ಸುಷ್ಮಾ ರಾವ್ ಸದ್ಯ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಆಗಿ ಮನೆಮಾತಾಗಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರೋ ಸುಷ್ಮಾ ಡ್ಯಾನ್ಸ್ ಅನ್ನು ನೋಡೋ ಭಾಗ್ಯ ಈ ಸೀರಿಯಲ್ ವೀಕ್ಷಕರಿಗಿದ್ಯಾ?
ಸುಷ್ಮಾ ರಾವ್ ಕಿರುತೆರೆಯ ಲಕ್ಕಿ ಚಾರ್ಮ್ ಅಂತಲೇ ಫೇಮಸ್ಸು. ಡೇ ಒನ್‌ನಿಂದ ಈಕೆ ನಟಿಸಿರೋ ಸೀರಿಯಲ್‌ಗಳು ಟಾಪ್ ರೇಂಜ್‌ನಲ್ಲೇ ಸೌಂಡ್ ಮಾಡಿದ್ವು. ಈಕೆಯ ಕೆರಿಯರ್‌ನಲ್ಲಿ ಸೋಲು ಅನ್ನೋ ಪದಕ್ಕೆ ಜಾಗವೇ ಇಲ್ಲ ಅನ್ನೋ ಹಾಗಾಗಿದೆ. 'ಗುಪ್ತಗಾಮಿನಿ' ಸೀರಿಯಲ್ ಭಾವನಾ ಆಗಿ ಕನ್ನಡಿಗರ ಮನಗೆದ್ದ ಸುಷ್ಮಾ ರಾವ್ ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಸುಮಾರು ಏಳು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಎಸ್ ನಾರಾಯಣ್ ಅವರ 'ಭಾಗೀರಥಿ' ಅನ್ನೋ ಸೀರಿಯಲ್ ಮೂಲಕ ಸುಷ್ಮಾ ಕಿರುತೆರೆಗೆ ಎಂಟ್ರಿ ಕೊಡ್ತಾರೆ. 2005ರಲ್ಲಿ ಪ್ರಸಾರವಾದ 'ಗುಪ್ತಗಾಮಿನಿ' ಸೀರಿಯಲ್ ಅವರಿಗೆ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಅದಾಗಿ 'ಸೊಸೆ ತಂದ ಸೌಭಾಗ್ಯ' ದಂಥಾ ಸೀರಿಯಲ್‌ಗಳಲ್ಲೂ ಸುಷ್ಮಾ ನಟಿಸ್ತಾರೆ. ಆ ಬಳಿಕ ಆಂಕರ್ ಆಗಿ ಸಾಕಷ್ಟು ಫೇಮಸ್ ಆಗ್ತಾರೆ. ಅವರು ಆಂಕರ್ ಆಗಿ ಕಾಣಿಸಿಕೊಂಡ ರಿಯಾಲಿಟಿ ಶೋಗಳೂ ಸಖತ್ ಫೇಮಸ್ ಆಗಿವೆ.
ಸದ್ಯ ಸುಷ್ಮಾ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹಾಗೆ ನೋಡಿದರೆ ಮೊದಲು ಭಾಗ್ಯಲಕ್ಷ್ಮೀ ಒಂದೇ ಸೀರಿಯಲ್ ಆಗಿತ್ತು. ಅಕ್ಕ ತಂಗಿಯರ ಕಥೆ ಅನ್ನೋ ಸಬ್‌ಟೈಟಲ್ ಇದ್ರೂ ಇದ್ರಲ್ಲಿ ತಂಗಿ ಲಕ್ಷ್ಮಿಯದ್ದೇ ಪ್ರಧಾನ ಪಾತ್ರವಾಗಿ ಆಕೆಯ ಲೈಫು ತೆರೆದುಕೊಳ್ಳಬೇಕಿತ್ತು. ಆದರೆ ಯಾವಾಗ ಈ ಸೀರಿಯಲ್‌ನ ಭಾಗ್ಯ ಪಾತ್ರಕ್ಕೆ ಸುಷ್ಮಾ ಕೆ ರಾವ್ ಅನ್ನೋ ಹೆಣ್ಣುಮಗಳು ಬಲಗಾಲಿಟ್ಟು ಎಂಟ್ರಿ ಕೊಟ್ಟರೋ ವೀಕ್ಷಕರು ಈಕೆಯೇ ನಮ್ಮನೆ ಭಾಗ್ಯಲಕ್ಷ್ಮಿ ಅಂದುಬಿಟ್ಟರು. ಒಂದಿಷ್ಟು ವರ್ಷಗಳ ಬಳಿಕ ಸೀರಿಯಲ್‌ಗೆ ಮರಳಿದ ಸುಷ್ಮಾಳನ್ನು ಜನ ಅಕ್ಕರೆಯಿಂದ ಒಪ್ಪಿಕೊಂಡರು. ಭಾಗ್ಯ ಪಾತ್ರಕ್ಕೆ ಸಿಕ್ತಿರೋ ಪಾಪ್ಯುಲಾರಿಟಿ ಕಂಡು ತಲೆ ಓಡಿಸಿದ ಚಾನೆಲ್ ಟೀಮ್ ಇವರನ್ನೇ ಮುಖ್ಯವಾಗಿಟ್ಟು ಭಾಗ್ಯಲಕ್ಷ್ಮೀ ಸೀರಿಯಲ್ ಮಾಡಿದ್ರು.
ಕಿರುತೆರೆಯಲ್ಲಿ ಇತಿಹಾಸ ಬರೆದ ಟಿಎನ್ಸೀ ಹುಟ್ಟುಹಬ್ಬವಿಂದು: ನಟಿ ಮಾಳವಿಕಾ ಭಾವನಾತ್ಮಕ ಪೋಸ್ಟ್
ಸದ್ಯ ಭಾಗ್ಯಲಕ್ಷ್ಮೀ ಸೀರಿಯಲ್ಲಿನಲ್ಲಿ ಭಾಗ್ಯ ಡ್ಯಾನ್ಸ್ (dance) ವಿಚಾರದ್ದೇ ಚರ್ಚೆ ನಡೀತಿದೆ. ಈ ಸೀರಿಯಲ್ಲಿನಲ್ಲಿ ಭಾಗ್ಯಗೆ ಒಬ್ರೊಬ್ರಲ್ಲ ವಿಲನ್‌ಗಳು. ಸ್ವಂತ ಮಗಳೇ ಒಬ್ಬ ವಿಲನ್ (villain) ಆದ್ರೆ, ತನ್ನ ಗಂಡ ಅದಕ್ಕಿಂತ ದೊಡ್ಡ ವಿಲನ್. ಭಾಗ್ಯ ಗಂಡ ತಾಂಡವ್‌ಗೆ ಚಾಲೆಂಜ್ ಹಾಕಿ ಅತ್ತೆ ಕುಸುಮಾ ಅವಳನ್ನು ಸ್ಕೂಲಿಗೆ ಸೇರಿಸಿದ್ದಾಳೆ. ಮಗಳ ಕ್ಲಾಸಲ್ಲಿ ಅಮ್ಮನೂ ಓದ್ತಿದ್ದಾಳೆ. ಸದ್ಯ ಡ್ಯಾನ್ಸ್ ಕಾಂಪಿಟೀಷನ್‌ಗೆ ಭಾಗ್ಯಳ ಪರವಾಗಿ ಅವಳ ಮಗಳು ತನ್ವಿ ಹೆಸರು ಕೊಟ್ಟು ಬಂದಿದ್ದಾಳೆ. ಈ ನೆವದಲ್ಲಿ ಅಮ್ಮನ್ನ ಸ್ಕೂಲಿಂದ (school) ಆಚೆ ಹಾಕ್ಬೇಕು ಅನ್ನೋದು ಮಗಳ ಇಂಗಿತ. ಇನ್ನೊಂದು ಕಡೆ ಸ್ಕೂಲ್ ಮುಖ್ಯಸ್ಥೆಗೂ ಭಾಗ್ಯಳನ್ನು ಕಂಡ್ರಾಗಲ್ಲ. ಈ ಕಾಂಪಿಟೀಷನ್‌ನಲ್ಲಿ (competition) ಪ್ರೈಸು ತಗೊಳ್ಳದಿದ್ದರೆ ಭಾಗ್ಯ ಸ್ಕೂಲಿಗೇ ಬರುವಂತಿಲ್ಲ ಅಂತ ಅವಳು ಹೇಳಿದ್ದಾಳೆ. ಇನ್ನೊಂದೆಡೆ ಈ ಕಾಂಪಿಟೀಷನ್‌ಗೆ ಗೆಸ್ಟ್ ಆಗಿ ಭಾಗ್ಯ ಗಂಡ ತಾಂಡವ್ ಮತ್ತು ಅವನ ಹೊಸ ಹೆಂಡತಿ ಶ್ರೇಷ್ಠಾ ಬರೋ ಎಲ್ಲ ಸಾಧ್ಯತೆ ಇದೆ. ಅಲ್ಲಿಗೆ ತನ್ನ ಗಂಡ ಸವತಿಯ ಎದುರೇ ಭಾಗ್ಯ ಕುಣೀಬೇಕಿದೆ. ಅವರೇ ಜಡ್ಜ್‌ಗಳಾದ್ರೆ (judges) ಇವಳಿಗೆ ಹೇಗೆ ಪ್ರೈಸ್ ಕೊಡ್ತಾರೆ, ಅಷ್ಟಕ್ಕೂ ಮೂವತ್ತಾರರ ಹರೆಯದ ಗೃಹಿಣಿ ಈಗ ಡ್ಯಾನ್ಸ್ ಕಲಿತು ಪ್ರದರ್ಶಿಸಿ ಪ್ರೈಸ್ ತಗೊಳ್ಳೋದು ಸಾಧ್ಯವಾ ಅನ್ನೋದು ಪ್ರಶ್ನೆ.
ಆದರೆ ಈ ನೆವದಲ್ಲಾದ್ರೂ ಸುಷ್ಮಾ ಅವರ ಡ್ಯಾನ್ಸ್ ನೋಡಬಹುದೇನೋ ಅನ್ನೋ ಆಸೆ ವೀಕ್ಷಕರಿಗೆ. ಸುಷ್ಮಾ ಅವರು ಭರತನಾಟ್ಯ ಕಲಾವಿದೆಯಾಗಿಯೂ ಫೇಮಸ್ಸು. ಅವರ ನಾಟ್ಯ ಪ್ರದರ್ಶನಕ್ಕೂ ಈ ಸೀರಿಯಲ್ (serial) ವೇದಿಕೆ ಆಗುತ್ತಾ ಅನ್ನೋದು ಪ್ರಶ್ನೆ. ಹಾಗಾದ್ರೆ ಒಳ್ಳೆಯದೇ ಅಲ್ವಾ?
ಸರ್ ನೇಮ್ ಹಿಡಿದು ಪ್ರತಿಯೊಂದನ್ನು ಹೆಣ್ಣೇ ಯಾಕೆ ತ್ಯಾಗ ಮಾಡ್ಬೇಕು? ಗೌತಮ್ ಮಾತಿಗೆ ಚಪ್ಪಾಳೆಗಳ ಸುರಿಮಳೆ