
ಸೃಜನ್ ಲೋಕೇಶ್ ಅವರು ಯೋಗರಾಜ್ ಭಟ್ಟರ ಪತ್ನಿಗೆ ಈ ಒಂದು ಪ್ರಶ್ನೆ ಕೇಳಿದ್ದಾರೆ.. 'ಎಲ್ಲ ಹೆಂಡತಿಯರಿಗೆ ಅವರವರ ಗಂಡಂದಿರ ಬಗ್ಗೆ ಕನಿಷ್ಠ ಒಂದಾದ್ರೂ ಕಂಪ್ಲೇಂಟ್ ಇದ್ದೆ ಇರುತ್ತೆ.. ನಿಮ್ಗೆ ಭಟ್ರ ಬಗ್ಗ ಯಾವ್ದು ಮೇಜರ್ ಆಗಿ ಕಂಪ್ಲೇಂಟ್ ಇರೋದು?' ಅಂತ ಕೇಳಿದ್ದಾರೆ. ಅದಕ್ಕೆ ಭಟ್ಟರ ಹೆಂಡತಿ 'ಫಸ್ಟ್ ಆಫ್ ಆಲ್ ಅವ್ರು ನನ್ ಮಾತೇ ಕೇಳಿಸ್ಕೊಳಲ್ಲ.. ಇದು ಒನ್ ವೇ.. ನಾನು ಮಾತಾಡ್ತಾನೇ ಇರ್ತೀನಿ ನಾನ್‌ಸ್ಟಾಪ್.. ಅವ್ರು ನನ್ ಮುಖ ನೋಡೋದೂ ಇಲ್ಲ ನನ್ ಮಾತು ಕೇಳಿಸ್ಕೊಳ್ಳೋದೂ ಇಲ್ಲ..
ಅದಕ್ಕೆ ನಿರೂಪಕ ಸೃಜನ್ ಲೋಕೇಶ್ ಅವ್ರು 'ಈಗ ಭಟ್ಟರು ನಿಮ್ ಮುಖ ನೋಡ್ತಾನೇ ಇದಾರಲ್ಲ!..' ಎಂದಿದ್ದಾರೆ. ಅದಕ್ಕೆ ಭಟ್ಟರ ಪತ್ನಿ.. ಸುಮ್ನೆ ಅದು... ಈಗ್ಲೂ ಕೂಡ ಅವ್ರ ತಲೆನಲ್ಲಿ ಬೇರೆ ಏನೋ ಯೋಚ್ನೆ ಓಡ್ತಾ ಇರುತ್ತೆ.., ನಾನು ಮಾತಾಡ್ತಾ ಇರ್ತೀನಿ ಅಷ್ಟೇ' ಎಂದಿದ್ದಾರೆ. ತಕ್ಷಣವೇ ಯೋಗರಾಜ್ ಭಟ್ಟರು ಅದಕ್ಕೆ ಸಾಕ್ಷಿ ಎಂಬಂತೆ, 'ಇವ್ರು ಮಾತಾಡ್ತಾ ಇರುವಾಗ ನಾನು ಸಮಸ್ತ ಯುವಜನತೆ ಯಾರ್ಯಾರು ಹುಡುಗ್ರು ಇದಾರೆ, ಅವ್ರಿಗೊಂದು ಟಿಪ್ಟ್ ಕೊಡೋಕೆ ಇಷ್ಟಪಡ್ತೀನಿ..' ಎಂದಿದ್ದಾರೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!
ಹಾಗೇ ಮುಂದುವರಿದ ಭಟ್ಟರು 'ಈ ಮದ್ವೆ ಆಗ್ಬೇಕು, ಗರ್ಲ್ ಫ್ರೆಂಡು ಒಪ್ಕೋಬೇಕು, ಅವ್ಳನ್ನ ಇಂಪ್ರೆಸ್ ಮಾಡ್ಬೇಕು, ಅನ್ನೋರು ಈ ಮೂರು ಡೈಲಾಗ್ ಕಲಿಬೇಕು... ಒಂದು, ಹೂ, ಇನ್ನೊಂದು ಹಾ.. ಮತ್ತೊಂದು ಕರೆಕ್ಟ್.. ಬೇಕಾದ್ರೆ ಇನ್ನೊಂದು ಇದೆ, ಅದು 'ಓಹೋ' ಅನ್ನೋದು ಅಂದಿದ್ದಾರೆ. ಅದಕ್ಕೆ ಸೃಜನ್ ಲೋಕೇಶ್ ಅವರು ಅವರದ್ದೇ ಆದ ಶೈಲಿಯಲ್ಲಿ ಮತ್ತೆ ಭಟ್ಟರ ಮಾತನ್ನು ರಿಪೀಟ್ ಮಾಡಿದ್ದಾರೆ. ಅಲ್ಲಿದ್ದವರೆಲ್ಲಾ ನಗೆ ಗಡಲಿನಲ್ಲಿ ತೇಲಿದ್ದಾರೆ. ಜೊತೆಗೆ ಭಟ್ಟರು ಇನ್ನೂ ಒಂದು ಟಿಪ್ ಹೇಳಿದ್ದಾರೆ.
ನಮಗೆ, ಗಂಡಸರಿಗೆ ಇನ್ನೂ ಎರಡು ತಾಸು ರೆಸ್ಟ್ ಬೇಕು ಅಂದ್ರೆ, ಇನ್ನೊಂದು ಟಿಪ್ ಹೇಳ್ತೀನಿ.. 'ನಿನ್ನೆ ನಿನ್ ಫ್ರ್ರೆಂಡ್ ಅದೇನೋ ಅಂದ್ರು ಅಂದ್ಯಲ್ಲಾ ಅಂತ ಹೇಳಿ ಸಾಕು.. ಮುಂದಿನ ಎರಡು ತಾಸು ನಿರಂತರವಾಗಿ ಮಾತು ಬರ್ತಾನೆ ಇರುತ್ತೆ.. ಬ್ಯಾಟರಿ ಡೆಟ್ ಆಗಿ ನಾವು ಸೈಡ್‌ಗೆ ಇಟ್ರೂ ಅಲ್ಲಿಂದ ಬರೋ ಮಾತು ನಿಲ್ಲಲ್ಲ..' ಎಂದಿದ್ದಾರೆ. ಭಟ್ಟರ ಮಾತು ಕೇಳಿ ಆಂಕರ್ ಸೃಜನ್ ಸೇರಿದಂತೆ ಅಲ್ಲಿದ್ದ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ. ಭಟ್ಟರ ಹೆಂಡತಿಗೆ ಖುಷಿಯಾಯ್ತೋ ದುಃಖವಾಯ್ತೋ ಅಂತ ಅವ್ರನ್ನೇ ಕೇಳ್ಬೇಕು ಅಷ್ಟೇ..!
ನೇರ ನುಡಿಯ ಬೆಂಕಿ ಚೆಂಡು ತನಿಷಾ ಕುಪ್ಪಂಡ ಸದ್ಯ ಸುದ್ದಿಯಲ್ಲಿಲ್ಲ ಯಾಕೆ? ಇರ್ಲಿ ಬಿಡಿ, ಫೋಟೋಸ್ ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.