ಗುರು..ನಾನು ಕಷ್ಟ ಪಟ್ಟು ದುಡಿದು ಖರ್ಚು ಮಾಡ್ತೀನಿ; ತಿರ್ಪೆ ಶೋಕಿ ಎಂದು ಕಾಮೆಂಟ್ ಮಾಡಿದವರಿಗೆ ಸೋನು ತಿರುಗೇಟು

Published : Jan 24, 2025, 02:36 PM ISTUpdated : Jan 24, 2025, 02:38 PM IST
ಗುರು..ನಾನು ಕಷ್ಟ ಪಟ್ಟು ದುಡಿದು ಖರ್ಚು ಮಾಡ್ತೀನಿ; ತಿರ್ಪೆ ಶೋಕಿ ಎಂದು ಕಾಮೆಂಟ್ ಮಾಡಿದವರಿಗೆ ಸೋನು ತಿರುಗೇಟು

ಸಾರಾಂಶ

ಸೋಷಿಯಲ್ ಮೀಡಿಯಾ ತಾರೆ ಸೋನು ಶ್ರೀನಿವಾಸ್ ಗೌಡ ತಮ್ಮ ಖರ್ಚಿನ ಬಗ್ಗೆ ಟೀಕಿಸಿದವರಿಗೆ ಉತ್ತರಿಸಿದ್ದಾರೆ. ಪ್ರಮೋಷನ್ ಮತ್ತು ವಿಡಿಯೋಗಳ ಮೂಲಕ ದುಡಿದ ಹಣವನ್ನು ತಾವು ಖರ್ಚು ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡುವುದು ತಪ್ಪಲ್ಲ, ಜೀವನವನ್ನು ಆನಂದಿಸಬೇಕು ಎಂದಿದ್ದಾರೆ. ಇತರರ ಬಗ್ಗೆ ಟೀಕಿಸುವ ಬದಲು ಸ್ವಂತ ದುಡಿಮೆಗೆ ಗಮನ ಕೊಡುವಂತೆ ಸಲಹೆ ನೀಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇತ್ತೀಚಿಗೆ ಅಪ್ಲೋಡ್ ಮಾಡುತ್ತಿರುವ ಪ್ರತಿಯೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಗೋವಾದಲ್ಲಿ ಒಂದು ಲಕ್ಷ ಖರ್ಚು ಮಾಡಿದ್ದು, 30 ಸಾವಿರ ರೂಪಾಯಿ ಇಟ್ಕೊಂಡು ಸುತ್ತಾಡಿದ್ದು ಹಾಗೆ 60 ಸಾವಿರ ರೂಪಾಯಿಗೆ ಶಾಪಿಂಗ್ ಮಾಡಿದ್ದು ವೈರಲ್ ಆಗಿದೆ. ಇಷ್ಟು ಹಣ ಖರ್ಚು ಮಾಡುತ್ತಿರುವ ಸೋನುಗೆ ಎಲ್ಲಿಂದ ಹಣ ಬರ್ತಿದೆ? ದುಡಿಮೆ ಏನು ಎಂದು ಕಾಮೆಂಟ್ ಮಾಡಿದ್ದವರಿಗೆ ಉತ್ತರಿಸಿದ್ದಾರೆ. 

'ಗೋವಾಗಿ ಬಂದ ತಕ್ಷಣ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದೆ. ತುಂಬಾ ಹಣ ವೇಸ್ಟ್ ಮಾಡುತ್ತಿದ್ದೀರಾ ಹಾಗೆ ಹೀಗೆ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದೀರಿ. ಗುರು ಒಂದು ವಿಚಾರವನ್ನು ನಾನು ಕ್ಲಿಯರ್ ಮಾಡುತ್ತೀನಿ, ನಾನು ಕಷ್ಟ ಪಟ್ಟ ವಿಡಿಯೋ ಮಾಡುತ್ತೀನಿ ಪ್ರಮೋಷನ್ ಮಾಡುತ್ತೀನಿ ಅದರಿಂದ ಹಣವನ್ನು ದುಡಿಯುತ್ತಿದ್ದೀನಿ. ಕಷ್ಟ ಪಟ್ಟು ದುಡಿದು ನನಗೆ ನಾನು ಮಾಡಿಕೊಳ್ಳಬೇಕು..ನನಗೆ ಮಾಡಿಕೊಳ್ಳದೆ ಬೇರೆ ಯಾರಿಗೆ ಮಾಡಬೇಕು? ಆಟೋ ಟ್ರೈವರ್‌ಗಳು ಕಷ್ಟ ಪಟ್ಟು ದುಡಿಯುತ್ತಾರೆ ಎಷ್ಟು ಖರ್ಚು ಮಾಡಬೇಕು ಎಷ್ಟು ಉಳಿಸಬೇಕು ಅಂತ ಗೊತ್ತಿದೆ. ಸಿನಿಮಾ ಸ್ಟಾರ್‌ಗಳು ಕೂಡ ದುಡಿದು ಖರ್ಚು ಮಾಡುತ್ತಾರೆ. ಹಾಗೆ ನಾನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವೆ. ಕೆಲವೊಂದು ಆಪ್‌ಗಳ ಜೊತೆ ನಾನು ಟೈ ಅಪ್ ಮಾಡಿಕೊಂಡಿದ್ದೀನಿ  ಹಲವಾರು ಪ್ರಮೋಷನ್‌ಗಳನ್ನು ಮಾಡಿ ದುಡಿಯುತ್ತಿದ್ದೀನಿ. ನಾನು ಖರ್ಚು ಮಾಡುವುದರಿಂದ ನಿಮಗೆ ಏನು ಸಮಸ್ಯೆ? ಒಬ್ಬ ಮನುಷ್ಯ ಕಷ್ಟ ಪಟ್ಟು ದುಡಿದು ಅವನಿಗೆ ಅವನು ಖರ್ಚು ಮಾಡಿಕೊಂಡಿಲ್ಲ ಅಂದ್ರೆ ಖಂಡಿತಾ ಅವನು ವೇಸ್ಟ್...ಜೀವನದಲ್ಲಿ ಎಂಜಾಯ್ ಮಾಡಬೇಕು' ಎಂದು ಸೋನು ಗೌಡ ಮಾತನಾಡಿದ್ದಾರೆ.

ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತೀನಿ ,ನಿಜ ಸಾಕಾಗಿದೆ: ಕೇಸ್‌ ಸತ್ಯ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

'ಮದುವೆ ಆದ ಮೇಲೆ ಜೀವನ ಹೇಗಿರುತ್ತದೆ ಗೊತ್ತಿಲ್ಲ...ನಾನು ಹೀಗೆ ಇರುತ್ತೀನ ಅಲ್ಲ ಮನೆ ಹುಡುಗಿ ತರ ಇರ್ತೀನೋ ಗೊತ್ತಿಲ್ಲ. ನನ್ನ ಪ್ರಕಾರ ಮದುವೆ ಆಗುವ ಮುನ್ನ ನಾನು ಜೀವನ ಎಂಜಾಯ್ ಮಾಡಬೇಕು. ಸುಮ್ಮನೆ ಕಟ್ಟ ಕಾಮೆಂಟ್ ಮಾಡುವುದು ಬಿಟ್ಟು ನಿಮ್ಮ ಕೆಲಸ ನೋಡಿಕೊಳ್ಳಿ. ನನಗೆ ದುಡ್ಡು ಎಲ್ಲಿಂದ ಬರುತ್ತ ಅಂತ ಕೇಳುವುದು ಬಿಟ್ಟು ಬಾಯಿ ಮುಚ್ಚಿಕೊಂಡು ನೀವು ಕೂಡ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ ಆಗ ನಿಮಗೂ ಕೂಡ ಹಣ ಬರುತ್ತೆ. ಬೈಯುವವರು ಬೈಯುತ್ತಾರೆ ಹೊಗಳುವವರು ಹೊಗಳುತ್ತಾರೆ. ನಿಮಗೆ ಬರುವ ಅಡುಗೆ ರೆಸಿಪಿ, ಫ್ಯಾಮಿಲಿ, ಸುತ್ತಾಡುವುದು ಪ್ರತಿಯೊಂದನ್ನು ವಿಡಿಯೋ ಮಾಡಿ ಅಪ್ಲೊಡ್ ಮಾಡಿ ನೀವು ದುಡಿಯಬಹುದು. ನೀವು ಮತ್ತೊಬ್ಬರ ಮನೆ ದೋಸೆ ತೂತು ತಡುಕುವುದಕ್ಕೆ ಹೋದರೆ ನಿಮ್ಮ ಹೆಂಚು ತೂತಾಗಿರುತ್ತದೆ. ಒಂದು ಲೈನ್‌ನಲ್ಲಿ ಹೇಳಲು ಆಗಲ್ಲ ಅದಕ್ಕೆ ಇಷ್ಟು ಉತ್ತರ ಕೊಟ್ಟಿದ್ದೀನಿ' ಎಂದು ಸೋನು ಗೌಡ ಹೇಳಿದ್ದಾರೆ. 

ಪುನೀತ್ ಪರಮಾತ್ಮ ಸಿನಿಮಾ ಶೈಲಿಯಲ್ಲಿ 15 ಕಂಬಗಳ ಮನೆ ಕಟ್ಟಿಸಿದ ಸೋನು ಗೌಡ; ಗೃಹಪ್ರವೇಶದ ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!