
ಆ್ಯಂಕರ್ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್ ಮಾಡುವಲ್ಲಿ ಅನುಶ್ರೀ ಸಕತ್ ಫೇಮಸ್. ಇದೀಗ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್ ಮಾಡುವಾಗ ಸಕತ್ ಜೋಕ್ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹಲವಾರು ಸಿನಿ ಕ್ಷೇತ್ರದ ನಟ-ನಟಿಯರು ಕರೆಸಲಾಗಿತ್ತು. ಅದರಲ್ಲಿ ಒಬ್ಬರು ಅಭಿಷೇಕ್ ಅಂಬರೀಶ್. ಅಭಿಷೇಕ್ ಅವರ ಸಕತ್ ಕಾಲೆಳೆದಿದ್ದಾರೆ ಆ್ಯಂಕರ್ ಅನುಶ್ರೀ. ಇತ್ತೀಚೆಗೆ ಅಂಬರೀಷ್ ಅವರ ಮದುವೆ ಅವಿವಾ ಜೊತೆ ನಡೆದಿದೆ. ಸ್ಯಾಂಡಲ್‌ವುಡ್‌ನ (Sandalwood) ಜ್ಯೂನಿಯರ್ ರೆಬಲ್ ಎಂದೇ ಫೇಮಸ್ ಆಗಿರೋ ಅಭಿಷೇಕ್ ಅವರು ಅವಿವಾ ಜೊತೆ ಕಳೆದ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಇವರನ್ನು ಜೀ ಕುಟುಂಬ ಅವಾರ್ಡ್ಗೆ ಕರೆಸಲಾಗಿತ್ತು.
ಈ ಸಂದರ್ಭದಲ್ಲಿ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಅನುಶ್ರೀ ಅವರು, ತಮ್ಮನ್ನು ಬಿಟ್ಟು ಮದುವೆಯಾಗಿಬಿಟ್ರಿ ಎನ್ನುತ್ತಲೇ ವಿರಹ ವೇದನೆ ಶುರುವಾಗಿದೆ ಎಂದಿದ್ದಾರೆ. ಜೂನಿಯರ್ ರೆಬೆಲ್ ಕಾಲು ಎಳೆದ ಅನುಶ್ರೀ ಅವರು, ವಿರಹ ಗೀತೆಯೊಂದಕ್ಕೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿಯೂ (Sandalwood star) ಆಗಿರೋ ಅನುಶ್ರೀ ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ. ಆದರೆ ಅವರಿಗೆ ಎಲ್ಲಿಯೇ ಹೋದ್ರೂ ಎದುರಾಗುವ ಪ್ರಶ್ನೆ ಒಂದೇ ನಿಮ್ಮ ಮದ್ವೆ ಯಾವಾಗ ಎನ್ನುವುದು. ಇದಾಗಲೇ ಈ ಪ್ರಶ್ನೆಗೆ ನಟಿ ತಮ್ಮದೇ ಆದ ರೀತಿಯಲ್ಲಿ ಹಲವಾರು ವಿಧನಾಗಿ ಉತ್ತರಿಸಿದ್ದಾರೆ. 1987ರಲ್ಲಿ ಹುಟ್ಟಿರುವ ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರುತ್ತಿದ್ದರೂ ಮದ್ವೆ ಯಾಕೆ ಆಗ್ತಿಲ್ಲ ಎನ್ನೋ ಆತಂಕದಲ್ಲಿ ಇರುವಂತೆ ತೋರುತ್ತಿದೆ ಅನುಶ್ರೀ ಫ್ಯಾನ್ಸ್. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವಂತೆ ಕಾಣುತ್ತಿಲ್ಲ. ಪ್ರತಿ ಸಲವೂ ಕೇಳ್ತಾನೇ ಇರ್ತಾರೆ.
ನನ್ನನ್ನು ಸ್ಕೂಲ್ನಿಂದ ಓಡಿಸಿಬಿಟ್ರು! ಬಾಲ್ಯದ ಗೆಳೆಯ ರವಿಚಂದ್ರನ್ ಜತೆ ಡಿ.ಕೆ.ಶಿವಕುಮಾರ್ ಸವಿ ನೆನಪು
ಅದಕ್ಕೇ ಈಗ ಮದುವೆಯ ಬಗ್ಗೆಯೇ ಮಾತನಾಡಿ ತಮಗೆ ಮದ್ವೆನೇ ಆಗಲ್ಲ ಅಂತ ವಿರಹ ಗೀತೆಗೆ ಡ್ಯಾನ್ಸ್ ಮಾಡಿದ್ದಾರೆ. ವಿರಹ.. ಹುಲಿಯ ಉಗುರ ತರಹ... ಎಂದು ಹಾಡಿದ್ದಾರೆ. ಹಿನ್ನೆಲೆ ಗಾಯನದಲ್ಲಿಯೂ ಹೀಗೆಯೇ ಹಾಡು ತೇಲಿ ಬಂದಿದೆ. ವಿರಹ.. ಹುಲಿಯ ಉಗುರು ತರಹ... ವಿರಹ... ಹಳೆಯ ಸ್ಟೋರಿಯ ತರಹ.. ಎಂದು ಹಾಡುತ್ತಾ ಅಲ್ಲಿದ್ದವರನ್ನು ನಕ್ಕು ನಗಿಸಿದ್ದಾರೆ ಅನುಶ್ರೀ. ಇಷ್ಟಾಗುತ್ತಿದ್ದಂತೆಯೇ ಅಭಿಷೇಕ್ ಅವರು ಅನುಶ್ರೀ ಅವರಿಗೆ ಅಕ್ಕ ಎಂದರು. ಇದನ್ನು ಕೇಳಿ ಅನುಶ್ರೀ. ಈ ಅನ್ಯಾಯಕ್ಕೆ ಉತ್ತರ ಕೊಡಿ, ಈ ವಿರಹ ವೇದನೆಗೆ ಉತ್ತರ ಕೊಡಿ ಎಂದು ತಮಾಷೆ ಮಾಡಿದರು.
ಎಲ್ಲರೂ ನನ್ನನ್ನು ಅಕ್ಕ ಅಕ್ಕ ಎಂದು ಯಾರೂ ನನ್ನ ಪಕ್ಕನೇ ನಿಲ್ತಿಲ್ಲ ಎಂದು ಪಂಚಿಂಗ್ ಡೈಲಾಗ್ ಹೊಡೆದ ಅನುಶ್ರೀ ಇನ್ನೊಂದು ಮ್ಯೂಸಿಕ್ಗೆ ಡ್ಯಾನ್ಸ್ ಮಾಡಿದರು. ಅದರಲ್ಲಿ ನಮ್ಮೂರ ಯುವರಾಣಿ ಕಲ್ಯಾಣವಿಂದು... ವರನ್ಯಾರು ಸಿಗ್ತಿಲ್ಲ ಓ ಕೋಗಿಲೆ... ಟಾರ್ಚ್ ಹಾಕ್ಕೊಂಡು ಹುಡುಕೋಣ ಬಾ ಈಗಲೇ... ಎಂಬ ಹಾಡು ಬಂತು. ಒಟ್ಟಿನಲ್ಲಿ ವೇದಿಕೆಯ ಮೇಲೆ ಎಲ್ಲರನ್ನೂ ಅನುಶ್ರೀ ಟೀಂ ನಕ್ಕು ನಗಿಸಿತು.
ಡಿಕೆಶಿ ದೃಷ್ಟಿಯಲ್ಲಿ ದೇವರು ಯಾರು? 'ಭೂಮಿಗೆ ಬಂದ ಭಗವಂತ'ನ ಪ್ರಶ್ನೆಗೆ ಅವರು ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.