Lakshana serial : ನೀನೆಷ್ಟು ಒಳ್ಳೇವ್ಳು ಖಾಲಿಡಬ್ಬಿ, ನಾ ನಿನ್ನ ಹತ್ರಕ್ಕೂ ಬರಲ್ಲ ಕಣೇ ಅಂತಿದ್ದಾನೆ ಭೂಪತಿ!

Published : Feb 16, 2023, 01:04 PM IST
Lakshana serial : ನೀನೆಷ್ಟು ಒಳ್ಳೇವ್ಳು ಖಾಲಿಡಬ್ಬಿ, ನಾ ನಿನ್ನ ಹತ್ರಕ್ಕೂ ಬರಲ್ಲ ಕಣೇ ಅಂತಿದ್ದಾನೆ ಭೂಪತಿ!

ಸಾರಾಂಶ

ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಬಗೆಗೆ ಗುಪ್ತವಾಗಿದ್ದ ಸಂಗತಿಗಳೆಲ್ಲ ಬಯಲಾಗಿವೆ. 'ನೀನೆಷ್ಟು ಒಳ್ಳೆಯವ್ಳು, ನಾ ನಿನ್ನ ಹತ್ರಕ್ಕೂ ಬರಲ್ಲ ಕಣೇ ಖಾಲಿಡಬ್ಬಿ ಅಂತಿದ್ದಾನೆ ಭೂಪತಿ. ನಕ್ಷತ್ರ ಇಲ್ಲೀವರೆಗೆ ಕಾದಿದ್ದ ಗಳಿಕೆ ಈಗ ಹತ್ರ ಬಂತಾ?

ಕಲರ್ಸ್ ಕನ್ನಡ ಚಾನಲ್‌ನಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್ ಲಕ್ಷಣ. ಇದೀಗ ದಿನಕ್ಕೊಂದು ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ವಿಭಿನ್ನ ಶೈಲಿಯ ಕತೆ ಈ ಸೀರಿಯಲ್‌ನ ಪ್ಲಸ್ ಪಾಯಿಂಟ್. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ಈಕೆ ಬಣ್ಣ ಕಪ್ಪು. ಬ್ಲ್ಯಾಕ್ ಈಸ್ ಬ್ಯೂಟಿಫುಲ್ ಅನ್ನೋದನ್ನು ಈ ಸೀರಿಯಲ್ ಮೂಲಕ ಹೇಳಲು ಹೊರಟಿದ್ದಾರೆ ಲಕ್ಷಣ ಸೀರಿಯಲ್ ಟೀಮ್. ಆಗರ್ಭ ಶ್ರೀಮಂತೆಯಾಗಿದ್ದರೂ ಬಡವರ ಮನೆಯಲ್ಲಿ ಅವಮಾನ ಅನುಭವಿಸುತ್ತಲೇ ಬೆಳೆದ ನಕ್ಷತ್ರಳಿಗೆ ಆಕೆಯ ನಿಜ ತಂದೆ ಚಂದ್ರಶೇಖರ್ ನೀಡಿದ ಗಿಫ್ಟ್ ಭೂಪತಿ. ಆದರೆ ಇದಕ್ಕಾಗಿ ಉದ್ಯಮಿ ಚಂದ್ರಶೇಖರ್ ಅವಾಂತರದ ಮೇಲೆ ಅವಾಂತರ ಮಾಡಬೇಕಾದ ಸ್ಥಿತಿ ಬರುತ್ತದೆ. ತಂದೆಯಾಗಿ ಅವರಂದುಕೊಂಡಿದ್ದು ಆರಂಭದಲ್ಲಿ ಉಲ್ಟಾ ಹೊಡೆಯುತ್ತದೆ. ಭೂಪತಿ ಮತ್ತವರ ಮನೆಯವರ ನಕ್ಷತ್ರ ಮತ್ತವಳ ತಂದೆ ಚಂದ್ರಶೇಖರ್ ಅವರ ಬದ್ಧ ದ್ವೇಷಿಗಳಾಗುತ್ತಾರೆ. ಆದರೆ ಈಗ ದ್ವೇಷದ ಕಾರ್ಮೋಡ ಸರಿದಿದೆ. ಬೆಳಕು ಮೂಡುತ್ತಿದೆ.

ಇದೀಗ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ ಒಳ್ಳೆಯವಳು ಎಂದು ಗೊತ್ತಾಗಿದೆ. ಮೌರ್ಯ ನಕ್ಷತ್ರಾ ಬಗ್ಗೆ ಭೂಪತಿಗೆ ಸತ್ಯ ಸಂಗತಿ ಹೇಳಿದ್ದಾನೆ. ಅದನ್ನು ಕೇಳಿ ಭೂಪತಿಗೆ ಶಾಕ್ ಆಗಿದೆ. ಆತ ತನ್ನ ಖಾಲಿಡಬ್ಬಿ ನಕ್ಷತ್ರ ಬಳಿ ಮನಃಪೂರ್ವಕವಾಗಿ ಮಂಡಿಯೂರಿ ಕ್ಷಮೆ ಕೇಳಿದ್ದಾನೆ.

ಇದಕ್ಕೆಲ್ಲ ಸಾಕ್ಷಿಯಾದದ್ದು ದೇವಸ್ಥಾನ. ತಾನು ನಂಬುವ ದೇವಸ್ಥಾನದ ಮುಂದೆಯೇ ಭೂಪತಿ ನಕ್ಷತ್ರ ಮುಂದೆ ಮಂಡಿಯೂರಿ ಕೂತಿದ್ದಾನೆ. ನೀನೆಷ್ಟು ಒಳ್ಳೆವ್ಳು ಖಾಲಿಡಬ್ಬಿ, ಒಳ್ಳೆತನದಲ್ಲಿ ನಾನಿನ್ನ ಹತ್ರಕ್ಕೂ ಬರಲ್ಲ ಕಣೇ, ನನ್ನನ್ನು ಕ್ಷಮಿಸು ನಕ್ಷತ್ರಾ. ನನ್ನಿಂದ ದೊಡ್ಡ ತಪ್ಪಾಯ್ತು ಎಂದೆಲ್ಲ ಮನಃಪೂರ್ವಕವಾಗಿ ಹೇಳಿ ಕ್ಷಮೆ ಕೇಳಿದ್ದಾನೆ.

Lakshna serial: ಆಯ್ತಲ್ಲಾ, ನಕ್ಷತ್ರಾ ಕಥೆ ಎಲ್ಲ ಭೂಪತಿಗೆ ಗೊತ್ತಾಯ್ತು, ಮುಂದ?

ಯಾವತ್ತಿನಂತೆ ತನ್ನ ವಾರಗಿತ್ತಿ ಜೊತೆ ದೇವಸ್ಥಾನಕ್ಕೆ ನಕ್ಷತ್ರಾ ಹೋಗಿದ್ದಾಳೆ. ಅಲ್ಲಿಗೆ ಭೂಪತಿ ಬಂದಿದ್ದಾನೆ. 'ನಕ್ಷತ್ರಾ ನೀನು ಮಾಡದ ತಪ್ಪಿಗೆ ನಾನು ಇಷ್ಟು ದಿನ ಶಿಕ್ಷೆ ಕೊಟ್ಟೆ. ನನ್ನ ಮದುವೆಯಾಗುವುದರಲ್ಲಿ ನಿನ್ನ ಪಾತ್ರ ಇರಲಿಲ್ಲ ಎಂದು ಗೊತ್ತಾಯ್ತು. ಮದುವೆ ದಿನ ನಾನು ನಿನಗೆ ತುಂಬಾ ಬೈದೆ. ನೀನು ಮತ್ತು ನಿಮ್ಮ ತಂದೆ ಡ್ರಾಮಾ (Drama) ಮಾಡ್ತೀರಿ ಎಂದುಕೊಂಡೆ. ಅವತ್ತಿನ ಪರಿಸ್ಥಿತಿಗೆ ನನಗೆ ಏನೂ ಗೊತ್ತಾಗಲಿಲ್ಲ' ಎನ್ನುತ್ತಲೇ, 'ನನ್ನನ್ನು ಕ್ಷಮಿಸು ನಕ್ಷತ್ರಾ. ನನ್ನಿಂದ ದೊಡ್ಡ ತಪ್ಪಾಯ್ತು' ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ನಕ್ಷತ್ರಾ ಕೊನೆಗೆ ಸತ್ಯ(Truth) ಗೊತ್ತಾಯ್ತು ಎಂದು ಖುಷಿ ಆಗಿದ್ದಾಳೆ. ತಾನಿಷ್ಟು ಕಾಲ ಕಾಯುತ್ತಿದ್ದ ಗಳಿಗೆ ಇದೀಗ ಬಂದಿದೆ, ತಾನು ಬಯಸಿದ್ದ ರಾಜಕುಮಾರ ತನಗೆ ಸಿಗುತ್ತಿದ್ದಾನೆ ಅಂತ ಆಕೆ ಖುಷಿಯಲ್ಲಿದ್ದಾಳೆ.

ಇನ್ನೊಂದು ಕಡೆ ವಿಲನ್ ಗಳಿಬ್ಬರ ನಡುವೆ ಫೈಟಿಂಗ್(Fight) ಶುರುವಾಗಿದೆ. ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿ ಶಾಕ್(Shock) ಆಗಿದ್ದಾಳೆ. ಇಷ್ಟು ದಿನ ಈ ಡೆವಿಲ್ ಶ್ವೇತಾಳನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದು ಶ್ವೇತಾಗೆ ಗೊತ್ತಾಗಿದೆ. ಅದಕ್ಕೆ ಇಷ್ಟು ದಿನ ನನ್ನ ದಾಳವಾಗಿ ಮಾಡಿಕೊಂಡಿದ್ದೆ. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ. ಶ್ವೇತಾ ವಿಡಿಯೋ ಇಟ್ಟುಕೊಂಡು ಡೆವಿಲ್‍ಗೆ ಆಟವಾಡಿಸುತ್ತಿದ್ದಾಳೆ. ಬೇರೆ ಬೇರೆ ಲೋಕೇಶನ್(Location) ಕಳಿಸಿ ಬಾ, ಬಾ ಎನ್ನುತ್ತಿದ್ದಾಳೆ. ಆಕೆ ಒಂದು ಸ್ಥಳಕ್ಕೆ ಹೋದ್ರೆ, ಅಲ್ಲಿಗೆ ಬೇಡ. ಬೇರೆ ಕಡೆ ಬಾ ಎನ್ನುತ್ತಿದ್ದಾಳೆ. ಇದರಿಂದ ಡೆವಿಲ್ ಭಾರ್ಗವಿಗೆ ಕೋಪ ಬಂದಿದೆ. ಇದೇ ರೀತಿ ಮಾಡಿದ್ರೆ ನಿನ್ನ ಸುಮ್ನೆ ಬಿಡಲ್ಲ. ನಿನ್ನ ಕಥೆ ಮುಗಿಸುತ್ತೇನೆ ಎನ್ನುತ್ತಿದ್ದಾಳೆ. ಆದ್ರೆ ಶ್ವೇತಾ ಯಾವುದಕ್ಕೂ ಭಯ ಪಡ್ತಾ ಇಲ್ಲ.

 

ಕ್ಷಣ ಕ್ಷಣಕ್ಕೂ ಇಂಟರೆಸ್ಟಿಂಗ್ ಆಗಿ ಸಾಗ್ತಿರೋ ಈ ಸೀರಿಯಲ್‌ನಲ್ಲಿ(Serial) ಜಗನ್, ವಿಜಯಲಕ್ಷ್ಮೀ, ಸುಕೃತಾ ಮೊದಲಾದವರು ನಟಿಸುತ್ತಿದ್ದಾರೆ. ದಿನೇ ದಿನೇ ಈ ಸೀರಿಯಲ್ ಕುತೂಹಲ ಹೆಚ್ಚಿಸುತ್ತಿದೆ.

Jothe jotheyali : ಅನು ಪ್ರೆಗ್ನೆಂಟ್ ಆಗಿ ಅಷ್ಟು ಟೈಮಾಯ್ತು, ಯಾಕಿನ್ನೂ ಹೊಟ್ಟೆನೇ ಬಂದಿಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!