ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...

By Suchethana D  |  First Published Jun 1, 2024, 10:48 AM IST

ಸೀತಾರಾಮ ಸಿಹಿಯ ಆ್ಯಕ್ಟಿಂಗ್​ ಕಂಡು ಭೇಷ್​ ಭೇಷ್​ ಅಂತಿದ್ದೋರು ಯಾಕೋ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು?
 


ಸೀತಾರಾಮ ಸೀರಿಯಲ್​ ಜನರಿಗೆ ಇಷ್ಟವಾಗಲು ನಾನು ಕಾರಣಗಳು ಇರಬಹುದು. ಆದರೆ ಬಹುತೇಕ ಮಂದಿಗೆ ಈ ಧಾರಾವಾಹಿ ಇಷ್ಟವಾಗಲು ಕಾರಣ ಪುಟಾಣಿ ಸಿಹಿ. ಮೊದಲಿನಿಂದಲೂ ಈಕೆಯ ಆ್ಯಕ್ಟಿಂಗ್​ಗೆ ಮನಸೋಲದವರೇ ಇಲ್ಲ. ಸೋಷಿಯಲ್​ ಮೀಡಿಯಾಗಳಲ್ಲಿ ಈಕೆಯನ್ನು ಹಾಡಿ ಕೊಂಡಾಡುವವರೇ ಹೆಚ್ಚು.   ಐದು ವರ್ಷದ ಹೊಸ್ತಿಲಿನಲ್ಲಿಯೇ  ತನ್ನ  ಪಾತ್ರವನ್ನು ಅರಿತು ಅದರಂತೆ ನಡೆದುಕೊಂಡ ಸಿಹಿಯನ್ನು ಕಂಡು ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಪುಟಾಣಿ. ಅದರಲ್ಲಿಯೂ ರಾಮ್​ನನ್ನು ಆಸ್ಪತ್ರೆಗೆ ಸೇರಿಸಿದ ಸನ್ನಿವೇಶದಲ್ಲಿ ಸಿಹಿ ಪಟ್ಟ ಪರಿಪಾಟಲು ನೋಡಿ ಕಣ್ಣೀರು ಹಾಕಿದವರೇ ಹೆಚ್ಚು. ಈಕೆಯ ಅಭಿನಯವನ್ನು ಕಂಡು ಭೇಷ್​ ಭೇಷ್​ ಎಂದವರೇ ಹೆಚ್ಚು.

ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತಾಗಿದೆ ಸಿಹಿಯ ಪಾತ್ರ ಎನ್ನುವುದು ಈಗ ಸೀರಿಯಲ್​ ಫ್ಯಾನ್ಸ್​ ಗಂಭೀರ ಆರೋಪ. ಇಂದಿನ ಹಲವು ಮಕ್ಕಳಿಗೆ ವಯಸ್ಸಿಗಿಂತಲೂ ಹೆಚ್ಚು ಮೆಚ್ಯುರಿಟಿ ಇರುತ್ತದೆ ಎನ್ನುವುದು ನಿಜವಾದರೂ ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಮಕ್ಕಳಲ್ಲಿನ ಮುಗ್ಧತೆಯನ್ನು ಕಸಿದುಕೊಳ್ಳುವ ರೀತಿಯಲ್ಲಿ ತೋರಿಸಲಾಗುತ್ತಿದೆ, ಮಕ್ಕಳಿಗೆ ಸಾಮಾನ್ಯವಾಗಿ ಅರ್ಥವೇ ಆಗದಿರುವ ವಿಷಯಗಳಲ್ಲಿಯೂ ಸಿಹಿ ಪಾತ್ರವನ್ನು ಉದ್ದೇಶಪೂರ್ವಕವಾಗಿ ಟಿಆರ್​ಪಿಗೋಸ್ಕರ್​ ತೂರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿಹಿ ಎಲ್ಲದ್ದಕ್ಕೂ ಮೂಗು ತೂರಿಸುವಂತೆಯೇ ನಿರ್ದೇಶಕರು ತೋರಿಸುತ್ತಿದ್ದು, ಇದ್ಯಾಕೋ ಅತಿಯಾಗುತ್ತಿದೆ ಎಂದು ಬಹುದೊಡ್ಡ ವರ್ಗದ ನೆಟ್ಟಿಗರು ಸೋಷಿಯಲ್​ ಮೀಡಿಯಾಗಳಲ್ಲಿ ಕಮೆಂಟ್​ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ.

Tap to resize

Latest Videos

ಪತಿಗೆ ಈ ಪರಿ ಟಾರ್ಚರ್​ ಕೊಡ್ತಾರಾ ಶುಭಾ ಪೂಂಜಾ? ಬಿಗ್​ಬಾಸ್​ಗೆ ಮತ್ತೆ ಆಫರ್​ ಬಂದ್ರೆ ಹೀಗಾಗತ್ತಂತೆ!

ಇದೀಗ ಸೀತಾಳನ್ನು ರಾಮ್​ ಚಿಕ್ಕಮ್ಮ ಇನ್​ಸಲ್ಟ್​ ಮಾಡಿದ್ದನ್ನು ಸಿಹಿ ಕೇಳಿಸಿಕೊಂಡಿದ್ದಾಳೆ. ಆದರೆ ರಾಮ್​  ಏನೂ ಹೇಳಿಲ್ಲ ಎನ್ನುವುದಕ್ಕೆ ಸಿಹಿಗೆ ಕೋಪ ಬಂದಿದೆ. ರಾಮ್​ನ ಕಾಲ್​ ತೆಗೆದುಕೊಳ್ಳುತ್ತಿಲ್ಲ. ಅಮ್ಮನಿಗೆ ಯಾರಾದರೂ ಬೈದರೆ ಮಕ್ಕಳಿಗೆ ಕೋಪ ಬರುವುದು ಸಹಜವೇ. ಆದ್ದರಿಂದ ಇಲ್ಲಿ ಸಿಹಿ ರಾಮ್​ ಮೇಲೆ ಕೋಪ ಮಾಡಿಕೊಳ್ಳುತ್ತಿರುವುದೂ ಸಹಜವೇ. ಈ ಪಾತ್ರವನ್ನೂ ಸಿಹಿ ಚೆನ್ನಾಗಿಯೇ ನಿಭಾಯಿಸಿದ್ದಾಳೆ. ಮಕ್ಕಳಿಗೆ ಕೋಪ ಬಂದರೆ ಹೇಗೆ ರಿಯಾಕ್ಟ್​  ಮಾಡುತ್ತಾರೋ ಅದೇ ರೀತಿ ಆ್ಯಕ್ಟಿಂಗ್​ ಮಾಡಿದ್ದಾಳೆ. ಆದರೆ ಇತ್ತೀಚಿನ ಕೆಲವು ಎಪಿಸೋಡ್​ಗಳನ್ನು ಉಲ್ಲೇಖಿಸಿರುವ ನೆಟ್ಟಿಗರು ಸಿಹಿಯ ಪಾತ್ರವನ್ನು ಅತಿಯಾಗಿ ತೋರಿಸಲಾಗುತ್ತಿದೆ. ಮಕ್ಕಳು ಈಕೆಯನ್ನು ನೋಡಿ ಅದೇ ರೀತಿ ವರ್ತಿಸುವಂತಾಗಿದೆ. ಹೀಗೆಯೇ ಬಿಟ್ಟರೆ ಈಕೆ ಸೀತಾ-ರಾಮ್​ ಇಬ್ಬರನ್ನೂ ಒಟ್ಟಿಗೆ ಇರಲು ಬಿಡುವುದಿಲ್ಲ, ಡಿವೋರ್ಸ್​ ಕೊಡಿಸಿಯೇ ಬಿಡುತ್ತಾಳೆ ಎಂದೆಲ್ಲಾ ಹೇಳುತ್ತಿದ್ದಾರೆ.

ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು.

ವೇಟ್​ ಮಾಡ್ತಾ ಇದ್ದೀನಿ ಎನ್ನುತ್ತಲೇ ಅಭಿಮಾನಿಗಳ​ ತಲೆಗೆ ಹುಳು ಬಿಟ್ಟ ಆ್ಯಂಕರ್​ ಅನುಶ್ರೀ...

click me!