ಕನ್ನಡ ಸಿನಿಮಾಗಳ ಹವಾ ಜೋರಾಗಿದೆ. ಇನ್ನೊಂದು ಕಡೆ ಕನ್ನಡ ಕಿರುತೆರೆಯೂ ಸದ್ದು ಮಾಡುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಹಿಂದಿಗೆ ಡಬ್ ಆಗಿತ್ತು. ಇದೀಗ ಮತ್ತೊಂದು ಜನಪ್ರಿಯ ಕನ್ನಡ ಸೀರಿಯಲ್ ಆ ಹಾದಿಯಲ್ಲಿದೆ. ಆ ಸೀರಿಯಲ್ ಯಾವ್ದು?
ಕನ್ನಡ ಸಿನಿಮಾಗಳು ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿವೆ. ಹಿಂದೆಲ್ಲ ಕನ್ನಡ ಸಿನಿಮಾ ಅಂದರೆ ಮೂಗು ಮುರೀತಿದ್ದವರೇ ಇದೀಗ ಕನ್ನಡ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಪಡೆಯಲು ಕ್ಯೂ ನಿಲ್ಲೋ ಸ್ಥಿತಿ ಇದೆ. ಇದು ಕನ್ನಡ ಹಿರಿ ತೆರೆಯ ಕಥೆಯಾದ್ರೆ ತಾನೇನೂ ಕಮ್ಮಿಯಿಲ್ಲ ಅಂತ ಕನ್ನಡ ಕಿರುತೆರೆಯೂ ಇದೀಗ ರಾಷ್ಟ್ರದ ಗಮನ ಸೆಳೆಯುತ್ತಿದೆ. ಹಿಂದೆಲ್ಲ ಸಾಲು ಸಾಲು ಹಿಂದಿ ಸೀರಿಯಲ್‌ಗಳು ಕನ್ನಡಕ್ಕೆ ರೀಮೇಕ್, ಡಬ್ ಆಗುತ್ತಿದ್ದವು. ಇದೀಗ ಕನ್ನಡ ಸೀರಿಯಲ್‌ಗಳು ಆ ಸ್ಥಾನಕ್ಕೆ ಬಂದು ನಿಂತಿವೆ. ಕನ್ನಡ ಕಿರುತೆರೆಯಲ್ಲಿ ತನ್ನ ವಿಭಿನ್ನತೆಯ ಕಾರಣಕ್ಕೆ ಸದ್ದು ಮಾಡಿದ್ದ ಕನ್ನಡತಿ ಸೀರಿಯಲ್ ಹಿಂದಿಗೆ ಡಬ್ ಆಗಿತ್ತು. ಈಗ ಕಲರ್ಸ್ ಕನ್ನಡದ್ದೇ ಮತ್ತೊಂದು ಸೀರಿಯಲ್ ಆ ಹಾದಿಯಲ್ಲಿದೆ. ವಿಶೇಷ ಅಂದರೆ ಕನ್ನಡತಿ ಪ್ರಸಾರವಾಗುತ್ತಿದ್ದ ಸಮಯಕ್ಕಿಂತ ಸ್ವಲ್ಪ ಮೊದಲೇ ಪ್ರಸಾರವಾಗ್ತಿರೋ ಸೀರಿಯಲ್‌ಗೂ ಈಗ ಹಿಂದಿಯಲ್ಲೂ ಕಾಣಿಸಿಕೊಳ್ಳೋ ಯೋಗ ಬಂದಿದೆ. ಈ ಬಗ್ಗೆ ಸೀರಿಯಲ್ ಟೀಮ್ ಫುಲ್ ಥ್ರಿಲ್ ಆಗಿದೆ.
ಅಷ್ಟಕ್ಕೂ ಹಿಂದಿಗೆ ಡಬ್ ಆಗ್ತಿರೋ ಮತ್ತೊಂದು ಕನ್ನಡ ಸೀರಿಯಲ್ ಹೆಸರು 'ಭಾಗ್ಯಲಕ್ಷ್ಮೀ'. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಆದ್ರೆ ಕನ್ನಡತಿ ಧಾರಾವಾಹಿ ಮುಗಿದ ಕಾರಣ 7 ರಿಂದ 8 ಗಂಟೆವರಗೆ ಭಾಗ್ಯದ ಲಕ್ಷ್ಮಿ ಬಾರಮ್ಮ ಆಗಿ ಪ್ರಸಾರವಾಗ್ತಿದೆ. ಈ ಸೀರಿಯಲ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೊ ಗೌಡ ಹೀರೋ ಆಗಿ ಮಿಂಚುತ್ತಿದ್ದಾರೆ. ನಾಯಕಿ ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್ ಇದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹೊರಟ ಅಕ್ಕನಿಗೆ ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗನನ್ನೇ ತನ್ನ ತಂಗಿಗೆ ತರಬೇಕಂತೆ. ಅಂಥಾ ಹುಡುಗನಾಗಿ ಇದೀಗ ವೈಷ್ಣವ್ ಬಂದಿದ್ದಾನೆ. ವೈಷ್ಣವ್ ಫೇಮಸ್ ಸಿಂಗರ್ ಆಗಿದ್ದು, ಕೀರ್ತಿ ಎನ್ನುವ ಹುಡುಗಿಯನ್ನು ಪ್ರೀತಿ ಮಾಡ್ತಾ ಇರ್ತಾನೆ. ಆದ್ರೆ ಈಗ ಕೀರ್ತಿ ಸಣ್ಣ ಕಾರಣಕ್ಕೆ ಈತನನ್ನು ರಿಜೆಕ್ಟ್ ಮಾಡಿದ್ದಾಳೆ. ಕೀರ್ತಿಗೆ ಹೊಟ್ಟೆ ಉರಿಸಲು ಲಕ್ಷ್ಮಿ ಜೊತೆ ಮದುವೆ ಆಗ್ತೀನಿ ಎಂದಿದ್ದಾನೆ ವೈಷ್ಣವ್. ಇದೀಗ ತಮಾಷೆಗೆ ಆಡಿದ ಮಾತು ನಿಜ ಆಗೋದ್ರಲ್ಲಿದೆ.
ಗಂಡಂದಿರು ಅಡ್ಜೆಸ್ಟ್ ಮಾಡಿಕೊಂಡಿಲ್ಲ ಅಂದ್ರೆ ಕಷ್ಟ ಆಗುತ್ತೆ: 'ಕನ್ನಡತಿ' ಚಿತ್ಕಲಾ ಬಿರಾದರ್
ಆರಂಭದಿಂದಲೂ ಒಳ್ಳೆಯ ಕಥೆ ಹೊಂದಿದ್ದ ಭಾಗ್ಯಲಕ್ಷ್ಮಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಪರಿಣಾಮ ಸೀರಿಯಲ್(Serial) ಅನ್ನು ಹಿಂದಿಗೆ ಡಬ್ ಮಾಡಲಾಗುತ್ತಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ ಭಾಗ್ಯಲಕ್ಷ್ಮಿಯ ಡಬ್ಡ್ ವರ್ಷನ್ (Dubbed version)ಪ್ರಸಾರವಾಗಲಿದೆ.
ಈ ಸುದ್ದಿ ತಿಳಿದು ಸೀರಿಯಲ್ ಟೀಮ್ ಖುಷಿಯಲ್ಲಿದೆ. ಹಾಗೆ ನೋಡಿದರೆ ಈ ಸೀರಿಯಲ್‌ನಲ್ಲಿ ಹೆಚ್ಚು ಜನಪ್ರಿಯವಾಗ್ತಿರೋದು ಅಕ್ಕ ಭಾಗ್ಯನ ಪಾತ್ರ. ಇದಕ್ಕೆ ಕಾರಣ ಈ ಪಾತ್ರ ನಿರ್ವಹಿಸುತ್ತಿರೋ ಜನಪ್ರಿಯ ನಟಿ ಸುಷ್ಮಾ ರಾವ್. ಈಕೆ ಹತ್ತು ವರ್ಷಗಳ ಹಿಂದೆ ಜನಪ್ರಿಯ ಕಿರುತೆರೆ ನಾಯಕಿಯಾಗಿ ಹೆಸರು ಮಾಡಿದವರು. ಆಮೇಲೆ ಆಂಕರಿಂಗ್(Anchoring) ಕಡೆ ಹೊರಳಿಕೊಂಡರು. ಇದೀಗ ಈ ಸೀರಿಯಲ್ ಮೂಲಕ ಕನ್ನಡ ಸೀರಿಯಲ್‌ಗೆ ಮರಳಿದ್ದಾರೆ. ಈ ಸೀರಿಯಲ್‌ನಲ್ಲಿ ಈಕೆಯ ನಟನೆಗೆ(Acting) ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಹಿಂದಿಯಲ್ಲೂ ಈ ಸೀರಿಯಲ್ ಜನ ನೋಡ್ತಾರೆ ಅನ್ನೋ ವಿಶ್ವಾಸ ಈ ಸೀರಿಯಲ್ ಟೀಮ್‌ಗಿದೆ.
ಹಣ, ಖ್ಯಾತಿ, ಹೆಸರು ಬಿಟ್ಟು ಹಿಜಾಬ್ ಆಯ್ಕೆಯ ಕಾರಣ ಬಿಚ್ಚಿಟ್ಟು ಕಣ್ಣೀರಾಕಿದ ನಟಿ ಸನಾ ಖಾನ್