Neha Gowda's Seemantha Ceremony: ಗೊಂಬೆ ನೇಹಾ ಗೌಡಗೆ ಸೀಮಂತ ಸಂಭ್ರಮ

By Roopa Hegde  |  First Published Aug 21, 2024, 4:12 PM IST

ನಟಿ ನೇಹಾ ಗೌಡ ತಾಯಿಯಾಗ್ತಿದ್ದಾರೆ. ಗರ್ಭಿಣಿ ಗೊಂಬೆಯ ಅನೇಕ ಫೋಟೋಗಳು ವೈರಲ್ ಆಗ್ತಿವೆ. ಈಗ ನೇಹಾ ಸೀಮಂತ ಸಂಭ್ರಮದಲ್ಲಿದ್ದು, ಅಂತರಪಟ ಸೀರಿಯಲ್ ತಂಡ ಅವರಿಗೆ ಶುಭ ಹಾರೈಸಿದೆ. 
 


ಲಕ್ಷ್ಮಿ ಬಾರಮ್ಮ ಧಾರಾವಾಹಿ (Lakshmi Baramma serial)ಯ ಗೊಂಬೆಗೆ ಮುದ್ದಾದ ಬೊಂಬೆಯೊಂದು ಬರ್ತಾ ಇದೆ. ಶೀಘ್ರವೇ ಬಿಗ್ ಬಾಸ್ ಸ್ಪರ್ಧಿ (Bigg Boss contestant) ನೇಹಾ ಗೌಡ ಅಮ್ಮನಾಗ್ತಿದ್ದಾರೆ. ಅವರ ಸೀಮಂತ (Seemantha) ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಸೀಮಂತದ ಫೋಟೋ ಹರಿದಾಡುತ್ತಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ, ನೇಹಾ ಪತಿ ಚಂದನ್ ನಟನೆಯ ಅಂತರಪಟ ಧಾರಾವಾಹಿ ತಂಡ ಈ ಸೀಮಂತ ಕಾರ್ಯಕ್ರಮದಲ್ಲಿ ಪಾಲೊಂಡಿತ್ತು. ಅಂತರಪಟ ಧಾರಾವಾಹಿ ಡೈರೆಕ್ಟರ್ ಸ್ವಪ್ನ ಕೃಷ್ಣ, ಸೀಮಂತದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಸ್ವಪ್ನ ಕೃಷ್ಣ ಗೊಂಬೆ ಜೊತೆಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Tap to resize

Latest Videos

ಕಲರ್ಸ್ ಕನ್ನಡದ ಈ ಸೀರಿಯಲ್ ಮುಕ್ತಾಯ, ಅತ್ಯುತ್ತಮ ನಟನೆಯ ಆ್ಯಕ್ಟರ್ಸ್ ಇರೋ ಕಥೆ ಮುಗೀಬಾರದು ಅಂತಿದ್ದಾರೆ ಫ್ಯಾನ್ಸ್..!

ಫೋಟೋದಲ್ಲಿ ನಟಿ ನೇಹಾ ಗೌಡ, ಪತಿ ಚಂದನ್ ಗೌಡ ಹಾಗೂ ನಿರ್ದೇಶಕಿ ಸ್ವಪ್ನ ಕೃಷ್ಣ ಹಾಗೂ ಅಂತರಪಟ ಧಾರಾವಾಹಿ ನಾಯಕ ನಟಿ ತನ್ವಿಯಾ ಬಾಲರಾಜ್, ನಟಿ ಸೋನು ಗೌಡ, ನಟಿ ಜ್ಯೋತಿ ಸೇರಿದಂತೆ ಅನೇಕ ನಟಿಯರು ಕಾಣಿಸಿಕೊಂಡಿದ್ದಾರೆ. ಚೆಂದದ ಸೀರೆಯುಟ್ಟು ಗೊಂಬೆಯಂತೆ ಕಾಣ್ತಿದ್ದ ನೇಹಾ ಗೌಡ ನೋಡಿದ ಅಭಿಮಾನಿಗಳು ದೃಷ್ಟಿ ಬೀಳದಿರಲಿ ಎನ್ನುತ್ತಿದ್ದಾರೆ.    

ನೇಹಾ ಗೌಡ ಸೀಮಂತದ ಫೋಟೋ ಪೋಸ್ಟ್ ಮಾಡಿದ ನಿರ್ದೇಶಕಿ ಸ್ವಪ್ನ ಕೃಷ್ಣ, ನೇಹಾ ಗೌಡ ಹಾಗೂ ಚಂದನ್ ಗೌಡ ಅವರ ಮುಂದಿನ ಜೀವನ ಸುಂದರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಅಭಿಮಾನಿಗಳ ಕಮೆಂಟ್ ಶುರುವಾಗಿದೆ. ನೇಹಾ ಗೌಡಗೆ ಹೆಣ್ಣು ಮಗು ಅಂತ ಕೆಲ ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಇಡೀ ತಂಡ ಸುಂದರವಾಗಿ ಕಾಣ್ತಿದೆ ಎಂದು ಅಂತರಪಟ ಟೀಂ ಕಮೆಂಟ್ ಮಾಡಿದೆ. 

ನಟಿ ನೇಹಾ ಗೌಡ ಸೀಮಂತ ಕಾರ್ಯಕ್ರಮ ಇಂದು ನಡೆದಿದೆ. ಹಾಗಾಗಿ ನೇಹಾ ಗೌಡ ಇನ್ನೂ ಫೋಟೋಗಳನ್ನು ಹಂಚಿಕೊಂಡಿಲ್ಲ. ಅವರ ಖಾತೆಯಿಂದ ಇನ್ನೊಂದಿಷ್ಟು ಸುಂದರ ಫೋಟೋ, ವಿಡಿಯೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಎರಡು ವಾರಗಳ ಹಿಂದೆ ಪತಿ ಚಂದನ್ ಗೌಡ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ ನೇಹಾ ಗೌಡ, ಮೂರು ದಿನಗಳ ಹಿಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಆಪ್ತ ಗೆಳತಿ ಅನುಪಮಾ ಗೌಡ, ನೇಹಾಗೆ ವಿಶ್ ಮಾಡಿದ್ದ ಸುಂದರ ವಿಡಿಯೋ ಒಂದು ಸಾಕಷ್ಟು ಸುದ್ದಿ ಮಾಡಿತ್ತು. 

ರಾಜಾ ರಾಣಿ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ನೇಹಾ ಪತಿ  ಚಂದನ್ ಗೌಡ ಅಂತರಪಟ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ ಎನ್ನಲಾಗ್ತಿದೆ. ಗೊಂಬೆ ಹಾಗೂ ಚಂದನ್ ಮದುವೆಯಾಗಿ ಆರು ವರ್ಷ ಕಳೆದಿದೆ. 2018ರಲ್ಲಿ ನೇಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಈಗ ದಂಪತಿ ಮಗುವಿನ ಆಗಮನಕ್ಕೆ ಎಲ್ಲ ತಯಾರಿ ನಡೆಸಿದ್ದಾರೆ. ಹೆಣ್ಣು ಮಗು ಅಂದ್ರೆ ನನಗೆ ತುಂಬಾ ಇಷ್ಟ ಎಂದು ಈ ಹಿಂದೆ ನಟಿ ನೇಹಾ ಹೇಳಿದ್ದರು. ಹಾಗಾಗಿಯೇ ಅಭಿಮಾನಿಗಳು ನೇಹಾಗೆ ಹೆಣ್ಣೇ ಆಗೋದು ಎನ್ನುತ್ತಿದ್ದಾರೆ. 

Tamanna Bhatia : ಕಾಶಿಗೆ ತಮನ್ನಾ‌‌‌‌ ಭೇಟಿ.. ಗರ್ಭಗುಡಿ ಪ್ರವೇಶದ ಬಗ್ಗೆ ಅಭಿಮಾನಿಯ ವಿರೋಧ

34 ವರ್ಷದ ನೇಹಾ ಗೌಡ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಎಲ್ಲರ ಗೊಂಬೆಯಾದ್ರು. ರಾಜಾ ರಾಣಿ, ಬಿಗ್ ಬಾಸ್ ಶೋನಲ್ಲಿ ಮಿಂಚಿರುವ ನೇಹಾ ಸದ್ಯ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಜೀವನದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿದ್ದಾರೆ. ಜೂನ್ ನಲ್ಲಿ ಇಬ್ಬರು ಮೂವರಾಗ್ತಿದ್ದೇವೆ ಎಂದು ನೇಹಾ ಹಾಗೂ ಚಂದನ್ ಹೇಳಿದ್ದರು. ಅಲ್ಲದೆ ಮಗುವಿನ ಸ್ಕ್ಯಾನಿಂಗ್ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ತುಂಬಾ ವೈರಲ್ ಆಗಿತ್ತು. ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಾಗಿದ್ದರು. 

click me!