ಸಂಬಂಧ ಕಡಿದು ಕೊಂಡ್ರೂ, ತಾಂಡವ್ ಇನ್ನೊಂದು ಮದ್ವೆ ಆಗಲು ಬಿಡ್ತಾಳಾ ಭಾಗ್ಯ?

Published : Dec 17, 2024, 10:13 AM ISTUpdated : Dec 17, 2024, 10:16 AM IST
ಸಂಬಂಧ ಕಡಿದು ಕೊಂಡ್ರೂ, ತಾಂಡವ್ ಇನ್ನೊಂದು ಮದ್ವೆ ಆಗಲು ಬಿಡ್ತಾಳಾ ಭಾಗ್ಯ?

ಸಾರಾಂಶ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಮದುವೆಗೆ ಮುಂದಾದಾಗ, ಭಾಗ್ಯ ಪೊಲೀಸರ ಸಹಾಯದಿಂದ ಅದನ್ನು ತಡೆಯುತ್ತಾಳೆ. ತಾಂಡವ್ ಎರಡನೇ ಮದುವೆ ಕಾನೂನುಬಾಹಿರ ಎಂದು ದೂರು ನೀಡುವ ಭಾಗ್ಯಳ ನಡೆಗೆ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಭಾಗ್ಯಳನ್ನು ಬೆಂಬಲಿಸಿದರೆ, ಇನ್ನು ಕೆಲವರು ಈ ನಡೆಯನ್ನು ಟೀಕಿಸಿದ್ದಾರೆ. ವಿಚ್ಛೇದನ ಪ್ರಕ್ರಿಯೆ ಇನ್ನೂ ಮುಗಿಯದ ಕಾರಣ ಭಾಗ್ಯಳ ಹೋರಾಟ ಮುಂದುವರೆದಿದೆ.

ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಸೀರಿಯಲ್ (Colors Kannada Bhagyalakshmi serial) ನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆಗೆ ಸಿದ್ಧವಾಗಿದ್ದಾರೆ. ಭಾಗ್ಯ ವಿಚ್ಛೇದನಕ್ಕೆ ಓಕೆ ಎನ್ನುತ್ತಿದ್ದಂತೆ ಶ್ರೇಷ್ಠಾ, ತಾಂಡವ್ ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾಳೆ. ಇನ್ನೇನು ಶೇಷ್ಠಾ ಕನಸು ನನಸಾಯ್ತು, ತಾಂಡವ್ ಮದುವೆ (Marriage) ಆಗೇ ಹೋಯ್ತು ಎನ್ನುವಷ್ಟರಲ್ಲಿ ಮತ್ತೆ ಎಲ್ಲ ಠುಸ್ ಆಗಿದೆ. ತಾಂಡವ್ ಮತ್ತು ಶ್ರೇಷ್ಠಾ ಮದುವೆ ಆಗೋಕೆ ಭಾಗ್ಯ ಬಿಡುವ ಪ್ರಶ್ನೆಯೇ ಇಲ್ಲ.

ಕಲರ್ಸ್ ಕನ್ನಡ ತನ್ನ ಇನ್ಸ್ಟಾ (Insta) ಖಾತೆಯಲ್ಲಿ ಇವತ್ತಿನ ಪ್ರೋಮೋ ಪೋಸ್ಟ್ ಮಾಡಿದೆ. ಅದ್ರಲ್ಲಿ ಶ್ರೇಷ್ಠಾ ಹಾಗೂ ತಾಂಡವ್ ಮದುವೆ ಆಗ್ತಿರೋದನ್ನು ನೀವು ಕಾಣ್ಬಹುದು. ಮನೆಯಲ್ಲೇ ಶ್ರೇಷ್ಠಾ ಹಾಗೂ ತಾಂಡವ್ ಮದುವೆ ಮಾಡಿಕೊಳ್ತಿದ್ದಾರೆ. ಅತೀ ಖುಷಿಯಲ್ಲಿರುವ ತಾಂಡವ್, ಶ್ರೇಷ್ಠಾಗೆ ತಾಳಿ ಕಟ್ಟುವ ತರಾತುರಿಯಲ್ಲಿದ್ದಾನೆ. ಇನ್ನೇನು ಶ್ರೇಷ್ಠಾ ಕೊರಳಿಗೆ ತಾಂಡವ್ ಮಾಂಗಲ್ಯ ಬೀಳ್ಬೇಕು ಅಷ್ಟರಲ್ಲಿ ಎಲ್ಲ ಸೀರಿಯಲ್, ಸಿನಿಮಾದಲ್ಲಿ ಆಗುವಂತೆ ನಿಲ್ಸಿ ಎನ್ನುವ ಧ್ವನಿ ಕೇಳಿಸುತ್ತದೆ. ಅಲ್ಲಿಗೆ ಪೊಲೀಸ್ (Police) ಎಂಟ್ರಿಯಾಗುತ್ತೆ. ಮೊದಲ ಪತ್ನಿ ಇರುವಾಗ್ಲೇ ತಾಂಡವ್ ಎರಡನೇ ಮದುವೆ ಆಗ್ತಿದ್ದು, ಇದು ಕಾನೂನು ಬಾಹಿರ, ಅರೆಸ್ಟ್ ಮಾಡಿ ಇವರನ್ನು ಅಂತ ಪೊಲೀಸರು ಹೇಳ್ತಾರೆ. ಅದಕ್ಕೆ ಉತ್ತರಿಸುವ ತಾಂಡವ್, ಅಷ್ಟಕ್ಕೂ ನಿಮಗೆ ದೂರು ನೀಡಿದ್ದು ಯಾರು ಎನ್ನುತ್ತಾನೆ. ಆಗ ಭಾಗ್ಯ ಎಂಟ್ರಿಯಾಗುತ್ತದೆ. ನಾನೇ ಎನ್ನುತ್ತ ಬರುವ ಭಾಗ್ಯ,  ತಾಂಡವ್  ಮದುವೆಗೆ ಅಡ್ಡಿ ಮಾಡ್ತಾಳೆ. 

ಹೊರಬಂದ ಡೆವಿಲ್, ಬಣ್ಣ ಹಚ್ಚೋದ್ಯಾವಾಗ ದಾಸ? ಡೆವಿಲ್ ಶೂಟಿಂಗ್ ರಿಸ್ಟಾರ್ಟ್ ಆಗುತ್ತಾ?

ಇನ್ಸ್ಟಾ ಪ್ರೋಮೋ ನೋಡಿದ ವೀಕ್ಷಕರು, ತಾಂಡವ್, ನಿನ್ ಮದುವೆ ಸಾಧ್ಯನೇ ಇಲ್ಲ ಬಿಡು ಎನ್ನುತ್ತಿದ್ದಾರೆ. ಕೋರ್ಟ್ನಲ್ಲಿ ಎಲ್ಲ ಇತ್ಯರ್ಥ ಆದ್ಮೇಲೆ ಮಾತ್ರ ಮದುವೆಗೆ ಪ್ರಯತ್ನ ಮಾಡು, ಪ್ರತಿ ಸಲ ಇದೇ ಆಯ್ತು ಎನ್ನುತ್ತಿದ್ದಾರೆ. ಕೆಲ ವೀಕ್ಷಕರಿಗೆ ಇದು ಇಷ್ಟವಾಗಿಲ್ಲ. ಗಂಡನ ಮುಖಕ್ಕೆ ಡಿವೋರ್ಸ್ ಪೇಪರ್ ಎಸೆದು ಬಂದಿದ್ದ ಭಾಗ್ಯಾ, ಮತ್ತ್ಯಾಕೆ ತಾಂಡವ್ ಬಳಿ ಬಂದಿದ್ದಾಳೆ. ಮಕ್ಕಳಿಗಾಗಿ ಮತ್ತೆ ಒಂದಾಗುವ ಪ್ರಯತ್ನ ನಡೆಸುತ್ತಿದ್ದಾಳಾ? ಯಾಕೋ ಸೀರಿಯಲ್ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ. ಮತ್ತೆ ಕೆಲವರು, ಅವರನ್ನು ಅವರ ಪಾಡಿಗೆ ಬಿಟ್ಬಿಡು ಭಾಗ್ಯಾ, ಏನಾದ್ರೂ ಮಾಡಿಕೊಳ್ಳಲಿ, ಶ್ರೇಷ್ಠಾ ಏನೇ ಇರ್ಲಿ, ನಿಮ್ಮ ಮೇಕಪ್ ಹಾಗೂ ಸೀರೆ ಸೂಪರ್, ಇಬ್ಬರನ್ನು ಜೈಲಿಗೆ ಹಾಕಿ, ಮುದ್ದೆ ತಿನ್ನಲಿ ಎಂಬೆಲ್ಲ ಕಮೆಂಟ್ ವೀಕ್ಷಕರಿಂದ ಬರ್ತಿದೆ. 

ಬಿಗ್‌ಬಾಸ್‌ ಮನೆಯಿಂದ ಗೋಲ್ಡ್ ಸುರೇಶ್ ಹೊರಬರಲು ಕಾರಣ ಇದೆನಾ?

ಒಟ್ಟಿನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮುರಿದಿದ್ದನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಭಾಗ್ಯಾ, ಬೆಂಕಿ ಎಂದಿದ್ದಾರೆ. ಏನೇ ಆಗ್ಲಿ, ತಾಂಡವ್ಗೆ ಶ್ರೇಷ್ಠಾ ಜೊತೆ ಮದುವೆ ಆಗೋಕೆ ಬಿಡಬಾರದು ಎಂಬುದೇ ವೀಕ್ಷಕರ ಅಭಿಪ್ರಾಯ. ತಾಂಡವ್ ನಿಂದ ಬೇರೆಯಾದ್ಮೇಲೆ ಭಾಗ್ಯಗೆ ಸಮಸ್ಯೆಗಳು ಬೆನ್ನು ಹತ್ತಿವೆ. ಅತ್ತೆ ಅಂತ ನೋಡದೆ ತಾಂಡವ್, ಭಾಗ್ಯಾ ಅಮ್ಮ ಸುನಂದಾಳನ್ನು ಜೈಲಿಗೆ ಕಳುಹಿಸಿದ್ದ. ಪೊಲೀಸ್ ಮುಂದೆ ಭಾಗ್ಯಾ ಅವಹೇಳನ ಮಾಡಿ ನಕ್ಕಿದ್ದ. ಮಕ್ಕಳನ್ನು ತನ್ನ ಜೊತೆ ಕಳಿಸುವಂತೆ ಗಲಾಟೆ ಮಾಡಿದ್ದ. ಭಾಗ್ಯಾ ಈಗ ಡಿವೋರ್ಸ್ ಪೇಪರ್ ಗೆ ಸಹಿ ಮಾಡಿದ್ದಾಳೆ. ಆದ್ರೆ ಕೋರ್ಟ್ ನಲ್ಲಿ ಯಾವುದೇ ನಿರ್ಧಾರ ಬಂದಿಲ್ಲ. ಭಾಗ್ಯಾ ಇನ್ನೂ ವಿಚ್ಛೇದನ ಪಡೆದಿಲ್ಲ. ಭಾಗ್ಯಾ ಮಗ, ಅಪ್ಪ ಹಾಗೂ ಅಮ್ಮ ಇಬ್ಬರೂ ಒಟ್ಟಿಗೆ ಇರಬೇಕು ಎನ್ನುತ್ತಿದ್ದಾನೆ. ಮಗನಿಗೆ ಜ್ವರ ಬಂದಿದ್ದು, ಅಪ್ಪನ ಆರೋಗ್ಯ ಕೂಡ ಹದಗೆಟ್ಟಿದೆ. ಎಲ್ಲದರ ಮಧ್ಯೆ ಭಾಗ್ಯಾ ಹೋರಾಡುತ್ತಿದ್ದಾಳೆ. ಭಾಗ್ಯಾ ಹೊಸ ಜೀವನಕ್ಕೆ ಎಲ್ಲರ ಹಾರೈಕೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?