ವೈಲ್ಡ್ ಕಾರ್ಡ್ ಸ್ಪರ್ಧಿ ಆದ್ರೆ ಏನು ಪ್ರಾಬ್ಲಂ ಅಂತ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ

By Suvarna News  |  First Published May 16, 2021, 10:48 AM IST

ಬಿಗ್ ಬಾಸ್ ಸೀಸನ್  8ರ ವೈಲ್ಡ್‌ ಕಾರ್ಡ್ ಸ್ಪರ್ಧಿ ಪ್ರಿಯಾಂಕಾ ಕಾರ್ಯಕ್ರಮದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? 


ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಬಿಗ್ ಬಾಸ್‌ ಸೀಸನ್‌ 8ನ್ನು ಅರ್ಧಕ್ಕೆ ಸ್ಥಗಿತಗೊಳಿಸಬೇಕಾಯ್ತು. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಕೇಳಿ ಶಾಕ್ ಆದ ಸ್ಪರ್ಧಿಗಳು ಬೇಸರದಿಂದ ಹೊರ ಬಂದರು. ಅದರಲ್ಲೂ ವೈಲ್ಡ್ ಕಾರ್ಡ್ ಸ್ಪರ್ಧಿಯಾದ ಪ್ರಿಯಾಂಕಾಳ ಅಭಿಪ್ರಾಯವೇ ಬೇರೆ ಇತ್ತು.... 

ಎಲ್ಲರಿಗಿಂತ ಕಳಪೆ ರಘು ಗೌಡ, ಕ್ಯಾಪ್ಟನ್ ಆಗಿದ್ದು ಸ್ವಂತ ಬುದ್ಧಿಯಿಂದಲ್ಲ: ಪ್ರಿಯಾಂಕಾ ತಿಮ್ಮೇಶ್ ಗರಂ 

Tap to resize

Latest Videos

undefined

ಹೌದು! ಸಾಮಾನ್ಯವಾಗಿ ಆರಂಭದಿಂದ ಸ್ಪರ್ಧೆ ಶುರು ಮಾಡಿದವರಲ್ಲಿ ಒಂದು ಒಗ್ಗಟು ಇರುತ್ತದೆ. ನಡುವೆ ಯಾರೋ ಒಂದು ಕಾಂಪಿಟೇಷನ್ ಕೊಡುತ್ತಾರೆ ಅಂದ್ರೆ ಒಪ್ಪಿಕೊಳ್ಳಲು ಕಷ್ಟ ಆಗುತ್ತದೆ. ಹಾಗೇ ಈ ಸೀಸನ್ ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್‌ ಸ್ಪರ್ಧ ಪ್ರಿಯಾಂಕಾ ತಿಮ್ಮೇಶ್ ಬಗ್ಗೆ ಅಭಿಪ್ರಾಯ ಮೂಡಿದ್ದು.

ಪ್ರೇಮ ಕತೆಯಲ್ಲಿ ನಾನು ಟೀಚರ್‌: ಪ್ರಿಯಾಂಕ ತಿಮ್ಮೇಶ್

ಪ್ರಿಯಾಂಕಾ ತುಂಬಾನೇ ಬೋಲ್ಡ್ ಹುಡುಗಿ. ಏನೇ ಇದ್ದರು ನೇರವಾಗಿ ಮಾತನಾಡುತ್ತಾರೆ. ಮನೆ ಪ್ರವೇಶಿಸುವ ಮುನ್ನ ಯಾವ ರೀತಿಯ ಗೇಮ್‌ಗಳು ಇರುತ್ತದೆ ಎಂದು ಮಾತ್ರ ಹಳೆ ಎಪಿಸೋಡ್‌ಗಳನ್ನು ನೋಡಿ ತಿಳಿದುಕೊಂಡಿದ್ದರಂತೆ ಆದರೆ ರಾಜೀವ್ ಮತ್ತು ಶುಭಾ ಪೂಂಜಾ ಹೊರತುಪಡಿಸಿ ಯಾರೂ ಗೊತ್ತಿರಲಿಲ್ಲ. 'ನಾನು ನಿಜ ಜೀವನದಲ್ಲೂ ತುಂಬಾನೇ ಸ್ಟ್ರೇಟ್. ನಾನು ಬಿಬಿ ಮನೆಯಲ್ಲಿ ಫೇಕ್ ಆಗಿರಲಿಲ್ಲ. ನಾನು ಬಿಬಿ ಮನೆಯಲ್ಲಿ ಕಲಿತ ಒಂದು ಪಾಠ ಏನೆಂದರೆ ನಮ್ಮ ಬೆನ್ನಿಂದೆ ಯಾರೇ ಮಾತನಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂಬುವುದು. ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದ ಕಾರಣ ಪ್ರತಿ ಸಲ ವೋಟ್ ಮಾಡುವಾಗ ನಮ್ಮನ್ನು ಟಾರ್ಗೆಟ್‌ ಮಾಡುತ್ತಾರೆ. ಅದು ಬಿಟ್ಟರೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.  ನಾನು ಪ್ರವೇಶಿಸಿದ ಕೇವಲ ಎರಡು ವಾರ ಇರುತ್ತೇನೆ ಎಂದುಕೊಂಡಿದ್ದೆ' ಎಂದಿದ್ದಾರೆ. 

ಆದ್ಯ ಶುಗರ್‌ಲೆಸ್‌ ಹಾಗೂ ಅರ್ಜುನ್ ಗೌಡ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ ಕೊರೋನಾ ಪ್ಯಾಂಡಮಿಕ್ ನಂತರ ಕೆಲ ಸಿನಿಮಾಗಳಿಗೆ ಸಿಹಿ ಮಾಡುವ ಪ್ಲಾನ್‌ನಲ್ಲಿದ್ದಾರೆ.

click me!