
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಕೊನೆಗೂ ಭಾಗ್ಯ, ತಾಂಡವ್ ಮುಂದೆ ಗೆದ್ದಿದ್ದಾಳೆ. ಬೇಕು ಅಂತಲೇ ತಾಂಡವ್ ಆರು ತಿಂಗಳಿನಿಂದ ಮನೆ ಇಎಂಐ ಕಟ್ಟಿರಲಿಲ್ಲ. ಈ ಹಣವನ್ನು ಭಾಗ್ಯ ಕಟ್ಟಿದರೆ ಮಾತ್ರ ಅವಳಿಗೆ ಮನೆ ಉಳಿಯುತ್ತಿತ್ತು. ಇದಕ್ಕಾಗಿ ಅವಳು ಕಷ್ಟಪಟ್ಟು ಹಣ ಹೊಂದಿಸಿದ್ದಾಳೆ.
ತಾಂಡವ್ ಕನಸು ನುಚ್ಚು ನೂರಾಯ್ತು!
“ಭಾಗ್ಯ ನನ್ನ ಮುಂದೆ ಮಂಡಿಯೂರಿ ಕೂತು ನಾನು ಸೋತು ಹೋದೆ ಅಂತ ಒಪ್ಪಿಕೊಂಡರೆ ನಾನು ಹಣ ಕಟ್ತೀನಿ” ಅಂತ ತಾಂಡವ್ ಹೇಳಿದ್ದನು. “ನನ್ನ ಸೊಸೆ ಈ ರೀತಿ ಮಾಡೋದಿಲ್ಲ, ಆ ಥರ ಮಾಡೋಕೆ ನಾವು ಬಿಡೋದಿಲ್ಲ” ಎಂದು ತಾಂಡವ್ ತಂದೆ ಹೇಳಿದ್ದರು. ಭಾಗ್ಯ ಬಳಿ ಹಣ ಹೊಂದಿಸೋಕೆ ಆಗೋದಿಲ್ಲ, ಅವಳ ಸೊಕ್ಕು ಮುರಿಯುತ್ತದೆ, ನಾನು ಅವಮಾನ ಮಾಡ್ತೀನಿ, ಬಾಯಿಗೆ ಬಂದಹಾಗೆ ಮಾತಾಡ್ತೀನಿ, ಅಪ್ಪ-ಅಮ್ಮ, ಮಕ್ಕಳು ನನ್ನ ಜೊತೆಗೆ ಬರುತ್ತಾರೆ ಅಂತ ತಾಂಡವ್ ಕನಸು ಕಾಣುತ್ತಿದ್ದ. ಅವನ ಕನಸೆಲ್ಲ ಹೊಳೆಯಲ್ಲಿ ಹುಳಸೆಹಣ್ಣು ಕೊಚ್ಚಿಕೊಂಡು ಹೋದಂತಾಗಿದೆ.
Kannada Serial TRP 2025: ರೆಕಾರ್ಡ್ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್! ಯಾವುದು?
ಧರ್ಮದ ಪಾಲಾದ ಜಯ!
ಭಾಗ್ಯ ಮನೆಗೆ ಬಂದು ಬ್ಯಾಂಕ್‌ನವರಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟಿದ್ದಾಳೆ. ಇದನ್ನು ನೋಡಿ ಶ್ರೇಷ್ಠ, ತಾಂಡವ್ ಮುಖ ಇಂಗು ತಿಂದ ಮಂಗನ ಹಾಗೆ ಆಗಿದೆ. ಧರ್ಮಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಾರೆ. ಅಂತೆಯೇ ಈ ಬಾರಿ ಜಯ ಧರ್ಮದ ಪಾಲಾಗಿದೆ.
Bhagyalakshmi Serial: ದೇವರು ಬಲಗಡೆ ಪ್ರಸಾದ ಕೊಟ್ರೂ ಭಾಗ್ಯಗೆ ಫುಲ್ ಹಣ ಸಿಗ್ತಿಲ್ಲ; ಮುಂದೇನ್ ಕಥೆ?
ಭಾಗ್ಯ ಬೆಂಬಲಕ್ಕೆ ನಿಂತ ನಟಿಯರು!
ಅಡುಗೆ ಮಾಡಿ ಭಾಗ್ಯ ಹಣ ಗಳಿಸಿದ್ದಾಳೆ. ಕುಸುಮಾಗೆ ಅನಾರೋಗ್ಯ ಆಗಿದ್ದಕ್ಕೆ ಅವಳೊಬ್ಬಳೇ ಅಡುಗೆ ಮಾಡಬೇಕಾಗಿ ಬಂತು. ಆದರೆ ಕಲರ್ಸ್ ಕನ್ನಡ ಧಾರಾವಾಹಿಯ ಕೆಲ ನಾಯಕಿಯರು ಭಾಗ್ಯಳಿಗೆ ಸಹಾಯ ಮಾಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸುಪ್ರೀತಾ, ಬೃಂದಾವನʼ ಧಾರಾವಾಹಿ ನಟಿ ಅಮೂಲ್ಯ ಭಾರದ್ವಾಜ್, ವಧು ಧಾರಾವಾಹಿ ಹೀರೋಯಿನ್, ರಾಮಾಚಾರಿ ಧಾರಾವಾಹಿ ನಾಯಕನ ತಾಯಿ ಪಾತ್ರಧಾರಿ ಅಂಜಲಿ, ದೃಷ್ಟಿಬೊಟ್ಟು ಧಾರಾವಾಹಿ ನಾಯಕಿ ದೃಷ್ಟಿ ಕೂಡ ಆಗಮಿಸಿದ್ದಾರೆ. ಇವರೆಲ್ಲರೂ ಸೇರಿ ಭಾಗ್ಯಗೆ ಅಡುಗೆ ಮಾಡಲು ಸಹಾಯ ಮಾಡಿದ್ದಾರೆ, ಅಷ್ಟೇ ಅಲ್ಲದೆ ಊಟಕ್ಕೆ ಬಂದವರಿಗೆ ಬಡಿಸಲು ಸಹಾಯ ಮಾಡಿದ್ದಾರೆ.
ತಾಂಡವ್ ಕೈ ಮುರೀತಾ?
ಭಾಗ್ಯ ಬೀದಿಗೆ ಬರುವ ಹಾಗೆ ಮಾಡ್ತೀನಿ ಅಂತ ತಾಂಡವ್‌ಗೆ ಶ್ರೇಷ್ಠ ಹೇಳಿದ್ದಾಳೆ. ಆ ಮಾತನ್ನು ಕೇಳಿಸಿಕೊಂಡ ಭಾಗ್ಯ, “ಅದು ಅಷ್ಟು ಸುಲಭ ಇಲ್ಲ ರೀ, ನಾನು ಈ ಮನೆಯವರನ್ನು ಈ ಮನೆಯನ್ನು ಯಾರಿಗೂ ಬಿಟ್ಟುಕೊಡಲ್ಲ, ಉಳಿಸಿಕೊಳ್ತೀನಿ” ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ ತಾಂಡವ್‌ಗೆ ಹ್ಯಾಂಡ್‌ಶೇಕ್ ಕೊಟ್ಟು ಕೈ ಮುರಿಯುವ ಹಾಗೆ ಮಾಡಿದ್ದಾಳೆ. ಈ ಪ್ರೋಮೋ ರಿಲೀಸ್ ಆಗಿದ್ದು, ವೀಕ್ಷಕರಿಗೆ ಫುಲ್ ಖುಷಿಯಾಗಿದೆ.
Bhagyalakshmi Serial: ತಾಂಡವ್ ಮುಖಕ್ಕೆ ಭಾಗ್ಯ ತಾಳಿ ಕಿತ್ತೆಸೆದ ಬಳಿಕ ಕಥೆ ಹೇಗೆ ಸಾಗತ್ತೆ?
ವೀಕ್ಷಕರು ಏನು ಹೇಳಿದ್ರು?
ಪಾತ್ರಧಾರಿಗಳು
ಭಾಗ್ಯ- ಸುಷ್ಮಾ ಕೆ ರಾವ್
ತಾಂಡವ್ - ಸುದರ್ಶನ್ ರಂಗಪ್ರಸಾದ್
ಶ್ರೇಷ್ಠ -ಕಾವ್ಯಾ ಗೌಡ
ಕುಸುಮಾ - ಪದ್ಮಜಾ ರಾವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.