ತುಂಡುಡುಗೆ ಭಾಗ್ಯಂಗೆ ಅವಮಾನ ಮಾಡಲು ಕಾಯ್ತಿದ್ದ ತಾಂಡವ್​ಗೆ ಬಿಗ್​ ಶಾಕ್​! ಕಣ್​ ಕಣ್​ ಬಿಟ್ಟ ಮನೆಮಂದಿ...

Published : Nov 02, 2024, 02:38 PM IST
ತುಂಡುಡುಗೆ ಭಾಗ್ಯಂಗೆ ಅವಮಾನ ಮಾಡಲು ಕಾಯ್ತಿದ್ದ  ತಾಂಡವ್​ಗೆ ಬಿಗ್​ ಶಾಕ್​! ಕಣ್​ ಕಣ್​ ಬಿಟ್ಟ ಮನೆಮಂದಿ...

ಸಾರಾಂಶ

ತುಂಡುಡುಗೆ ತೊಟ್ಟು ಬರುವ ಭಾಗ್ಯಳನ್ನು ಅವಮಾನ ಮಾಡಲು ಕಾಯ್ತಿದ್ದ  ತಾಂಡವ್​ಗೆ ಬಿಗ್​ ಶಾಕ್ ಕೊಟ್ಟಿದ್ದಾರೆ ಭಾಗ್ಯ. ಅಷ್ಟಕ್ಕೂ ಆಗಿದ್ದೇನು?  

ರಾತ್ರೋರಾತ್ರಿ ಬದಲಾದ ತಾಂಡವ್​ ಎಲ್ಲರ ಮನಸ್ಸನ್ನೂ ಗೆದ್ದು ಬಿಟ್ಟಿದ್ದಾನೆ! ಪತ್ನಿ ಭಾಗ್ಯಳನ್ನು ಹೊಗಳುವುದೇನು, ಮಕ್ಕಳನ್ನು ಮುದ್ದಿಸೋದೇನು, ಅಪ್ಪ-ಅಮ್ಮ, ಪೂಜಾಳ ಮೇಲೆ ಪ್ರೀತಿಯ ಧಾರೆ ಹರಿಸೋದೇನು... ಅಬ್ಬಬ್ಬಾ ಒಂದಾ ಎರಡಾ? ಅಮ್ಮ ಕುಸುಮಾ ಅಂತೂ ಮಗ ಬದಲಾದ ಎಂದು ಬೀಗೇ ಬಿಟ್ಟಳು. ನಾಯಿ ಬಾಲ ಡೊಂಕು ಅಂದುಕೊಂಡು ಗಂಡನ ಮೇಲೆ ಅನುಮಾನ ಪಟ್ಟವಳು ಪೆದ್ದು ಎನ್ನಿಸಿಕೊಂಡಿರೋ ಭಾಗ್ಯ, ಜೊತೆಗೆ ಅವಳ ತಂಗಿ ಪೂಜಾ. ಗಂಡನ ಏಕಾಏಕಿ ಬದಲಾವಣೆಯನ್ನು ಭಾಗ್ಯಳಿಂದ ನಂಬಲು ಸಾಧ್ಯವೇ ಆಗ್ತಿಲ್ಲ. ಆದರೆ ಉಳಿದವರು ನಂಬಿಬಿಟ್ಟಿದ್ದಾರಲ್ಲ! ಅದರಲ್ಲಿಯೂ ಅತಿ ಬುದ್ಧಿವಂತೆ ಎಂದುಕೊಂಡಿರುವ ಕುಸುಮಾ ಮಗನನ್ನು ನಂಬಿಬಿಟ್ಟಿರೋದೇ ವೀಕ್ಷಕರಿಗೆ ನುಂಗಲಾಗದ ತುತ್ತಾಗಿದೆ. 

ಇನ್ನು ಎಲ್ಲರ ಪ್ರೀತಿ ಗಳಿಸಿರೋ ತಾಂಡವ್​ ದೊಡ್ಡ ಸ್ಕೆಚ್ಚೇ ಹಾಕಿದ್ದ.  ಅದಕ್ಕಾಗಿಯೇ ಎಲ್ಲ ಬದಲಾವಣೆ ಮಾಡಿಕೊಂಡಿದ್ದು, ಒಳ್ಳೆಯವನ ರೀತಿ ನಟಿಸುತ್ತಿದ್ದಾನೆ. ದೀಪಾವಳಿಗೆ ಎಲ್ಲರಿಗೂ ಹೊಸ ಬಟ್ಟೆ ತಂದಿದ್ದ. ಕೊನೆಗೆ ಭಾಗ್ಯಳಿಗೆ ತಂದಿರೋ ಬಟ್ಟೆ ತೋರಿಸು ಎಂದಾಗ, ಎಲ್ಲರೂ ಸೀರೆ ತಂದಿರಬಹುದು ಎಂದುಕೊಂಡರೆ ತಾಂಡವ್​ ಮಾತ್ರ ಮಿನಿ ಡ್ರೆಸ್ ತಂದಿದ್ದ. ಎಲ್ಲರೂ ಷಾಕ್​ ಆಗಿದ್ದರು.  ಭಾಗ್ಯ ಅಂತೂ ಕೇಳಬೇಕೆ? ಇಂಥ ಡ್ರೆಸ್​ ನೋಡಿ ಅದೂ ಗಂಡ ಪ್ರೀತಿಯಿಂದ ತಂದುಕೊಟ್ಟದ್ದು ಎಂದರೆ ಅವಳು ನಂಬೋದಾದ್ರೂ ಹೇಗೆ? ಆದರೂ  ಗಂಡ ಪ್ರೀತಿಯಿಂದ ತಂದಿರುವ ಬಟ್ಟೆ ಹಾಕಿಕೊಂಡು ಬಾ ಎಂದು ಅತ್ತೆ ಕುಸುಮಾ ಒತ್ತಾಯ ಮಾಡಿದ್ದಾಳೆ. ತಾಂಡವ್​ ಕೊಟ್ಟ ಬಟ್ಟೆ ಹಾಗೆಲ್ಲಾ ಕೀಳಾಗಿ ನೋಡಬೇಡ. ಅವನು ನಿನ್ನನ್ನು ಪ್ರೀತಿ ಮಾಡ್ತಾನೆ ಎಂದೆಲ್ಲಾ ಸೊಸೆಗೆ ಬುದ್ಧಿ ಮಾತು ಹೇಳಿದ್ದಳು.

ನೀಲಿ ಚಿತ್ರದಲ್ಲಿ ನಟಿಸಲು ಆಫರ್​ ಬಂದಿದೆ ಎಂದ ಮಗ! ಅಮ್ಮನ ರಿಯಾಕ್ಷನ್​ ನೋಡಿ- ವಿಡಿಯೋ ವೈರಲ್​

ಆ ತುಂಡುಡುಗೆಯನ್ನು ತೊಟ್ಟು ಭಾಗ್ಯ ಹೋಗಿದ್ದಳು. ಇತ್ತ ಮನೆಗೆ ಬಂದಿರೋ ನೆಂಟರಿಷ್ಟರು, ಸ್ನೇಹಿತರು, ಬಂಧು-ಬಳಗದವರ ಎದುರು ತುಂಡುಡುಗೆ ಭಾಗ್ಯಳನ್ನು ಅವಮಾನ ಮಾಡಲು ಸ್ಕೆಚ್​ ಹಾಕುತ್ತಿದ್ದಾನೆ. ಈ ವಯಸ್ಸಲ್ಲಿ ಇಂಥ ಷೋಕಿ ಬೇಕಾ ಎಂದು ಬಂದವರೆಲ್ಲಾ ಆಡಿಕೊಂಡರೆ ಆಹಾ ಎಂಥ ಸುಖ ಎಂದೆಲ್ಲಾ ಕನಸು ಕಾಣುತ್ತಿದ್ದಾನೆ. ಆದರೆ ಭಾಗ್ಯಳ ಗೆಟಪ್​ನೋಡಿ ಮನೆಮಂದಿಯೆಲ್ಲಾ ಶಾಕ್​  ಆಗಿಬಿಟ್ಟಿದ್ದಾರೆ. ಏಕೆಂದ್ರೆ ಭಾಗ್ಯ ಬಂದದ್ದು ತುಂಡುಡುಗೆಯಿಂದ ಅಲ್ಲ, ಬದಲಿಗೆ ಸೀರೆಯುಟ್ಟು, ಲಕ್ಷಣವಾಗಿ ಬಂದಿದ್ದಾಳೆ. ತಾಂಡವ್​ ಮುಖ ಇಂಗು ತಿಂದ ಮಂಗನದ್ದಾಗಿದೆ. ಆದ್ರೆ ಕುಸುಮಾ, ಪೂಜಾ, ಸುಂದ್ರಿ ಎಲ್ಲಾ ಬೇಸರ ಮಾಡಿಕೊಂಡದ್ದು, ತಾಂಡವ್​ ಕೊಟ್ಟ ಡ್ರೆಸ್​ ಅವಳು ಹಾಕಿಕೊಂಡಿಲ್ಲ ಎನ್ನುವ ಕಾರಣಕ್ಕೆ. ಆದ್ರೆ ಅವರಿಗೆ ತಾಂಡವ್​ ಕುತಂತ್ರ ಗೊತ್ತಿಲ್ಲದೇ ಹೀಗೆ ಅಂದುಕೊಳ್ಳುತ್ತಿದ್ದಾರೆ. ಅವಳನ್ನು ಇನ್​ಸಲ್ಟ್​ ಮಾಡಲು ಒಂದಿಷ್ಟು ಮಂದಿಯನ್ನು ಕರೆತಂದಿದ್ದ ತಾಂಡವ್​. ಅವರೆಲ್ಲಾ ವಿಡಿಯೋ ಮಾಡಿ ಇನ್​ಸಲ್ಟ್​ ಮಾಡಲು ಕಾಯುತ್ತಿದ್ದರು. ಆದ್ರೆ ಭಾಗ್ಯಳನ್ನು ನೋಡಿ ಅವರೂ ಶಾಕ್​ ಆದರು. 

ಇದನ್ನು ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಅಂತೂ ಭಾಗ್ಯಳಿಗೆ ಸ್ವಂತ ಬುದ್ಧಿ ಅಂತೊಂದು ಇದೆ ಎನ್ನೋದು ಗೊತ್ತಾಯ್ತು. ನೀನು ಹೀಗೇ ಇರು, ಗಂಡನಿಗೆ ಬುದ್ಧಿ ಕಲಿಸು ಎನ್ನುತ್ತಿದ್ದಾರೆ. ಆದರೆ  ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟ ಕುಸುಮಾಳಿಗೆ ಮಾತ್ರ ಬೇಜಾರು ಆಗಿ ಹೋಗಿದೆ.  ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಳು ಕುಸುಮಾ. ಈ ಹಿಂಮದೆ ಸೀರೆಯಲ್ಲಿ ಭಾಗ್ಯಳನ್ನು  ಚೆನ್ನಾಗಿ ರೆಡಿ ಮಾಡಿದ್ದಳು ಕುಸುಮಾ. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್​ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್​ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.  ಆದರೂ ಈಗ ತಾಂಡವ್​ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡುತ್ತಿಲ್ಲ ಈ ಅತ್ತೆ. 

ಎಸ್​ಎಸ್​ಎಲ್​ಸಿ ಬರೆದಳು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಳು, ಕಾರು ಕಲಿತಳು, ಡಾನ್ಸ್​ ಮಾಡಿದಳು, ಚೆನ್ನಾಗಿ ಡ್ರೆಸ್​ ಮಾಡಿಕೊಂಡಲು... ಹೂಂ ಹೂಂ... ಯಾವುದೂ ತಾಂಡವ್​ ಮನಸ್ಸನ್ನು ಬದಲಾಯಿಸಲೇ ಇಲ್ಲ. ಕೊನೆಗೆ ಭಾಗ್ಯಳನ್ನು ಇನ್​ಸಲ್ಟ್​ ಮಾಡಲು ಶ್ರೇಷ್ಠಾ ಡಾನ್ಸ್​ ಟೀಚರ್​ ಮೊರೆ ಹೋದಳು. ಆರಂಭದಲ್ಲಿ ಭಾಗ್ಯಳನ್ನು ಸಾಕಷ್ಟು ಕೆಟ್ಟ ಪದಗಳಿಂದ ನಿಂದಿಸಿದಳು ಟೀಚರ್​. ಕೊನೆಗೆ ಅತ್ತೆ ಕುಸುಮಾ ಬಿಡಬೇಕಲ್ಲ. ಆ ಟೀಚರ್​ ಅನ್ನು ಕರೆಸಿ, ಭಾಗ್ಯಳಿಂದ ಭರತನಾಟ್ಯ ಮಾಡಿಸಿ, ಟೀಚರ್​ ಕ್ಷಮೆ ಕೇಳುವ ಹಾಗೆ ಮಾಡಿದಳು. ಇದರಿಂದ ತಾಂಡವ್​ ಮತ್ತು ಶ್ರೇಷ್ಠಾಗೆ ಶಾಕ್​ ಆಯಿತು. ಆದರೆ ಇದ್ದಕ್ಕಿಂತೆಯೇ ತಾಂಡವ್​ ಬದಲಾಗಿ ಬಿಟ್ಟರೂ ಎಲ್ಲರೂ ನಂಬಿರೋದು ಮಾತ್ರ ಹಾಸ್ಯಾಸ್ಪದ ಎನ್ನಿಸುತ್ತಿದೆ. 

ಸುಂದರಿಯ ಫೋಟೋ ಸಿಕ್ಕಿತೆಂದು ಹೀಗೆ ಮೋಸ ಮಾಡೋದಾ ಭಾರತ್​ ಮ್ಯಾಟ್ರಿಮೋನಿ? ಗೃಹಿಣಿ ಆಕ್ರೋಶ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!