ಫೋನ್​ಗಳೆಲ್ಲಾ ಜಿಮ್​ಗೆ ಹೋದ್ವಂತೆ ಯಾಕೆ? ಸೀತಾಳ ಉತ್ತರಕ್ಕೆ ತಲೆ ಚಚ್ಚಿಕೊಂಡ ಸೀತಾರಾಮ ಟೀಮ್​!

By Suchethana D  |  First Published Dec 16, 2024, 7:13 PM IST

ಸೀತಾರಾಮ ಸೀರಿಯಲ್​ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಕೇಳಿದ ಪ್ರಶ್ನೆಗೆ ಸೀರಿಯಲ್​ ಟೀಮ್​ ತಲೆ ಚಚ್ಚಿಕೊಂಡಿದೆ. ಅವರು ಕೇಳಿದ್ದೇನು?
 


ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯ ಸಾವಾಗಿದೆ. ಅವಳ ಆತ್ಮ ವೀಕ್ಷಕರಿಗಷ್ಟೇ ಕಾಣಿಸಿಕೊಳ್ಳುತ್ತಿದೆ. ಮಗಳನ್ನು  ಕಳೆದುಕೊಂಡ ಸೀತಾ ಹುಚ್ಚಿಯಾಗಿದ್ದಾಳೆ. ಅದೇ ಅವಳ ಇನ್ನೊಂದು ಮಗಳು, ಸಿಹಿಯ ಅವಳಿ ಸಹೋದರಿ ಸುಬ್ಬಿಯ ಆಗಮನವಾಗಿದೆ. ಇವಳು ಸೀತಾ ರಾಮರನ್ನು ಯಾವಾಗ ಸಿಗ್ತಾಳೆ, ಅವರ ಮಿಲನ ಯಾವಾಗ ಆಗುತ್ತದೆ ಎನ್ನುವ ಕುತೂಹಲದಲ್ಲಿದ್ದಾರೆ ಸೀರಿಯಲ್​ ಪ್ರೇಮಿಗಳು. ಇದರ ನಡುವೆಯೇ,  ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಆಗಾಗ್ಗೆ ಒಂಟಿಯಾಗಿ ಇಲ್ಲವೇ  ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ವಿವಿಧ ರೀತಿಯ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ.  

ಇದೀಗ ವೈಷ್ಣವಿ ಅವರು, ಮೊಬೈಲ್​ ಎಲ್ಲಾ ಸೇರಿ ಜಿಮ್​ಗೆ ಹೋಗಿದ್ವಂತೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸೀತಾರಾಮ ಪಾತ್ರಧಾರಿಗಳಾದ ರಾಮ ಅರ್ಥಾತ್​ ಗಗನ್​ ಚಿನ್ನಪ್ಪ, ಅಶೋಕ ಪಾತ್ರಧಾರಿ ಅಶೋಕ್​ ಕುಮಾರ್​, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಇಂಥದ್ದೆಲ್ಲಾ ಪ್ರಶ್ನೆ ಎಲ್ಲಿಂದ ಹುಡುಕಿ ಬರ್ತೀರಪ್ಪಾ ಎಂದು ತಲೆ ಚಚ್ಚಿಕೊಂಡಿದ್ದಾರೆ. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೆಲವು ಉತ್ತರಗಳನ್ನೂ ನೀಡಿದ್ದಾರೆ. ಮೇಘನಾ ಮೊಬೈಲ್​ ವರ್ಕ್​ಔಟ್​ ಮಾಡಲು ಹೋಗಿತ್ತು, ಯಾರೋ ಐದು ಗಂಟೆಗೆ ಆಲಾರಾಂ ಇಟ್ಟಿದ್ರು ಅದಕ್ಕೇ ಎಂದಿದ್ದಾರೆ. ಅಶೋಕ್​ ಇದಕ್ಕೆ ಉತ್ತರಿಸಿ, ಜಿಮ್​ಗೆ ಹೋಗುವವರೆಲ್ಲಾ ಮನೆಯಲ್ಲಿ ಕೂತಿದ್ರಂತೆ, ಅದಕ್ಕೇ  ಮೊಬೈಲ್​ಗಳು ಹೋಗಿದ್ವಂತೆ ಎಂದಿದ್ದಾರೆ. 

Tap to resize

Latest Videos

ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್‌ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'

ಅದಕ್ಕೆ ವೈಷ್ಣವಿ ಇವೆಲ್ಲಾ ತಪ್ಪು, ಸರಿ ಉತ್ತರ ಎಂದರೆ ಆ್ಯಬ್ಸ್​ (Apps) ಮೇಲೆ ವರ್ಕ್​ ಮಾಡಲು ಹೋದ್ವಂತೆ ಎಂದಿದ್ದಾರೆ. ಇದನ್ನು ಕೇಳಿ ಎಲ್ಲರೂ ತಲೆ ಚಚ್ಚಿಕೊಂಡಿದ್ದಾರೆ. ಮೇಘನಾ ಆ್ಯಬ್ಸ್​, ಆ್ಯಪ್ ಎಲ್ಲಿಯ ಸಂಬಂಧನಪ್ಪಾ ಎಂದಿದ್ದಾರೆ. ರಾಮ್​ ಪಾತ್ರಧಾರಿ ಗಗನ್​ ಅವರು, ಇದು ನಿಮಗೇ ಅನ್ನಿಸಲಿಲ್ವಾ? ಈ ಪ್ರಶ್ನೆ ಲಾಟ್​ಪೂಟ್​ ಇದೆಯಂತ ಎಂದು ಪ್ರಶ್ನಿಸಿದ್ದಾರೆ. ಫ್ರೀಯಾಗಿ ಕುತ್ಕೊಂಡು ಒಂದು ಟೀ ಕುಡೀತಿವಲ್ಲ, ಅದೇ ಬಿಟ್ಟಿ ಬಿದ್ದೀದಿವಲ್ಲಾ, ಅದಕ್ಕೆ ಏನೇನೋ ಪ್ರಶ್ನೆ ಕೇಳ್ತಿರಾ ಎಂದು ಮೇಘನಾ ಹೇಳಿದ್ದಾರೆ. ಒಟ್ಟಿನಲ್ಲಿ ಏನೇ ಮಾಡಿದ್ರೂ ರೀಲ್ಸ್​ಗೆ ವ್ಯೂಸ್​ ಬರತ್ತೆ ಎಂದು ನಟಿಯರು ಏನೇನೋ ಪ್ರಶ್ನೆ ಕೇಳ್ತಾರೆ ಎಂದು ಕಮೆಂಟಿಗರೂ ಹೇಳುತ್ತಿದ್ದಾರೆ. 

undefined

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

 

click me!