ರೌಡಿಗಳ ಮಟ್ಟಹಾಕಲು ಬಂದ ಬುಲ್ಡೋಜರ್​ ಬೇಬಿ! ಮುಂದಿನ ಸಿಎಂ ನೀವೇ ಎಂದ ನೆಟ್ಟಿಗರು...

Published : Apr 25, 2025, 06:02 PM ISTUpdated : Apr 26, 2025, 07:04 AM IST
ರೌಡಿಗಳ ಮಟ್ಟಹಾಕಲು ಬಂದ ಬುಲ್ಡೋಜರ್​ ಬೇಬಿ! ಮುಂದಿನ ಸಿಎಂ ನೀವೇ ಎಂದ ನೆಟ್ಟಿಗರು...

ಸಾರಾಂಶ

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್, ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪತಿ ಶಿವು ಮೇಲೆ ಪ್ರೀತಿಯುಂಟಾದರೂ, ಆತನಿಗೆ ತಿಳಿಯುತ್ತಿಲ್ಲ. ಆಸ್ತಿ ವಿಷಯದಲ್ಲಿ ಪಾರು ತಂದೆ ಮಾಡಿದ ಸಂಚನ್ನು ತಡೆಯಲು ಹೋದ ಶಿವು ಮೇಲೆ ರೌಡಿಗಳು ದಾಳಿ ಮಾಡಿದಾಗ, ಪಾರು ಬುಲ್ಡೋಜರ್ ಚಲಾಯಿಸಿ ರಕ್ಷಿಸುತ್ತಾಳೆ. ಈ ದೃಶ್ಯ ವೈರಲ್ ಆಗಿದ್ದು, ನಿಶಾ 'ಬುಲ್ಡೋಜರ್ ಬೇಬಿ' ಎಂದೇ ಖ್ಯಾತರಾಗಿದ್ದಾರೆ.

ಬೇಬಿ ರೌಡಿ ಎಂದೇ ಫೇಮಸ್​ ಆಗಿದ್ದ ನಟಿ ಗಟ್ಟಿಮೇಳದ ಸೀರಿಯಲ್​ ಅಮೂಲ್ಯ ಆಗಿದ್ದ ನಟಿ ನಿಶಾ ರವಿಕೃಷ್ಣನ್. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ನಲ್ಲಿ ಈಕೆ ಪಾರು. ಇಲ್ಲಿಯೂ ಖಡಕ್​ ರೋಲ್​ ಈಕೆಯದ್ದು.  ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಅಣ್ಣಯ್ಯದಲ್ಲಿ ನಾಯಕಿಯಾಗಿದ್ದಾಳೆ ಪಾರು. ಬೇರೊಬ್ಬರನ್ನು ಪ್ರೀತಿಸುವ ನಾಯಕಿಯನ್ನು ಅನಿವಾರ್ಯ ಕಾರಣಗಳಿಂದ ಮದುವೆಯಾಗುವ ನಾಯಕ ಈ ಅಣ್ಣಯ್ಯ. ಪತ್ನಿಗೆ ಆಕೆಯ ಲವರ್​ ಜೊತೆ ಸೇರಿಸುವುದು ಇವನ ಉದ್ದೇಶ, ಆದರೆ ಎಲ್ಲರ ಕಣ್ಣಿಗೆ ಮಾತ್ರ ಇವರು ಆದರ್ಶ ದಂಪತಿ. ಆದರೆ ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ. ಈ ದಂಪತಿ ಒಂದಾಗ್ತಾರಾ ಅಥ್ವಾ ನಾಯಕಿ ಲವರ್​ ಜೊತೆ ಹೋಗ್ತಾಳಾ ಎಂದೆಲ್ಲಾ ಪ್ರಶ್ನೆಗಳನ್ನು ಹೊತ್ತು ಸಾಗಿದ್ದ ಅಣ್ಣಯ್ಯ ಸೀರಿಯಲ್​ಗೆ ಈಗ ಟ್ವಿಸ್ಟ್​ ಬಂದಿದೆ.

ಲವರ್​ ಸಲುವಾಗಿ ಪತಿಯಿಂದ ದೂರ ಇದ್ದಳು ಪಾರು. ಆತ ಕೂಡ ಲವರ್​ ಜೊತೆ  ಪತ್ನಿಯನ್ನು ಸೇರಿಸುವ ತವಕದಲ್ಲಿಯೇ ಇದ್ದ. ಆದರೆ ಇದೀಗ ಪಾರುಗೆ ಗಂಡನ ಮೇಲೆ ಲವ್​ ಹುಟ್ಟಿದೆ. ಬಹುತೇಕ ಸೀರಿಯಲ್​ಗಳಂತೆ, ಇಲ್ಲಿಯೂ ಮದ್ವೆಯಾದರೂ ಗಂಡ-ಹೆಂಡತಿ ದೈಹಿಕವಾಗಿ ಬೇರೆ ಬೇರೆಯಾಗಿದ್ದಾರೆ. ಇದೀಗ ನಾಯಕಿ ಪಾರುಗೆ, ನಾಯಕ ಅರ್ಥಾತ್​ ಗಂಡ ಶಿವು ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಆದರೆ ಶಿವುಗೆ ಇದು ಗೊತ್ತಾಗ್ತಿಲ್ಲ. ಇಲ್ಲಿಯೂ ಪಾರು ಅದೇನೋ ಮೇಲೆ ತೆಗೆಯಲು ಹೋಗಿ ಬಿದ್ದಿದ್ದಾಳೆ. ಶಿವು ಬಂದು ಹಿಡಿದಿದ್ದಾನೆ. ಅಲ್ಲಿಯೇ ಇರೋ ಮಂಚದ ಮೇಲೆ ಇಬ್ಬರೂ ಬಿದ್ದಿದ್ದಾರೆ.  ಅಲ್ಲಿಯೇ  ಲವ್​ ಶುರುವಾಗಿದೆ. ಆದರೂ ಶಿವುಗೆ ಪತ್ನಿ ತನ್ನನ್ನು ಲವ್​ ಮಾಡುವ ವಿಷ್ಯ ಗೊತ್ತೇ ಆಗುತ್ತಿಲ್ಲ.

ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್​​ ಪಾರುಗೆ ಇದೆಂಥ ಅವಸ್ಥೆ?

ಇದೀಗ, ಆಸ್ತಿ ವಿಷಯದಲ್ಲಿ ಪಾರು ಅಪ್ಪ ಕೆಲವರನ್ನು ಮುಗಿಸುವ ಸಂಚು ರೂಪಿಸಿದ್ದಾನೆ. ಇದು ಮಗಳು ಪಾರುಗೆ ತಿಳಿದಿದೆ. ಅಪ್ಪ ಮೊದಲಿನಿಂದಲೂ ತನ್ನ ಮಾವ ಅಂದ್ರೆ ಗಂಡನ ಮೃದು ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಆಸ್ತಿಯನ್ನು ಲಪಟಾಯಿಸುತ್ತಿದ್ದಾನೆ ಎಂದು ತಿಳಿದಿರುವುದರಿಂದ ಆತನ ರಕ್ಷಣೆ ಮಾಡುತ್ತಲೇ ಬಂದಿದ್ದಾಳೆ. ಇದೀಗ ಇದೇ  ಆಸ್ತಿ ವಿಷಯದಲ್ಲಿ ಕೆಲವರನ್ನು ಇವಳ ಅಪ್ಪನ ಕಡೆಯವರು ಸಾಯಿಸಲು ಮುಂದಾದಾಗ, ಅಣ್ಣಯ್ಯ ತಡೆಯಲು ಹೋಗಿದ್ದಾನೆ. ಆಗ ರೌಡಿಗಳು ಅವನ ಮೇಲೆ ಅಟ್ಯಾಕ್​ ಮಾಡಿದ್ದಾರೆ.


ಆಗಲೇ ಬಂದಿದ್ದಾಳೆ ಬುಲ್ಡೋಜರ್​ ಬೇಬಿ! ಹೌದು. ಪಾರು ಬುಲ್ಡೋಜರ್​ ಏರಿ ಬಂದಿದ್ದು ರೌಡಿಗಳ ಸದೆ ಬಡಿಯಲು ಮುಂದಾಗಿದ್ದಾಳೆ. ಇದನ್ನು ನೋಡಿ ರೌಡಿಗಳು ಸುಸ್ತಾಗಿದ್ದಾರೆ. ಅ ಷ್ಟಕ್ಕೂ ಸೀರಿಯಲ್​ಗಳಲ್ಲಿ ಏನು ಬೇಕಾದರೂ ಆಗುತ್ತದೆ ಬಿಡಿ. ಯಾರು ಏನು ಬೇಕಾದರೂ ಚಲಾಯಿಸಲು, ಹೇಗೆ ಬೇಕಾದರೂ, ಯಾವ ಅವತಾರದಲ್ಲಿ ಬೇಕಾದರೂ ಬರಲು ಸಾಧ್ಯ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ನಿರ್ದೇಶಕರು ನಾಯಕಿಯರನ್ನು ವಿಭಿನ್ನ ರೀತಿಯಲ್ಲಿ ತೋರಿಸಿದ್ದು, ಬಲ್ಡೋಜರ್​ ಕಾನ್ಸೆಪ್ಟ್​ ತಂದಿದ್ದಾರೆ. ಅಷ್ಟಕ್ಕೂ ರೌಡಿಗಳ ಮನೆಯನ್ನು ನೆಲಸಮ ಮಾಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬುಲ್ಡೋಜರ್​ ಬಾಬಾ ಎಂದೇ ಜನರು ಕರೆಯುವುದು ಉಂಟು. ಇದೀಗ ನಟಿಯನ್ನು ಬುಲ್ಡೋಜರ್​ ಬೇಬಿ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. 

ಎಂಟು ಮದುವೆಯಾದ ಕಿರುತೆರೆ ಅಣ್ಣಯ್ಯ ನಟಿ ನಿಶಾ ರವಿಕೃಷ್ಣನ್​! ಈಕೆಯ ಸ್ಟೋರಿ ಕೇಳಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್