ಗಂಡನ ಆ ಆಡಿಯೋ ಕೇಳಿ ಕುಸಿದು ಬಿದ್ದೆ; ಡಿವೋರ್ಸ್ ಸತ್ಯ ಬಿಚ್ಚಿಟ್ಟ ನಿರೂಪಕಿ ಜಾನವಿ

Published : Dec 31, 2024, 12:33 PM IST
ಗಂಡನ ಆ ಆಡಿಯೋ ಕೇಳಿ ಕುಸಿದು ಬಿದ್ದೆ; ಡಿವೋರ್ಸ್ ಸತ್ಯ ಬಿಚ್ಚಿಟ್ಟ ನಿರೂಪಕಿ ಜಾನವಿ

ಸಾರಾಂಶ

ಜನಪ್ರಿಯ ನಿರೂಪಕಿ ಜಾನವಿ ಆರ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಎರಡು ವರ್ಷಗಳ ಕಾನೂನು ಹೋರಾಟದ ನಂತರ ವಿಚ್ಛೇದನ ದೊರೆತಿದೆ. ಮಹಿಳೆಯರು ಧೈರ್ಯದಿಂದ ಜೀವನ ಎದುರಿಸಬೇಕೆಂದು ಜಾನವಿ ಸ್ಫೂರ್ತಿ ತುಂಬಿದ್ದಾರೆ. ಅವರು ಕೌಟುಂಬಿಕ ಹಿಂಸೆ ಸಹಿಸಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಿಂದ ವಿಚ್ಛೇದನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಹಾಗೂ ಗಿಚ್ಚಿ ಗಿಲಿಗಿಲಿ ಸ್ಪರ್ಧಿ ಜಾನವಿ ಆರ್‌ ಇತ್ತೀಚಿಗೆ ಡಿವೋರ್ಸ್ ಪಡೆದಿದ್ದಾರೆ. ಸುಮಾರು 2 ವರ್ಷಗಳಿಂದ ಕೇಸ್ ನಡೆಯುತ್ತಿದ್ದು ನಾನಾ ಕಾರಣಗಳಿಂದ ಮುಂದೂಡುತ್ತಿತ್ತು. ತಮ್ಮ ಫಾಲೋವರ್ಸ್ ತಮ್ಮ ಅಭಿಮಾನಿಗಳಿಗೆ ಪ್ರತಿಯೊಂದು ಗೊತ್ತಿರಬೇಕು ಅಲ್ಲದೆ ಹೆಣ್ಣು ಮಕ್ಕಳು ಜೀವನದಲ್ಲಿ ಧೈರ್ಯ ಕಳೆದುಕೊಳ್ಳಬಾರದು ಗಟ್ಟಿಯಾಗಿ ಎದುರಿಸಬೇಕು ಎಂಬ ಕಾರಣ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಜಾನವಿ ಹಂಚಿಕೊಂಡಿದ್ದಾರೆ 

'ಸುಮಾರು 12 ವರ್ಷಗಳಿಂದ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದೀನಿ ಆಗ ಅದೆಷ್ಟೋ ಸಿನಿಮಾಗಳು ಮತ್ತು ಸೀರಿಯಲ್‌ಗಳಿಗೆ ಆಫರ್ ಬಂತು. ಸ್ಕ್ರೀನ್ ಟೆಸ್ಟ್‌ ಕೊಟ್ಟು ಆಯ್ಕೆ ಆದ ಮೇಲೆ ಬೇಡ ಅಂದ್ರು ಅಂತ ರಿಜೆಕ್ಟ್ ಮಾಡಿದ್ದೀನಿ, ಇದು ಫ್ಯಾಮಿಲಿಗೆ ನಾನು ಮಾಡಿರುವ ತ್ಯಾಗ. ನಟಿಸಬೇಕು ಅನ್ನೋದು ನನ್ನ ಕನಸು, ನನ್ನ ಅತ್ತೆ ಕೂಡ ನನಗೆ ಸಪೋರ್ಟ್ ಮಾಡುತ್ತಿದ್ದರು ಆದರೆ ಮನೆಯಲ್ಲಿ ಬೇಡ ಎನ್ನುತ್ತಿದ್ದರು. ಎಷ್ಟೇ ಆಫರ್ ಬಂದರು ಬೇಡ ಮನೆಯಲ್ಲಿ ಬಿಡಲ್ಲ ಅಂತ ಫೋನ್‌ನಲ್ಲಿ ಹೇಳುತ್ತಿದ್ದೆ. ನನ್ನಮ್ಮ ಸೂಪರ್ ಸ್ಟಾರ್ ಆಫರ್ ಬಂದಾಗ ಬೇರೆ ಫ್ಯಾಮಿಲಿಗಳು ಬರುತ್ತೆ ಅಲ್ಲದೆ ಮಗ ಜೊತೆಗಿರುತ್ತಾನೆ ಅಂತ ಒಪ್ಪಿಕೊಂಡೆ. ರಾಜಾ ರಾಣಿ ಶೋಗೆ ಕರೆದರು ಆಗ ಬೇಡ ಅಂತ ಬಿಡ್ವಿ. ಗಿಚ್ಚಿ ಗಿಲಿಗಿಲಿ ಶೋ ನಡೆಯಿತ್ತು, ಆ ಒಂದು ಶೋಯಿಂದ ನಾನು ಗಂಡ ಬಿಟ್ಟೆ ಅನ್ನೋದು ಸುಳ್ಳು ಸರ್' ಎಂದು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜಾನವಿ ಮಾತನಾಡಿದ್ದಾರೆ.

ಇತ್ತೀಚಿಗೆ ಡಿವೋರ್ಸ್ ಆಗಿದ್ದು, ಗಂಡ ಸತ್ತರೂ ಹೆಣ್ಣು ಒಂಟಿನೇ: ಜಾನವಿ ಹೇಳಿಕೆ ವೈರಲ್

'ಒಂದು ದಿನ ಅಕ್ಷಯ ಸ್ಟುಡಿಯೋದಲ್ಲಿ ನಾನು ಗಣೇಶ ಉತ್ಸವಕ್ಕೆ ಎಂದು ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದೆ ಆಗ ಒಂದು ಫೋನ್ ಕಾಲ್ ಬಂತ್ತು. ಈ ರೀತಿ ಆಡಿಯೋ ಇದೆ ವೈರಲ್ ಆಗುತ್ತಿದೆ ಅಂದ್ರು ನಾನು ಚಾನ್ಸೇ ಇಲ್ಲ ಸುಳ್ಳು ಎಂದು ಹೇಳಿ ಕಟ್ ಮಾಡಿದೆ. ಸ್ವಲ್ಪ ಸಮಯದ ನಂತರ ಮೊಬೈಲ್ ಓಪನ್ ಮಾಡಿ ನೋಡಿದೆ ಫುಲ್ ಶಾಕ್ ಆದೆ, ಕೈ ಕಾಲು ನಡುಗಿತ್ತು. 8 ವರ್ಷಗಳ ಕಾಲ ತುಂಬಾ ಸಹಿಸಿಕೊಂಡಿದ್ದೀನಿ, ಒಮ್ಮೊಮ್ಮೆ ಬಾಗಲು ತೆಗೆಯುತ್ತಿರಲಿಲ್ಲ ಅಲ್ಲೇ ಮಲ್ಕೊಂಡಿದ್ದೀನಿ, ರೂಮ್ ಬಾಗಲು ತೆಗೆಯುತ್ತಿರಲಿಲ್ಲ ಅಲ್ಲೇ ಬಟ್ಟೆ ಇರುತ್ತಿತ್ತು ಆಗ ಸ್ಟುಡಿಯೋಗೆ ಹೋಗೆ ಸರ್ಕಸ್ ಮಾಡಿದ್ದೀನಿ, ಕೆಲವೊಂದು ಸಲ ಸ್ಟುಡಿಯೋದಲ್ಲಿ ಮಲ್ಕೊಂಡಿದ್ದೀನಿ...ಸುಮಾರು ಬೈಗುಳಗಳು ತಿಂದಿದ್ದೀನಿ ಕೆಲವೊಮ್ಮೆ ಹೊಡೆಸಿಕೊಂಡಿದ್ದೀನಿ. ಒಂದು ಸಲ ಮಾತಿಗೆ ಮಾತು ಬೆಳೆಯಿತ್ತು ಆಗ ಜೋರಾಗಿ ನನ್ನ ತಲೆಗೆ ಹೊಡೆದರು, ಹೇಗೆ ಅಂದ್ರೆ ತಲೆ ಮತ್ತು ಕಣ್ಣು ಕೆಳಭಾಗದಲ್ಲಿ ನರ ಕನೆಕ್ಟ್‌ ಆಗಿರುತ್ತದೆ ಅಲ್ಲಿ ಫುಲ್ ಕಪ್ಪು ಆಗಿತ್ತು ಆಗ ಮೇಕಪ್ ಹಚ್ಚಿಕೊಂಡು ನ್ಯೂಸ್ ಓದಿದ್ದೀನಿ. ಸಹಿಸಿಕೊಳ್ಳಬೇಕು ಅದು ಬಿಟ್ರೆ ಬೇರೆ ಏನೂ ಇಲ್ಲ ಅಂತ. ಎರಡು ವಿಭಿನ್ನ ವ್ಯಕ್ತಿತ್ವದವರು ಒಂದಾಗಿರಲು ಸಾಧ್ಯವಿಲ್ಲ. ನನ್ನ ಹೊಡೆದಿರುವುದೆಲ್ಲಾ ನನ್ನ ಫ್ಯಾಮಿಲಿ ಗೊತ್ತೇ ಇಲ್ಲ ಈಗ ಗೊತ್ತಾಗುತ್ತಿದೆ' ಎಂದು ಜಾನವಿ ಆರ್ ಹೇಳಿದ್ದಾರೆ. 

ಹೊಟ್ಟೆಗೆ ಏನ್ ತಿಂತೀರಾ ಇಷ್ಟು ಚೆನ್ನಾಗಿದ್ದೀರಾ; 'ಸವಿರುಚಿ' ನಿರೂಪಕಿ ಕಾಲೆಳೆದ ಪಡ್ಡೆ ಹುಡುಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?