ಕಳೆದ ಎರಡೂ ವರ್ಷಗಳಿಂದ ದೇಶಾದ್ಯಂತ ಜನರನ್ನು ಹೆಚ್ಚು ರಂಜಿಸಿದ ಸೀರಿಯಲ್ ಅಂದ್ರೆ ಅದು ಅನುಪಮಾ. ಈ ಹಿಂದಿ ಸೀರಿಯಲ್ ಈಗ ಕನ್ನಡದಲ್ಲೂ ಪ್ರಸಾರವಾಗುತ್ತಿದೆ.
Image credits: Instagram
ರೂಪಾಲಿ ಗಂಗೂಲಿ
ಕಳೆದ ಇಪ್ಪತ್ತು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರೂ ಅನುಪಮಾ ಧಾರಾವಾಹಿ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ನಟಿ ರೂಪಾಲಿ ಗಂಗೂಲಿ.
Image credits: Instagram
ಗೃಹಿಣಿಯ ಕಥೆ
ಅನುಪಮಾ ಮನೆಯವರಿಗಾಗಿ ಜೀವ ಸವೆಸುವ ಗೃಹಿಣಿಯ ಕಥೆಯಾಗಿದ್ದು, ತುಂಬು ಕುಟುಂಬದಲ್ಲಿದ್ದರೂ ಗಂಡನ ಪ್ರೀತಿ ಕಾಣದೆ, ಗಂಡನ ವಿವಾಹೇತರ ಸಂಬಂಧದಿಂದ ನೊಂದು ಬೆಂದ ಮಹಿಳೆ.
Image credits: Instagram
ಸದಾ ಸೀರೆಯಲ್ಲಿ ಕಾಣಿಸುವ ಅನುಪಮಾ
ಅನುಪಮಾ ಸೀರಿಯಲ್ ನಲ್ಲಿ ಸಂಪ್ರದಾಯಸ್ಥ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ರೂಪಾ ಗಂಗೂಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಹೊಸ ಫೋಟೋ ಮೂಲಕ ಶಾಕ್ ನೀಡಿದ್ದಾರೆ.
Image credits: Instagram
ಶಾರ್ಟ್ ಡ್ರೆಸ್ -ಹೈ ಹೀಲ್ಸ್
ನಟಿ ಸೋಶಿಯಲ್ ಮಿಡಿಯಾದಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದು, ಇದರಲ್ಲಿ ಶಾರ್ಟ್ ಡ್ರೆಸ್ ಮತ್ತು ಹೈ ಹೀಲ್ಸ್ ಹಾಕಿದ್ದಾರೆ. ರೂಪಾಲಿ ಹೊಸ ರೂಪ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
Image credits: Instagram
ಸೀರಿಯಲ್ ಗೆ ಬ್ರೇಕ್
ಎರಡೂವರೆ ವರ್ಷದಿಂದ ಅನುಪಮಾ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ರೂಪಾಲಿ ಸೀರಿಯಲ್ ನಲ್ಲಿ ಸದ್ಯ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಆದರೆ ನಿಜವಾಗಿ ಅವರು ಸೀರಿಯಲ್ ನಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.
Image credits: Instagram
ಮಾರಿಶಸ್ ಪ್ರವಾಸ
ರೂಪಾಲಿ ಗಂಗೂಲಿ ಇದೀಗ ತಮ್ಮ ಗಂಡ, ಮಗ, ತಾಯಿ ಮತ್ತು ಕುಟುಂಬದ ಸದಸ್ಯರ ಜೊತೆಗೆ ಮಾರಿಶಸ್ ಪ್ರವಾಸದಲ್ಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ.