ಒತ್ತು ಶ್ಯಾವಿಗೆಗೆ ಬಿಲ್ಡಪ್​ ಕೊಡಲು ವಿಷ್ಣುವರ್ಧನ್​ರ ಚಿತ್ರ ಕಾಪಿ ಮಾಡಿದ್ಯಾಕೆ? ಭಾಗ್ಯಲಕ್ಷ್ಮಿಗೆ ನೆಟ್ಟಿಗರ ಪ್ರಶ್ನೆ

By Suchethana D  |  First Published Jul 3, 2024, 11:24 AM IST

ಭಾಗ್ಯಳಿಗೆ ಅವಾರ್ಡ್​ ಕೊಡುತ್ತಿರುವ ವೇಳೆ ಅತ್ತೆ ಕುಸುಮಾಳ ಎಂಟ್ರಿಯಾಗಿದೆ. ಈ ಸಂಪೂರ್ಣ ಸನ್ನಿವೇಶವನ್ನು ಯಜಮಾನ ಚಿತ್ರದಿಂದ ಕದ್ದಿದ್ಯಾಕೆ ಕೇಳ್ತಿದ್ದಾರೆ ನೆಟ್ಟಿಗರು
 


ಭಾಗ್ಯಳಿಗೆ ಒತ್ತುಶ್ಯಾವಿಗೆ ಅದೃಷ್ಟ ತಂದುಕೊಟ್ಟಿದೆ. ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಚೀಫ್​ಶೆಫ್​ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಮೊದಲಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಭೇಷ್​ ಎನ್ನಿಸಿಕೊಂಡಿದ್ದ ಗೃಹಿಣಿ ಭಾಗ್ಯ ಇದೀಗ ಲಕ್ಷ ರೂಪಾಯಿ ಸಂಬಳ ಪಡೆಯುವ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ. ಗೃಹಿಣಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದು ಒಂದೆಡೆಯಾದರೆ, ಅಡುಗೆಯಲ್ಲಿ ನುರಿತರಾದರೆ ಬದುಕು ಕೈಹಿಡಿಯುತ್ತದೆ ಎನ್ನುವುದಕ್ಕೆ ಇದಾಗಲೇ ಹಲವಾರು ಮಂದಿ ನಿಜ ಜೀವನದಲ್ಲಿಯೂ ತೋರಿಸಿಕೊಟ್ಟಿದ್ದಾರೆ. ಅಡುಗೆ ಒಂದು ಚೆನ್ನಾಗಿ ಮಾಡುವ ಮೂಲಕವೇ ಲಕ್ಷಾಧಿಪತಿಗಳಾದವರೂ ನಮ್ಮ ಎದುರೇ ಇದ್ದಾರೆ. ಬೀದಿಬದಿಗಳಲ್ಲಿ ಅಡುಗೆ ಊಟ ಬಡಿಸುವವರು ದೊಡ್ಡ ದೊಡ್ಡ ಹೋಟೆಲ್​ಗಳ ಮಾಲೀಕರಾಗಿರುವ ಸಾಕಷ್ಟು ಉದಾಹರಣೆಗಳನ್ನೂ ಕಾಣಬಹುದು. ಇದೀಗ ಅಂಥದ್ದೇ ಒಂದು ಮಾದರಿಯಾಗಿ ನಿಂತಿದ್ದಾಳೆ ಭಾಗ್ಯ.

ಭಾಗ್ಯಳ ಈ ಸಾಧನೆಯನ್ನು ಗಮನಿಸಿ, ಅವಳಿಗೆ ಸೀರಿಯಲ್​ನಲ್ಲಿ ಶ್ರೀನಾಥ್​ ಅವರು ಅವಾರ್ಡ್​ ಕೊಡಲು ಬಂದಿದ್ದಾರೆ. ಆದರೆ ಸೊಸೆ ಉದ್ಯೋಗಕ್ಕೆ ಹೋಗಬಾರದು ಎನ್ನುವುದು ಅತ್ತೆ ಕುಸುಮಾಳ ಇಚ್ಛೆ. ಇದೇ ಕಾರಣಕ್ಕೆ ಕುಸುಮಾ ಅವಳಿಗೆಕೆಲಸ ಸಿಕ್ಕಿರುವ ವಿಷಯ ಹೇಳಿರಲಿಲ್ಲ. ಇದು ಸರಿಯಲ್ಲ ಎನ್ನುವುದು ಬಹುತೇಕ ಸೀರಿಯಲ್​ ವೀಕ್ಷಕರ ಅಭಿಮತ. ಭಾಗ್ಯಳ ವಿಷಯ ಟಿ.ವಿಯಲ್ಲಿ ಬಂದು, ಅವಳಿಗೆ ಸನ್ಮಾನ ಮಾಡುತ್ತಿರುವುದನ್ನು ಕುಸುಮಾ ಟಿವಿಯಲ್ಲಿ ನೋಡಿ ಅವಳ ಸನ್ಮಾನ ಕಾರ್ಯಕ್ರಮಕ್ಕೆ ಬರುತ್ತಾಳೆ. ಆದರೆ ಅಲ್ಲಿ ಗಣ್ಯಾತಿಗಣ್ಯರು ಬಂದಿರುವ ಕಾರಣ, ಕುಸುಮಾಳಿಗೆ ಎಂಟ್ರಿ ಕೊಡುವುದಿಲ್ಲ. ಸೆಕ್ಯುರಿಟಿ ಅವರ ಬಳಿ ಜಗಳವಾಡಿದಾಗ ಅವಳನ್ನು ತಳ್ಳಲಾಗುತ್ತದೆ. ಅತ್ತೆ ಬಿದ್ದಿದ್ದನ್ನು ನೋಡಿ ಅವಾರ್ಡ್​ ತೆಗೆದುಕೊಳ್ಳುವುದನ್ನು ಬಿಟ್ಟು ಭಾಗ್ಯ ಓಡೋಡಿ ಬರುತ್ತಾಳೆ.

Tap to resize

Latest Videos

ದಿನಪೂರ್ತಿ ಚುರುಕಾಗಿರಬೇಕಾ? ಬೇವು, ನಿಂಬೆ, ಜೇನುತುಪ್ಪದ ಗುಟ್ಟು ತಿಳಿಸಿಕೊಟ್ಟ ನಟಿ ಅದಿತಿ ಪ್ರಭುದೇವ

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವಿಷ್ಣುವರ್ಧನ್​ ಅವರ ಯಜಮಾನ ಚಿತ್ರವನ್ನು ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಒಂದೇ ಸಮನೆ ಕಮೆಂಟ್​ ಹಾಕುತ್ತಿದ್ದಾರೆ. ಭಾಗ್ಯಳ ಒತ್ತುಶ್ಯಾವಿಗೆಗೆ ಬಿಲ್ಡಪ್​ ಕೊಡಲು ವಿಷ್ಣುವರ್ಧನ್​ ಚಿತ್ರ ಕಾಪಿ ಮಾಡ್ಬೇಕಾಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಸೀರಿಯಲ್​ ಆಗಲೀ, ಸಿನಿಮಾ ಆಗಲಿ ಕೆಲವು ಸನ್ನಿವೇಶಗಳು ಹೋಲಿಕೆ ಇರುವುದು ಮಾಮೂಲು. ಆದರೆ ಯಜಮಾನ ಚಿತ್ರದಲ್ಲಿಯೂ ಇದೇ ರೀತಿ ದೃಶ್ಯ ಇರುವ ಕಾರಣ, ಹಾಗೂ ಆ ಸಿನಿಮಾ ಸಾಕಷ್ಟು ಹಿಟ್​ ಆಗಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಕಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ. ಭಾಗ್ಯ ಓಡಿ ಹೋಗಿ ಅತ್ತೆಯನ್ನು ಎತ್ತಿ ಆಕೆಯನ್ನು ಹೊಗಳುತ್ತಾಳೆ. ಆಗ ಅತ್ತೆಯ ಸಿಟ್ಟೆಲ್ಲ ತಣ್ಣಗಾಗುತ್ತದೆ ಎಂದು ಇನ್ನು ಕೆಲವರು ಮುಂದಿನ ಕಥೆಯನ್ನು ಹೇಳಿದ್ದಾರೆ. 
 
ಅಷ್ಟಕ್ಕೂ, ಈ ಸೀರಿಯಲ್​ ಕುರಿತು ಹೇಳುವುದಾದರೆ, ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.

ಮೊದಲ ಸಂಬಳದಲ್ಲಿ ಗೌತಮ್​ ಜೊತೆ ಡೇಟಿಂಗ್! ಕಣ್ಣು ಹೊಡೆದು ಗಂಡನನ್ನು ಬೋಲ್ಡ್​ ಮಾಡೋದಾ ಭೂಮಿಕಾ?
 

click me!