ವೇಟ್​ ಮಾಡ್ತಾ ಇದ್ದೀನಿ ಎನ್ನುತ್ತಲೇ ಅಭಿಮಾನಿಗಳ​ ತಲೆಗೆ ಹುಳು ಬಿಟ್ಟ ಆ್ಯಂಕರ್​ ಅನುಶ್ರೀ...

By Suchethana D  |  First Published May 31, 2024, 9:55 PM IST

ಆ್ಯಂಕರ್​ ಅನುಶ್ರೀ ಹೊಸ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡು ಅದಕ್ಕೆ ವೇಟಿಂಗ್ ಎನ್ನೋ ಕ್ಯಾಪ್ಷನ್​​  ನೀಡಿ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ವಿಡಿಯೋದಲ್ಲಿ ಏನಿದೆ?
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಇದಕ್ಕಾಗಿಯೇ ಅನುಶ್ರೀಯವರಿಗೆ ಇನ್ನಿಲ್ಲದ ಡಿಮಾಂಡ್​​. ಇದೀಗ ಕಪ್ಪು ಬಣ್ಣದ ಡ್ರೆಸ್​ನಲ್ಲಿ ವ್ಯಾನಿಟಿ ವ್ಯಾನಿನಿಂದ ಹೊರಬರುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿರುವ ಅನುಶ್ರೀ ಅವರು ವೇಟ್​ ಫಾರ್​ ಇಟ್​ ಎಂದು ಕ್ಯಾಪ್ಷನ್​ ನೀಡಿದ್ದಾರೆ. ನಟಿ ಯಾರಿಗೆ ವೇಟ್​ ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ ಎಂಬುದನ್ನು ಸಸ್ಪೆನ್ಸ್​ನಲ್ಲಿ ಇಟ್ಟಿದ್ದಾರೆ. ಇದಕ್ಕಾಗಿ ಇವರ ಅಭಿಮಾನಿಗಳು ಥಹರೇವಾರಿ ಕಮೆಂಟ್ಸ್​ಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಇದರಲ್ಲಿ ಹಲವರಿಗೆ ಅನುಶ್ರೀಯವರ ಮದುವೆಯದ್ದೇ ಚಿಂತೆ.

Latest Videos

undefined

ಕರಿಮಣಿ ಮಾಲೀಕ ನೀನಲ್ಲ ಎಂದ ಅನುಶ್ರೀ... ಇನ್ನು ಫ್ಯಾನ್ಸ್​ ಕೇಳ್ಬೇಕಾ? ಏನೆಲ್ಲಾ ಹೇಳಿದ್ರು ನೋಡಿ...

 ಅನುಶ್ರೀ ಅವರಿಗೆ ಇಂದು ಅಂದರೆ ಜನವರಿ 25 ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಕಳೆದ ಜನವರಿಯಲ್ಲಿ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.
 

ಅನುಶ್ರೀ ಅವರು ಎಷ್ಟು ಫೇಮಸ್ಸೋ ಕೆಲವೊಮ್ಮೆ ಇವರನ್ನು ಟ್ರೋಲ್​ ಮಾಡುವವರೂ ಇದ್ದಾರೆ. ಕೆಲ ದಿನಗಳ ಹಿಂದೆ ನೇರ ಪ್ರಸಾರದಲ್ಲಿ ಇವರು, ತಮ್ಮ ವಿರುದ್ಧ ಕೆಲವರು ಮಾಡುವ ಟೀಕೆಗಳ ಕುರಿತು ನೋವು ತೋಡಿಕೊಂಡಿದ್ದರು. ಅವರ ಅಭಿಮಾನಿಯೊಬ್ಬರು ಖುಷಿಯಾಗಿರಿ ಎಂದು ಹೇಳಿದಾಗ, ಇಂಥ ಮಾತು ಹೇಳುವವರೇ ತುಂಬಾ ಅಪರೂಪ ಎನ್ನುತ್ತಾ ಮನದಾಳದ ಮಾತು ಬಿಚ್ಚಿಟ್ಟಿದ್ದರು. ಖುಷಿಯಾಗಿದ್ದರೆ ಓವರ್​ ಆ್ಯಕ್ಟಿಂಗ್​ ಅಂತೀರಿ, ಸ್ವಲ್ಪ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದರೆ ಅದಕ್ಕೂ ಓವರ್ ಆ್ಯಕ್ಟಿಂಗ್​ ಅಂತೀರಿ, ಏನನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಅದಕ್ಕೂ ಹಾಗೆಯೇ ಹೇಳುತ್ತೀರಿ... ಸಾಧನೆಯನ್ನು ಹೊಗಳಿದರೆ ಬಕೆಟ್​ ಅಂತೀರಿ.  ಒಂದೊಂದು ಭಾವನೆಗೂ ಒಂದೊಂದು ಹೆಸರು ಕೊಡ್ತೀರಾ ಎಂದು ನೋವು ತೋಡಿಕೊಂಡರು. ಇದೇ ವೇಳೆ ಇರಲಿ ಬಿಡಿ... ಹತ್ತು ಜನರು ಹೀಗೆಲ್ಲಾ ಹೇಳಿದ್ರೂ,  ಕೋಟ್ಯಂತರ ಮಂದಿ ಹರಸುವವರು ಇದ್ದಾರೆ. ಅವರ ಹೊಟ್ಟೆ ತಣ್ಣಗಾಗಿರಲಿ ಎಂದಿದ್ದಾರೆ. ಇದೇ ವೇಳೆ  ಯಾರನ್ನೂ ಹೇಟ್​ ಮಾಡಬೇಡಿ. ಯಾರಾದ್ರೂ ಇಷ್ಟ ಆಗಿಲ್ಲ ಅಂದ್ರೆ ಅವರ ಬಗ್ಗೆ ಏನೂ ಹೇಳಲೇಬೇಡಿ. ಹೊಗಳಲು ಆಗಿಲ್ಲ ಎಂದ್ರೆ  ಕೆಟ್ಟದ್ದನ್ನು ಹೇಳಬೇಡಿ ಎಂದಿದ್ದರು. ಆದರೆ ಈಗ ಮಾತ್ರ ಯಾವುದಕ್ಕೆ ವೇಟ್​ ಎಂದು ಹೇಳಲಿಲ್ಲ. 

ಖುಷಿಯಾಗಿದ್ರೆ ಓವರ್​ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್​ ಅಂತೀರಾ: ಆ್ಯಂಕರ್​ ಅನುಶ್ರೀ ಬೇಸರ

click me!