ಮಾಲಿವುಡ್‌ ನಟನ ಜೊತೆ ಅನುಶ್ರೀ ಮದ್ವೆ? ಕೊನೆಗೂ ಮೌನ ಮುರಿದ ಉನ್ನಿ ಮುಕುಂದನ್ ಹೇಳಿದ್ದೇನು?

Published : Feb 13, 2024, 02:07 PM ISTUpdated : Feb 13, 2024, 02:53 PM IST
ಮಾಲಿವುಡ್‌ ನಟನ ಜೊತೆ ಅನುಶ್ರೀ ಮದ್ವೆ? ಕೊನೆಗೂ ಮೌನ ಮುರಿದ ಉನ್ನಿ ಮುಕುಂದನ್ ಹೇಳಿದ್ದೇನು?

ಸಾರಾಂಶ

ಮಾಲಿವುಡ್‌ ನಟ ಉನ್ನಿ ಮುಕುಂದನ್ ಜೊತೆ  ಅನುಶ್ರೀ ಮದ್ವೆಯಾಗ್ತಿರೋದು ನಿಜನಾ? ಕೊನೆಗೂ ಮೌನ ಮುರಿದ ನಟ ಹೇಳಿದ್ದೇನು?   

 ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ  ಅನುಶ್ರೀ. ಆಗಾಗ್ಗೆ ಇನ್​ಸ್ಟಾಗ್ರಾಮ್​  (Instagram) ಲೈವ್​ಗೆ ಬಂದು ತಮ್ಮ ಫ್ಯಾನ್ಸ್ ಜೊತೆ ನಟಿ ಆಗ್ಗಾಗ್ಗೆ  ಮಾತನಾಡುತ್ತಾ ಇರುತ್ತಾರೆ.    ಅನುಶ್ರೀ ಅವರಿಗೆ ಎಲ್ಲಿಯೇ ಹೋದ್ರೂ ಎದುರಾಗುವ ಪ್ರಶ್ನೆ ಒಂದೇ ನಿಮ್ಮ ಮದ್ವೆ ಯಾವಾಗ ಎನ್ನುವುದು. ಇದಾಗಲೇ ಈ ಪ್ರಶ್ನೆಗೆ ನಟಿ ತಮ್ಮದೇ ಆದ ರೀತಿಯಲ್ಲಿ ಹಲವಾರು ವಿಧನಾಗಿ ಉತ್ತರಿಸಿದ್ದಾರೆ. 1987ರಲ್ಲಿ ಹುಟ್ಟಿರುವ ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರುತ್ತಿದ್ದರೂ ಮದ್ವೆ ಯಾಕೆ ಆಗ್ತಿಲ್ಲ ಎನ್ನೋ ಆತಂಕದಲ್ಲಿ ಇರುವಂತೆ ತೋರುತ್ತಿದೆ ಅನುಶ್ರೀ ಫ್ಯಾನ್ಸ್​. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವಂತೆ  ಕಾಣುತ್ತಿಲ್ಲ. 

ಇದರ ಮಧ್ಯೆಯೇ, ಮಾಲಿವುಡ್‌ನ ಖ್ಯಾತ ನಟ ಉನ್ನಿ ಮುಕುಂದನ್ ಅವರ ಜೊತೆ ಕೆಲವು ದಿನಗಳಿಂದ ಮಾಲಿವುಡ್ ನಟಿ ಅನುಶ್ರೀ ಅವರ  ಮದುವೆಯ ಸುದ್ದಿ ಹರಿದಾಡುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.  ನಟಿ ಅನುಶ್ರೀ ಜೊತೆ  ಮದುವೆ ನಟನ ನಡೆಯಲಿದೆ  ಎಂದು  ಮಾಲಿವುಡ್‌ ಫೇಸ್‌ ಬುಕ್‌ ಗ್ರೂಪ್ ವೊಂದರಲ್ಲಿ ಪೋಸ್ಟ್‌  ಹಂಚಿಕೊಳ್ಳಲಾಗಿತ್ತು. ಇದೀಗ ವೈರಲ್‌ ಆಗಿದ್ದು, ಇಬ್ಬರೂ  ಪರಸ್ಪರ ಸಂಬಂಧದಲ್ಲಿ ಇದ್ದಾರೆ ಎಂದೇ ಹೇಳಲಾಗುತ್ತಿದೆ.   ಅಷ್ಟೇ ಅಲ್ಲದೇ ಇವರಿಬ್ಬರೂ  ನಿಕಟ ಬಾಂಧವ್ಯ ಹೊಂದಿದ್ದಾರೆ.  ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ಒಟ್ಟಪಾಲಂನಲ್ಲಿ ನಡೆದ ಗಣೇಶ ಉತ್ಸವದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಾಗ ಈ ಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಿತ್ತು. 

ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?

ಒಂದೆಡೆ ಕನ್ನಡದ ಆ್ಯಂಕರ್ ಅನುಶ್ರೀಯ ಮದುವೆಯ ಮಾತು, ಇನ್ನೊಂದೆಡೆ ಮಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಉನ್ನಿ ಮುಕುಂದನ್ ಮದ್ವೆ ಮಾತು. ಇದನ್ನೆರೆಡೂ ಮಿಕ್ಸ್‌ ಮಾಡಿರುವ ಕನ್ನಡಿಗರು, ಇವರಿಬ್ಬರ ಫೋಟೋ ಜೊತೆ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಅಸಲಿಗೆ ಈಕೆ ಕನ್ನಡದ ಆ್ಯಂಕರ್ ಅನುಶ್ರೀ ಅಲ್ಲ, ಬದಲಿಗೆ ಮಲಯಾಳಂ ನಟಿ ಅನುಶ್ರೀ. ಆದರೆ ಆ್ಯಂಕರ್ ಅನುಶ್ರೀ ಸಕತ್‌ ಫೇಮಸ್‌ ಆಗಿರುವ ಕಾರಣ, ಸೋಷಿಯಲ್‌ ಮೀಡಿಯಾಗಳಲ್ಲಿ ಆ್ಯಂಕರ್ ಅನುಶ್ರೀ ಫೋಟೋ ವೈರಲ್‌ ಆಗುತ್ತಿದೆ. ಜೊತೆಗೆ ಇವರಿಬ್ಬರ ಮದುವೆಯ ರೂಮರ್‌ ಹರಡುತ್ತಿದೆ. ಆದರೆ ನಿಜವಾಗಿಯೂ ಇದು ಈ ಅನುಶ್ರೀ ಅಲ್ಲ, ಬದಲಿಗೆ ಆ ಅನುಶ್ರೀ. 
 
ಇದೀಗ ಮಲಯಾಳಂ ನಟಿ ಅನುಶ್ರೀ ಕುರಿತ ಮದುವೆಯ ವದಂತಿಯ ಬಗ್ಗೆ  ಇದೀಗ ಮೊದಲ ಬಾರಿಗೆ ಉನ್ನಿ ಮುಕುಂದನ್‌ ಅವರು ಈ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ  ಫೇಸ್‌ ಬುಕ್ ಖಾತೆಯಲ್ಲಿ ಈ ವೈರಲ್‌ ಪೋಸ್ಟ್‌ನ ಸ್ಕ್ರೀನ್‌ಷಾಟ್‌ ಶೇರ್‌ ಮಾಡಿಕೊಂಡಿರುವ ನಟ, ಇದನ್ನು ಗಾಳಿಸುದ್ದಿ ಎಂದು ಹೇಳಿದ್ದಾರೆ.  “ಈ ರೀತಿಯ ಸುದ್ದಿಯನ್ನು ನಿಲ್ಲಿಸಲು ನಾನು ಎಷ್ಟು ಪಾವತಿಸಬೇಕು ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ಸತ್ಯಾಸತ್ಯತೆಯನ್ನು ಪರೀಕ್ಷಿಸದೇ ಈ ರೀತಿ ಗಾಳಿಸುದ್ದಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 
 

ಆಸ್ಪತ್ರೆಯಿಂದ ಮಿಥುನ್‌ ಚಕ್ರವರ್ತಿ ಡಿಸ್‌ಚಾರ್ಜ್‌: ಕರೆ ಮಾಡಿ ನಟನನ್ನು ಬೈದ ಪಿಎಂ ಮೋದಿ- ಏನಿದು ವಿಷ್ಯ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!