ಬಿಗ್ ಬಾಸ್ ಮನೆಯಲ್ಲಿ ನಗೆಯ ಬುಗ್ಗೆ; ಮಾವುತನೋ ಮೇಕೆಯೋ, ಕನ್‌ಫ್ಯೂಸ್ ಆದ್ರಾ!

Published : Dec 07, 2023, 04:02 PM IST
ಬಿಗ್ ಬಾಸ್ ಮನೆಯಲ್ಲಿ ನಗೆಯ ಬುಗ್ಗೆ; ಮಾವುತನೋ ಮೇಕೆಯೋ, ಕನ್‌ಫ್ಯೂಸ್ ಆದ್ರಾ!

ಸಾರಾಂಶ

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. 

ರಕ್ಕಸ-ಗಂಧರ್ವರ ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್‌ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. “ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ. 

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ. ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. 

‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು? ಇದಕ್ಕೆ ಅವಿನಾಶ್ ಮರುಳಾಗುತ್ತಾರಾ? 
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!