
ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಕೆಲವು ವರ್ಷಗಳ ಕಾಲ ಅಭಿನಯಕ್ಕೆ ಬೈ ಹೇಳಿದ್ದರು. ಆದರೀಗ ತೆಲುಗು ಧಾರಾವಾಹಿ ಮೂಲಕ ತಮ್ಮ ಟ್ಯಾಲೆಂಟ್ ತೋರಿಸಲು ಮುಂದಾಗಿದ್ದಾರೆ.
ಹಳೇ ಬಟ್ಟೆಗೆ ಹೊಸ ಲುಕ್; ಪುತ್ರನಿಗೆ ಅಕುಲ್ ಬಾಲಾಜಿ ಮಾಡಿಕೊಟ್ಟ ಡಿಸೈನ್ ಜಾಕೆಟ್!
ಹೌದು! ಕಳೆದ ಒಂದು ವಾರದಿಂದ ಜೀ ತೆಲುಗು ವಾಹಿಯಲ್ಲಿ ಪ್ರಸಾರವಾಗುತ್ತಿರುವ 'ಓಹಲು ಗುಸಾಗುಸಲಾಡೆ' ಧಾರಾವಾಹಿಯಲ್ಲಿ ಅಭಿರಾಮ್ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಸಾಮಾನ್ಯವಾಗಿ ಅಕುಲ್ ಮಾತಿನ ಮಲ್ಲ, ತುಂಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದರಲ್ಲಿ ತುಂಬಾನೇ ವಿಭಿನ್ನ ಪಾತ್ರ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. 'ನಾನು ಈ ಧಾರಾವಾಹಿಯಲ್ಲಿ ವಿಧುರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಸದಾ ಜೋವಿಯಲ್ ಹುಡುಗ ಪಾತ್ರದಲ್ಲಿ ಕಾಣಿಸಿಕೊಂಡಿರುವ ನನಗೆ ಇದು ತುಂಬಾನೇ ಡಿಫರೆಂಟ್ ಕ್ಯಾರೆಕ್ಟರ್. ಇಷ್ಟು ವರ್ಷ ಮಾಡಿರದ ಪಾತ್ರ ಇದು. ನನಗೆ ಇಬ್ಬರು ಮಕ್ಕಳಿರುತ್ತಾರೆ. ಮಕ್ಕಳ ಜೊತೆ ಜೀವನವನ್ನು ಹೇಗೆ ಸಂಬಾಳಿಸುತ್ತಾರೆ ಎಂಬುವುದು ಇದರ ಕಥೆ. ತಿಂಗಳಲ್ಲಿ 12 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಬೇಕು, ಹೀಗಾಗಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೆಚ್ಚು ಪ್ರಯಾಣ ಮಾಡುವ ಅಗತ್ಯವಿಲ್ಲ,' ಎಂದು ಅಕುಲ್ ಮಾತನಾಡಿದ್ದಾರೆ.
'ನಿರೂಪಕನಾಗಿದ್ದರೆ ಏನೂ ಬೇಕಿದ್ದರೂ ಕ್ರಿಯೇಟಿವ್ ಆಗಿ ಮಾಡಬಹುದು. ಆದರೆ ಒಬ್ಬ ಪಾತ್ರಧಾರಿ ಆದರೆ ಕಥೆ ಡಿಮ್ಯಾಂಡ್ ಮಾಡುವುದನ್ನು ಮಾತ್ರ ಮಾಡಬೇಕು. ಹೀಗಾಗಿ ನಮಗೆ ಬೇಕಾದ ರೀತಿಯಲ್ಲಿ ಇಂಪ್ರೂವ್ ಮಾಡಿಕೊಳ್ಳಲು ಆಗುವುದಿಲ್ಲ,' ಎಂಬುವುದು ಈ ಮಾತಿನ ಮಲ್ಲನ ಅಭಿಪ್ರಾಯ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಕ್ಕು ವಿತ್ ಕಿರಿಕ್ಕು ಅಡುಗೆ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಅಕುಲ್ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.