ಪ್ರೀ ವೆಡ್ಡಿಂಗ್ ಶೂಟಲ್ಲಿ ಮಿಂಚಿದ ಪಾರು ಸೀರಿಯಲ್ ನಟಿ ಮಾನಸಿ ಜೋಶಿ

Published : Jan 29, 2025, 12:30 PM ISTUpdated : Jan 29, 2025, 12:59 PM IST
ಪ್ರೀ ವೆಡ್ಡಿಂಗ್ ಶೂಟಲ್ಲಿ ಮಿಂಚಿದ ಪಾರು ಸೀರಿಯಲ್ ನಟಿ ಮಾನಸಿ ಜೋಶಿ

ಸಾರಾಂಶ

"ಪಾರು" ಧಾರಾವಾಹಿಯ ಖಳನಾಯಕಿ ಅನುಷ್ಕಾ ಪಾತ್ರಧಾರಿ ಮಾನಸಿ ಜೋಶಿ, ಇನ್ನೂ ಕೆಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ, ಮಲಯಾಳಂನಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇದೀಗ ರಾಘವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಪ್ರೀ-ವೆಡ್ಡಿಂಗ್ ಶೂಟ್ ನ ವಿಡಿಯೋ ಹಂಚಿಕೊಂಡಿದ್ದಾರೆ.  

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಪಾರು (Paaru serial), ಈ ಸೀರಿಯಲ್ ನಲ್ಲಿ ಪಾರುವನ್ನು ಆದಿತ್ಯನಿಂದ ದೂರ ಮಾಡೋಕೆ ಹಾಗೂ ಅಖಿಲಾಂಡೇಶ್ವರಿ ಮೇಲೆ ಸೇಡು ತೀರಿಸೋಕೆ, ತನ್ನ ಖತರ್ನಾಕ್ ಬುದ್ದಿಯ ಮೂಲಕ ಆಟವಾಡಿದ ವಿಲನ್ ಅಂದ್ರೆ ಅದು ಅನುಷ್ಕಾ.  ಅನುಷ್ಕಾ ಪಾತ್ರ ನಿಮಗೆ ನೆನಪಿದೆ ಅಲ್ವಾ? ಖಂಡಿತವಾಗಿಯೂ ನೆನಪಿರುತ್ತೆ. ಯಾಕಂದ್ರೆ ಅದೊಂದು ಪವರ್ ಫುಲ್ ವಿಲನ್ ಪಾತ್ರವಾಗಿತ್ತು. ಸುಂದರಿ ಅನುಷ್ಕಾಳನ್ನು (Villain Anushka)ವಿಲನ್ ಆಗಿ ನೋಡೋದೆ ವೀಕ್ಷಕರಿಗೆ ಇಷ್ಟವಾಗಿತ್ತು. ಈ ಅನುಷ್ಕಾ ಪಾತ್ರದ ಮೂಲಕ ಮಿಂಚಿದ ನಟಿ ಮಾನಸಿ ಜೋಶಿ. 

ಪಾರು ಸೀರಿಯಲ್ ವಿಲನ್ ಮಾನ್ಸಿ ಜೋಶಿ ನಿಶ್ಚಿತಾರ್ಥ… ಹುಡುಗ ಇವರೇ ನೋಡಿ

ಮಾನಸಿ ಜೋಶಿ (Mansi Joshi) ಪಾರು ಸೀರಿಯಲ್ ಬಳಿಕ ಅಣ್ಣ -ತಂಗಿ ಧಾರಾವಾಹಿಯಲ್ಲಿ ಹಾಗೂ ಮೈನಾ ಧಾರಾವಾಹಿಯಲ್ಲೂ ನಟಿಸಿದ್ದರು. ಆದರೆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರದ ಕಾರಣ ಎರಡೂ ಸೀರಿಯಲ್ ನಲ್ಲಿ ಒಂದಷ್ಟು ಎಪಿಸೋಡ್ ಗಳಲ್ಲಿ ನಟಿಸಿ ಹೊರ ನಡೆದಿದ್ದರು. ಇದಾದ ಬಳಿಕ ಮಾನಸಿ ಮಲಯಾಲದ ಚಂದ್ರಕಲಲೆಯುಮ್ ಚಂದ್ರಕಾಂತಮ್ ಜನಪ್ರಿಯ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸದ್ಯ ಅದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಾಗೂ ಮಲಯಾಲಂ ವೀಕ್ಷಕರ ಮೋಸ್ಟ್ ಫೇವರಿಟ್ ನಾಯಕ ನಟಿಯಾಗಿದ್ದಾರೆ. ಮಾನಸಿ ತಮಿಳು ಹಾಗೂ ತೆಲುಗು ಸೀರಿಯಲ್ ಗಳಲ್ಲೂ ಅಭಿನಯಿಸಿದ್ದರು. ಸದ್ಯ ನಟಿ ಹೊಸ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ ಆ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ  (Social Media) ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ. 

ಅಣ್ಣ-ತಂಗಿ ಧಾರಾವಾಹಿಯಿಂದ ಹೊರ ನಡೆದ ನಟಿ ಮಾನ್ಸಿ ಜೋಶಿ; ಕಾರಣವೇನು?
 
ನಟಿ ಮಾನ್ಸಿ ಜೋಶಿ ಕಳೆದ ಅಕ್ಟೋಬರ್ 20ರಂದು ನಿಶ್ಚಿತಾರ್ಥ(engagement) ಮಾಡಿಕೊಂಡಿದ್ದರು. ತಮ್ಮ ನಿಶ್ಚಿತಾರ್ಥದ ಸುಂದರ ಫೊಟೊಗಳನ್ನು ಸೋಶಿಯಲ್ ಮೀಡಿಯಾದ ಹಂಚಿಕೊಂಡು . M/R forever ಎಂದು ಬರೆದುಕೊಂಡಿದ್ದು, ಜೊತೆಗೆ ಮಾನಸಿಯ ರಾಘವ ಎಂದು ಬರೆದಿದ್ದರು. ಆದಾದ ಬಳಿಕ ರಾಘವ್ ಜೊತೆಗೆ ಹಲವಾರು ಸುಂದರ ಫೋಟೊಗಳನ್ನು ಸಹ ಶೇರ್ ಮಾಡುತ್ತಲೇ ಇದ್ದರು ಮಾನಸಿ, ಇದೀಗ ನಟಿ ತಮ್ಮ ಪ್ರೀವೆಡ್ಡಿಂಗ್ ಶೂಟ್ (pre wedding shoot) ಮಾಡಿಸಿಕೊಂಡಿದ್ದು, ಮುದ್ದಾದ ವಿಡೀಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.  ಇಬ್ಬರು ರೆಸ್ಟೋರೆಂಟ್ ನಲ್ಲಿ ಕುಳಿತು, ರಿಂಗ್ ಬದಲಾಯಿಸಿದ್ದು, ಮೇಲಿಂದ ಹೂವಿನ ಮಳೆಯಾಗಿದೆ, ನಂತರ ರಾಘವ್ ವೈನ್ ಬಾಟಲ್ ಓಪನ್ ಮಾಡಿ, ಗ್ಲಾಸ್ ಗೆ ಹಾಕಿ ಇಬ್ಬರೂ ಸಿಪ್ ಮಾಡುತ್ತಾರೆ. ಇಬ್ಬರ ಕಣ್ಣು ಕಣ್ಣು ಕಲೆಯುತ್ತೆ, ಕೈಗಳು ಸೇರುತ್ತೆ, ಕೊನೆಗೆ ರಾಘವ್ ಹೆಗಲ ಮೇಲೆ ಮಾನಸಿ ತಲೆಯಾನಿಸಿ ಕುಳಿತುಕೊಳ್ಳುತ್ತಾಳೆ. ಈ ವಿಡಿಯೋ ತುಂಬಾನೆ ರೊಮ್ಯಾಂಟಿಕ್ ಆಗಿದ್ದು, ಇದರ ಜೊತೆಗೆ ಮಾನಸಿ ಮದುವೆ ಲವ್ ಆಗಿರಲಿ, ಅರೇಂಜ್ಡ್ ಆಗಿರಲಿ ಅರ್ಥಮಾಡಿಕೊಳ್ಳುವ ಜೀವ ಬೇಕು, ನನಗೆ ಒಬ್ಬರು ಸಿಕ್ಕಿದ್ದಾರೆ ಎಂದು ಬರೆದುಕೊಂಡಿದ್ದಾರೆ(Arranged or love marriage, the understanding and mutual respect matters and I’m glad I found the right one ). ಅಭಿಮಾನಿಗಳು ಈ ಜೋಡಿಯ ಹೊಸ ಜೀವನಕ್ಕೆ ಶುಭ ಕೋರಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ನಾನು ಆಚೆನೂ ಅಲ್ಲ, ಈಚೆನೂ ಅಲ್ಲ ಎನ್ನುತ್ತ ಅಸಲಿ ವಯಸ್ಸು ತಿಳಿಸಿದ ಕಾವ್ಯಾ ಶೈವ! ಗಿಲ್ಲಿ ಹೇಳಿದ್ದೇನು?
BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಔಟ್​! ಎಲ್ಲರೂ ಮಲಗಿದ್ದಾಗ ರಾತ್ರೋರಾತ್ರಿ ಶಾಕ್​ ಕೊಟ್ಟ ಮಂಗಳೂರು ಪುಟ್ಟಿ!