ದಿನಪೂರ್ತಿ ಚುರುಕಾಗಿರಬೇಕಾ? ಬೇವು, ನಿಂಬೆ, ಜೇನುತುಪ್ಪದ ಗುಟ್ಟು ತಿಳಿಸಿಕೊಟ್ಟ ನಟಿ ಅದಿತಿ ಪ್ರಭುದೇವ

By Suchethana D  |  First Published Jul 2, 2024, 5:09 PM IST

ದಿನಪೂರ್ತಿ ಚುರುಕಿನಿಂದ ಕೂಡಿರಲು ಬೇವು, ನಿಂಬೆ, ಜೇನುತುಪ್ಪ ಹೇಗೆ ಸಹಕಾರಿಯಾಗಿದೆ. ಇದನ್ನು ತಯಾರಿಸುವುದು ಹೇಗೆ ಎಂಬುವುದನ್ನು ನಟಿ ಅದಿತಿ ಪ್ರಭುದೇವ ಹೇಳಿಕೊಟ್ಟಿದ್ದಾರೆ.
 


ಕಳೆದ ಏಪ್ರಿಲ್​ 4ರಂದು ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿದ್ದರು.  ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಗರ್ಭಿಣಿಯರಿಗೆ  ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು.  ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. ಇದೀಗ ಮಗುವಿನ ಆರೈಕೆ ಜೊತೆ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ ನಟಿ. ಅಷ್ಟೇ ಅಲ್ಲದೇ ರಿಯಾಲಿಟಿ ಷೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಅವರು ಹೇಳಿರುವ ಹಲವಾರು ಹೆಲ್ತ್​ ಟಿಪ್ಸ್​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಮಗು ಹುಟ್ಟಿದ ಮೇಲೂ ನಟಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಅವರು ಈಗಷ್ಟೇ ಅಲ್ಲದೇ ಮೊದಲಿನಿಂದಲೂ ದಿನಪೂರ್ತಿ ಚುರುಕಾಗಿಯೇ ಇರುವವರು. ತಮ್ಮ ಈ ಚುರುಕುತನದ ಟಿಪ್ಸ್​ ಅನ್ನು ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಅವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದೇ ಬೇವು, ನಿಂಬೆ, ಜೇನುತುಪ್ಪದ ಗುಟ್ಟು. ಬೆಳಿಗ್ಗೆ ಎದ್ದ ಕೂಡಲೇ  ನೀರನ್ನು ಬೆಚ್ಚಗೆ ಮಾಡಿಕೊಂಡು ಅದಕ್ಕೆ  ನಿಂಬೆ ರಸ, ಜೇನುತುಪ್ಪ ಅಥವಾ ಅರಿಶಿಣ ಹಾಕಿಕೊಂಡು ಕುಡಿಯಬೇಕು ಎನ್ನುವುದು ಸಿಂಪಲ್​ ಟಿಪ್ಸ್​. ಇದಕ್ಕೂ ಮುನ್ನ ಖಾಲಿ ಹೊಟ್ಟೆಯಲ್ಲಿ ಕರಿಬೇವು ಅಂದರೆ ಒಗ್ಗರಣೆ ಸೊಪ್ಪಿನ ಎಲೆ ತಿಂದರೆ ತುಂಬಾ ಒಳ್ಳೆಯದು ಎನ್ನುವುದು ಅವರ ಕಲಿಸಿಕೊಟ್ಟಿರೋ ಪಾಠ. ಹೀಗೆ ಮಾಡಿದರೆ,  ದಿನಪೂರ್ತಿ ಚುರುಕಾಗಿ ಇರಬಹುದು ಎಂದಿದ್ದಾರೆ ನಟಿ. 

Latest Videos

undefined

ನಿರ್ಬಂಧಿತ ಪ್ರದೇಶದಲ್ಲಿ ಅದಿತಿ ಪ್ರಭುದೇವ ಫೋಟೋಶೂಟ್! ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು

ಇದು ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನೂ ನಟಿ ಹೇಳಿದ್ದಾರೆ. ಕರಿಬೇವಿನಲ್ಲಿ  ಆ್ಯಂಟಿ ಆಕ್ಸಿಡೆಂಟ್​ ಗುಣ ಇದೆ. ಇದು  ಕೂದಲ ಆರೋಗ್ಯಕ್ಕೆ  ಪ್ರಯೋಜನಕಾರಿ.  ಆದ್ದರಿಂದ  ಬೆಳಿಗ್ಗೆ ಎದ್ದ ಕೂಡಲೇ  ಖಾಲಿ ಹೊಟ್ಟೆಯಲ್ಲಿ 5-10 ಕರಿಬೇವನ್ನು ತಿಂದರೆ ಕೂದಲಿಗೆ ಪೋಷಣೆ ಸಿಗುತ್ತದೆ. ಇದರ ಬಳಿಕ ನಿಂಬೆ, ಜೇನುತಪ್ಪದ ನೀರು ಸೇವಿಸಿದರೆ ಉತ್ತಮ.  ಅರಿಶಿಣ ಮತ್ತು ನಿಂಬೆ ಹಣ್ಣು ಎರಡು ಕೂಡ ದೇಹದಲ್ಲಿರುವ ಫ್ಯಾಟ್​ ಕರಗಿಸಲು ಸಹಾಯ ಮಾಡುತ್ತದೆ, ನಿಂಬೆ ಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅರಿಶಿಣ ನಮ್ಮ ದೇಹದಲ್ಲಿರುವ ಟಾಕ್ಸಿನ್​ ಅಂಶಗಳನ್ನು ಹೊರಕ್ಕೆ ಹಾಕುತ್ತದೆ. ಆದ್ದರಿಂದ ಬೆಳಗಿನ ಜಾವ ಇದರ ಸೇವನೆ ಅಗತ್ಯವಾಗಿದೆ ಎಂದಿದ್ದಾರೆ. 
 
 ಅಂದಹಾಗೆ ನಟಿ ಅದಿತಿ,  ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಈಗ ಅಮ್ಮನಾಗಿ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಸದ್ಯ ರಾಜಾ ರಾಣಿ ರೀಲೋಡೆಡ್​ ಷೋನಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದಾರೆ. 

ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ಚಟ್ನಿ ಪೌಡರ್​ ಮಾಡುವುದು ಹೇಗೆ? ನಟಿ ಅದಿತಿ ಪ್ರಭುದೇವ ಟಿಪ್ಸ್​ ಕೇಳಿ...


click me!