
ಬಿಗ್ಬಾಸ್ನಲ್ಲಿ ವೈಲ್ಡ್ಕಾರ್ಡ್ ಎಂಟ್ರಿ ಎಂದು ಒಂದಿಷ್ಟು ಅತಿಥಿಗಳು ಆಗಮಿಸುವುದು ಎಲ್ಲರಿಗೂ ತಿಳಿದೇ ಇದೆ. ಇಂಥ ಒಂದು ಅವಕಾಶ ತಮಗೂ ಸಿಕ್ಕರೆ ಹೇಗಿರುತ್ತದೆ ಎಂದು ಕನಸು ಕಾಣುವ ಅಸಂಖ್ಯ ಅಭಿಮಾನಿಗಳಿದ್ದಾರೆ. ಹಲವು ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಲು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಒಮ್ಮೆ ತಮಗೂ ಬಿಗ್ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕರೆ ಹೇಗೆ ಎಂದು ಕಾತರರಾಗಿರುವವರೇ ಹೆಚ್ಚು. ಅಂಥವರಿಗಾಗಿ ಬಿಗ್ಬಾಸ್ ಬಹುದೊಡ್ಡ ಸರ್ಪ್ರೈಸ್ ನೀಡಿತ್ತು. 15 ಮಂದಿ ಸ್ಪರ್ಧಾ ವಿಜೇತರಿಗೆ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು. ಇದಕ್ಕಾಗಿ ಮೇಕ್ಮೈ ಟ್ರಿಪ್ ಜೊತೆ ಬಿಗ್ಬಾಸ್ ಒಪ್ಪಂದ ಮಾಡಿಕೊಂಡಿತ್ತು. ಆ 15 ಮಂದಿ ಲಕ್ಕಿಗಳು ಕೊನೆಗೂ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಹೌದು. ಇಂಥದ್ದೊಂದು ಅವಕಾಶವನ್ನು ನೀಡಿದ್ದು ಹಿಂದಿಯ ಬಿಗ್ಬಾಸ್. ಇದೇ ಮೊದಲ ಬಾರಿಗೆ ಅಭಿಮಾನಿಗಳನ್ನು ಬಿಗ್ಬಾಸ್ ಮನೆಗೆ ಬಿಡಲು ಸಲ್ಮಾನ್ ಖಾನ್ ನಿರ್ಧರಿಸಿದ್ದರು. ಈ ಬಗ್ಗೆ ಬಿಗ್ಬಾಸ್ ಜೊತೆ ಅವರು ಮನವಿ ಮಾಡಿಕೊಂಡಿದ್ದರು. ಅದರ ವಿಡಿಯೋ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅವರು, ಫಿನಾಲೆಯ ಬಳಿಕ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದರು.
ಕಾರ್ತಿಕ್ ಲೈಫ್ ಪಾರ್ಟನರ್ ಇವ್ರೇನಾ? 'ಎಸ್' ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್
ಅದರಂತೆ, 15 ಮಂದಿಗೆ ಅವಕಾಶ ಸಿಗಲಿದೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದರು, ಇದು ಮೇಕ್ ಮೈ ಟ್ರಿಪ್ ಜೊತೆಗಿನ ಒಪ್ಪಂದವಾಗಿದ್ದು, ಅಲ್ಲಿ ಲಾಗಿನ್ ಆಗುವ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಬಿಗ್ಬಾಸ್ ಫಿನಾಲೆ, ಕನ್ನಡದ ಫಿನಾಲೆ ನಡೆದ ದಿನವೇ ನಡೆದಿತ್ತು. ಫಿನಾಲೆ ಬಳಿಕವೂ ಬಿಗ್ಬಾಸ್ ಸೆಟ್ಟಿಂಗ್ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಅಲ್ಲಿ 15 ಮಂದಿ ಲಕ್ಕಿಗಳಿಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಕ್ಕಿದೆ. ಅವರೆಲ್ಲರೂ ಮನೆಯೊಳಕ್ಕೆ ಬರುವ ಪ್ರೊಮೋ ಅನ್ನು ಕಲರ್ಸ್ ವಾಹಿನಿ ಶೇರ್ ಮಾಡಿದೆ.
ಅಷ್ಟಕ್ಕೂ, ಬಿಗ್ಬಾಸ್ ಅಂದರೇನೇ ಎಲ್ಲವೂ ಪ್ರೀಪ್ಲ್ಯಾನ್ಡ್ ಎನ್ನುವುದು ಬಹುತೇಕರಿಗೆ ಗೊತ್ತಾಗಿದೆ. ಇಲ್ಲಿ ನಡೆಯುವ ಘಟನೆಗಳು, ಮಾತುಗಳು ಎಲ್ಲವೂ ಪೂರ್ವ ನಿಯೋಜಿತ ಎಂದೇ ಹೇಳಲಾಗುತ್ತದೆ. ಅದೇ ರೀತಿ ನಿಜ ಜೀವನದಲ್ಲಿ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಬಿಗ್ಬಾಸ್ನಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂಬ ಗಂಭೀರ ಆರೋಪವೂ ಇದೆ. ಇವೆಲ್ಲವುಗಳ ನಡುವೆ ಇದೀಗ ಬಿಗ್ಬಾಸ್ನ ಮನೆಯೊಳಕ್ಕೆ ಹೋಗಿರುವ ಪ್ರೇಕ್ಷಕರ ಬಗ್ಗೆಯೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ಕಾಲೇಜು-ಹುಡುಗ ಹುಡುಗಿಯರಿಗೆ ಇಲ್ಲಿ ಪ್ರವೇಶ ನೀಡಲಾಗಿದೆ. ಇವರ ಬಟ್ಟೆ-ಬರೆಗಳನ್ನು ನೋಡಿದರೆ ಯಾವುದೇ ಬಿಗ್ಬಾಸ್ ಸ್ಪರ್ಧಿಗಳಿಗೂ ಕಮ್ಮಿಯೇನಿಲ್ಲ. ಹಾಗಿದ್ದರೆ ಲಕ್ಕಿ ಡ್ರಾ ವಿಜೇತರು ಯುವಕ-ಯುವತಿಯರೇ ಹೇಗೆ ಆದ್ರು ಎಂದು ಪ್ರಶ್ನೆ ಎತ್ತಲಾಗಿದೆ.
ಸಂತು-ಪಂತು ಬಿಗ್ಬಾಸ್ ಪಯಣ ಹೇಗಿತ್ತು? ತುಕಾಲಿ ಮಾತು ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.