ಇವಳದ್ದು ಮಗುವಿನಂಥ ಮನಸ್ಸು ಎಂದ್ರೆ, ನಿಮ್ದು ನಾಯಿಬುದ್ಧಿ ಅನ್ನೋದಾ ಭಾಗ್ಯ? ತುಂಟಾಟ ನೋಡಿ ಫ್ಯಾನ್ಸ್​ ಫುಲ್​ ಖುಷ್​

By Suchethana D  |  First Published Aug 27, 2024, 12:32 PM IST

ಸೀರಿಯಲ್​ನಲ್ಲಿ ಸದಾ ಕಚ್ಚಾಡುತ್ತಿರುವ ಭಾಗ್ಯ ಮತ್ತು ತಾಂಡವ್​ ಅಸಲಿ ಲೈಫ್​ನಲ್ಲಿ ಹೇಗಿದ್ದಾರೆ? ವಿಡಿಯೋ ನೋಡಿ ಥಹರೇವಾರಿ ಕಮೆಂಟ್ಸ್​ ಹಾಕಿದ ನೆಟ್ಟಿಗರು 
 


ಭಾಗ್ಯ ಮತ್ತು ತಾಂಡವ್​ ಎಂದಾಕ್ಷಣ ಭಾಗ್ಯಲಕ್ಷ್ಮಿ ಸೀರಿಯಲ್​ ಫ್ಯಾನ್ಸ್​ಗೆ ಸದಾ ಕಚ್ಚಾಡಿಕೊಳ್ಳುವ ದಂಪತಿಯೇ ಕಣ್ಣುಮುಂದೆ ಬರ್ತಾರೆ. ಇದ್ದರೆ ಭಾಗ್ಯಳಂಥ ಸೊಸೆ ಇರ್ಬೇಕು, ತಾಂಡವ್​ನಂಥ ಗಂಡ ಯಾವ ಹೆಣ್ಣಿಗೂ ಬೇಡಪ್ಪಾ ಅನ್ನೋರೆ ಹೆಚ್ಚು. ಅಷ್ಟಕ್ಕೂ ಈ ದಂಪತಿ ಮಧ್ಯೆ ಈಗ ಏನೂ ಸರಿಯಿಲ್ಲ. ವಿಚ್ಛೇದನವೊಂದು ಆಗಿಲ್ಲ ಬಿಟ್ಟರೆ, ಇಬ್ಬರ ನಡುವೆ ಯಾವುದೇ ರೀತಿಯ ಪ್ರೀತಿ ಇಲ್ಲ. ಒಂದೆಡೆ ಭಾಗ್ಯ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ತಾಂಡವ್​ ಶ್ರೇಷ್ಠಾಳ ಜೊತೆಯಲ್ಲಿ ಸಂಸಾರ ಹೂಡಲು ಪ್ಲ್ಯಾನ್​ ಮಾಡುತ್ತಿದ್ದಾನೆ. ಇದಾಗಲೇ ಶ್ರೇಷ್ಠಾ ಮದುವೆನೂ ಫಿಕ್ಸ್​ ಮಾಡಿಬಿಟ್ಟಿದ್ದಾಳೆ. ನಾಳೆನೇ ಮದ್ವೆ ಎಂದು ಖುದ್ದು ತಾಂಡವ್​ಗೂ ಶಾಕ್​ ಕೊಟ್ಟಿದ್ದಾಳೆ. ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಫಟಾಫಟ್​ ಮದ್ವೆಗೆ ಶ್ರೇಷ್ಠಾ ನಿರ್ಧರಿಸಿದ್ದಾಳೆ.

ಇದರ ನಡುವೆಯೇ, ಭಾಗ್ಯ ಮತ್ತು ತಾಂಡವ್​ ಜೊತೆಯಾಗಿ ಖುಷಿಖುಷಿಯಿಂದ ಇರುವ ವಿಡಿಯೋ ಒಂದು ವೈರಲ್​ ಆಗಿದೆ. ಇಬ್ಬರೂ ಪರಸ್ಪರ ಕಾಲೆಳೆದುಕೊಂಡು ತಮಾಷೆ ಮಾಡಿರುವ ವಿಡಿಯೋ ಇದಾಗಿದ್ದು,  ಇದನ್ನು ನೋಡಿದ ಸೀರಿಯಲ್​ ಪ್ರೇಮಿಗಳು ಭಾಗ್ಯ ಮತ್ತು ತಾಂಡವ್​ ಒಂದಾಗಿ ಬಿಟ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಬ್ಬರೂ ಹೀಗೆ ಖುಷಿಯಾಗಿರಿ ಎನ್ನುತ್ತಿದ್ದಾರೆ.  ಅಷ್ಟಕ್ಕೂ ಇದೇನು ಸಿನಿಮಾ ಕಥೆಯಲ್ಲ. ಬದಲಿಗೆ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೂಟಿಂಗ್​ ಮಧ್ಯೆ ಹೀಗೆಲ್ಲಾ ತುಂಟಾಟ ನಡೆಯುತ್ತದೆ. ಫ್ರೇಮ್​ನಲ್ಲಿ ನಮ್ಮ ಮುಖ ಬರಲ್ಲ ಎಂದಾಗ ಹೀಗೆಲ್ಲಾ ತಮಾಷೆಗೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೂ ಬಿಡದ ಅಭಿಮಾನಿಗಳು ಅದೇನೇ ಇರಲಿ ಭಾಗ್ಯ, ತಾಂಡವ್​ ಬುರುಡೆಗೆ ಸರಿಯಾಗಿ ಏಟು ಕೊಡಿ ಎನ್ನುತ್ತಿದ್ದಾರೆ. ಅಂದಹಾಗೆ ಸುಷ್ಮಾ ರಾವ್​ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಇದ್ದಾರೆ. ಆಗಾಗ್ಗೆ ಇಂಥ ವಿಡಿಯೋಗಳನ್ನು ಶೇರ್​  ಮಾಡುತ್ತಿರುತ್ತಾರೆ.

Tap to resize

Latest Videos

undefined

ದ್ವಾಪರ ಹಾಡಿಗೆ 'ಕನ್ನಡತಿ' ರಮೋಲಾ ಬೆಲ್ಲಿ ಡಾನ್ಸ್​: ನಾಯಕಿಯಾಗಿ ನೋಡೋದು ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್​

ಇನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು.  

ಇನ್ನು ತಾಂಡವ್​ ಕುರಿತು ಹೇಳುವುದಾದರೆ, ಅಸಲಿ ಹೆಸರು ಸುದರ್ಶನ ರಂಗಪ್ರಸಾದ್​. ಭಾಗ್ಯ ತಾಂಡವ್​ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್​, ತಾಂಡವ್​ ಅರ್ಥಾತ್​ ಸುದರ್ಶನ ರಂಗಪ್ರಸಾದ್​ ಅವರ ಪತ್ನಿ. ಸಂಗೀತಾ ಭಟ್‌ ನಟಿಯಾಗಿ, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್‌ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್‌ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು  2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಬ್ಬರ ರೀಲ್ಸ್​ ನೋಡಿ ಸೀರಿಯಲ್​ನಲ್ಲಿಯೂ ಹೀಗೆಯೇ ಇರಿ. ನಿಮ್ಮ ಈ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎನ್ನುತ್ತಿದ್ದಾರೆ. 

ತುಂಬು ಗರ್ಭಿಣಿ ನೇಹಾಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ! ಫಟಾಫಟ್​ ದೋಸೆ ನೀವೂ ಮಾಡಿ ನೋಡಿ...

click me!