ಸುಸ್ತಾಗಿದೆ ರೆಸ್ಟ್‌ ತಗೋ ಅಂತ ಹೇಳೋ ಅಣ್ಣ ಬೇಕಿತ್ತು; ಹುಟ್ಟುಹಬ್ಬದಂದು ಕಣ್ಣೀರಿಟ್ಟ ಅನುಶ್ರೀ

Published : Feb 03, 2025, 12:31 PM ISTUpdated : Feb 03, 2025, 12:33 PM IST
ಸುಸ್ತಾಗಿದೆ ರೆಸ್ಟ್‌ ತಗೋ ಅಂತ ಹೇಳೋ ಅಣ್ಣ ಬೇಕಿತ್ತು; ಹುಟ್ಟುಹಬ್ಬದಂದು ಕಣ್ಣೀರಿಟ್ಟ ಅನುಶ್ರೀ

ಸಾರಾಂಶ

ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಅನುಶ್ರೀ ಹುಟ್ಟುಹಬ್ಬ ಆಚರಿಸಿಕೊಂಡರು. ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಆಗಮಿಸಿ ಶುಭಕೋರಿದರು. ಅಣ್ಣನಂತೆ ಭಾವಿಸಿರುವ ಶಿವಣ್ಣನನ್ನು ಕಂಡು ಅನುಶ್ರೀ ಭಾವುಕರಾದರು. ಅಪ್ಪು ಅಗಲಿಕೆ ನಂತರ ಅನುಶ್ರೀಗೆ ಶಿವಣ್ಣ ಆಸರೆಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಶಿವಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರಿಗೂ ಖುಷಿ ನೀಡಿತು.

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಜೀ ಕನ್ನಡ ಸರಿಗಮಪ ವೇದಿಯಲ್ಲಿ ಆಚರಿಸಿಕೊಂಡಿದ್ದಾರೆ. ಅನುಶ್ರೀ ವಿಶೇಷ ದಿನವನ್ನು ಡಬಲ್ ಮಾಡಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಆಗಮಿಸಿದ್ದರು. ಶಿವರಾಜ್‌ಕುಮಾರ್‌ರನ್ನು ಅಣ್ಣನ ಸ್ಥಾನದಲ್ಲಿ ನೋಡುವ ಅನುಶ್ರೀ ಅವರೊಟ್ಟಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೆ ಗೀತಾ ಶಿವರಾಜ್‌ಕುಮಾರ್‌ ಜೊತೆ ಕೂಡ ಅನುಶ್ರೀ ಜೊತೆ ಕ್ಲೋಸ್ ಆಗಿದ್ದಾರೆ. ಹೀಗಾಗಿ ಶಿವಣ್ಣ ಮತ್ತು ಗೀತಕ್ಕ ನೋಡಿ ಅನುಶ್ರೀ ಭಾವುಕರಾಗಿದ್ದಾರೆ.

'ಈ ಮಾತನ್ನು ನಾನು ಯಾವತ್ತೂ ಯಾರಿಗೂ ಹೇಳಿಕೊಂಡಿರಲಿಲ್ಲ. ಇದು ನನ್ನ ಮನಸ್ಸಿನ ಮಾತು ಹಾಗೂ ನನಗೆ ನಾನೇ ಹೇಳಿಕೊಳ್ಳುವುದು. ನಮ್ಮ ತಾಯಿಗೆ ನಾವು ಇಬ್ಬರೇ ಮಕ್ಕಳು, ನಾನು ಹಾಗೂ ನನ್ನ ತಮ್ಮ. ಜೀವನದ ಹೋರಾಟದಲ್ಲಿ ಚೆನ್ನಾಗಿ ಆಗಬೇಕು ಮನೆಯವರನ್ನು ಸಾಕಬೇಕು ಅನ್ನೋ ಹೋರಾಟದಲ್ಲಿ ನನಗೆ ಇದ್ದಿದ್ದು ಒಂದೇ ಕೊರಗು ಏನೆಂದರೆ ನನ್ನ ಹಿಂದೆ ನಿಲ್ಲುವ ಯಾರಾದರೂ ಅಣ್ಣ ಇರಬೇಕು ಅಂತ. ನನಗೂ ಒಬ್ಬ ಅಣ್ಣ ಇದ್ದಿದ್ದರೆ ಬಹುಷ ನನ್ನ ಜವಾಬ್ದಾರಿಯನ್ನು ಅವರು ನೋಡಿಕೊಳ್ಳುತ್ತಿದ್ದರೋ ಏನೋ, ನೀನು ಸುಸ್ತಾಗಿದ್ಯಾ ಪರ್ವಾಗಿಲ್ಲ ರೆಸ್ಟ್‌ ತಗೋ ಅಂತ ಹೇಳುತ್ತಿದ್ದರೋ ಏನೋ...ಅಣ್ಣ ಇರ್ಬೇಕು ಅಂದುಕೊಳ್ಳುತ್ತಿದ್ದೆ. ಆ ಭಾಗ್ಯ ನನಗ ಯಾವತ್ತೂ ಸಿಕ್ಕಿರಲಿಲ್ಲ. ನಾನು ನಂಬಿರುವ ದೇವರು ನನಗೆ ಇವತ್ತು ಕೊಟ್ಟಿರುವುದು ಶಿವಣ್ಣ ಅನ್ನೋ ಅಣ್ಣನ' ಎಂದು ಅನುಶ್ರೀ ಭಾವುಕರಾಗಿದ್ದಾರೆ.

ಸ್ನಾನ ಮಾಡುವಾಗ ನನ್ನ ದೇಹದ ಪಾರ್ಟ್ಸ್‌ ಮುಟ್ಟಿ ಥ್ಯಾಂಕ್ಸ್ ಹೇಳ್ತೀನಿ: ತಮನ್ನಾ ಹೇಳಿಕೆ ವೈರಲ್

ಅಣ್ಣಾವ್ರ ಮಕ್ಕಳ ಜೊತೆ ಅನುಶ್ರೀ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಅಪ್ಪಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿರುವ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ ಸಂದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅಪ್ಪು ಚಿತ್ರ ಇರುವ ಬೆಳ್ಳಿ ನಾಣ್ಯವನ್ನು ನೀಡುತ್ತಾರೆ. ಅಪ್ಪು ಅಗಲಿದ ಮೇಲೆ ಅನು ಭಾವುಕರಾಗಿದ್ದರು. ಆಗ ಆಶ್ವಿನಿ ಪುನೀತ್‌ ಮತ್ತು ಅಭಿಮಾನಿಗಳ ಜೊತೆ ಅನುಶ್ರೀ ನಿಂತರು. ಇತ್ತೀಚಿಗೆ ಅನಾರೋಗ್ಯದ ವಿಚಾರವಾಗಿ ಶಿವರಾಜ್‌ಕುಮಾರ್ ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಆಪರೇಷನ್‌ ನಂತರ ಒಂದು ತಿಂಗಳ ಕಾಲ ರೆಸ್ಟ್‌ ತೆಗೆದುಕೊಂಡು ಶಿವಣ್ಣ ಬೆಂಗಳೂರಿಗೆ ಬಂದಿದ್ದಾರೆ. ಮತ್ತೆ ಶಿವಣ್ಣ ರೆಸ್ಟ್‌ ತೆಗೆದುಕೊಳ್ಳಲಿದ್ದಾರೆ ಅಂದುಕೊಂಡರೆ ಅಷ್ಟರಲ್ಲಿ ಡಿಕೆಡಿ ಮತ್ತು ಸರಿಗಮಪ ವೇದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಹಾಗೂ ಎಮೋಷನಲ್ ಆಗಿದ್ದಾರೆ. 'ನಾನು ನಿಮ್ಮೆಲ್ಲರನ್ನೂ ಮತ್ತೆ ನೋಡುತ್ತೀನೋ ಇಲ್ವೋ ಅಂದುಕೊಂಡಿದ್ದೆ' ಎಂದು ಶಿವಣ್ಣ ಹೇಳಿದ್ದರು. 

ಅನುಪಮಾ ಗೌಡ ಶೋಯಿಂದ ಹೊರ ನಡೆದ ಭವ್ಯಾ ಗೌಡ? ಕಾರಣ ಕೇಳಿ ಎಲ್ಲರೂ ಶಾಕ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?