ರೋಡ್‌ನಲ್ಲಿ ಬೋರಲು ಬಿದ್ದ ರಾಮ; ಸೀತಾ ಕೇರ್‌ ಟೇಕರ್ ರಾಮನಿಗೆ ಹೀಗಾದ್ರೆ ಮುಂದೇನು ಗತಿ?

By Shriram Bhat  |  First Published Feb 19, 2024, 4:14 PM IST

ಬಿದ್ದ ರಾಮ್ ಮತ್ತೆ ಎದ್ದು ಬರುತ್ತಾನಾ? ಬಿದ್ದಾಗ ರಾಮನ ಮೆದುಳಿಗೆ ಏಟಾಗರಬಹುದು, ನೆನಪು ಹೋಗಿರಬಹುದು. ಹಳೆಯ ನೆನಪು ಸ್ವಲ್ಪವಾದರೂ ಇರಬಹುದಾ? ಮುಂತಾದ ಹತ್ತು ಹಲವು ಪ್ರಶ್ನೆಗಳು ಈಗ ವೀಕ್ಷಕರ ತಲೆ ಹೊಕ್ಕಿವೆ.


ಸೀತಾಳ ಜತೆ ಮಾತನಾಡಲು ರಾಮ್ ಸೀತಾ ಮನೆ ಬಳಿ ಹೋಗಿದ್ದಾನೆ. ಅವನನ್ನು ನೋಡಿ ಅಸಮಾಧಾನದಿಂದ ಕೆಂಡಾಮಂಡಲವಾದ ಸೀತಾ 'ನೀವ್ ಪದೇ ಪದೇ ಹೀಗೆ ಮನೆ ಹತ್ರ ಬರ್ತಿದ್ರೆ ನೋಡೋರ್ ಕಣ್ಣಿಗೆ ಅದು ತುಂಬಾ ಕೆಟ್ಟದಾಗಿ ಕಾಣುತ್ತೆ.. ಪ್ಲೀಸ್ ಹೊರಡಿ...' ಎಂದು ಹೇಳಿ ದಢಾರನೇ ಬಾಗಿಲು ಹಾಕಿಬಿಡುತ್ತಾಳೆ. ರಾಮ ಸಪ್ಪೆ ಮೋರೆ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರೆ ವಿಲನ್ ಕಣ್ಣಿಗೆ 'ಬಿಸಿಬಿಸಿ ಕೇಕ್‌'ನಂತೆ ಕಾಣಿಸುತ್ತಾನೆ. 

ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಬರುತ್ತಿರುವ ರಾಮ್‌ನನ್ನು ನೋಡಿ ವಿಲನ್ ತನ್ನ ಹುಡುಗರಿಗೆ ಕಾಲ್ ಮಾಡಿ 'ಜಿಂಕೆ ಬಂದು ಹುಲಿ ಬೋನಿಗೆ ತಾನೇ ತಾನಾಗಿ ಬೀಳ್ತಾ ಇದೆ, ಬಿಡ್ಬೇಡಿ..' ಎಂದು ಹೇಳಿ ಕಾಲ್ ಮಾಡುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಕಾರೊಂದು ಬಂದು ಹಿಂದಿನಿಂದ ರಾಮ್‌ಗೆ ಗುದ್ದಿ ಹೋಗುತ್ತದೆ. ರಾಮ್ ರೋಡಿನಲ್ಲಿ ಮುಖ ಕೆಳಗಾಗಿ ಬೋರಲು ಬಿದ್ದಿದ್ದಾನೆ. ರಾಮ್‌ ಕಥೆ ಮುಂದೇನು ಎಂಬ ತೀವ್ರ ಕುತೂಹಲ ಉಂಟಾಗಿದೆ. 

Tap to resize

Latest Videos

ದುಷ್ಯಂತನ ಬಾಯಲ್ಲಿ ಬೆಳ್ಳುಳ್ಳಿ ಕಬಾಬ್; ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ವಿರಾಟ್ ಕೊಹ್ಲಿ!

ಬಿದ್ದ ರಾಮ್ ಮತ್ತೆ ಎದ್ದು ಬರುತ್ತಾನಾ? ಬಿದ್ದಾಗ ರಾಮನ ಮೆದುಳಿಗೆ ಏಟಾಗರಬಹುದು, ನೆನಪು ಹೋಗಿರಬಹುದು. ಹಳೆಯ ನೆನಪು ಸ್ವಲ್ಪವಾದರೂ ಇರಬಹುದಾ? ಮುಂತಾದ ಹತ್ತು ಹಲವು ಪ್ರಶ್ನೆಗಳು ಈಗ ವೀಕ್ಷಕರ ತಲೆ ಹೊಕ್ಕಿವೆ. ಇದಕ್ಕೆಲ್ಲಾ ಉತ್ತರ ಬೇಕೆಂದರೆ 'ಸೀತಾರಾಮ' ಸೀರಿಯಲ್ ಸಂಚಿಕೆ ನೋಡಬೇಕು. 'ಪ್ರೀತಿಯ ದಾರಿಗೆ ಸೇಡಿನ ಬೇಲಿ.. ರಾಮನೇ ಅಪಾಯಕ್ಕೆ ಸಿಲುಕಿದ್ರೆ ಕಾಪಾಡೋರು ಯಾರು..' ಎಂಬ ಕ್ಯಾಪ್ಶನ್ ಕೊಟ್ಟು ಪ್ರೋಮೋ ಬಿಡುಗಡೆ ಮಾಡಲಾಗಿದೆ. 'ಬ್ರೆಕ್‌ಲೆಸ್ ಟ್ವಿಸ್ಟ್ ಜತೆ ಬ್ರೇಕಿಂಗ್ ಸಂಚಿಕೆ' ಎಂಬ ವೈಸ್ ಓವರ್ ಸಹ ಹೆಚ್ಚಿನ ಕುತೂಹಲ ಕೆರಳಿಸಲು ಕಾರಣವಾಗಿದೆ.

ರಾಮಾಚಾರಿಗೆ ಜೈಲೂಟ ಫಿಕ್ಸ್ ಆಗೋಯ್ತಾ; ಚಾರು ತಲೆಗೆ ಬ್ರಿಲಿಯಂಟ್ ಐಡಿಯಾ ಬರ್ತಿಲ್ಲ ಯಾಕೆ?

ಒಟ್ಟಿನಲ್ಲಿ ಹೇಳಬೇಕೆಂದರೆ, ಸೀತಾಳ ಬದುಕಿನಲ್ಲಿ ಆಗಿರುವ ಹಲವು ಸಮಸ್ಯೆಗಳಿಂದ ಆಕೆ ಸದ್ಯ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಆದರೆ, ರಾಮನಿಗೆ ಆಕೆಯ ಸಮಸ್ಯೆಗಳ ಅರಿವು ಇದೆ, ಜೊತೆಗೆ, ಅವಳ ಜತೆ ತಾನಿದ್ದರೆ ಅವಳು ಸೇಪ್, ಈಗಾಗಲೇ ಇರುವ ಸಮಸ್ಯೆಗಳಿಗೆ ಪರಿಹಾರವೂ ಸಿಗುವುದು ಎಂಬ ನಂಬಿಕೆಯಿದೆ. ಆದರೆ ಈಗ ಸ್ವತಃ ರಾಮನೇ ನೆಲಕ್ಕೆ ಬಿದ್ದಿದ್ದಾನೆ. ಮುಂದೇನಾಗಲಿದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್!

ಸಿಹಿ ಕಹಿ ದಂಪತಿಗಳಿಗೆ 'ಆಪ್ತ ರಕ್ಷಕ'ರಾಗಿದ್ರು ಡಾ ವಿಷ್ಣುವರ್ಧನ್; ವೇದಿಕೆಯಲ್ಲಿ ನೆನೆದು ಭಾವುಕರಾದ ಚಂದ್ರು-ಗೀತಾ

click me!