ಅಮೃತಧಾರೆ ಸೀರಿಯಲ್ನಲ್ಲಿ ಜೈದೇವ್ ಆಗಿ ಮಿಂಚುತ್ತಿರುವ ರಾಣವ್ ಗೌಡ, ಮಲ್ಲಿ ಜೊತೆ ಸಾಫ್ಟ್ ಆಗಿ ಮಾತನಾಡಿದ್ದಾನೆ. ನಗ್ತಾ ನಗ್ತಾ ಈ ಜೋಡಿ ಮಾತನಾಡಿದ್ದು ಸೀರಿಯಲ್ ನಲ್ಲಿ ಅಲ್ಲ. ಸಂದರ್ಶನವೊಂದರಲ್ಲಿ ರಾಧಾ ಜೊತೆ ಕಾಣಿಸಿಕೊಂಡ ರಾಣವ್, ತಮ್ಮ ಫಸ್ಟ್ ಕ್ರಶ್ ಗುಟ್ಟು ಬಿಚ್ಚಿಟ್ಟಿದ್ದಾರೆ.
ಜೈದೇವ್ (Jaidev), ಹೆಸರು ಕೇಳ್ತಿದ್ದಂತೆ ವಿಲನ್ (villain) ಅಟ್ಟಹಾಸ ಕಣ್ಮುಂದೆ ಬರುತ್ತೆ. ಚಾಕೋಲೇಟ್ ಬಾಯ್ ರಾಣವ್ ಗೌಡ (Ranav Gowda), ವಿಲನ್ ಪಾತ್ರಕ್ಕೆ ಜೀವ ತುಂಬಿ ಅಭಿಮಾನಿಗಳಿಂದ ಸೈ ಎನ್ನಿಸಿಕೊಂಡಿದ್ದಾರೆ. ಝೀ ಕನ್ನಡ ಅಮೃತಧಾರೆ ಸೀರಿಯಲ್ (Zee Kannada Amritdhare Serial) ನಲ್ಲಿ ಜೈದೇವ್ ಆಗಿ ಮಿಂಚುತ್ತಿರುವ ರಾಣವ್ ಗೌಡ, ಸಂದರ್ಶನವೊಂದರಲ್ಲಿ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ತುಂಬಾ ಸುಂದರವಾಗಿರುವ ರಾಣವ್ ಹಿಂದೆ ಹುಡುಗಿಯರು ಸಾಲು ನಿಲ್ತಿದ್ದಾರೆ. ಆದ್ರೆ ರಾಣವ್ ಫಸ್ಟ್ ಕ್ರಶ್ ಯಾರು ಗೊತ್ತಾ? ಅವರಿಗೆ ಈಗ ಗರ್ಲ್ ಫ್ರೆಂಡ್ ಇದ್ದಾಳಾ? ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮೀಡಿಯಾ ನೆಟ್ವರ್ಕ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಾಣವ್ ಗೌಡ, ಅನೇಕ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಮೃಧಾರೆ ಸೀರಿಯಲ್ನಲ್ಲಿ ಜೈದೇವ್ ಪತ್ನಿಯಾಗಿ ಕಾಣಿಸಿಕೊಂಡಿರುವ ರಾಧಾ ಭಾಗವತಿ ಜೊತೆ ಮಾತನಾಡಿದ ರಾಣವ್ ಗೌಡ, ಪ್ರೀತಿ, ಮದುವೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕರಿಷ್ಮಾ ಕಪೂರ್ ಮಾತ್ರವಲ್ಲ, sandalwood ಮಿಲನಾ ಸಹ ಮಗು ಆಗ್ತಿದ್ದಂತೆ ಕೆಲಸದಲ್ಲಿ ತಲ್ಲೀನ
ಇಂಗ್ಲೀಷ್ ಟೀಚರ್ ಮೇಲೆ ಫಸ್ಟ್ ಕ್ರಶ್ : ನೀವು ಯಾರಿಗಾದ್ರೂ ಪ್ರಪೋಸ್ ಮಾಡಿದ್ದು ಇದ್ಯಾ ಎಂದು ರಾಧಾ ಕೇಳ್ತಿದ್ದಂತೆ, ಲೀಸ್ಟ್ ಉದ್ದವಿದೆ, ಅದನ್ನು ಹೇಳ್ತಾ ಹೋದ್ರೆ ರಾತ್ರಿಯಾಗುತ್ತೆ ಎಂದಿದ್ದಾರೆ ರಾಣವ್ ಗೌಡ. ಅಲ್ಲದೇ ತಮ್ಮ ಫಸ್ಟ್ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಬಹುತೇಕ ಎಲ್ಲ ಹುಡುಗ್ರ ಫಸ್ಟ್ ಕ್ರಶ್ ಟೀಚರ್ ಮೇಲಿರುತ್ತೆ. ಜೈದೇವ್ ಅಲಿಯಾಸ್ ರಾಣವ್ ಗೌಡ ಕೂಡ ತಮ್ಮ ಫಸ್ಟ್ ಕ್ರಶ್ ಇಂಗ್ಲೀಷ್ ಟೀಚರ್ ಎಂದಿದ್ದಾರೆ. ಟೀಚರ್ ಹೆಸರನ್ನು ಕೂಡ ಅವರು ಹೇಳಿದ್ದಾರೆ. ನಳಿನಿ ಮಿಸ್ ಮೇಲೆ ರಾಣವ್ ಗೆ ಕ್ರಶ್ ಆಗಿತ್ತು. ಮೇಡಂ ನೋಡೋಕೆ ತುಂಬಾ ಚೆನ್ನಾಗಿದ್ರು ಎನ್ನುವ ಕಾರಣಕ್ಕೆ ಐದನೇ ಕ್ಲಾಸ್ ನಲ್ಲಿ ಇಂಗ್ಲೀಷ್ ಮೇಡಂ ಮೇಲೆ ಕ್ರಶ್ ಆಗಿತ್ತು ಎಂದು ಜೈದೇವ್ ಹೇಳಿದ್ದಾರೆ.
ರಾಣವ್ ಬರೆದ ಲವ್ ಲೆಟರ್ನಲ್ಲಿ ಏನಿತ್ತು? : ಮಾತು ಮುಂದುವರೆಸಿದ ರಾಣವ್, ವ್ಯಾನ್ ಹುಡುಗಿಗೆ ಲವ್ ಲೆಟರ್ ನೀಡಿದ್ದರಂತೆ. ಆರನೇ ತರಗತಿಯಲ್ಲಿ ಸ್ಕೂಲ್ ವ್ಯಾನ್ ನಲ್ಲಿ ಬರ್ತಿದ್ದ, ಪಕ್ಕದಲ್ಲೇ ಕುಳಿತುಕೊಳ್ತಿದ್ದ ಹುಡುಗಿಗೆ ಲವ್ ಲೆಟರ್ ನೀಡಿದ್ದರು. ಆದ್ರೆ ಅದ್ರಲ್ಲಿ ಏನು ಬರೆದಿದ್ರು ಎಂಬುದು ರಾಣವ್ಗೆ ಈಗ ನೆನಪಿಲ್ಲ. ಹುಡುಗಿ ಲೆಟರ್ ಓದಿ ವಾಪಸ್ ಕೈಗೆ ನೀಡಿ, ಮುಖ ತಿರುಗಿಸಿಕೊಂಡು ಹೋಗಿದ್ಲು ಎನ್ನುತ್ತಾರೆ ರಾಣವ್.
ಮಲ್ಲಿಗೆ ಪ್ರಪೋಸ್ ಮಾಡಿದ ಜೈದೇವ್ : ಹುಡುಗಿಯರು ಗೂಗಲ್ ಮಾಡಿ, ನೀವು ಸಿಂಗಲ್ಲಾ ಅಂತ ಹುಡುಕ್ತಿದ್ದಾರೆ. ನಿಮಗೆ ಗರ್ಲ್ ಫ್ರೆಂಡ್ ಇದಾಳಾ ಅಂತ ರಾಧಾ ಕೇಳಿದ್ರೆ, ನೀವು ಸಿಂಗಲ್ಲಾ, ಇದ್ರೆ ಹೇಳ್ಬಿಡಿ ಒಂದು ಛಾನ್ಸ್ ನೋಡ್ತೇನೆ ಎನ್ನುತ್ತಲೇ ನಾನು ಸಿಂಗಲ್ ಎಂಬುದನ್ನು ರಾಣವ್ ಹೇಳಿದ್ದಾರೆ. ಇದೇ ವೇಳೆ ರಾಣವ್ನಿಂದ ಬಚಾವ್ ಆಗಲು ರಾಧಾ, ನಾನು ಎಂಗೇಜ್ ಅಂತ ಹೇಳಿದ್ದು, ಇದು ಹೌದ ಎನ್ನುವ ಪ್ರಶ್ನೆ ಹುಡುಗರನ್ನು ಕಾಡ್ತಿದೆ.
ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?
ಸುಧಾರಾಣಿ ಜೊತೆ ಮೊದಲ ಆಕ್ಟಿಂಗ್ : ಹಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಕ್ರಿಕೆಟ್ ಆಡುವ ಸಣ್ಣ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ರಾಣವ್, ಆಗ್ಲೇ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಅಲ್ಲಿಂದಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು ಎಂದು ರಾಣವ್ ಹೇಳಿದ್ದಾರೆ. ನಾಟಕ ಕಲಿತ ರಾಣವ್, ಶ್ರೀಕಂಠ ಸಿನಿಮಾದಲ್ಲಿ ಜ್ಯೂನಿಯರ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರ ಜರ್ನಿ ಶುರುವಾಯ್ತು. ಇದಾದ್ಮೇಲೆ ವಿರಾಟ್, ಮತ್ತೆ ಬಾ ಉಪೇಂದ್ರ ಸಿನಿಮಾಗಳಲ್ಲಿ ರಾಣವ್ ನಟಿಸಿದ್ದಾರೆ. ಸದ್ಯ ಅಮೃತಧಾರೆಯಲ್ಲಿ ಜೈದೇವ್ ಹಾಗೂ ಮಲ್ಲಿ ಪಾತ್ರ ಹೆಚ್ಚು ಹೈಲೈಟ್ ಆಗಿದ್ದು, ಇಬ್ಬರನ್ನು ಸಂದರ್ಶನದಲ್ಲಿ ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.