ನನಗೆ, ನಿನಗೆ ಸಂಬಂಧ ಕಲ್ಪಿಸಿದ್ರೆ ನಾನ್‌ ಏನ್‌ ಮಾಡಲಿ?‌ ಬಹುಮುಖ್ಯವಾದ ಗಾಸಿಪ್‌ ಬಗ್ಗೆ ಸೃಜನ್‌ ಲೋಕೇಶ್ ಮಾತು!

Anchor Srujan Lokesh News: ನಟ ಸೃಜನ್‌ ಲೋಕೇಶ್‌ ಅವರು ಇತ್ತೀಚೆಗೆ ಸಂಬಂಧಗಳು ಯಾಕೆ ಹಾಳಾಗುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಾಸಿಪ್‌ ಸೃಷ್ಟಿಮಾಡುವವರ ಬಗ್ಗೆಯೂ ಮೌನ ಮುರಿದಿದ್ದಾರೆ. 

majaa takiesh fame anchor srujan lokesh opens about gossip and trolls

ಇತ್ತೀಚೆಗೆ ಸಿನಿಮಾಗಳಿಗಿಂತ ಜಾಸ್ತಿ ನೆಗೆಟಿವ್‌ ವಿಷಯಗಳಿಂದ ಸದ್ದು ಮಾಡಿದ್ದ ನಟ, ನಿರೂಪಕ ಸೃಜನ್‌ ಲೋಕೇಶ್‌ ಅವರು ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಅವರು ಬಹುಮುಖ್ಯವಾದ ಗಾಸಿಪ್‌ಗೆ ಬ್ರೇಕ್‌ ಗಾಕಿದ್ದಾರೆ. ʼಗೋಲ್ಡ್‌ ಕ್ಲಾಸ್‌ ವಿಥ್‌ ಮಯೂರʼ ಪಾಡ್‌ಕಾಸ್ಟ್‌ನಲ್ಲಿ ಸೃಜನ್‌ ಲೋಕೇಶ್‌ ಅವರು ಕೆಲ ವಿಚಾರಗಳ ಬಗ್ಗೆ ಮೌನ ಮುರಿದಿದ್ದಾರೆ. 

ಇಗ್ನೋರ್‌ ಮಾಡ್ತೀನಿ! 
“ಗಾಸಿಪ್‌ ಇರಲೀ, ಕಾಂಟ್ರವರ್ಸಿ ಇದ್ದರೂ ನಾನು ಇಗ್ನೋರ್‌ ಮಾಡ್ತೀನಿ. ನನ್ನ ಬಗ್ಗೆ ಗೊತ್ತಿದ್ದವರು ಮಾತನಾಡಿದರೆ ನಾನು ಕೇಳಿಸಿಕೊಳ್ತೀನಿ. ಯಾರೋ ಗೊತ್ತಿಲ್ಲದವರು ಮಾತನಾಡಿದ್ರೆ ನಾನು ಯಾಕೆ ಕೇಳಬೇಕು? ಅಂಥವರಿಗೆ ಯಾಕೆ ನಾನು ಮಹತ್ವ ಕೊಡಬೇಕು? ನನಗೆ ನಿನಗೆ ಸಂಬಂಧ ಕಲ್ಪಿಸಿ ಇವ್ರೇ ಇರಬಹುದು ಎಂದರೆ ಏನು ಮಾಡಲಿ? ಪರ್ಸನಲ್‌ ವಿಷಯಗಳನ್ನು ಮಾತಾಡೋ ಅಧಿಕಾರ ಯಾರಿಗೂ ಇಲ್ಲ. ಗೊತ್ತಿಲ್ಲದ ವಿಚಾರವನ್ನು ಹೀಗೆ ಇರಬಹುದು ಅಂತ ಹೇಳಿದ್ರೆ ಹೇಗೆ? ನಾಳೆ ದಿನ ಇನ್ನೊಂದು ದಿನ ಮಾತಾಡಿದರೆ ಎಲ್ಲದಕ್ಕೂ ನಾನು ಉತ್ತರ ಕೊಟ್ಟಿಕೊಂಡು ಕೂರಲಾ?” ಎಂದು ಸೃಜನ್‌ ಲೋಕೇಶ್‌ ಮಾತನಾಡಿದ್ದಾರೆ. 

Latest Videos

ಒಟ್ಟಿಗೆ ಬಾಳಬೇಕು ಅಂತ ಫಿಕ್ಸ್‌ ಆದ್ರು; ನಿಶ್ಚಿತಾರ್ಥ ಮುರ್ಕೊಂಡ್ರು! ಸೆಲೆಬ್ರಿಟಿಗಳ ಈ ನಿರ್ಧಾರವಾದ್ರೂ ಯಾಕೆ?

ಮೊಬೈಲ್‌ ಇದ್ರೆ ಪತ್ರಕರ್ತ ಆಗ್ತಾರಾ?
“ನನ್ನ ತಾಯಿ, ಪತ್ನಿ, ಅಕ್ಕ, ಮಕ್ಕಳು, ಸ್ನೇಹಿತರು, ಶತ್ರುಗಳು ಪ್ರಶ್ನೆ ಮಾಡಿದರೆ ಉತ್ತರ ಕೊಡ್ತೀನಿ. ಗೊತ್ತಿಲ್ಲದವರು ಪ್ರಶ್ನೆ ಮಾಡಿದರೆ ಏನು ಮಾಡಲಿ? ಇದಕ್ಕೆ ಸಂಬಂಧಪಟ್ಟಂತೆ ನನ್ನ ಕಡೆಯವರು ಫೋನ್‌ ಮಾಡಿ ಯಾಕೆ ಹೀಗೆ ಬರೆದ್ರಿ ಅಂತ ಪ್ರಶ್ನೆ ಕೇಳಿದ್ರೆ, ಫೋಟೋ ಹಾಕಿದ್ರೆ ಅಟ್ರ್ಯಾಕ್ಟ್‌ ಆಗ್ತಾರೆ ಅಂತ ಹಾಕಿದ್ವಿ ಅಂತ ಹೇಳ್ತಾರೆ. ಮೊಬೈಲ್‌ ಇದ್ದವರೆಲ್ಲ ಜರ್ನ್‌ಲಿಸ್ಟ್‌ ಆಗ್ತಾರೆ ಅಂದ್ರೆ ಏನರ್ಥ?” ಎಂದು ಸೃಜನ್‌ ಲೋಕೇಶ್‌ ಹೇಳಿದ್ದಾರೆ.  

ವಯಸ್ಸು 40 ಕಳೆದರೂ ಒಮ್ಮೆಯೂ ಮದುವೆಯಾಗದ ಕನ್ನಡ ನಟಿಯರಿವರು! ಇಂಥ ಗಟ್ಟಿ ನಿರ್ಧಾರವೇಕೆ?

ಬೆನ್ನ ಹಿಂದೆ ಮಾತಾಡೋದಿಲ್ಲ! 
“ನಾನು ಈಗ ಕಿವಿ ಮುಚ್ಚಿಕೊಂಡು ಕೆಲಸ ಮಾಡ್ತೀನಿ. ಕೆಲಸದ ಮೂಲಕ ನಾನು ಉತ್ತರ ಕೊಡಬೇಕು. ನಾನು ಯಾರ ಬೆನ್ನಹಿಂದೆ ಕೂಡ ಮಾತಾಡೋದಿಲ್ಲ, ಅದು ನನಗೆ ಇಷ್ಟವೂ ಇಲ್ಲ. ನನ್ನ ಬಗ್ಗೆ ಇನ್ನೊಬ್ಬರು ಮಾತಾಡೋದು ನನಗೆ ಇಷ್ಟ ಇಲ್ಲ ಅಂದ್ಮೇಲೆ ನಾನು ಯಾಕೆ ಬೇರೆಯವರ ಬಗ್ಗೆ ಮಾತಾಡಲಿ? ನಮ್ಮಲ್ಲಿ ಏನಿದೆ? ಏನಿಲ್ಲ ಅಂತ ಗೊತ್ತಿದೆ, ಆದರೆ ನಾವು ಎಷ್ಟು ದಿನ ಬದುಕ್ತೀವಿ ಅಂತ ಗೊತ್ತಿದೆಯಾ?” ಎಂದು ಸೃಜನ್‌ ಲೋಕೇಶ್‌ ಹೇಳಿದ್ದಾರೆ. 

Majaa Takies Show:‌ ಅಬ್ಬಬ್ಬಾ...! ಪುತ್ರ ಸೃಜನ್‌ ಲೋಕೇಶ್‌ಗೆ ತಾಯಿ ಗಿರಿಜಾ ಏನೆಲ್ಲ ಬಯ್ತಾರೆ ಗೊತ್ತಾ?

ಸಂಬಂಧ ಹಾಳಾಗ್ತಿದೆ! 
“ನನ್ನ ಕ್ಲೋಸ್‌ ಫ್ರೆಂಡ್‌ ಜೊತೆ ನಾನು ಮಾತಾಡ್ತಿಲ್ಲ. ಅಂತೆ ಕಂತೆಗಳಿಗೆ ನಮ್ಮ ಸಂಬಂಧ ಹಾಳಾದರೆ ನಾನು ಏನು ಮಾಡಲಿ? ಭಗವಂತ ಏನು ಕೊಡಬೇಕೋ ಅದನ್ನು ಕೊಟ್ಟೇ ಕೊಡ್ತಾನೆ, ಅವನು ದಡ್ಡ ಅಲ್ಲ, ಯಾವುದೇ ಸಂಬಂಧದಲ್ಲಿ ಎದುರುಗಡೆ ಕಿತ್ತಾಡೋದರಲ್ಲಿ ತುಂಬ ಲಾಭಗಳಿವೆ. ಅದನ್ನು ಬಿಟ್ಟು ಅವನು ಹಾಗೆ ಅಂದನಂತೆ, ಇವನು ಹಾಗೆ ಅಂದನಂತೆ ಅಂತ ಮಾತಾಡ್ತಾರೆ. ಅಂತೆ ಕಂತೆಗಳಿಂದಲೇ ಸಾಕಷ್ಟು ಸಂಬಂಧಗಳು ಹಾಳಾಗುತ್ತಿವೆ. ಹೀಗಾಗಿ ನಾನಾಯ್ತು, ನನ್ನ ಮನೆ ಆಯ್ತು ಅಂತ ಎಲ್ಲರಿಂದ ದೂರ ಇದ್ದೀನಿ” ಎಂದು ಸೃಜನ್‌ ಲೋಕೇಶ್‌ ಅವರು ಮಾತನಾಡಿದ್ದಾರೆ. 

ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಡಿವೋರ್ಸ್‌ ಪಡೆದಿದ್ದಾರೆ. ಇವರ ಡಿವೋರ್ಸ್‌ ಬಗ್ಗೆ ಸೃಜನ್‌ ಲೋಕೇಶ್‌ ಕಾರಣ ಅಂತ ಕೆಲ ಟ್ರೋಲ್‌ ಪೇಜ್‌ಗಳು ಟ್ರೋಲ್‌ ಮಾಡಿದವು. ಈ ಬಗ್ಗೆ ಸೃಜನ್‌ ಲೋಕೇಶ್‌ ಅವರು ಪರೋಕ್ಷವಾಗಿ ಮಾತನಾಡಿದಂತಿದೆ. 


 

click me!