Ninagagi Serial ನಟ ಬಾಲಗೆ ಪತ್ರ ಬರೆದ ಪ್ರೇಕ್ಷಕ; ಕನ್ನಡ ಕಿರುತೆರೆಯಲ್ಲಿ ಅಪರೂಪದ ಕ್ಷಣ!

Published : Feb 05, 2025, 06:41 PM ISTUpdated : Feb 06, 2025, 10:30 AM IST
Ninagagi Serial ನಟ ಬಾಲಗೆ ಪತ್ರ ಬರೆದ ಪ್ರೇಕ್ಷಕ; ಕನ್ನಡ ಕಿರುತೆರೆಯಲ್ಲಿ ಅಪರೂಪದ ಕ್ಷಣ!

ಸಾರಾಂಶ

ಧಾವಾವಾಹಿಗಳ ಬಗ್ಗೆ ದೂರು ಕೇಳೋದು ಜಾಸ್ತಿ ಆಗ್ತಿದೆ. ಹೀಗಿರುವಾಗ ʼನಿನಗಾಗಿʼ ಧಾರಾವಾಹಿ ನಟನ ಬಗ್ಗೆ ವೀಕ್ಷಕರೊಬ್ಬರು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.   

ಧಾರಾವಾಹಿಗಳನ್ನು ಎಳೆಯಲಾಗುತ್ತದೆ, ಕಥೆ ಮುಂದಕ್ಕೆ ಹೋಗೋದಿಲ್ಲ. ಅಲ್ಲಿ ಬರೀ ಅತ್ತೆ-ಸೊಸೆ ಕಥೆ ಇರುತ್ತದೆ. ಆರಂಭದ ಮೂರು ತಿಂಗಳು ಈ ಧಾರಾವಾಹಿಯ ಕತೆ ಚೆನ್ನಾಗಿರುತ್ತದೆ, ಆಮೇಲೆ ಏನೇನೋ ಕತೆ ಬರೆಯುತ್ತಾರೆ ಅಂತೆಲ್ಲ ದೂರು ಇರುತ್ತದೆ. ಈಗ ಕಲಾವಿದರ ವೇಷಭೂಷಣವೊಂದು ಕನ್ನಡಿಗರ ಮನಸ್ಸು ಗೆದ್ದಿದೆ. ಈ ಬಗ್ಗೆ ಅವರು ಪತ್ರಿಕೆಯೊಂದಕ್ಕೆ ತಮ್ಮ ಅಭಿಪ್ರಾಯವನ್ನು ಕಳಿಸಿರೋದು ವಿಶೇಷ ಎನ್ನಬಹುದು. 

ಹೌದು, ಕಲರ್ಸ್‌ ಕನ್ನಡ ವಾಹಿನಿಯ ʼನಿನಗಾಗಿʼ ಧಾರಾವಾಹಿ ಬಗ್ಗೆ ಪ್ರೇಕ್ಷಕರೊಬ್ಬರು ಪತ್ರಿಕೆಯೊಂದಕ್ಕೆ ತಮ್ಮ ಅಭಿಪ್ರಾಯವನ್ನು ಬರೆದು ಕಳಿಸಿದ್ದಾರೆ. ಈ ಅಭಿಪ್ರಾಯವನ್ನು ಪತ್ರಿಕೆ ಪ್ರಕಟ ಮಾಡಿದೆ.

ದಿವ್ಯ-ಭವ್ಯ ಬಿಗ್‌ಬಾಸ್‌ ಶೋನ ದುಃಖಿ ಆತ್ಮಗಳಂತೆ, ಆದ್ರೆ ನಿವೇದಿತಾ ಗೌಡ ಹಾಗಲ್ವಂತೆ!

ವೀಕ್ಷಕರ ಅಭಿಪ್ರಾಯ ಏನು? 
ಖಾಸಗಿ ವಾಹಿನಿಗಳ ಧಾರಾವಾಹಿಗಳಲ್ಲಿ ಇಂಗ್ಲಿಷ್‌ ಬಳಕೆಗೆ ಬರವಿಲ್ಲ. ಒಂದೊಂದು ಕನ್ನಡ ಪದವನ್ನು ಕೊಲೆ ಮಾಡಲಾಗುತ್ತಿದೆ. ಅಪರೂಪ ಎಂಬಂತೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼನಿನಗಾಗಿʼ ಧಾರಾವಾಹಿಯಲ್ಲಿ ನಾಯಕ ನಟ ಜೀವ ಅವರ ಬಾವಮೈದುನ ( ಮೃತ ಹೆಂಡತಿಯ ಸೋದರ ) ಬಾಲು ಪಾತ್ರಧಾರಿ ಯಾವಾಗಲೂ ಟೀಶರ್ಟ್‌ ಧರಿಸುತ್ತಾರೆ. ಬಾಲು ತೊಡುವ ಟೀ ಶರ್ಟ್‌ ಮೇಲೆ ಯಾವುದಾದರೂ ಮುದ್ರಿತ ʼಕನ್ನಡ ಸೂಕ್ತಿʼ ಇದ್ದೇ ಇರುತ್ತದೆ. ಉದಾಹರಣೆಗೆ ʼಕಣ ಕಣದಲ್ಲೂ ಕನ್ನಡʼ, ʼಬದುಕು ಜಟಕಾ ಬಂಡಿʼ, ʼನೀ ಹೀಂಗ ನೋಡ ಬ್ಯಾಡ ನನ್ನʼ, ʼನೋಡಿ ಸ್ವಾಮಿ ನಾವಿರೋದೆʼ ಮುಂತಾದ ಕನ್ನಡ ವಾಕ್ಯಗಳಿರುತ್ತವೆ. ಈ ಮೂಲಕ ಕನ್ನಡ ಕವಿವಾಣಿಯನ್ನು ಪ್ರಚುರಪಡಿಸಿದಂತೆ ಆಗುತ್ತದೆ. ಈ ಕಾರಣಕ್ಕೆ ಬಾಲು ಪಾತ್ರಧಾರಿಯನ್ನು ಮೆಚ್ಚುತ್ತೇನೆ. ಬಹುತೇಕ ಕನ್ನಡಿಗರು ಇಂಗ್ಲಿಷ್‌ ಪದವುಳ್ಳ ಟೀ ಶರ್ಟ್‌ ಧರಿಸುವುದೇ ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದರೆ, ʼನಿನಗಾಗಿʼ ಧಾರಾವಾಹಿಯ ಬಾಲು ಕನ್ನಡ ನುಡಿ ಮುತ್ತಿನ ಟೀಶರ್ಟ್‌ ಧರಿಸುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತನಗರಿವಿಲ್ಲದೆ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ʼಕನ್ನಡದ ಬಾಲುʼ ಎಂದು ಕರೆಯಬಹುದು. 
ಸಿ ಸಿದ್ದರಾಜು ಆಲಕೆರೆ, ಮಂಡ್ಯ

ದುಬಾರಿ ಕಾರು ಖರೀದಿಸಿದ ದಿವ್ಯಾ; ಅರವಿಂದ್‌ ಪಕ್ಕದಲ್ಲಿದ್ದರೂ 'ಬಘೀರ'ನೇ ಇಷ್ಟ

ʼನಿನಗಾಗಿʼ ಧಾರಾವಾಹಿಯಲ್ಲಿ ಯಾರು ನಟಿಸುತ್ತಿದ್ದಾರೆ? 
‘ನಿನಗಾಗಿ’ ಧಾರಾವಾಹಿಯಲ್ಲಿ ರಿತ್ವಿಕ್‌ ಮಠದ್‌, ದಿವ್ಯಾ ಉರುಡುಗ, ಸಾನಿಯಾ ಪೊಣ್ಣಮ್ಮ ಅವರು ನಟಿಸುತ್ತಿದ್ದಾರೆ. ಇನ್ನು ಸಂಪೃಥ್ವಿ ಅವರು ಈ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಲೇಡಿ ಸೂಪರ್‌ ಸ್ಟಾರ್‌ ಕಥೆ ಇದೆ.

ಕಾಮೆಂಟ್ ಸೆಕ್ಷನಲ್ಲಿ‌ ಕಿಚ್ಚು ಹಚ್ಚುತ್ತಿದೆ ಕಿಶನ್ ಬಿಳಗಲಿ ಹೊಸ ಫೋಟೊ ಶೂಟ್

ʼನಿನಗಾಗಿʼ ಕಥೆ ಏನು? 
ರಚನಾ ಲೇಡಿ ಸೂಪರ್‌ ಸ್ಟಾರ್.‌ ನಟಿಸೋದು ಅವಳಿಗೆ ಇಷ್ಟವೇ ಇಲ್ಲ. ಅವಳ ಚಿಕ್ಕಮ್ಮ ವಜ್ರೇಶ್ವರಿಗೆ ಹಣದ ಅಮಲು. ಹೀಗಾಗಿ ಅವಳು ರಚನಾ ತನ್ನ ಮಗಳು ಅಂತ ಎಲ್ಲರನ್ನೂ ನಂಬಿಸಿ ಅವಳು ಮೋಸ ಮಾಡುತ್ತಿದ್ದಾಲೆ. ರಚನಾ ತಾಯಿ ಹೇಗೆ ತೀರಿಕೊಂಡಳು ಎನ್ನೋದು ರಿವೀಲ್‌ ಆಗಬೇಕಿದೆ. ಇನ್ನೊಂದು ಕಡೆ ತನ್ನ ಚಿಕ್ಕಪ್ಪ ಎಂದು ಹೇಳಿಕೊಳ್ಳುತ್ತಿರುವವನೇ ನನ್ನ ತಂದೆ ಎನ್ನೋದು ರಚನಾಗೆ ಗೊತ್ತಿಲ್ಲ. ಫುಡ್‌ಟ್ರಕ್‌ ಇಟ್ಟುಕೊಂಡಿರುವ ಜೀವ ಹಾಗೂ ರಚನಾ ಈಗ ಮದುವೆ ನಾಟಕ ಮಾಡುತ್ತಿದ್ದಾರೆ. ಜೀವ ಮಗಳು ಕೃಷ್ಣ ಅಂದ್ರೆ ರಚನಾಗೆ ಇಷ್ಟ. ಕೃಷ್ಣ ಈಗ ರಚನಾ-ಜೀವಳನ್ನು ಒಂದು ಮಾಡುವ ಕೊಂಡಿ ಆಗಿದ್ದಾಳೆ. ವಜ್ರೇಶ್ವರಿ ಕಪಿಮುಷ್ಠಿಯಿಂದ ರಚನಾಳನ್ನು ಜೀವ ಹೊರಗಡೆ ಕರೆದುಕೊಂಡು ಬರುತ್ತಾನಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. 

ರಚನಾ ಹಾಗೂ ಜೀವ ಬಾಳಲ್ಲಿ ಏನೆಲ್ಲ ಸವಾಲುಗಳು ಬರಲಿವೆ? ಇದನ್ನು ಈ ಜೋಡಿ ಹೇಗೆ ಎದುರಿಸಲಿದೆ ಎಂಬುದರ ಬಗ್ಗೆ ಕಥೆ ರಿವೀಲ್‌ ಆಗಬೇಕಿದೆ. ಒಟ್ಟಿನಲ್ಲಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹಬ್ಬ ಇರೋದಂತೂ ಪಕ್ಕಾ..! 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!