ಮಕ್ಕಳಿಗೆ ಬೇಕಾಗಿದ್ದು ಅಪ್ಪ-ಅಮ್ಮ ಕೊಡಿಸೋ ದುಬಾರಿ ಗಿಫ್ಟಾ ಅಥ್ವಾ ಪ್ರೀತಿನಾ? ಪೇಚಿನಲ್ಲಿ ತಾಂಡವ್‌...

By Suvarna News  |  First Published Feb 14, 2024, 1:22 PM IST

ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಮನೆಯನ್ನು ತಾನು ನಿಭಾಯಿಸುವುದಾಗಿ ತಾಂಡವ್‌ ಮನೆಗೆ ಎಂಟ್ರಿ ಕೊಟ್ಟಿದ್ದಾನಾ? ಮುಂದೇನಾಗಿದೆ ನೋಡಿ...
 


ದುಡ್ಡು ಇದ್ದರೆ ಐಷಾರಾಮಿ ಜೀವನದ ನಡೆಸಬಹುದು ನಿಜ. ದುಬಾರಿ ಗಿಫ್ಟ್‌ ತರಿಸಿಕೊಳ್ಳಬಹುದು. ಕೈಗೊಂದು, ಕಾಲಿಗೊಂದು ಆಳು ಇಟ್ಟುಕೊಳ್ಳಬಹುದು. ಐಷಾರಾಮಿ ಬಂಗಲೆಯಲ್ಲಿ ವಾಸಿಸಬಹುದು. ಮನಸ್ಸಿಗೆ ಬಂದದ್ದನ್ನು ಕೂತಲ್ಲಿಯೇ ತಂದುಕೊಂಡು ತಿನ್ನಬಹುದು. ಹಾಗೆಂದು ದುಡ್ಡಿದ್ದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದು ನಿಜನಾ? ಖಂಡಿತ ಇಲ್ಲ. ದುಡ್ಡಿನಿಂದ ಮನಸ್ಸಿನ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಿಲ್ಲ, ನಿಜವಾದ ಪ್ರೀತಿ ಪಡೆದುಕೊಳ್ಳುವುದು ಸಾಧ್ಯವಿಲ್ಲ, ವೈಭವೋಪೇತ ಹಾಸಿಗೆ, ಮಂಚ ಇದ್ದರೂ ನೆಮ್ಮದಿಯ ನಿದ್ದೆಯನ್ನು ದುಡ್ಡಿನಿಂದ ಪಡೆಯಲು ಸಾಧ್ಯವಿಲ್ಲ... ಹೀಗೆ ದುಡ್ಡಿನಿಂದ ಸಿಗದೇ ಇರುವ ದೊಡ್ಡ ಪಟ್ಟಿಯೇ ಇದೆ ಅಲ್ಲವೆ?

ಹಾಗಿದ್ದರೆ ದುಡ್ಡೇ ದೊಡ್ಡಪ್ಪ ಎಂಬ ಗಾದೆಯಂತೆ ದುಡ್ಡಿದ್ದರೆ ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳಲು ಸಾಧ್ಯವೆ? ಒಂದಿನಿತು ಪ್ರೀತಿ ತೋರದೇ ದುಬಾರಿ ಗಿಫ್ಟ್‌ ಕೊಟ್ಟು ಮಕ್ಕಳನ್ನು ಮರಳು ಮಾಡಲು ಸಾಧ್ಯವೆ? ಹಾಗೊಂದು ವೇಳೆ ಆ ಕ್ಷಣದಲ್ಲಿ ಗಿಫ್ಟ್‌ ನೋಡಿ ಮಕ್ಕಳು ಮರುಳಾದರೂ, ಅವರು ಅಪ್ಪ-ಅಮ್ಮನನ್ನು ನಿಜವಾಗಿಯೂ ಪ್ರೀತಿಸಲು ಸಾಧ್ಯವೆ? ಖಂಡಿತ ಇಲ್ಲ. ಇದೇ ವಿಷಯವನ್ನು ಈಗ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್‌. 

Tap to resize

Latest Videos

ಮಾಲಿವುಡ್‌ ನಟನ ಜೊತೆ ಅನುಶ್ರೀ ಮದ್ವೆ? ಕೊನೆಗೂ ಮೌನ ಮುರಿದ ಉನ್ನಿ ಮುಕುಂದನ್ ಹೇಳಿದ್ದೇನು?

ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್​ ಪತ್ನಿ ಭಾಗ್ಯಳಿಗೆ ಹೇಳಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳನ್ನೇ ಬಿಟ್ಟು ಹೋಗಿರುವ ತಾಂಡವ್​ಗೆ ಪತ್ನಿ ಭಾಗ್ಯ ಬೇಡವಾಗಿದೆ. ಆದ್ದರಿಂದ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದಾನೆ.

ಇಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯ ಈಗ ಪತಿಗೆ ಚಾಲೆಂಜ್​ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಖುಷಿಯಾಗಿದ್ದಾನೆ. ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಮಕ್ಕಳಿಗೆ ಇದರ ಅರಿವು ಇಲ್ಲ. ತಾಂಡವ್‌ ಮನೆಗೆ ವಾಪಸಾಗಿದ್ದಾನೆ. ಅಮ್ಮ ಸ್ವಲ್ಪ ದಿನ ರೆಸ್ಟ್‌ಗೆ ಅಂತ ತವರಿಗೆ ಹೋಗಿದ್ದಾಳೆ ಎಂದು ಕುಸುಮಾ ಮೊಮ್ಮಕ್ಕಳಿಗೆ ಹೇಳಿದ್ದಾಳೆ. ತಾನು ಗೆದ್ದ ಖುಷಿಯಲ್ಲಿದ್ದಾನೆ ತಾಂಡವ್‌. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್​ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್​ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇದರ ಮೊದಲ ಹಂತದ ಸೋಲನ್ನು ಇದೀಗ ಕಂಡಿದ್ದಾನೆ. ದುಬಾರಿ ಗಿಫ್ಟ್‌ ಕೊಟ್ಟು ಮಕ್ಕಳ ಪ್ರೀತಿ ಗಳಿಸಬಹುದು ಎನ್ನುವ ಅವನ ಅನಿಸಿಕೆ ಸುಳ್ಳಾಗಿದೆ. ಮಗ ಗಿಫ್ಟ್‌ ಎಸೆದು ಹೋದರೆ, ಮಗಳು ತನಗೆ ಇದೆಲ್ಲಾ ಬೇಡ ಎಂದು ಅಪ್ಪನ ಮುಖಕ್ಕೆ ಹೊಡೆಯುವಂತೆ ಹೇಳಿದ್ದಾಳೆ. ಹಾಗಿದ್ದರೆ ಮುಂದೇನು?  

ಆಟೋ ರಾಜ ಡ್ರೋನ್​ ಪ್ರತಾಪ್​: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?

click me!