ಜೋಡಿ ನಂ.1 ಷೋನಲ್ಲಿ ಭಾಗವಹಿಸಿರುವ ಆನಂದ್ ಮತ್ತು ಚೈತ್ರಾ ಜೋಡಿ ಹಾಗೂ ಚಿದಾನಂದ್ ಮತ್ತು ಕವಿತಾ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಏನದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್-1 ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿದೆ. ಇದರಲ್ಲಿರುವ ಜೋಡಿಯ ಪೈಕಿ ಆನಂದ್- ಚೈತ್ರಾ ಹಾಗೂ ಚಿದಾನಂದ ಮತ್ತು ಕವಿತಾ ಅವರೂ ಒಬ್ಬರು. ಅಮೃತಧಾರೆ ಸೀರಿಯಲ್ನಲ್ಲಿ ನಾಯಕ ಗೌತಮ್ ಸ್ನೇಹಿತನಾಗಿ ನಟಿಸಿರುವ ಆನಂದ್ ಅವರ ರಿಯಲ್ ಹೆಸರು ಕೂಡ ಆನಂದ್. 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ನಟ ಆನಂದ್ ಅವರು ತಮ್ಮ ಪತ್ನಿ ಚೈತ್ರಾ ಜೊತೆ ಜೀ ಟಿ.ವಿಯಲ್ಲಿ ಪ್ರಸಾರವಾಗ್ತಿರೋ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದೇ ರೀತಿ, ಪಾಪ ಪಾಂಡು ಮೂಲಕ ಖ್ಯಾತಿ ಪಡೆದಿರುವ ಚಿದಾನಂದ ಅವರು ತಮ್ಮ ಪತ್ನಿ ಕವಿತಾ ಜೊತೆ ಈ ಷೋನಲ್ಲಿ ಕಾಣಿಸಿಕೊಂಡಿದ್ದಾರೆ.
ಇವರಿಬ್ಬರಿಗೂ ಈಗ ವಿಭಿನ್ನ ಟಾಸ್ಕ್ ನೀಡಲಾಗಿದೆ. ಅದರಲ್ಲಿ ಆನಂದ್- ಚೈತ್ರಾ ಕುಲುಮೆಯಲ್ಲಿ ಬೆವರು ಹರಿಸಿದರೆ, ಚಿದಾನಂದ್-ಕವಿತ ಬಳೆಗಾರರಾಗಿ ಮನೆ ಮನೆಗೆ ತೆರಳಿದ್ದಾರೆ. ಕುಲುಮೆ ಕೆಲಸ ಎನ್ನುವುದು ಎಷ್ಟು ಕಷ್ಟ ಎನ್ನುವುದು ನೋಡಿದವರಿಗೆ ತಿಳಿಯುತ್ತದೆ. ದಿನಪೂರ್ತಿ ಬೆಂಕಿಯ ಬುಡದಲ್ಲಿ ಕುಳಿತು ಒಂದು ಪಾತ್ರೆಗೋ ಅಥವಾ ಇನ್ನಾವುದೋ ಸಾಮಗ್ರಿಗೆ ಕುಲುಮೆ ಹಾಕುವ ಕೆಲಸ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಅದರಲ್ಲಿಯೂ ಒಂದೆಡೆ ಬಿರು ಬಿಸಿಲು ಇದ್ದಾಗಲಂತೂ ಕೆಲಸಗಾರರ ಸ್ಥಿತಿ ಹೇಳತೀರದು. ಆದರೂ ಈ ಕೆಲಸ ಅವರಿಗೆ ಅನಿವಾರ್ಯ. ಅವರ ಕಷ್ಟ ಏನು ಎಂಬ ಬಗ್ಗೆ ಆನಂದ್ ಅವರು ತಿಳಿಸಿದ್ದಾರೆ. ಕಬ್ಬಿಣದ ಜೊತೆ ಅವರೂ ಬೇಯುತ್ತಿರುತ್ತಾರೆ. ಅದೆಂಥ ಕಷ್ಟ ಎಂದು ಹೇಳಿದ್ದಾರೆ.
ಬಿಗ್ಬಾಸ್ನಲ್ಲಿ ಅರಳಿದ ಪ್ರೀತಿ, 4 ವರ್ಷ ಸಂಬಂಧ: ಮದ್ವೆಗೆ ಅಡ್ಡಿ ಬಂತಂತೆ ಧರ್ಮ- ಜೋಡಿ ಬ್ರೇಕಪ್!
ಅದೇ ರೀತಿ ಚಿದಾನಂದ್-ಕವಿತ ಅವರು ಬಳೆಗಾರರಾಗಿ ಕಾಣಿಸಿಕೊಂಡು ಊರೊಂದಕ್ಕೆ ಹೋಗಿದ್ದಾರೆ. ಅಲ್ಲಿ ಬಳೆಗಾರರಾಗಿ ಬಳೆ ತೊಡಿಸುವ ಕೆಲಸ ಸಿಕ್ಕಿರುವುದು ನಮಗೆ ಖುಷಿ ಕೊಟ್ಟಿದೆ ಎಂದಿದ್ದಾರೆ. ಬಡವರ ಕಷ್ಟವನ್ನು ಅರಿಯುವ ಇಂಥದ್ದೊಂದು ವೇದಿಕೆ ಸಿಕ್ಕಿರುವುದು ತಮ್ಮ ಅದೃಷ್ಟ ಎನ್ನುತ್ತಿದ್ದಾರೆ ಕಲಾವಿದರು.
ನಿಜ ಜೀವನದಲ್ಲಿಯೂ ಈ ಕಲಾವಿದರು ಕಷ್ಟಪಟ್ಟು ಮೇಲಕ್ಕೆ ಬಂದವರು. ಬದುಕಿನಲ್ಲಿ ಏಳುಬೀಳು ಕಂಡವರು. ಆನಂದ್-ಚೈತ್ರಾ ಜೀವನ ತುಸು ಕಷ್ಟವೇ ಆಗಿತ್ತು. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ. ಈ ಹಿಂದೆ ಚೈತ್ರಾ, ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್.
ಇನ್ನು ಚಿದಾನಂದ ಅವರ ವಿಷಯಕ್ಕೆ ಬರುವುದಾದರೆ, ಕವಿತಾರ ಜೊತೆ ಇವರ ಮದುವೆ 1998ರಲ್ಲಿ ಆಗಿದೆ. ಆದರೆ ಮೊದಲು ನೋಡಿದ್ದು ಡಿಸೆಂಬರ್ 22, 1997ರಲ್ಲಿ. ಪಾಪ ಪಾಂಡು ಸೀರಿಯಲ್‌ನಿಂದ ಹೆಚ್ಚಿನ ಜನಪ್ರಿಯತೆ ಪಡೆದ ಮೇಲೆ ಎಲ್ಲೋದರೂ ಕವಿತಾ ನಾನು ನಿಜವಾದ ಹೆಂಡತಿ ನಾನೇ ಇವರ ನಿಜವಾದ ಶ್ರೀಮತಿ ಎಂದು ಒತ್ತಿ ಒತ್ತಿ ಪರಿಚಯ ಮಾಡಿಕೊಳ್ಳುತ್ತಿದ್ದರಂತೆ. ಇವರ ಮದುವೆಗೆ ಅಪ್ಪ-ಅಮ್ಮ ಒಪ್ಪದ ಕಾರಣ ಚಿಕ್ಕಪ್ಪ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಮದುವೆ ಮಾಡಿದ್ದರು ಎಂದು ಹೇಳಿದ್ದರು. ತಮ್ಮ ಜೀವನದಲ್ಲಿನ ನೋವು ತೋಡಿಕೊಂಡಿದ್ದ ಅವರು, ಸ್ವಂತ ಮನೆ ಕಟ್ಟಿಸಿ ಕವಿತಾಳನ್ನು ಗಾಜಿನ ಗೊಂಬೆ ತರಹ ನೋಡಿಕೊಳ್ತೀನಿ ಎಂದಿದ್ದೆ. ಮನೆ ಕಟ್ಟಿಸಿದೆ ಆದರೆ ಮನೆ ಕಟ್ಟಿಸಿ ಸ್ವಲ್ಪ ದಿನ ಅಲ್ಲಿದ್ವಿ. ಆಮೇಲೆ ಮಾರಿಬಿಟ್ಟೆ. ಆ ಸತ್ಯವನ್ನು ಇವತ್ತಿನವರೆಗೂ ಯಾರಿಗೂ ಹೇಳಲು ಆಗದ ಸತ್ಯವಾಗಿ ಉಳಿದು ಬಿಟ್ಟಿದೆ' ಎಂದು ಚಿದಾನಂದ ಭಾವುಕರಾಗಿದ್ದರು.
ಚಿತ್ರಕ್ಕಾಗಿ 15 ಕೆ.ಜಿ ಹೆಚ್ಚಿಸಿಕೊಂಡು ಈಗ ಇಳಿಸ್ತಿರೋ ನಟಿ ಪರಿಣಿತಿ! ವಿಡಿಯೋ ನೋಡಿ ಉಸ್ಸಪ್ಪಾ ಅಂದ ಫ್ಯಾನ್ಸ್