇದರ ಬಗ್ಗೆ ವಿವಿಧ ರೀತಿಯ ಮೀಮ್ಸ್ ಹರಿದಾಡುತ್ತಿವೆ. ಅದರ ನಡುವೆಯೇ, ದಿನಪೂರ್ತಿ ನೀರಿನಲ್ಲಿಯೇ ಇದ್ದರೂ ಆಕೆಯ ಲಿಪ್‌ಸ್ಟಿಕ್ ಮತ್ತು ಹಣೆಬೊಟ್ಟಿಗೆ ಏನೂ ಆಗದೇ ಇರುವ ಬಗ್ಗೆ ಇನ್ನಿಲ್ಲದ ಟ್ರೋಲ್ಗಳು ಎದುರಾಗಿದೆ. ಇದರ ಮೀಮ್ಸ್ ಮಾಡಿದ ಕೆಲವರು, ಆ ಹಣೆಬೊಟ್ಟು ಮತ್ತು ಲಿಪ್‌ಸ್ಟಿಕ್ ಕಂಪೆನಿಯ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಅದರಲ್ಲಿಯೂ ಮಹಿಳೆಯರಿಂದ ಈ ಕಂಪೆನಿಗೆ ಭಾರಿ ಡಿಮಾಂಡ್ ಬಂದಿದೆ. ದಿನಪೂರ್ತಿ ನೀರಿನಲ್ಲಿಯೇ ಇದ್ದರೂ ಶ್ರೀಲಂಕಾದಲ್ಲಿ ಬಿದ್ದು, ಚೆನ್ನೈನಲ್ಲಿ ಸಿಕ್ಕರೂ ಲಿಪ್‌ಸ್ಟಿಕ್, ಹಣೆಬೊಟ್ಟಿಗೆ ಸ್ವಲ್ಪವೂ ಏನೂ ಆಗಿಲ್ಲ ಎನ್ನುವುದು ಅಚ್ಚರಿ, ಪ್ಲೀಸ್ ಅದು ಯಾವ ಕಂಪೆನಿಯದ್ದು ಹೇಳಿ ಎಂದು ತಮಾಷೆ ಮಾಡಲಾಗುತ್ತಿದೆ.
ಇನ್ನು, ಈ ಸೀರಿಯಲ್ಗೆ ಬರುವುದಾದರೆ, ಶ್ರೀಲಂಕಾ ಸಮುದ್ರದಲ್ಲಿ ಬಿದ್ದಿದ್ದ ಜಾನು, ಚೆನ್ನೈನ ಕಡಲತೀರದಲ್ಲಿ ಪತ್ತೆಯಾಗಿದ್ದಳು. ಅಲ್ಲಿಯ ಮೀನುಗಾರರು ಜಾಹ್ನವಿಯನ್ನು ರಕ್ಷಣೆ ಮಾಡಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ವಿಶ್ವನ ತಂದೆ ನರಸಿಂಹಯ್ಯ ಪೊಲೀಸರಿಗೆ ಮಾಹಿತಿ ನೀಡಿ ಹೇಳಿ ಎಂದು ಅಲ್ಲಿಯ ಮೀನುಗಾರರಿಗೆ ಹೇಳುತ್ತಾರೆ. ಪ್ರಜ್ಞೆ ಬಂದ ಕೂಡಲೇ, ನಾನಿನ್ನು ಬದುಕಿದ್ದೆನಾ? ಸತ್ತಿಲ್ಲವಾ? ಎಂದು ಜಾನು ಆಶ್ಚರ್ಯಕ್ಕೆ ಒಳಗಾಗುತ್ತಾಳೆ. ಪಕ್ಕದಲ್ಲಿ ಪೊಲೀಸರು ಬರುತ್ತಿರೋದನ್ನು ನೋಡಿದ ಜಾನು, ಮತ್ತೆ ನನ್ನನ್ನು ಗಂಡ ಜಯಂತ್ ಬಳಿ ಕಳುಹಿಸ್ತಾರಾ ಎಂದು ಭಯಗೊಂಡ ಜಾನು ಅಲ್ಲಿಂದ ಓಡಿ ಬಂದಿದ್ದಾಳೆ.ಚಿಕ್ಕ ಬೋಟ್‌ನಲ್ಲಿ ಮಲಗಿದ್ದ ಜಾನು ದಿಡೀರ್ ಅಂತ ಕಾಣಿಸದಿದ್ದಾಗ ಮೀನುಗಾರರು ಮತ್ತು ಪೊಲೀಸರು ಹುಡುಕಲು ಆರಂಭಿಸುತ್ತಾರೆ. ಇತ್ತ ಎಲ್ಲರಿಂದ ತಪ್ಪಿಸಿಕೊಂಡ ಜಾನು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಾಳೆ.ಚೆನ್ನೈ ಬೀಚ್‌ನಿಂದ ನೇರವಾಗಿ ವಿಶ್ವನ ಮನೆ ತಲುಪೋದು ಪಕ್ಕಾ ಆಗಿದೆ. ಆದ್ರೆ ವಿಶ್ವನ ತಂದೆ ಮುಂದೆ ಜಾನು ಏನು ಹೇಳುತ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.
ಅತ್ತೆಯ ಕರೆಂಟ್ ಶಾಕ್ಗೆ ವಿಲವಿಲ ಒದ್ದಾಡಿದ ಭೂಮಿಕಾ: ನಮ್ಮನ್ನೂ ಕೊಂದುಬಿಡಿ- ಫ್ಯಾನ್ಸ್ ಗರಂ