ಜೀ ಕುಟುಂಬ ಅವಾರ್ಡ್ ಫಂಕ್ಷನ್ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಾಲ್ಯದ ಬೆಳೆಯ ರವಿಚಂದ್ರನ್ ಜೊತೆ ಶಾಲೆ ದಿನಗಳನ್ನು ನೆನಪಿಸಿಕೊಂಡರು.
ಜೀ ಕನ್ನಡ ವಾಹಿನಿ ನವೆಂಬರ್ 10 ಮತ್ತು 11ರಂದು ನಡೆಸಿದ್ದ ಜೀ ಕುಟುಂಬ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತು. ಇದರಲ್ಲಿ ಜೀ ವಾಹಿನಿಯ ಸೀರಿಯಲ್ ನಟ-ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಧಾರಾವಾಹಿಯ ತೆರೆ ಮರೆಯಲ್ಲಿ ಶ್ರಮಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿನಿ ಕ್ಷೇತ್ರದ ದಿಗ್ಗಜರು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ಕರೆಸಲಾಗಿತ್ತು. ಅವರಿಗೆ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದ್ದಕ್ಕೂ ಮೊದಲೇ ರೆಡಿ ಇದ್ದವರಂತೆ ಉಪ ಮುಖ್ಯಮಂತ್ರಿಗಳು ಪಟಪಟ ಎಂದು ಉತ್ತರ ಕೊಟ್ಟರು.
ನಿಮ್ಮ ಈ ಬಿಜಿ ಷೆಡ್ಯೂಲ್ನಲ್ಲಿ ಸಿನಿಮಾ ನೋಡಲು ಸಮಯ ಸಿಗುತ್ತದಾ? ಒಂದು ವೇಳೆ ಸಿನಿಮಾ ನೋಡಿದ್ರೆ ನಿಮ್ಮ ನೆಚ್ಚಿನ ನಾಯಕ ನಟ ಯಾರು ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಒಂದು ಸಿನಿಮಾ ತುಂಬಾ ಸಂತೋಷ ಕೊಟ್ಟಿತ್ತು. ಅದನ್ನು ಒಂದು ಹತ್ತು ಸಲ ನೋಡಿದ್ದೇನೆ. ಆ ಸಿನಿಮಾ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸತರಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದೆ ಎಂದರು. ಹಾಗೆನೇ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರನೂ ನೋಡಿದ್ದೇನೆ ಎಂದರು. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಾಲ್ಯದ ಗೆಳೆತನದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾನು ಮತ್ತು ರವಿಚಂದ್ರನ್ ಒಂದೇ ಸ್ಕೂಲ್ನಲ್ಲಿ ಕಲೀತಾ ಇದ್ವಿ. ಅದಕ್ಕೇ ನೋಡೋಣ ಅಂತ ಕಪಾಲಿ ಥಿಯೇಟರ್ನಲ್ಲಿ ನಡೀತಾ ಇದ್ದ ಪಿಚ್ಚರ್ಗೆ ಹೋಗಿದ್ದೆ ಎಂದರು.
ಡಿಕೆಶಿ ದೃಷ್ಟಿಯಲ್ಲಿ ದೇವರು ಯಾರು? 'ಭೂಮಿಗೆ ಬಂದ ಭಗವಂತ'ನ ಪ್ರಶ್ನೆಗೆ ಅವರು ಹೇಳಿದ್ದೇನು?
ನಂತರ ಡಿ.ಕೆ.ಶಿವಕುಮಾರ್ ಅವರು ಸ್ಕೂಲ್ಮೇಟ್ ಎಂದು ತಿಳಿಯುತ್ತಲೇ ರವಿಚಂದ್ರನ್ ಅವರಿಗೆ ಶಿವಕುಮಾರ್ ಅವರ ಬಗ್ಗೆ ಮಾತನಾಡುವಂತೆ ಹೇಳಲಾಯಿತು. ಆಗ ಡಿ.ಕೆ.ಶಿವಕುಮಾರ್ ಅವರು ರವಿಚಂದ್ರನ್ ಹೆಗಲ ಮೇಲೆ ಕೈಹಾಕಿದರು. ಆಗ ರವಿಚಂದ್ರನ್ ಅವರು, ಇಷ್ಟೇ ನಮ್ಮ ಫ್ರೆಂಡ್ಷಿಪ್ಪು ಎಂದರು. ಹೀಗೆ ಸಿಕ್ಕಾಗ ಹೆಗಲಮೇಲೆ ಕೈಹಾಕಿ ಬೆನ್ನು ತಟ್ಟುತ್ತಾರೆ. ನಾವು ನಗ್ತೀವಿ, ಆಮೇಲೆ ಆ ದಿನಗಳನ್ನು ನೆನಪಿಸಿಕೊಳ್ತಾರೆ. ಅವರಿಗೆ ಯಾವಾಗ್ಲೂ ನೆನಪಾಗುವುದು ನನ್ನ ಮೊದಲ ಪಿಚ್ಚರ್ ವಿಲನ್ ಆಗಿ ಆ್ಯಕ್ಟ್ ಮಾಡಿರೋದು. ಏನೋ ಕೋಯಾ ಕೋಯಾ ಅಟಾಚಿ ಅಂತ ಕರೀತಾರೆ. ಅವರ ಬೈಕ್ನಲ್ಲಿ ನನ್ನ ಕೋಯಾ ಕೋಯಾ ಅಟಾಚಿ ಅಂತ ಬರೆದುಕೊಂಡು ಓಡಾಡಿದ್ರು ಎಂದು ಆ ದಿನಗಳನ್ನು ರವಿಚಂದ್ರನ್ ನೆನಪಿಸಿಕೊಂಡರು.
ನಂತರ ಸ್ಕೂಲ್ ನೆನಪುಗಳನ್ನು ಏನಾದರೂ ಇದ್ದರೆ ಹಂಚಿಕೊಳ್ಳಿ ಎಂದು ಆ್ಯಂಕರ್ ಅನುಶ್ರೀ ಹೇಳಿದಾಗ, ರವಿಚಂದ್ರನ್ ಅವರು, ಸ್ಕೂಲಾ... ನಾವು ಒಳಗೆ ಹೋಗಿದ್ರೆ ತಾನೆ ಎಂದರು. ನೀನೊಳ್ಳೆ ಅವಮಾನ ಮಾಡ್ತಿಯಲ್ಲೇ ಎಂದು ಅನುಶ್ರೀ ಅವರನ್ನು ರೇಗಿಸಿದ್ರು. ಇಬ್ರೂ ಹೋಗಿಲ್ವಾ ಎಂದು ಅನುಶ್ರೀ ಕೇಳಿದಾಗ, ನನ್ನನ್ನು ಸ್ಕೂಲ್ನಿಂದ ಓಡಿಸಿಬಿಟ್ರು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು. ಆ ಸ್ಕೂಲ್ನಲ್ಲಿ ಬಂಕ್ ಅಂತೇನಾದ್ರೂ ಮಾಡಿದ್ರೆ ನಾನೇ ಫಸ್ಟ್ ಮಾಡಿರೋದು ಎಂದರು ರವಿಚಂದ್ರನ್. ಹೀಗೆ ಈ ಬಾಲ್ಯದ ಸ್ನೇಹಿತರು ಬಾಲ್ಯದ ನೆನಪು ಮಾಡಿಕೊಂಡರು.
ಅಂಕಲ್ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?