ಮೂರು ವರ್ಷದ ಈ ಪಾಪು ಅಜ್ಜಿ ತಾತಂಗೆ ಟೀಚರ್: ಆರ್ಯ ಸಿಂಚನಾಗೆ ಸಪ್ತಮಿ ಗೌಡನೂ ಫಿದಾ

By Suvarna NewsFirst Published Nov 17, 2022, 1:35 PM IST
Highlights

ಕುಂದಾಪ್ರ ಮೂಲದ ಪುಟಾಣಿ ಕಂದಮ್ಮ ಆರ್ಯ ಸಿಂಚನಾ. ಈ ಪಾಪುಗೆ ಇನ್ನೂ ಮೂರು ವರ್ಷ. ಆಗಲೇ ಎಷ್ಟು ತಿಳ್ಕೊಂಡಿದ್ದಾಳೆ ಅಂದರೆ ಅಜ್ಜಿ ತಾತಂಗೂ ಟೀಚರ್ ಆಗಿದ್ದಾರೆ. ಇವಳ ಪಾಠಕ್ಕೆ ಸಾವಿರಾರು ಜನ ಫಿದಾ ಆಗಿದ್ದಾರೆ. ಕಾಂತಾರದ ನಾಯಕಿ ಸಪ್ತಮಿ ಗೌಡ ಈ ಬಾಲೆಯ ವೀಡಿಯೋ ಶೇರ್ ಮಾಡಿ ಮನಸಾರೆ ಮೆಚ್ಚಿಕೊಂಡಿದ್ದಾರೆ.

ಆರ್ಯ ಸಿಂಚನಾ ಅನ್ನೋ ಪುಟ್ಟ ಪಾಪು ಇದೀಗ ಸೋಷಿಯಲ್ ಮೀಡಿಯಾ ಸೆನ್ಸೇಶನ್. ಈ ಪುಟ್ಟ ಪೋರಿಯ ಹಾಡಿನ ವೀಡಿಯೋಗಳಿಗಂತೂ ಭರ್ಜರಿ ರೆಸ್ಪಾನ್ಸ್ ಬರ್ತಿದೆ. ಸದ್ಯಕ್ಕೀಗ ಈ ಬಾಲೆಯ ಒಂದು ವೀಡಿಯೋ ವೈರಲ್ ಆಗಿದೆ. ಬಹಳಷ್ಟು ಮಂದಿ ಈ ಪುಟಾಣಿಯ ಕ್ಯೂಟ್‌ನೆಸ್‌ಗೆ ಮಾರುಹೋಗಿದ್ದಾರೆ. ಈ ಮಗು ಆರು ತಿಂಗಳಿದ್ದಾಗಲೇ ಇವಳಮ್ಮ ಹಾಡೋದನ್ನು ಕಲಿಸೋಕೆ ಶುರು ಮಾಡ್ತಾರೆ. ಇನ್ನೊಂದು ಮಜಾ ಅಂದ್ರೆ ಈ ಪುಟಾಣಿಯ ಪ್ರತೀ ಚಟುವಟಿಕೆಯಲ್ಲೂ ಅವಳ ಮನೆ ಮಂದಿ ಎಲ್ಲ ಪಾಲ್ಗೊಳ್ಳೋದು. ಅಜ್ಜಿ ತಾತ ಅಂತೂ ಈ ಪೋರಿಯ ಎಲ್ಲ ತುಂಟಾಟ ಮುದ್ದಾಟಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ತಾವೂ ಮಗುವಿನ ಜೊತೆಗೆ ಮಗುವಾಗಿ ಅವಳ ಚಟುವಟಿಕೆಗಳ ಭಾಗವಾಗುತ್ತಿದ್ದಾರೆ. ಇದು ಇವಳ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡಿದೆ. ಚುಟು ಚುಟು ಪಟಾಕಿಯಂತೆ ಮಾತಾಡ್ತಾ ಎಲ್ಲರನ್ನು ಮೋಡಿ ಮಾಡ್ತಿರೋ ಈ ಬಾಲೆಗೆ ಫೇಸ್‌ಬುಕ್ ಇನ್‌ಸ್ಟಾದಲ್ಲೆಲ್ಲ ಸ್ಪೆಷಲ್ ಪೇಜ್‌ಗಳಿವೆ. ಅದಕ್ಕೆ ಸಾವಿರಾರು ಜನರ ಫಾಲೋವಿಂಗ್ ಇದೆ.

ಆರ್ಯ ಸಿಂಚನ ಅನ್ನೋ ಪೋರಿ ಕುಂದಾಪ್ರ ಮೂಲದವಳು. ಆಗಾಗ ಕುಂದಾಪ್ರ ಭಾಷೆಯಲ್ಲಿ ಇವರಮ್ಮ ಪೋಸ್ಟ್ ಅಪ್‌ಡೇಟ್ ಮಾಡ್ತಾ ಇರ್ತಾರೆ. ಈ ಪುಟಾಣಿ ಹುಟ್ಟಿದ್ದು 2019ರಲ್ಲಿ. ಆರು ತಿಂಗಳಿನ ಪುಟಾಣಿ ಪಾಪು ಜೊತೆಗೆ ಅವರಮ್ಮ ಸುಮ್ಮನೆ ಹಾಡು ಹಾಡುತ್ತಿದ್ದಾಗ ಇನ್ನೂ ಮಾತೇ ಬರದ ಕಂದಮ್ಮ ತಮ್ಮ ಬಾಲ ಭಾಷೆಯಲ್ಲೇ ಅಮ್ಮನಂತೆ ಹಾಡಲು ಪ್ರಯತ್ನಿಸುತ್ತಾಳೆ. ಅದನ್ನು ಕಂಡು ಇವರಮ್ಮನಿಗೆ ಏನೋ ಹೊಳೆದು ಅವಳನ್ನು ಆಟ ಆಡಿಸುವಾಗಲೆಲ್ಲ ಹಾಡಿನ ಒಂದೊಂದು ಸಾಲು ಹಾಡುತ್ತಾ ಮಗುವನ್ನೂ ಹಾಡುವಂತೆ ಪ್ರೋತ್ಸಾಯಿಸುತ್ತಾ ಬರುತ್ತಾರೆ.

Jayaram Karthik: ಅಶ್ವಿನಿ ನಕ್ಷತ್ರದ ಜೆಕೆ ಈಗ ಹೇಗಾಗಿದ್ದಾರೆ ನೋಡಿ!

ಅಚ್ಚರಿ ಎಂಬಂತೆ ಇದಕ್ಕೆ ಮಗು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತದೆ. ಇದನ್ನೇ ಅಮ್ಮ ಮುಂದುವರಿಸುತ್ತಾ ಬರುತ್ತಾರೆ. ನೋಡು ನೋಡುತ್ತಿರುವಂತೆ ಮೂರರ ಹರೆಯದಲ್ಲೇ ಈ ಪುಟಾಣಿ ಕನಕದಾಸರ ಕೀರ್ತನೆಗಳಿಗೆ ಶ್ರುತಿಬದ್ಧವಾಗಿ ಅಮ್ಮನ ಜೊತೆಗೆ ಸ್ವರ ಸೇರಿಸುವಷ್ಟು ಈಗ ಬೆಳೆದಿದ್ದಾಳೆ. ಮೂರರ ಹರೆಯದ ಮಗುವಿನ ಧ್ವನಿಗೆ ಶ್ರುತಿಯ ಸೂಕ್ಷ್ಮಕ್ಕೆ ಜನ ಮಾರುಹೋಗಿದ್ದಾರೆ.

ಇದೀಗ ಈ ಪುಟಾಣಿ ಅಜ್ಜಿ ತಾತನಿಗೇ ಟೀಚರ್‌ ಆಗಿದ್ದಾಳೆ. ಅಜ್ಜ ಅಜ್ಜಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರಿಗೆ ಹಾಡಿನ ಪ್ರಾಕ್ಟೀಸ್ ಮಾಡಿಸುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಅಮ್ಮನಿಂದ ಕಲಿತಿರುವ ಸಂಗೀತವನ್ನು ಅಜ್ಜಿ ತಾತನಿಗೆ ಕಲಿಸುವಾಗ ಪಕ್ಕಾ ಟೀಚರ್‌(Teacher) ನಂತೇ ವರ್ತಿಸುತ್ತಿದ್ದಾಳೆ. ಅಜ್ಜಿ ಅಜ್ಜನ ದನಿ ಯಾಕೋ ಸರಿ ಬರುತ್ತಿಲ್ಲ ಅನಿಸಿದಾಗ ಗದರುತ್ತಾಳೆ, 'ಸರಿ ಹೇಳು' ಅಂತ ಜೋರಾಗಿ ಟೀಚರ್‌ ಹೇಳುವ ಹಾಗೆ ಹೇಳುತ್ತಾಳೆ. ಪದೇ ಪದೇ ತಪ್ಪು ಮಾಡಿದರೆ ಕೋಲು ತೋರಿಸುತ್ತಾಳೆ. ಅಜ್ಜ, ಅಜ್ಜಿ ವಿಧೇಯ ವಿದ್ಯಾರ್ಥಿಗಳಂತೆ ಅವಳಿಂದ ಪಾಠ ಹೇಳಿಸಿಕೊಳ್ಳುತ್ತಾರೆ. ಅವಳು ಹೇಳಿದ್ದನ್ನು ಅವಳ ಆದೇಶದ ಪ್ರಕಾರ ಪಾಲಿಸುತ್ತಾರೆ. ತಾತ ಅಂತೂ ಇವಳ ಜೊತೆಗೆ ಡ್ಯಾನ್ಸ್ ಅನ್ನೋ ಮಾಡ್ತಾರೆ. ಅಜ್ಜ ಹೇಗೆ ಮಾಡ್ತಾರೆ ಅನ್ನೋದನ್ನು ತಮಾಷೆ ಮಾಡೋದೂ ಈ ಪೋರಿಗೆ ಗೊತ್ತು. ಸೌಟನ್ನೇ ತಾಳದಂತೆ ಬಳಸೋ ರೀತಿಯೂ ಚೆಂದ.

 

'ಅಯ್ಯೋ ರಾಮನೇ..' ಅಂತ ಅಜ್ಜ ಅಜ್ಜಿ ಸರಿ ಹೇಳದಿದ್ದಾಗ ಕಮೆಂಟ್ ಮಾಡೋದಂತೂ ಸಖತ್ ಕ್ಯೂಟ್. ಅದರ ಜೊತೆಗೆ ಈ ಮಗುವಿಗೆ ಈ ವಯಸ್ಸಲ್ಲೇ(Age) ಎಷ್ಟೊಂದು ಹಾಡುಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ (Carnatic Classical Music) ವರಸೆಗಳೆಲ್ಲ ಗೊತ್ತಿದೆಯಲ್ಲಾ ಅನ್ನೋದ ಅಚ್ಚರಿ ಮೂಡಿಸುತ್ತಿದೆ.

BBK9; ಗೊಂಬೆಗಾಗಿ ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ: ಸ್ಪರ್ಧಿಗಳ ಕಿತ್ತಾಟದ ವಿಡಿಯೋ ವೈರಲ್

ಇನ್ನೊಂದು ಪ್ಲೆಸೆಂಟ್ ಸರ್ಪೈಸ್ ಅಂದರೆ 'ಕಾಂತಾರ' ಹಾಡನ್ನು(Song) ಈ ಪುಟಾಣಿ ತಾಯಿಯ ಸಹಾಯದಿಂದ ಹಾಡಿದ್ದು. ಅದಕ್ಕೆ ಕಾಂತಾರ ನಾಯಕಿ ಈ ಹಾಡಿನಲ್ಲಿ ಕಾಣಿಸಿಕೊಂಡ ಸಪ್ತಮಿ ಗೌಡ ಶೇರ್(Share) ಮಾಡಿ ಕಮೆಂಟ್ ಮಾಡಿದ್ದು. 'ಈ ಮುಖ ಎಷ್ಟು ಕ್ಯೂಟ್ ಆಗಿ ಹಾಡ್ತಿದ್ದಾಳೆ' ಅನ್ನೋ ಸಪ್ತಮಿ ಕಮೆಂಟ್ (Comment)ನೋಡಿ ಈ ಬಾಲೆಯೂ ಖುಷಿ ಆಗಿದ್ದಾಳೆ. ಈ ಪುಟಾಣಿ ಮಗು ಬಹಳ ಎತ್ತರಕ್ಕೆ ಬೆಳೆಯಲಿ ಅಂತ ಇವಳ ಅಭಿಮಾನಿಗಳೆಲ್ಲ ಮನದಾಳದಿಂದ ಹಾರೈಸುತ್ತಿದ್ದಾರೆ.

 

click me!