ಅಮೃತಧಾರೆ ಸೀರಿಯಲ್‌ನಲ್ಲಿ ಸುಧಾ ಪಾತ್ರವು ಕಷ್ಟದ ಸನ್ನಿವೇಶದಲ್ಲಿದೆ. ಮನೆ ಕಳೆದುಕೊಂಡು ಪಾರ್ಕ್‌ನಲ್ಲಿ ವಾಸಿಸುತ್ತಿರುವ ಸುಧಾಳ ಕಥೆ ಕರುಣಾಜನಕ. ಆದರೆ, ನಟಿ ಮೇಘಾ ಶೆಣೈ ರಿಯಲ್ ಲೈಫ್‌ನಲ್ಲಿ ಗ್ಲಾಮರಸ್ ಆಗಿದ್ದಾರೆ.
ಅಮೃತಧಾರೆ ಸೀರಿಯಲ್‌ನಲ್ಲಿ ಸುಧಾ ಪಾತ್ರ ಬಹಳ ನಿರ್ಣಾಯಕವಾದದ್ದು. ಈ ಪಾತ್ರ ಶುರುವಿನಿಂದಲೇ ಇರಲಿಲ್ಲ. ಮಧ್ಯದಲ್ಲಿ ಎಂಟ್ರಿ ಕೊಟ್ಟದ್ದು. ಅಷ್ಟಕ್ಕೂ ಈ ಪಾತ್ರದ ಹಿಸ್ಟರಿ ಚೆನ್ನಾಗಿದೆ. ಫ್ಯೂಚರ್ ಕೂಡ ಚೆನ್ನಾಗಿರೋ ಹಾಗೆ ಕಾಣುತ್ತೆ. ಆದರೆ ಪ್ರೆಸೆಂಟ್ ಅಂದರೆ ವರ್ತಮಾನದಲ್ಲಿ ಮಾತ್ರ ಈ ಪಾತ್ರ ಅಂದರೆ ಸುಧಾ ಪಡುವ ಪಾಡು ಯಾರಿಗೂ ಬೇಡ. ಇವಳು ಚಿಕ್ಕ ವಯಸ್ಸಲ್ಲೇ ಗಂಡನನ್ನು ಕಳೆದುಕೊಂಡವಳು. ಮನೆಯಲ್ಲಿ ಪುಟ್ಟ ಮಗಳಿದ್ದಾಳೆ. ಸದಾ ಎಚ್ಚರವಿಲ್ಲದ ಸ್ಥಿತಿಯಲ್ಲಿರುವ ಅಮ್ಮ ಇದ್ದಾಳೆ. ಆಕೆ ಯಾವುದಕ್ಕೂ ರೆಸ್ಪಾನ್ಸ್ ನೀಡೋದಿಲ್ಲ. ಸದಾ ಯಾವುದೋ ಲೋಕದಲ್ಲಿರುವ ಹಾಗೆ ಇರುತ್ತಾಳೆ. ಈಕೆಯ ಚೂಟಿ ಮಗಳು ಮಾತ್ರ ಇದ್ಯಾವುದರ ಪರಿವೇ ಇಲ್ಲದೇ ಮುದ್ದು ಮುದ್ದಾಗಿ ಮಾತನಾಡುತ್ತ, ಮುಗ್ಧವಾಗಿ ಎಲ್ಲವನ್ನೂ ತನ್ನದೇ ರೀತಿಯಲ್ಲಿ ಅರ್ಥ ಮಾಡಿಕೊಳ್ತಾ ಇರುತ್ತಾಳೆ. ಸದ್ಯ ಇವರಿಬ್ಬರೂ ಮನೆಯನ್ನು ಕಳೆದುಕೊಂಡಿದ್ದಾರೆ. ಕೇಡಿ ಜೈದೇವ್ ಇವರ ಮನೆಗೆ ಬೆಂಕಿ ಇಟ್ಟಿದ್ದಾನೆ. ಆಕಸ್ಮಾತ್ ಇವರಿಬ್ಬರೂ ಆ ವೇಳೆ ಆಸ್ಪತ್ರೆಯಲ್ಲಿದ್ದ ಕಾರಣ ಬಚಾವ್ ಅಗಿದ್ದಾರೆ.
ಆದರೆ ಸದ್ಯ ಈ ಮೂವರು ಬಡಪಾಯಿಗಳಿಗೆ ನೆಲೆ ಇಲ್ಲ. ಈ ಮೂವರೂ ಪಾರ್ಕಿನಲ್ಲಿ ಬನ್ನು, ಬಿಸ್ಕೆಟ್‌ನಲ್ಲಿ ಹೊಟ್ಟೆ ತುಂಬಿಸಿಕೊಂಡು ಕಷ್ಟದಿಂದ ಇರುವಾಗ ಭೂಮಿಕಾಳೇ ಇವರನ್ನು ಮನೆಗೆ ಕರೆಸುತ್ತಾಳೆ. ಅವರಿಗೆ ತಮ್ಮ ಮನೆಯಲ್ಲೇ ನೆಲೆ ಕಲ್ಪಿಸುತ್ತಾಳೆ. ಆದರೆ ಇದು ಹೇಗಿರುತ್ತೆ ಅಂದರೆ ಗೌತಮ್ ದಿವಾನ್ ತನ್ನ ಸ್ವಂತ ತಾಯಿಯ ತಿಥಿ ಮಾಡುತ್ತಿರುವಾಗ ಸ್ವಂತ ತಾಯಿ ಭಾಗ್ಯ ಬೇರೆಯೇ ವೇಷದಲ್ಲಿ ಮನೆಗೆ ಎಂಟ್ರಿ ಕೊಡುತ್ತಾಳೆ.
ಕೀರ್ತಿ ಆಕ್ಟಿಂಗ್ ಸೂಪರ್, ಆದ್ರೆ ತಲೆಗೆ ಹುಳು ಬಿಟ್ಟಿದ್ದಾರೆ ನಿರ್ದೇಶಕರು!
ಅತ್ತ ತನ್ನ ತಾಯಿಯ ಮುಂದೆಯೇ ತಾಯಿಗೆ ಪಿಂಡ ಇಡುವ ಮಗನ ಕಥೆ ಬಹಳ ಕರುಣಾಜನಕವಾಗಿ ಮೂಡಿ ಬರುತ್ತಿದೆ. ಈ ಕಡೆ ಭೂಮಿಕಾಳ ಬಳಿ ಸುಧಾ ಮನೆಯಲ್ಲಿ ನಡೀತಿರೋ ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದಾಳೆ. ಆಗ ಭೂಮಿಕಾ ಸಂಕ್ಷಿಪ್ತವಾಗಿ ನಡೆದದ್ದನ್ನೆಲ್ಲ ಹೇಳಿದ್ದಾಳೆ. ಗೌತಮ್ ತಾಯಿ, ತಂಗಿಗಾಗಿ ಹಂಬಲಿಸಿದ್ದು, ಆದರೆ ಅವರಿಬ್ಬರೂ ಅಪಘಾತದಲ್ಲಿ ಮೃತಪಟ್ಟ ವಾರ್ತೆ ಬರುವುದು, ಅವರಿಗಾಗಿ ಕಾಯುತ್ತಿದ್ದ ಗೌತಮ್ ಬಹಳ ನೋವಿಂದ ಅಮ್ಮನ ತಿಥಿ ಮಾಡ್ತಿರೋದು ಎಲ್ಲವನ್ನೂ ಹೇಳುತ್ತಾಳೆ. ಇದರಿಂದ ಸುಧಾನೂ ಬಹಳ ಬೇಸರ ಪಟ್ಟುಕೊಳ್ತಾಳೆ.
undefined
ಅಂದ ಹಾಗೆ ಸಡನ್ನಾಗಿ ಸುಧಾ ಪಾತ್ರದಲ್ಲಿ ಎಂಟ್ರಿ ಕೊಟ್ಟಿರೋ ಈ ನಟಿ ಯಾರು? ಈಕೆಯ ಹಿನ್ನೆಲೆ ಏನು? ಎಷ್ಟು ಚೆನ್ನಾಗಿ ಆಕ್ಟ್ ಮಾಡ್ತಾರಲ್ಲ, ಅವರ ನಟನೆಯಲ್ಲೊಂದು ಚಾರ್ಮ್ ಇದೆ. ಅವರಿಗಾಗಿ ಸೀರಿಯಲ್ ನೋಡ್ತೀವಿ ಅನ್ನೋರು ಇತ್ತೀಚೆಗೆ ಒಂದಿಷ್ಟು ಜನ ಇದ್ದಾರೆ. ಸೋ ಸುಧಾ ಡಿ ಗ್ಲಾಮರ್ ಪಾತ್ರ. ಆದರೆ ಅದಕ್ಕೆ ಜೀವ ತುಂಬಿ ಸಾಕಷ್ಟು ಮಂದಿಯ ಗಮನ ಸೆಳೆದಿರೋ ಈ ನಟಿಯ ಹೆಸರು ಮೇಘಾ ಶೆಣೈ. ಸಿರಿ ಕನ್ನಡ ಚಾನೆಲ್ ನ ಬ್ರಾಹ್ಮಿನ್ಸ್ ಕೆಫೆ ಸೀರಿಯಲ್‌ಗೆ ಈಕೆ ನಾಯಕಿಯಾಗಿದ್ದರು. ಇದಕ್ಕೂ ಮೊದಲು ಉದಯ ಟಿವಿಯ 'ಸುಂದರಿ' ಸೀರಿಯಲ್‌ನ ವಿಲನ್ ಆಗಿದ್ದರು.
ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಆಗ್ತಿತ್ತು; ಬ್ರೇಕಪ್ ಕಾರಣ ಬಿಚ್ಚಿಟ್ಟ ಬಿಗ್ ಬಾಸ್ ಪವಿ
'ಜನುಮದ ಜೋಡಿ' ಸೀರಿಯಲ್‌ನಲ್ಲೂ ಗಮನ ಸೆಳೆಯೋ ನಟನೆ ತೋರಿದ್ದರು. 'ಮಹಾದೇವಿ' ಸೀರಿಯಲ್‌ನಲ್ಲಿ ಇವರ ರಶ್ಮಿ ಪಾತ್ರ ಬಹಳ ಜನರ ಇಷ್ಟಕ್ಕೆ ಕಾರಣವಾಗಿತ್ತು. ಕಲರ್ಸ್‌ನ 'ರಕ್ಷಾಬಂಧನ' ಸೀರಿಯಲ್‌ನಲ್ಲಿ ನಾಯಕ ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿದ್ದರು ಸ್ಟಾರ್ ಸುವರ್ಣದ 'ಜೀವ ಹೂವಾಗಿದೆ' ಸೀರಿಯಲ್‌ನಲ್ಲೂ ಪ್ರೇಮಿಯಾಗಿ ನಟಿಸಿದ್ದರು.
ಸದ್ಯ ಅಮೃತಧಾರೆಯಲ್ಲಿ ತೀರಾ ಸಿಂಪಲ್ ಡಿ ಗ್ಲಾಮರ್ ಲುಕ್‌ನಲ್ಲಿ ಗಮನ ಸೆಳೆಯುವ ಈಕೆ ರಿಯಲ್‌ನಲ್ಲಿ ಸಖತ್ ಗ್ಲಾಮರಸ್ ಆಗಿದ್ದಾರೆ. ಈಕೆಯ ರಿಯಲ್ ಫೊಟೋ ನೋಡಿ ಸಾಕಷ್ಟು ಮಂದಿ ನೆಟ್ಟಿಗರು ಬೆಂಕಿ ಇಮೋಜಿ ಕೊಟ್ಟು ಮೆಚ್ಚಿಕೊಂಡಿದ್ದಾರೆ. ಇಷ್ಟು ಗ್ಲಾಮರಸ್ ಆಗಿರೋ ಹುಡುಗಿನಾ ಅಮೃತಧಾರೆಯ ಸುಧಾ ಅಂತಲೂ ಅಚ್ಚರಿಪಡ್ತಾರೆ.