ಸ್ಪಾ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಯತ್ನ ಪ್ರಕರಣದಲ್ಲಿ ಬೆಂಗಳೂರಿನ ಜೀವನ್ ಭೀಮಾ ನಗರ ಪೊಲೀಸರು ಆರೋಪಿ ದಿವ್ಯಾ ವಸಂತ ಅವರನ್ನು ಬಂಧಿಸಿದ್ದಾರೆ. ಈ ಮಧ್ಯೆ ದಿವ್ಯಾ ತಾಯಿ ವಸಂತಮ್ಮ ಬೇಸರಗೊಂಡು ದರ್ಶನ್ ಫ್ಯಾನ್ಸ್‌ಗಳೇ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರೋದು ಎಂದು ಕಣ್ಣೀರಿಟ್ಟಿದ್ದಾರೆ.
ಸ್ಪಾ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಯತ್ನ ಪ್ರಕರಣದಲ್ಲಿ ಬೆಂಗಳೂರಿನ ಜೀವನ್ ಭೀಮಾ ನಗರ ಪೊಲೀಸರು ಆರೋಪಿ ದಿವ್ಯಾ ವಸಂತ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆಕೆಯನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಈ ಮಧ್ಯೆ ದಿವ್ಯಾ ತಾಯಿ ವಸಂತಮ್ಮ ಬೇಸರಗೊಂಡು ದರ್ಶನ್ ಫ್ಯಾನ್ಸ್‌ಗಳೇ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರೋದು ಎಂದು ಕಣ್ಣೀರಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದದಲ್ಲಿ ದಿವ್ಯಾಳನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ವಸಂತಮ್ಮ ಭಾವುಕರಾಗಿ ಕಣ್ಣೀರಿಡುತ್ತಾ ವೀಡಿಯೋ ಮಾಡಿದ್ದಾರೆ. ನಾನು ದಿವ್ಯಾಳ ತಾಯಿ ವಸಂತ. ನನಗೆ ಅಳುನೇ ಬರುತ್ತೆ. ನಿಜವಾಗ್ಲೂ ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ ಹಾಗೇ ಮಾತನಾಡಿರುವವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ನನಗೆ ಚೆನ್ನಾಗಿ ಗೊತ್ತು. ಆದರೆ ಅವಳು ತಪ್ಪು ಮಾಡಿದ್ದಾಳೋ ಇಲ್ಲವೋ ದಿವ್ಯಾ ಬಂದ ಮೇಲೆ ಮುಂದೆ ಗೊತ್ತಾಗುತ್ತೆ. ಅವಳ ಕೆಲಸ ಅವಳು ಮಾಡಿದ್ದಾಳೆ. ದರ್ಶನ್ ಅವರು ಎಲ್ಲರಿಗೂ ಬೇಕಾಗಿರುವವರೇ. ನಂಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಗಳಿಗೂ ಇಷ್ಟ.
ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಕೊಟ್ಟ ದಿವ್ಯಾ ವಸಂತ ಗ್ಯಾಂಗ್‌ಗೂ ನಮಗೂ ಸಂಬಂಧವಿಲ್ಲ: ರಾಜ್ ನ್ಯೂಸ್ ಸ್ಪಷ್ಟನೆ
ಆಕೆಗೆ ಏನು ಕೆಲಸ ಕೊಟ್ಟಿದ್ದಾರೆ. ಅದನ್ನು ಮಾತ್ರ ಅವಳು ಮಾಡಿದ್ದಾಳೆ, ಅವಳೇ ಬಂದು ಅದಕ್ಕೆ ಉತ್ತರ ಕೊಡುತ್ತಾಳೆ. ಅಲ್ಲಿಯವರೆಗೆ ಕೆಟ್ಟದಾಗಿ ಏನೂ ವೈರಲ್ ಮಾಡಬೇಡಿ. ನಿಮ್ ಸಪೋರ್ಟ್ ನಮಗೆ ಯಾವಾಘಲೂ ಇರಬೇಕು. ನಮ್ಮ ಮಗಳು ಬೇಗ ಬರಲಿ ಅಂತ ಕೇಳಿಕೊಳ್ಳುತ್ತಿನಿ. ಅವಳು ಏನ್ ತಪ್ಪು ಮಾಡಿದ್ದಾಳೋ ಇಲ್ಲವೋ ದೇವರು ನೋಡಿಕೊಳ್ತಾನೆ. ಅವ್ಳು ಕೆಲ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾಳೆ. ಅಲ್ಲಿ ಅವ್ರು ಏನ್ ಕೆಲಸ ಕೊಟ್ಟಿದ್ರೋ ಅದನ್ನೆ ಮಾಡಿದ್ದಾಳೆ. ಅವಳ ಮೇಲೆ ಕೋಪ ಇದ್ರೆ ಆ ಚಾನೆಲ್ ಮಾತ್ರ ಕೋಪ ತೀರಿಸಿಕೊಳ್ಳಿ.
ನನ್ನ ಮಗಳ ಮೇಲೆ ಮಾತ್ರ ಕೋಪ ತೀರಿಸಿಕೊಳ್ಳಬೇಡಿ. ಯಾಕಂದ್ರೆ ಅವಳು ಕೊಟ್ಟಿದ್ದು ಕೆಲಸ ಮಾತ್ರ ಮಾಡ್ತಿದ್ಳು. ನಿಮ್ಮ ಮನೆ ಹೆಣ್ಣುಮಗಳೆಂದು ತಿಳ್ಕೊಳಿ ಅಷ್ಟೇ ನಾನು ಕೇಳೋದು. ನೀವು ಅಂದುಕೊಂಡಂತೆ ನನ್ನ ಮಗಳು ಕೆಟ್ಟವಳಲ್ಲ. ಅವಳು ದರ್ಶನ್ ಫ್ಯಾನ್. ನಾನು ದರ್ಶನ್ ಫ್ಯಾನ್. ಅವಳು ಕೆಟ್ಟವಳಲ್ಲ, ಇಷ್ಟು ದಿನ ದಿವ್ಯಾಳನ್ನು ನೀವು ಹೇಗೆ ಬೆಳೆಸಿದ್ದೀರೋ, ಹಾಗೇ ಬೆಳೆಸಿ, ಸಪೋರ್ಟ್ ಮಾಡ್ತೀರಾ ಅಂತ ನಾನು ನಂಬಿದ್ದೀನಿ ಅದು ಬಿಟ್ಟರೆ ನಿಮ್ಮ ಬಳಿ ಏನನ್ನು ಕೇಳಿಕೊಳ್ಳುವುದಿಲ್ಲ ಎಂದು ಎಂದು ದಿವ್ಯಾ ತಾಯಿ ವಸಂತಮ್ಮ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
100 ಜನರಿಗೆ ದಿವ್ಯಾ ವಸಂತ ಗ್ಯಾಂಗ್ ಸುಲಿಗೆ: ರಾಜ್ಯವೇ ಖುಷಿಪಡುವ ನ್ಯೂಸ್ ಕೊಟ್ಟವಳು ನಾಪತ್ತೆ!
ಏನಿದು ಪ್ರಕರಣ?: ಬೆಂಗಳೂರಿನ ಇಂದಿರಾನಗರದ ಟ್ರೀ ಸ್ಪಾ ಬ್ಯೂಟಿ ಆ್ಯಂಡ್ ಮಸಾಜ್ ಪಾರ್ಲರ್ ಮೇಲೆ ರಹಸ್ಯ ಕಾರ್ಯಾಚರಣೆ ಹೆಸರಿನಲ್ಲಿ ಮಾಡಿದ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಸಿದ ಆರೋಪ ಇದಾಗಿದೆ. ಜೊತೆಗೆ ವಿಡಿಯೋ ತೋರಿಸಿ ಸ್ಪಾ ಮ್ಯಾನೇಜರ್ ಶಿವಶಂಕರ್‌ಗೆ 15 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು, ಕೊನೆಗೆ 8 ಲಕ್ಷ ರೂಪಾಯಿ ಡೀಲ್ ನೀಡುವಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಐಷಾರಾಮಿ ಜೀವನಕ್ಕಾಗಿ ಬೇಗ ಹಣ ಮಾಡಲು ಈ ಗ್ಯಾಂಗ್ ಜೊತೆ ಸೇರಿದ್ದು ಎನ್ನಲಾಗಿತ್ತು. ಮಗಳು ದಿವ್ಯಾ ವಸಂತ ಹಾಗೂ ಮಗ ಸಂದೇಶ್ ಬಂಧನ ತಾಯಿ ವಸಂತಮ್ಮಗೆ ಶಾಕ್ ತಂದಿತ್ತು. ಲಗ್ಗೆರೆಯಲ್ಲಿರುವ ದಿವ್ಯಾ ಮನೆ ಮೇಲೆ ದಾಳಿ ನಡೆಸಿ ಕ್ಯಾಮೆರಾ, ಲ್ಯಾಪ್ ಟಾಪ್ ಸೇರಿ ಕೆಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
BtvNews ದಿವ್ಯಾ ವಸಂತ ಅವರ
ತಾಯಿಯ ಮನದಾಳದ ಮಾತು pic.twitter.com/rr8dAiiylH