ಬದಲಾಗ್ತಿರೋ ಭಾಗ್ಯಳ ಜೊತೆ ಬದಲಾಯ್ತು ಟೈಟಲ್​ ಕಾರ್ಡ್​: ಏನಿದು ಭಾಗ್ಯಲಕ್ಷ್ಮಿ ಟ್ವಿಸ್ಟ್​?

By Suchethana D  |  First Published Sep 29, 2024, 5:03 PM IST

ಭಾಗ್ಯ ಬದಲಾಗುತ್ತಿದ್ದಾಳೆ. ಸೊಸೆಯನ್ನು ಬದಲು ಮಾಡಲು ಅತ್ತೆ ಪಣ ತೊಟ್ಟಿದ್ದಾಳೆ. ಇದರ ಬೆನ್ನಲ್ಲೇ ಟೈಟಲ್​ ಕಾರ್ಡ್​ ಕೂಡ ಬದಲಾಗಿದೆ. 
 


ಭಾಗ್ಯಲಕ್ಷ್ಮಿ ಭಾಗ್ಯ ಬದಲಾಗ್ತಿದ್ದಾಳೆ. ಸೀರೆ ಜಾಗದಲ್ಲಿ ಜೀನ್ಸ್​ ಬರತ್ತೆ, ಜಡೆ ಹೋಗಿ ಬಾಬ್​ಕಟ್​ ಬರತ್ತೆ, ಇನ್ನು ಏನೇನೋ ಆಗತ್ತೆ ಅಂದ್ರೆ ನಂಬ್ತೀರಾ? ಸದ್ಯದ ಪರಿಸ್ಥಿತಿಯಲ್ಲಿ ಇದನ್ನೇ ಸೀರಿಯಲ್​ ಪ್ರೇಕ್ಷಕರು ನಂಬಿಕೊಂಡಿದ್ದಾರೆ. ಇದಕ್ಕೆ ಕಾರಣ ತನ್ನ ಸೊಸೆಯನ್ನು ಬದಲು ಮಾಡುವುದಾಗಿ ಅತ್ತೆ ಕುಸುಮಾ ತೊಟ್ಟಿರುವ ಪಣ. ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೇಷ್ಠಾ ಮತ್ತು ತಾಂಡವ್​  ಮದುವೆ ನಿಂತಿದೆ. ಇನ್ನೇನು ತಾಂಡವ್​ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಕುಸುಮಾ ಮತ್ತು ಪೂಜಾ ಎಂಟ್ರಿಯಾಗಿದೆ. ಎಲ್ಲರ ಎದುರೇ ಮಗನಿಗೆ ಕಪಾಳಮೋಕ್ಷ  ಮಾಡಿದ್ದಾಳೆ ಕುಸುಮಾ. ನನ್ನ ಸೊಸೆಗೆ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾಳೆ. ಕುತ್ತಿಗೆಯಲ್ಲಿ ಹಾಕಿರೋ ಹೂವಿನ ಹಾರವನ್ನು ಕಿತ್ತೆಸೆದಿದ್ದಾಳೆ. ಶಲ್ಯವನ್ನೂ ಮಗನ ಕುತ್ತಿಗೆಗೆ ಕಟ್ಟಿ ದರದರ ಎಳೆದುಕೊಂಡು ಬಂದಿದ್ದಾಳೆ.  

ಅದೇ ಇನ್ನೊಂದೆಡೆ, ತಾಂಡವ್​ನನ್ನು ರಸ್ತೆಯ ಮೇಲೆ ದರದರ ಎಳೆದುಕೊಂಡು ಬಂದಿದ್ದಾಳೆ ಕುಸುಮಾ. ನಾನು ಹೀಗೆ ಆಡ್ತಿರೋದಕ್ಕೆ ನೀನೇ ಕಾರಣ ಎಂದು ಹೇಳಿದ್ದಾನೆ ತಾಂಡವ್​. ಇಷ್ಟವಿಲ್ಲದ ಮದ್ವೆ ಮಾಡಿರುವುದಕ್ಕೆ ಹೀಗೆ ಆಗಿದ್ದು ಎನ್ನುವುದು ಅವನ ಮಾತಿನ ಅರ್ಥ. ನಿನ್ನ ದರ್ಬಾರಿನಿಂದಾಗಿ ನನಗೆ ಹೀಗೆ ಆಗಿದ್ದು ಅಂದಿದ್ದಾನೆ ತಾಂಡವ್​. ಅದಕ್ಕೆ ಕುಸುಮಾ,  ತಾಂಡವ್​ಗೆ ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅಷ್ಟಕ್ಕೂ ತಾಂಡವ್​ಗೆ ಭಾಗ್ಯಳ ಮೇಲಿರೋ ಬಹುದೊಡ್ಡ ಸಿಟ್ಟು ಎಂದರೆ ಆಕೆ ಹಳೆ ಕಾಲದ ಹೆಂಗಸಿನ ರೀತಿ ಇದ್ದಾಳೆ, ಶ್ರೇಷ್ಠಾಳಂತೆ ಮಾಡರ್ನ್​ ಆಗಿಲ್ಲ, ಪೆದ್ದಿ ಎನ್ನೋದು. ಆದ್ರೆ ಇದಾಗಲೇ ಭಾಗ್ಯ ಇಂಗ್ಲಿಷ್​ ಕಲಿತು, ಎಸ್​ಎಸ್​ಎಲ್​ಸಿ ಬರೆದು, ಲಕ್ಷಗಟ್ಟಲೆ ದುಡಿಯೋ ಕೆಲಸನೂ ಗಿಟ್ಟಿಸಿಕೊಂಡಾಯ್ತು. ಈಗ ಏನಿದ್ದರೂ ಆಕೆಯನ್ನು ಮಾಡರ್ನ್​ ಮಾಡುವುದು ಅಷ್ಟೇ. ಅದಕ್ಕಾಗಿಯೇ ಗಂಡನಿಗಾಗಿ  ಭಾಗ್ಯಳನ್ನು ಮಾಡರ್ನ್​ ಹೆಣ್ಣಾಗಿ ಮಾಡುವುದೊಂದೇ ಕುಸುಮತ್ತೆಗೆ ಇರೋ ದಾರಿ ಎಂದೇ ಅರ್ಥೈಸಲಾಗುತ್ತಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.  

Tap to resize

Latest Videos

undefined

ವ್ಹಾವ್​ ಎನ್ನುವ ಸ್ವರ್ಗ- ಉಸ್ಸಪ್ಪಾ ಎನ್ನುವ ನರಕ... ಬಿಗ್​ಬಾಸ್​ ಮನೆಯ ಸಂಪೂರ್ಣ ಚಿತ್ರಣದ ಪ್ರೊಮೋ ಬಿಡುಗಡೆ

ಇದರ ನಡುವೆಯೇ, ಈಗ ಭಾಗ್ಯಲಕ್ಷ್ಮಿ ಸೀರಿಯಲ್​ನ ಟೈಟಲ್​ ಕಾರ್ಡ್​ ಬದಲಾಯಿಸಲಾಗಿದೆ. ಈ ಬಗ್ಗೆ ವಾಹಿನಿ ಪ್ರೊಮೋ ಒಂದನ್ನು ರಿಲೀಸ್​ ಮಾಡಿದೆ. ಇದರಲ್ಲಿ ಮೊದಲಿದ್ದ ಟೈಟಲ್​ ಕಾರ್ಡ್​ ಬದಲಿಗೆ ಹೊಸ ಟೈಟಲ್​ ಕಾರ್ಡ್​ ನೋಡಬಹುದು. ಟೈಟಲ್​ ಕಾರ್ಡ್​ ಬದಲಾಗುತ್ತಿರುವ ಬಗ್ಗೆ ತಾಂಡವ್​ ಮತ್ತು ಭಾಗ್ಯ ಕೂಡ ಮಾತನಾಡಿದ್ದಾರೆ. 'ಭಾಗ್ಯನೂ ಚೇಂಜ್​ ಆಗಿದ್ದಾಳೆ, ನನ್ನ ಅಮ್ಮನೂ ಚೇಂಜ್​ ಆಗ್ತಾ ಇದ್ದಾಳೆ. ಅವಳ ಕಡೆನೇ ವಾಲ್ತಿದ್ದಾರೆ. ಈ ಚೇಂಜ್​ ನನ್ನ ಜೀವನದಲ್ಲಿ ನಡೆಯುತ್ತಿರಬೇಕಾದ್ರೆ ಟೈಟಲ್​ ಕಾರ್ಡ್​ ಚೇಂಜ್​ ಯಾಕೆ ಆಗಬಾರದು' ಎಂದು ತಾಂಡವ್ ಕೇಳಿದ್ದಾನೆ. ಅದೇ ಭಾಗ್ಯ 'ನನ್ನ ಜೀವನ ಬದಲಾಗುತ್ತಿದೆ, ಜೀವನದಲ್ಲಿನ ನಿರ್ಧಾರಗಳು ಬದಲಾಗ್ತಿವೆ. ಆದ್ದರಿಂದ ಟೈಟಲ್​ ಕಾರ್ಡ್​ ಕೂಡ ಬದಲಾಗುವುದರಲ್ಲಿ ಅರ್ಥವಿದೆ' ಎಂದಿದ್ದಾಳೆ. ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಏನು ತಿರುವು ಇರಲಿದೆ ಎನ್ನುವುದಷ್ಟೇ ಸದ್ಯಕ್ಕಿರುವ ಕುತೂಹಲ.

ಅಷ್ಟಕ್ಕೂ ಇದೀಗ ಭಾಗ್ಯಳ ಮೇಲೆಯೇ ಸೀರಿಯಲ್ ಪ್ರೇಮಿಗಳಿಗೆ ಅಹಸ್ಯ ಹುಟ್ಟಲು ಶುರುವಾದಂತಿದೆ. ಏಕೆಂದರೆ,  ಪತಿ ಮತ್ತು ಪತ್ನಿಗೆ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ, ಪ್ರೀತಿ, ನಂಬಿಕೆ ಎಲ್ಲವೂ ಇದ್ದರೇನೇ ದಾಂಪತ್ಯ ಚೆಂದ, ದಾಂಪತ್ಯದ ಸೊಗಡು ಇರುವುದೂ ಅದರಲ್ಲಿಯೇ ಎಂದರೂ,  ಭಾಗ್ಯಳಂಥ ಪೆದ್ದು ಪತ್ನಿಯನ್ನು ತೋರಿಸ್ತಿರೋದು ಯಾಕೆ ಎನ್ನುತ್ತಿದ್ದಾರೆ ನೆಟ್ಟಿಗರು. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಾಕೆಗೆ ತನ್ನ ಪತಿಯೇ ಮದುಮಗ ಎನ್ನೋದು ಇನ್ನೂ ಯಾಕೆ ಗೊತ್ತಾಗ್ತಿಲ್ಲ ಎನ್ನುವುದು ಅವರ ಪ್ರಶ್ನೆ.  ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಶ್ರೇಷ್ಠಾ ಯಾವುದೋ ಇಬ್ಬರು ಮಕ್ಕಳ ಅಪ್ಪನನ್ನು ಮದ್ವೆಯಾಗ್ತಿದ್ದಾಳೆ ಎನ್ನೋ ಸತ್ಯ ಭಾಗ್ಯಂಗೆ ಗೊತ್ತು. ಹೋಗಲಿ, ಎಷ್ಟೋ ಮಂದಿ ಇಂಥವರು ಇದ್ದಿರಬಹುದು. ಆದರೆ ಇದೀಗ ಶ್ರೇಷ್ಠಾಳ ಮದುವೆಗಾಗಿ ತಾಂಡವ್​ ಕಿಟಕಿ ಮುರಿದು ಹೋಗಿದ್ದಾನೆ. ಅದೂ ಹೋಗಲಿ... ಪೂಜಾ ಶ್ರೇಷ್ಠಾಳ ಮದುವೆ ನಿಲ್ಲಿಸಲು ಹೋದವರು ಗಂಡಿನ ಕಡೆಯವರು ಬಂದು ಮದುವೆ ನಿಲ್ಲಿಸಿದ್ದಾರೆ ಎಂದಿದ್ದಾರೆ. ಸಾಲದು ಎನ್ನುವುದಕ್ಕೆ ಮೈಮೇಲೆ ಬಂದಂತೆ ವರ್ತಿಸುತ್ತಿದ್ದ ಶ್ರೇಷ್ಠಾ ಪೂಜಾ ಮತ್ತು ಕುಸುಮಾ ಆಂಟಿ ಬಂದು ಮದುವೆ ನಿಲ್ಲಿಸಿದರು ಎಂದಿದ್ದಾರೆ. ಆದರೂ ಭಾಗ್ಯಳಿಗೆ ಇದು ಗೊತ್ತಾಗಿಲ್ಲ ಎನ್ನುವುದು ವಿಚಿತ್ರವಾಗಿದೆ ಎನ್ನುವುದು ನೆಟ್ಟಿಗರ ಅಭಿಮತ. 

ಕೈಯಲ್ಲಿ ಗರಗಸ ಹಿಡಿದು ಶ್ರೇಷ್ಠಾಳನ್ನು ಕೊಲ್ಲಲು ಹೊರಟ ಭಾಗ್ಯ: ವಿಡಿಯೋ ನೋಡಿ ಅಭಿಮಾನಿಗಳ ಸಪೋರ್ಟ್​!

click me!