ಸುವರ್ಣನ್ಯೂಸ್ ಮುಖ್ಯಸ್ಥ ಅಜಿತ್ ಬಿಗ್‌ಬಾಸ್‌ಗೆ ಹೋಗುತ್ತಾರಾ? ಸೋಷಿಯಲ್‌ ಮೀಡಿಯಾ ಹೇಳೋದೇನು?

By Gowthami K  |  First Published Aug 21, 2024, 4:58 PM IST

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಬಿಗ್‌ಬಾಸ್‌ಗೆ ಹೋಗುತ್ತಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಜಿತ್ ಅವರೇ ಸ್ವತಃ ಪೋಲ್ ಮೂಲಕ ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ. ಈ ಸುದ್ದಿ ಸತ್ಯವೋ ಸುಳ್ಳೋ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.


ಖಾಸಗಿ ವಾಹಿನಿಯೊಂದು ಸುವರ್ಣ ನ್ಯೂಸ್‌ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆಂದು ಸುದ್ದಿ ಮಾಡಿದ್ದು, ಇದಕ್ಕೆ ಖುದ್ದು ಅಜಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲೊಂದು ಪೋಲ್ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಇದು ಫೇಕ್ ನ್ಯೂಸ್ ಎಂದರೆ, ಮತ್ತೆ ಕೆಲವರು ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷಿಸುತ್ತಿದ್ದೇವೆ, ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಅಜಿತ್ ಬಿಗ್‌ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಾರೋ ಸೆಕೆಂಡರಿ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ದೊಡ್ಡ ಮಟ್ಟದ ಪರ ವಿರೋಧ ಚರ್ಚೆಗಳಾಗುತ್ತಿವೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಪ್ರೋಮೋ ಶೂಟಿಂಗ್ ಕೂಡ ನಡೆದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ. ಈ ನಡುವೆ ಕಳೆದವಾರ ಪ್ರೋಮೋ ಶೂಟಿಂಗ್‌‌ನಲ್ಲಿ ಭಾಗವಹಿಸಿದ ಶೋ ನಿರೂಪಕ ಕಿಚ್ಚನ 2 ಫೋಟೋಗಳೂ ಲೀಕ್ ಆಗಿದ್ದು, ಈ ಬಾರಿಯೂ ಬಿಗ್‌ಬಾಸ್‌ಗೂ ಕಿಚ್ಚನೇ ಬಾಸ್ ಎಂಬುವುದು ಸ್ಪಷ್ಟವಾಗಿದೆ. ಈ ಮುಂಚೆ ಈ ಶೋಗೆ ಕಿಚ್ಚ ಗುಡ್ ಬೈ ಹೇಳಲಿದ್ದು, ರಿಷಭ್ ಶೆಟ್ಟಿ ಅಥವಾ ಅರವಿಂದ್ ರಮೇಶ್ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಅಜಿತ್ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಆನೇಕ ಗಾಳಿ ಸುದ್ದಿಗಳು ಹರಡುತ್ತಿವೆ.

Tap to resize

Latest Videos

ಬಿಗ್‌ಬಾಸ್‌ ಕನ್ನಡ ಸೀಸನ್ 11: ಹೈದರಾಬಾದ್‌ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋ ಲೀಕ್!

ಇದರ ಬೆನ್ನಲ್ಲೇ ಅವರು ಬರಬಹುದು ಇವರು ಬರಬಹುದು, ಬರ್ತಾರಂತೆ ಎಂಬ ಗಾಸಿಪ್ಸ್  ಸಹಜವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಶೇಷವೆಂದರೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಎಡಿಟರ್‌ ಅಜಿತ್ ಹನಮಕ್ಕನವರ್ ಹೆಸರೂ ಸೇರಿ ಕೊಂಡಿರುವುದು ಸಾಮಾಜಿಕ ಮಾಧ್ಯಮ ಲೋಕದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾಗಿದ್ದುಕೊಂಡು ಬಿಗ್‌ ಬಾಸ್‌ ಮನೆಗೆ ಹೋದರೆ ಅವರ ಸ್ಥಾನವನ್ನು ಯಾರು ತುಂಬಬಹುದು ಎಂಬುದೇ ಈಗಿರುವ ದೊಡ್ಡ ಪ್ರಶ್ನೆಯಾಗಿ ನೆಟ್ಟಿಗರನ್ನು ಕಾಡುತ್ತಿರುವಂತೆ ಕಾಣುತ್ತಿದೆ. ಅಜಿತ್‌ ನಡೆಸಿಕೊಡುವ, ಪಾರ್ಟಿ ರೌಂಡ್ಸ್, ಲೆಫ್ಟ್ ರೈಟ್‌ ಸೆಂಟರ್‌, ರಾತ್ರಿ 8.30ಕ್ಕೆ ನಡೆಸಿಕೊಡುವ ನ್ಯೂಸ್‌ ಅವರ್, ವೀಕೆಂಡ್‌‌ನಲ್ಲಿ ಬರುವ ನ್ಯೂಸ್‌ ಅವರ್  ಸ್ಪೆಷಲ್‌ ಯಾರು ನಡೆಸಿ ಕೊಡಬಹುದೆಂಬುದನ್ನೂ ಸೋಷಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. ತಮ್ಮ ವಿಶೇಷ ಶೈಲಿ, ಅಪಾರ ಜ್ಞಾನ ಹಾಗೂ ನೇರ, ದಿಟ್ಟ, ನಿಷ್ಠೂರ ಪತ್ರಿಕೋದ್ಯಮಕ್ಕೆ ಹೆಸರಾದ ಅಜಿತ್‌ಗೆ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳಿದ್ದು, ಇವರ ಶೋಗಾಗಿ ಕಾಯುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಅಪಾರ ಫಾಲೋವರ್ಸ್ ಹೊಂದಿರುವ ಅಜಿತ್ ಒಂದು ಪೋಸ್ಟ್ ಮಾಡಿದರೆ, ಲಕ್ಷಾಂತರ ಮಂದಿ ಪ್ರತಿಕ್ರಿಯೆ ನೀಡುತ್ತಾರೆ.

ತೆಲುಗು ಬಿಗ್‌ಬಾಸ್‌ ಸೆಪ್ಟೆಂಬರ್‌ ನಲ್ಲಿ ಆರಂಭ, ಪ್ರೋಮೋ ರಿಲೀಸ್‌, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

ಬಿಗ್‌ಬಾಸ್‌ ಗೆ ಹೋಗುತ್ತಾರೆಂಬ ಸುದ್ದಿ  ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭಿಸಿತೋ, ಅಜಿತ್ ಕೂಡ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಎರಡು ಪ್ರಶ್ನೆಗಳನ್ನು ಫಾಲೋವರ್ಸ್ ಮುಂದಿಟ್ಟಿದ್ದಾರೆ. 
ಈ ಸುದ್ದಿ ಸತ್ಯ ಅಂತ ಎಷ್ಟು ಜನರಿಗೆ ಅನ್ನಿಸತ್ತೆ? 
ಸತ್ಯ ಆಗಿರ್ಲಿ ಅಂತ ಯಾರು ಯಾರಿಗೆ ಅನ್ನಿಸತ್ತೆ? ಎಂದು ಕೇಳಿದ್ದು, ಅಭಿಮಾನಿಗಳು ವಿಧವಿಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುತೇಕರು ನೀವು ಮೀಡಿಯಾಗೇ ಬಾಸ್, ಬಿಗ್ ಬಾಸ್ ನಿಮಗ್ಯಾಕೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮತ್ತೆ ಕೆಲವರು ಇದು ಸುಳ್ಳು ಸುದ್ದಿ ಎಂದಿದ್ದಾರೆ. ಇನ್ನೂ ಕೆಲವರು ಹೋಗಿ, ಆದರೆ ಮತ್ತೆ ಮರಳಿ ಮಾಧ್ಯಮ ಜಗತ್ತಿಗೆ ಬನ್ನಿ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಜಿತ್ ಬಿಗ್‌ಬಾಸ್ ಮನೆಗೆ ಆಗಮಿಸುವಂತೆ ಕಲರ್ಸ್ ಕನ್ನಡದವರು ಸಂಪರ್ಕಿಸಿದ್ದಾರೋ, ಬಿಟ್ಟಿದ್ದಾರೋ ಅದು ಸೆಕೆಂಡರಿ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ಬಗ್ಗೆ ವಿಪರೀತ ಚರ್ಚೆಯಾಗುತ್ತಿರುವುದು ಮಾತ್ರ ಸುಳ್ಳಲ್ಲ. 

ಈಗಾಗಲೇ ಬಿಗ್‌ಬಾಸ್ ಮನೆಗೆ ಹೋಗಿದ್ದ ಪತ್ರಕರ್ತರು ಇವರು!
ಈ ಹಿಂದಿನ ಬಿಗ್‌ ಬಾಸ್‌ ಕನ್ನಡದ ಹಲವು ಸೀಸನ್‌ಗಳಲ್ಲಿ ಪತ್ರಕರ್ತರು ಭಾಗವಹಿಸಿದ್ದಾರೆ. ಅವರೆಂದರೆ ರವಿ ಬೆಳಗೆರೆ, ಶೀತಲ್‌ ಶೆಟ್ಟಿ, ರೆಹಮಾನ್‌, ಸೋಮಣ್ಣ ಮಾಚಿಮಾಡ, ಗೌರೀಶ್ ಅಕ್ಕಿ, ಕಿರಿಕ್‌ ಕೀರ್ತಿ, ಚಕ್ರವರ್ತಿ ಚಂದ್ರಚೂಡ್‌.

click me!