ಡಿಕೆಶಿ ದೃಷ್ಟಿಯಲ್ಲಿ ದೇವರು ಯಾರು? 'ಭೂಮಿಗೆ ಬಂದ ಭಗವಂತ'ನ ಪ್ರಶ್ನೆಗೆ ಅವರು ಹೇಳಿದ್ದೇನು?

By Suvarna News  |  First Published Nov 12, 2023, 4:32 PM IST

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮಕ್ಕೆ ಬಂದಿದ್ದು, ಇದರಲ್ಲಿ ಅವರು ದೇವರ ಬಗ್ಗೆ ಮಾತನಾಡಿದ್ದಾರೆ. ಶಿವಕುಮಾರ್​ ಅವರು ಹೇಳಿದ್ದೇನು?
 


ಜೀ ಕನ್ನಡ ವಾಹಿನಿ ನವೆಂಬರ್​ 10 ಮತ್ತು 11ರಂದು ನಡೆಸಿದ್ದ ಜೀ ಕುಟುಂಬ ಅವಾರ್ಡ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತು.  ಇದರಲ್ಲಿ ಜೀ ವಾಹಿನಿಯ ಸೀರಿಯಲ್​ ನಟ-ನಟಿಯರು ಹಾಗೂ  ತಂತ್ರಜ್ಞರು ಸೇರಿದಂತೆ ಧಾರಾವಾಹಿಯ ತೆರೆ ಮರೆಯಲ್ಲಿ ಶ್ರಮಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿನಿ ಕ್ಷೇತ್ರದ ದಿಗ್ಗಜರು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನೂ ಕರೆಸಲಾಗಿತ್ತು. ಅವರಿಗೆ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ  ಭೂಮಿಗೆ ಬಂದ ಭಗವಂತ ಸೀರಿಯಲ್​ನ ಭಗವಂತ ಪಾತ್ರಧಾರಿ ಕಾರ್ತಿಕ್ ಸಮಗ್ ಭಗವಂತನಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಕೇಳಿದರು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ (Bhumige Banda Bhagavanta) ಸೀರಿಯಲ್. ಕಲಿಯುಗದಲ್ಲಿ ಭಗವಂತ ಭೂಮಿಗೆ ಬಂದಾಗ ಹೇಗಿರುತ್ತೆ ಅನ್ನೋ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಮಾಡಲಾದ ಸೀರಿಯಲ್. ಇದು ಜನರಿಂದ ಅಪಾರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. 

ಕಾರ್ತಿಕ್​ ಅವರು, ಡಿ.ಕೆ.ಶಿವಕುಮಾರ್​ ಅವರಿಗೆ, ನಿಮ್ಮ ದೃಷ್ಟಿಯಲ್ಲಿ ದೇವರು ಎಂದರೆ ಯಾರು ಎಂದು ಪ್ರಶ್ನಿಸಿದರು. ದೇವರನ್ನು ನೀವು ತುಂಬಾ ನಂಬ್ತೀರಾ ಎಂದು ಗೊತ್ತು. ನಿಮ್ಮ ದೃಷ್ಟಿಯಲ್ಲಿ ದೇವರು ಎಂದರೆ ಯಾರು ಎಂದು ಕೇಳಿದರು. ಅದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, ಯಾರು ನಿಮ್ಮ ಬದುಕಿನಲ್ಲಿ ಮಾರ್ಗದರ್ಶನ ಕೊಡುತ್ತಾರೆ, ಯಾರು ನಿಮ್ಮ ಬದುಕಿನಲ್ಲಿ ಸಹಾಯ ಮಾಡುತ್ತಾರೆ, ಯಾರು ನಿಮ್ಮ ಜೊತೆ ನಿಂತುಕೊಳ್ಳುತ್ತಾರೆಯೋ ಅವರೇ ದೇವರು ಎಂದು ನಾನು ತಿಳಿದುಕೊಂಡಿದ್ದೇನೆ. ನೀವು ದೇವರ ಜೊತೆ ಹೇಗೆ ಕನೆಕ್ಟ್​ ಆಗ್ತೀರಾ ಎಂಬ ಪ್ರಶ್ನೆಗೆ ಶಿವಕುಮಾರ್​ ಅವರು, ಧರ್ಮ ಯಾವುದಾದರೂ ಅದರ ತತ್ವ ಒಂದೇ. ಧರ್ಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ. ದೇವನೊಬ್ಬ, ನಾಮ ಹಲವು ಎನ್ನುತ್ತಿದ್ದಂತೆಯೇ ಚಪ್ಪಾಳೆಗಳ ಸುರಿಮಳೆಯಾಯಿತು. 

Tap to resize

Latest Videos

ಅಂಕಲ್​ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?

ಅಂದಹಾಗೆ, ಭೂಮಿಗೆ ಬಂದ ಭಗವಂತ ಸೀರಿಯಲ್ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿರುವ ಶಿವಪ್ರಸಾದ್ ಮತ್ತು ಗಿರಿಜಾರ ಕಥೆ. ಈ ಕಥೆಯಲ್ಲಿ ಭಗವಂತನಾಗಿ ಶಿವಪ್ರಸಾದ್ ಜೀವನದಲ್ಲಿ ಬಂದು, ಹಿತವಚನಗಳನ್ನು ಹೇಳುವ ಮೂಲಕ ಒಳ್ಳೆಯ ಕೆಲಸ ಆಗುವಂತೆ ಮಾಡುವ ಶಿವನ ಪಾತ್ರದಲ್ಲಿ ಕಾರ್ತಿಕ್ ಸಮಗ (Karthik Samag) ನಟಿಸಿದ್ದಾರೆ. ಸೀರಿಯಲ್ ನಲ್ಲಿ ಕಾರ್ತಿಕ್ ಗೆ ಸ್ಕ್ರೀನ್ ಸ್ಪೇಸ್ ತುಂಬಾನೆ ಕಡಿಮೆ ಇದ್ದರೂ ಸಹ, ತಮ್ಮ ಮಾತು ಮತ್ತು ಅದ್ಭುತ ಅಭಿನಯದಿಂದ ಭಗವಂತನೆ ಬಂದು ಹಿತವಚನ ನೀಡುತ್ತಿದ್ದಾನೆ ಏನೋ ಅನ್ನುವಷ್ಟು ಕಾರ್ತಿಕ್ ಪಾತ್ರ ಜನರ ಜೀವನದಲ್ಲಿ ಬೆರೆತು ಹೋಗಿದೆ. 

ಈ ಹಿಂದೆ ಹರಹರ ಮಹದೇವ ಸೀರಿಯಲ್ ನಲ್ಲಿ ಚಂದ್ರ ದೇವನಾಗಿ, ಶನಿ ಸೀರಿಯಲ್ ನಲ್ಲಿ ಇಂದ್ರದೇವನಾಗಿ ಮಿಂಚಿ ಭಕ್ತಿ ಪ್ರಧಾನ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದ ಕಾರ್ತಿಕ್ ಗೆ ಶಿವನ ಪಾತ್ರ ಮಾಡುವಾಗ ಮಾತ್ರ ನನ್ನಿಂದ ಸಾಧ್ಯವಾಗಬಹುದೇ ಎನ್ನುವ ಭಯ ಇತ್ತಂತೆ. ಆದರೆ ಇದೀಗ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸುತ್ತಿದ್ದಾರೆ ಇವರು. ಬಾಲ್ಯದಲ್ಲೇ ನಟನೆಯ ಬಗ್ಗೆ ಒಲವು ಹೊತ್ತಿದ್ದ ಕಾರ್ತಿಕ್ ಸಮಗ, ಉಡುಪಿಯವರು. ಎಂಕಾಂ ಮಾಡಿರುವ ಇವರು, ಸಿನಿಮಾ ರಂಗದಲ್ಲಿ ಗುರುತಿಸಬೇಕೆಂಬ ಹಂಬಲದಿಂದ ಬಾಲ್ಯದಲ್ಲಿಯೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಅಷ್ಟೇ ಯಾಕೆ, ಭರತನಾತ್ಯ ಡ್ಯಾನ್ಸರ್ ಕೂಡ ಹೌದು, ಸಂಗೀತವನ್ನು ಸಹ ಅಭ್ಯಸಿಸಿದ್ದಾರೆ ಇವರು. ರವಿ ಗರಣಿಯವರ ಅರಗಿಣಿ ಸೀರಿಯಲ್ ನಲ್ಲಿ ಮೊದಲನೆ ಬಾರಿ ವಿಲನ್ ಆಗಿ ಬಣ್ಣ ಹಚ್ಚಿದರು. ಅದು ಸಾಕಷ್ಟು ಹೆಸರು ತಂದು ಕೊಟ್ಟಿತು. ನಂತರ ಅಕ್ಕ ಸೀರಿಯಲ್ ನಲ್ಲಿ ನಟಿಸಿದರು. ಬಳಿಕ ಶನಿ, ಹರಹರ ಮಹಾದೇವ, ಶ್ರೀ ಗುರು ರಾಘವೇಂದ್ರ, ಮುದ್ದು ಲಕ್ಷ್ಮಿ ಮೊದಲಾದ ಸೀರಿಯಲ್ ನಲ್ಲಿ ನಟಿಸಿದರು. ಅಲ್ಲದೇ ಡೈನಾಮಿಕ್, ಮೊದಲ ಮಳೆ, ಹೇ ರಾಮ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಗನ್​ಗಿಂತ ಹೆಚ್ಚು ಜನ್ರನ್ನ ಕಣ್ಣಲ್ಲೇ ಹೆದ್ರಿಸಿದ್ದೀನಿ ಅನ್ನುತ್ತಲೇ ಭರ್ಜರಿ ಎಂಟ್ರಿ ಕೊಟ್ಟ ಶಿವಣ್ಣ- ಸ್ಟೇಜಲ್ಲಿ ಮಿಂಚು
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!