ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಸೀರಿಯಲ್ ಮಕ್ಕಳಾದ ತನ್ವಿ ಮತ್ತು ಗುಂಡ ಜೊತೆ ಭರ್ಜರಿ ರೀಲ್ಸ್ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ ಬರುತ್ತಿವೆ.
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಭಾಗ್ಯ ತನ್ನ ಸ್ವಂತ ದುಡಿಮೆಯಿಂದ ಮಾವನಿಗೆ ಕಾರು ಕೊಡಿಸಿದ್ದಾಳೆ. ಅತ್ತ ಶ್ರೇಷ್ಠಾ, ತನ್ನ ಸ್ನೇಹಿತೆಯ ಜೊತೆಗೂಡಿ ಭಾಗ್ಯಳ ಕೆಲಸವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಇನ್ನು ಕೆಲವೇ ಎಪಿಸೋಡ್ಗಳಲ್ಲಿ ಭಾಗ್ಯಳ ಕೆಲಸವನ್ನು ಕಿತ್ತುಕೊಳ್ಳುವಲ್ಲಿ ಶ್ರೇಷ್ಠಾ ಸಕ್ಸಸ್ ಆಗಿರುವುದನ್ನು ನೋಡಬಹುದು. ಇತ್ತ ಅತ್ತೆ-ಮಾವ, ಅಮ್ಮ ಎಲ್ಲರೂ ತಾಂಡವ್ನ ಮಾತಿಗೆ ಮರುಳಾಗಿ, ಅವನು ಬದಲಾಗಿಬಿಟ್ಟ ಎಂದುಕೊಂಡಿದ್ದಾರೆ. ಈಗ ಭಾಗ್ಯಳಿಗೆ ಕೆಲಸವೂ ಇಲ್ಲ, ಯಾರ ನೆರವೂ ಇಲ್ಲ. ವಂಚನೆಯ ಎದುರು ಸತ್ಯ ಸೋತಿದೆ. ಭಾಗ್ಯ ಜೀವಂತ ಶವವಾಗಿದ್ದಾಳೆ. ದಿಕ್ಕೇ ತೋಚದಾಗಿದೆ. ಇದರ ಹೊರತಾಗಿಯೂ ಇಂಥ ಬೀದಿ ಪಾಲಾಗಿರುವ ಎಷ್ಟೋ ಮಹಿಳೆಯರಿಗೆ ಮಾದರಿಯಾಗಿ ಭಾಗ್ಯ ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಲ್ಲುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದಾಗಿದ್ದು, ಹೇಗೆ ಭಾಗ್ಯ ಎಲ್ಲವನ್ನೂ ಎದುರಿಸುತ್ತಾಳೆ ಎಂದು ನೋಡುವ ಕಾತರದಲ್ಲಿದ್ದಾರೆ ವೀಕ್ಷಕರು.
ಸೀರಿಯಲ್ ಏನೇ ಇದ್ದರೂ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಮಾತ್ರ ರಿಯಲ್ ಲೈಫ್ನಲ್ಲಿ ಬಿಂದಾಸ್ ಮಹಿಳೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸುಷ್ಮಾ ಅವರು, ತಮ್ಮ ರೀಲ್ ಮಕ್ಕಳ ಜೊತೆ ಸಕತ್ ಸ್ಟೆಪ್ ಹಾಕುತ್ತಾರೆ, ತಮಾಷೆ ಮಾಡುತ್ತಾರೆ, ರೀಲ್ಸ್ ಮಾಡುತ್ತಾರೆ. ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಸುಷ್ಮಾ ಕೆ. ರಾವ್ ಮತ್ತು ಅವರು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಹಾಗೂ ಮಗ ಗುಂಡ ಪಾತ್ರಧಾರಿ, ನಿಹಾರ್ ಗೌಡ ಜೊತೆ ಸಕತ್ ರೀಲ್ಸ್ ಮಾಡಿದ್ದಾರೆ. ರಜನೀಕಾಂತ್ ಅಭಿನಯದ ವೆಟ್ಟೈಯಾನ್ ಚಿತ್ರದ ಮಾನಸಿಲಾಯೋ ಹಾಡಿಗೆ ಮೂವರೂ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್
ಅಮ್ಮ-ಮಕ್ಕಳ ಜೋಡಿಗೆ ಫ್ಯಾನ್ಸ್ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಶೂಟಿಂಗ್ನಿಂದ ಬಿಡುವು ಆದಾಗಲೆಲ್ಲ ಸುಷ್ಮಾ ಅವರು ಭಾಗ್ಯಲಕ್ಷ್ಮಿ ಟೀಮ್ ಜೊತೆ ಹೀಗೆ ಸ್ಟೆಪ್ ಹಾಕುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ಅವರು, ಹಲವಾರು ವಿಡಿಯೋ ಶೇರ್ ಮಾಡುತ್ತಾರೆ. ಇನ್ನು ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರುಲ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್ ಅಮ್ಮ-ಮಗಳ ರೀಲ್ಸ್ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಪ್ರೇಯಸಿ ಎದುರು ಪತ್ನಿಗೆ ಸೋಲು! ಇದ್ದ ಕೆಲಸ ಕಸಿದುಕೊಂಡ ಶ್ರೇಷ್ಠಾ- ಇದೇನಿದು ಭಾಗ್ಯಳ ಹೊಸ ವೇಷ?