Seeta Rama Serial: ಕಾಣದ ಸಿಹಿಯಿಂದ ಪ್ರೀತಿಯ ಅಪ್ಪುಗೆ: ಅಶೋಕನ ನಟನೆಗೆ ವೀಕ್ಷಕರ ಕಣ್ಣೀರು

Published : Apr 23, 2025, 01:20 PM ISTUpdated : Apr 23, 2025, 02:34 PM IST
Seeta Rama Serial: ಕಾಣದ ಸಿಹಿಯಿಂದ ಪ್ರೀತಿಯ ಅಪ್ಪುಗೆ: ಅಶೋಕನ ನಟನೆಗೆ ವೀಕ್ಷಕರ ಕಣ್ಣೀರು

ಸಾರಾಂಶ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಆತ್ಮ ಅಶೋಕ್‌ಗೆ ಕಾಣಿಸುತ್ತಿದೆ. ಸಿಹಿ ತನ್ನ ಅಸ್ಥಿ ವಿಸರ್ಜನೆ ತಪ್ಪಿಸಿ ಅಡಗಿಸಿಡುತ್ತಾಳೆ. "ನಾನು ಸಿಹಿ" ಎಂದು ಕಾರಿನ ಮೇಲೆ ಬರೆಯುವ ಮೂಲಕ ಅಶೋಕ್‌ಗೆ ತಿಳಿಸುತ್ತಾಳೆ. ಸುಬ್ಬಿ ಮೂಲಕ ಸತ್ಯ ತಿಳಿದ ಅಶೋಕ್, ಸಿಹಿಯ ಆತ್ಮವನ್ನು ಅಪ್ಪಿಕೊಳ್ಳುವ ಭಾವುಕ ದೃಶ್ಯ ವೀಕ್ಷಕರ ಮನ ಗೆದ್ದಿದೆ. ಅಶೋಕ್‌ನ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸೀತಾರಾಮ ಸೀರಿಯಲ್​ನಲ್ಲೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಸಿಹಿಯ ಆತ್ಮ ಅಲೆದಾಡುತ್ತಿರುವುದು ಅಶೋಕ್​ಗೆ ತಿಳಿದಿದೆ. ಸಿಹಿಯ ಅಸ್ಥಿ ತೆಗೆದುಕೊಂಡು ಹೋಗುವ ವೇಳೆ ಆ ಅಸ್ಥಿಯನ್ನು ವಿಸರ್ಜನೆ ಮಾಡಿದರೆ, ತಮಗೆ ಮೋಕ್ಷ ಸಿಗುತ್ತದೆ, ತಾನಿನ್ನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಅರಿತ ಸಿಹಿ ಅದನ್ನು ಅಲ್ಲಿಂದ ಎತ್ತಿಕೊಂಡು ಅಡಗಿಸಿ ಇಡುತ್ತಿದ್ದಾಳೆ. ಇದನ್ನು ನೋಡಿದ ಅಶೋಕ್​ಗೆ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಅದೇ  ಸಮಯದಲ್ಲಿ ಸಿಹಿ ಕಾರಿನ ಮೇಲಿರುವ ಧೂಳಿನಿಂದ ಐ ಆ್ಯಮ್​ ಸಿಹಿ (ನಾನು ಸಿಹಿ) ಎಂದು ಬರೆಯುತ್ತಾಳೆ. ಇದನ್ನು ನೋಡುತ್ತಿದ್ದಂತೆಯೇ ಅಶೋಕ್​ಗೆ ಶಾಕ್​ ಆಗುತ್ತದೆ. ಸಿಹಿ ಅಲ್ಲಿಯೇ ಇರುವ ವಿಷಯ ಆತನಿಗೆ ತಿಳಿಯುತ್ತದೆ. ಆದರೂ ಅದನ್ನು ನಂಬುವುದು ಹೇಗೆ? ಕೊನೆಗೆ ಸುಬ್ಬಿಯೇ ಅಶೋಕ್​ಗೆ ಎಲ್ಲಾ ವಿಷಯ ಹೇಳುತ್ತಾಳೆ. ಸಿಹಿ ತನಗೆ ಕಾಣಿಸುವ ವಿಷಯ ಹೇಳುತ್ತಾಳೆ.

ಸಿಹಿ ಎಲ್ಲಿದ್ದಾಳೆ ಎಂದು ಕೇಳಿದಾಗ ಅಲ್ಲೇ ಕುಳಿತಿರುವುದಾಗಿ ಹೇಳುತ್ತಾಳೆ ಸುಬ್ಬಿ. ಅತ್ತ ಅಶೋಕ್​ ಹೋದಾಗ, ಸುಬ್ಬಿ ಆತನನ್ನು ಅಪ್ಪಿಕೊಳ್ಳುವಂತೆ ಸಿಹಿಗೆ ಹೇಳುತ್ತಾಳೆ. ಸಿಹಿ ಅಶೋಕನನ್ನು ಅಪ್ಪಿಕೊಳ್ಳುತ್ತಾಳೆ. ಸಿಹಿ ಅಶೋಕ್​ಗೆ ಕಾಣಿಸುವುದಿಲ್ಲ, ಆದರೆ ಆ ಪ್ರೀತಿಯ ಅಪ್ಪುಗೆಯ ಕ್ಷಣಗಳನ್ನು ಆತ ಅನುಭವಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಅಶೋಕ್​  ಮಾಡಿದ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ, ನೆಟ್ಟಿಗರು ಅಶೋಕ್​ ಅಭಿನಯದ ಬಗ್ಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದು ಕೇವಲ ಸೀರಿಯಲ್​ ಎಂದು ಗೊತ್ತಿದ್ದರೂ, ನೀವು ನಮ್ಮ ಕಣ್ಣಲ್ಲಿ ನೀರು ತರಿಸಿಬಿಟ್ಟಿರಿ ಎಂದು ಹೇಳುತ್ತಿದ್ದಾರೆ. ಅಶೋಕ್​ ಪಾತ್ರಧಾರಿಯಾಗಿರುವ ಅಶೋಕ್​  ಕುಮಾರ್ ಅವರು ಇದಾಗಲೇ ತಮ್ಮ ನಟನೆಯಿಂದ ವೀಕ್ಷಕರ ಮನಸ್ಸನ್ನು ಗೆದ್ದಿದ್ದು, ಇದೀಗ ಮತ್ತೊಂದು  ಲೆವೆಲ್​ ಮುಂದಕ್ಕೆ ಹೋಗಿದ್ದಾರೆ.

ಅಪ್ಪನ ಆಸೆ ಈಡೇರಿಸಿದ ಚಂದನ್​ ಶೆಟ್ಟಿ: ಮೇ 9ಕ್ಕೆ ಹೊಸ ಜೀವನಕ್ಕೆ ಎಂಟ್ರಿ- ಮಾಹಿತಿ ಕೊಟ್ಟ ನಟ

ಆದ್ದರಿಂದ ಇದೀಗ ಸೀರಿಯಲ್​ನಲ್ಲಿ ಎಲ್ಲವೂ ತಿಳಿದಂತೆಯೇ ಆಗಿದೆ. ಸೀತಾಳಿಗೆ ಸಿಹಿ ಅಪಘಾತದ ವಿಷಯ ತಿಳಿಯುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಅದು ಸದ್ಯ ತಿಳಿಯಲಿಲ್ಲ. ಆದರೆ,  . ಇನ್ನು ಸಿಹಿ ಹೇಗಾದರೂ ತನ್ನ ಶಕ್ತಿ ಬಳಸಿ ಅಶೋಕ್​ಗೆ ಇರೋ ವಿಷಯವನ್ನು ತಿಳಿಸಿದರೆ ಅಲ್ಲಿಗೆ ಭಾರ್ಗವಿ ಚಿಕ್ಕಿಯ ಮುಖವಾಡ ಕಳಚಿ ಬೀಳುತ್ತದೆ. ಹೇಗಿದ್ದರೂ ಆತನಿಗೆ ಅವಳ ಬಗ್ಗೆ ಗೊತ್ತೇ ಇದೆ. ಇನ್ನು ಸುಬ್ಬಿ ಸಿಹಿ ಮಗಳು ಎನ್ನುವ ವಿಷಯವೂ ತಿಳಿಯುತ್ತದೆ. ನಟಿ ವೈಷ್ಣವಿ ಗೌಡ ಅವರ ಮದುವೆಯ ಮುಂಚೆ ಸೀರಿಯಲ್​ ಮುಗಿಯುವ ನಿರೀಕ್ಷೆ ಇದೆ. ವಿನಾ ಕಾರಣ ಮತ್ತಷ್ಟು ಎಳೆಯದೇ ಸೀರಿಯಲ್​  ಮುಗಿಸಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. 

ಅಂದಹಾಗೆ ಅಶೋಕ್​ ಅವರ ನಿಜವಾದ ಹೆಸರು ಕೂಡ ಅಶೋಕ್​ ಶರ್ಮಾ ಆಗಿದೆ. ಅಶೋಕ್ ಅವರ ನಿಜವಾದ ಹೆಸರು ಅಶೋಕ್​ ಶರ್ಮಾ. ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ. ಇವರ ನಟನೆಯನ್ನು ವೀಕ್ಷಕರು ಮನಸಾರೆ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ಇಲ್ಲಿ ಡಬಲ್​ ರೋಲ್​ನಲ್ಲಿ ನಟಿಸುತ್ತಿರುವ ಪುಟಾಣಿ ಸಿಹಿ ರಿತು ಸಿಂಗ್​ಗೆ ಇದಾಗಲೇ ವೀಕ್ಷಕರು ಫಿದಾ ಆಗಿದ್ದಾರೆ. ಕೆಲವೊಮ್ಮೆ ವಯಸ್ಸಿಗಿಂತಲೂ ಅಧಿಕವಾಗಿ ಮಾತನಾಡುವ, ನಟಿಸುವ ಬಗ್ಗೆ ಕೆಲವರು ವಿಷಾದ ವ್ಯಕ್ತಪಡಿಸಿದ್ದೂ ಇದೆ. ಆದರೆ ನಟನೆಗೆ ಮಾತ್ರ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. 

Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ