
ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್ ಪತ್ನಿ ಭಾಗ್ಯಳಿಗೆ ಹೇಳಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳನ್ನೇ ಬಿಟ್ಟು ಹೋಗಿರುವ ತಾಂಡವ್ಗೆ ಪತ್ನಿ ಭಾಗ್ಯ ಬೇಡವಾಗಿದೆ. ಆದ್ದರಿಂದ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದಾನೆ.
ಇಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯ ಈಗ ಪತಿಗೆ ಚಾಲೆಂಜ್ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್ ಖುಷಿಯಾಗಿದ್ದಾನೆ. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇಂಥದ್ದೊಂದು ಕುತೂಹಲದ ತಿರುವಿಗೆ ಬಂದು ನಿಂತಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್.
ಕಾರ್ತಿಕ್ ಲೈಫ್ ಪಾರ್ಟನರ್ ಇವ್ರೇನಾ? 'ಎಸ್' ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್
ಅಷ್ಟಕ್ಕೂ ಮನೆ, ಕುಟುಂಬವನ್ನು ಸಂಭಾಳಿಸುವುದು ಅದೇನೂ ಸುಲಭದ ಕೆಲಸವಲ್ಲ. ಹೆಣ್ಣೆಂದರೆ ಅದರಲ್ಲಿಯೂ ಗೃಹಿಣಿಯೆಂದರೆ ತಾತ್ಸಾರದಿಂದ ಕಾಣುವ ಗಂಡಸರು ಬೇಕಾದಷ್ಟು ಮಂದಿ ಇದ್ದಾರೆ. ಹೊರಗೆ ಹೋಗಿ ದುಡಿದರೆ ಮಾತ್ರ ಅದು ದುಡಿಮೆ ಎನ್ನುವ ಹುಚ್ಚು ಅನಿಸಿಕೆಯಲ್ಲಿ ಇರುವವರು ಸಾಕಷ್ಟು ಮಂದಿ. ಮನೆ, ಕುಟುಂಬ, ಮಕ್ಕಳು, ಪತಿ, ಅತ್ತೆ-ಮಾವ ಎಲ್ಲರನ್ನೂ ಸಂಭಾಳಿಸಿಕೊಂಡು ಎಲ್ಲರ ಆಗುಹೋಗುಗಳನ್ನು ನೋಡಿಕೊಂಡು ತನ್ನ ಆಸೆಗಳನ್ನೆಲ್ಲಾ ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು, ಇತರರಿಗಾಗಿ ದುಡಿಯುವ ಸಾಮಾನ್ಯ ಗೃಹಿಣಿಯ ಬಗ್ಗೆ ಕೆಲವು ಗಂಡಸರಿಗೆ ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸವೇ. ಇದೇ ಕಾರಣಕ್ಕೆ ಆಕೆಯನ್ನು ಹೀಯಾಳಿಸುವವರು ಕಾಣಸಿಗುತ್ತಾರೆ. ಅದರಲ್ಲಿಯೂ ಶ್ರೇಷ್ಠಾಳಂತ ಮಾಟಗಾತಿ ಸಿಕ್ಕರಂತೂ ಮುಗಿದೇ ಹೋಯ್ತು. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿಯೂ ಇದೇ ರೀತಿ ಆಗಿದೆ. ಭಾಗ್ಯ ಹಾಗೂ ಅಮ್ಮ ಕುಸುಮನ ನೆರವಿಲ್ಲದೇ ತಾಂಡವ್ ಕುಟುಂಬವನ್ನು ನಿಭಾಯಿಸ್ತಾನಾ ಎನ್ನುವುದು ಈಗಿರುವ ಪ್ರಶ್ನೆ.
ಶ್ರೇಷ್ಠಾಳ ಹಿಂದೆ ಬಿದ್ದಿರೋ ತಾಂಡವ್, ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಭಾಗ್ಯಳಿಗೆ ಇದು ಇಲ್ಲಿಯವರೆಗೆ ತಿಳಿಯದ ವಿಷಯವಾಗಿತ್ತು. ಆದರೆ ಈ ಬಗ್ಗೆ ಇದಾಗಲೇ ತಾಂಡವ್ ಅಮ್ಮ ಕುಸುಮಾಗೂ ಗೊತ್ತಾಗಿತ್ತು. ಆದರೆ ಭಾಗ್ಯ ಇದನ್ನು ಸಹಿಸುವವಳಲ್ಲ ಎಂದು ಯಾರಿಗೂ ಹೇಳದೇ ಸುಮ್ಮನಿದ್ದಳು. ಭಾಗ್ಯಳ ಮಾವನಿಗೂ ವಿಷಯ ತಿಳಿದಿದ್ದರೂ ಅದನ್ನು ಹೇಳಿರಲಿಲ್ಲ. ಶ್ರೇಷ್ಠಾಳ ಕುತಂತ್ರದಿಂದ ತಾಂಡವ್ ಡಿವೋರ್ಸ್ ಪತ್ರ ಕಳುಹಿಸಿದ್ದಾನೆ. ಅದು ಮಾವನ ಕೈಸೇರಿತ್ತು. ಮಗ ಸೊಸೆಗೆ ವಿಚ್ಛೇದನ ಕೊಡುತ್ತಿರುವ ಸುದ್ದಿ ಕೇಳಿ ಆತನಿಗೆ ಶಾಕ್ ಆಗಿದೆ. ಅದೇ ಶಾಕ್ನಲ್ಲಿಯೇ ಮೂರ್ಚೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದ. ಆದರೆ ಇದೀಗ ಈ ಗುಟ್ಟು ರಟ್ಟಾಗಿದೆ. ಭಾಗ್ಯಳಿಗೂ ವಿಷಯ ಗೊತ್ತಾಗಿದೆ. ಈಗ ನೇರವಾಗಿ ತಾಂಡವ್ ಮನೆ ಬಿಟ್ಟು ಹೋಗಲು ಭಾಗ್ಯಳಿಗೆ ಹೇಳಿದ್ದು, ಅವಳೀಗ ಷರತ್ತು ವಿಧಿಸಿದ್ದಾಳೆ. ಷರತ್ತಲ್ಲಿ ಗೆದ್ದರೆ ಡಿವೋರ್ಸ್ ಪೇಪರ್ಗೆ ಸಹಿ ಹಾಕಲು ಸಿದ್ಧ ಎಂದಿದ್ದಾಳೆ.
ಅಮೃತಧಾರೆ ಆನಂದ್ಗೆ ಹುಟ್ಟುಹಬ್ಬದ ಸಂಭ್ರಮ: ನೋವನ್ನುಂಡು ಎಲ್ಲರ ನಗಿಸುವ ನಟನ ಒಂದಿಷ್ಟು ಮಾಹಿತಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.