ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

By Santosh Naik  |  First Published Nov 21, 2024, 7:30 PM IST

ವಿಚ್ಛೇದನದ ನಂತರ ನಿವೇದಿತಾ ಗೌಡ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಹೊಸ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಿಳಿ ಬಣ್ಣದ ಸೀರೆಯಲ್ಲಿ ಅವರ ಹಾಟ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಬಾಡಿ ಶೇಮಿಂಗ್ ಮಾಡಿದ್ದಾರೆ.


ಚಂದನ್‌ ಶೆಟ್ಟಿ ಜೊತೆಗಿನ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸಖತ್‌ ಖುಷಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಸಾಲು ಸಾಲು ರೀಲ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಎದೆಗೆ ಇಳಿಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕುರಿತಾಗಿ ಬರುವ ಯಾವ ಕಾಮೆಂಟ್‌ಗೂ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ, ತಾವಾಯಿತು ತಮ್ಮ ಚಿಕ್ಕ ಡ್ರೆಸ್‌ಗಳಾಯಿತು ಎಂದುಕೊಂಡು ಬೆನ್ನುಬೆನ್ನಿಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳಿಂದ ಸೋಶಿಯಲ್‌ ಮೀಡಿಯಾಗೆ ಬಿಡುವು ಕೊಟ್ಟಿದ್ದ ನಿವೇದಿತಾ ಗೌಡ ಗುರುವಾರ ಇನ್ಸ್‌ಟಾಗ್ರಾಮ್‌ನಲ್ಲಿಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ತಿಳಿ ಬಣ್ಣದ ಸೀರೆಯುಟ್ಟು ಹಾಟ್‌ ಆಗಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ರೀಲ್ಸ್‌ಗೆ ಎಂದಿನಂತೆ ಕಾಮೆಂಟ್ಸ್‌ಗಳು ಬಂದಿವೆ.

ಇತ್ತೀಚೆಗೆ 'ಮನಸಾರೆ ನಿನ್ನೆ..' ಮೂಲಕ ತಮ್ಮ ಮೊದಲ ಆಲ್ಬಂ ಹಾಡಿನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದರು. ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡು ರಿಲೀಸ್‌ ಆಗಿತ್ತು. ನಿವೇದಿತಾ ಗೌಡ ಅವರೊಂದಿಗೆ ತೆಲುಗಿನ ಗೌರಿ ನಾಯ್ಡು ರೊಮಾನ್ಸ್‌ ಮಾಡಿದ್ದರು. ಮಳೆಯಲ್ಲಿ ನೆನೆಯುತ್ತಾ ನಿವೇದಿತಾ ಮಾಡಿದ ಡಾನ್ಸ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ನ.13 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಈ ಸಾಂಗ್‌, 50 ಸಾವಿರ ವೀವ್ಸ್‌ ಪಡೆಯುವ ಹಾದಿಯಲ್ಲಿದೆ.

Tap to resize

Latest Videos

undefined

ಗುರುವಾರ ನಿವೇದಿತಾ ಹಂಚಿಕೊಂಡಿರುವ ರೀಲ್ಸ್‌ ಈವರೆಗೂ 3.76 ಲಕ್ಷ ವೀವ್ಸ್‌ ಕಂಡಿದೆ. 24 ಸಾವಿರ ಮಂದಿ ಲೈಕ್ಸ್‌ ಒತ್ತಿದ್ದಾರೆ. ಆದರೆ, ಯಾರೊಬ್ಬರೂ ಆಕೆಯ ರೀಲ್ಸ್‌ ಕುರಿತಾಗಿ ಕಾಮೆಂಟ್‌ ಮಾಡಿಲ್ಲ. ಬದಲಾಗಿ ಆಕೆಯ ದೇಹದ ಭಾಗಗಳ ಬಗ್ಗೆಯೇ ಹೆಚ್ಚಾಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಇಲ್ಲಿಯೂ ಚಂದನ್‌ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ. 'ಎಲೆ ಕೋಸ್‌ ಥರ ಇದ್ದೆ, ಈಗ ಹೂ ಕೋಸ್‌ ಥರ ಆಗಿ ಬಿಟ್ಟಿದ್ದೀಯಾ' ಎಂದುಸ ನಿವೇದಿತಾಗೆ ಬಾಡಿ ಶೇಮಿಂಗ್‌ ಕೂಡ ಮಾಡಿದ್ದಾರೆ.

ಮಾಜಿ ಹೆಂಡತಿ ನಿವೇದಿತಾ ಗೌಡ ಸ್ನಾನದ ವಿಡಿಯೋ ಚಿತ್ರೀಕರಿಸಿದ ಚಂದನ್‌ ಶೆಟ್ಟಿ!

ಯಪ್ಪಾ, ನಿಮ್ಮದು ಸೇಮ್‌ವಿಡಿಯೋ ನೋಡಿ ನೋಡಿ ಬೇಜಾರ್‌ ಆಗೋಯ್ತು. ಈ ಸೀರೆಯೊಂದಿಗೆ ಏನಾದರೂ ಹೊಸದನ್ನು ಮಾಡಿ ಎಂದು ವ್ಯಕ್ತಿಯೊಬ್ಬರು ನಿವೇದಿತಾಗೆ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಬೊಂಬೆ, ಅದ್ಭುತ, ಸುಂದರಿ, ಚಿನ್ನು ಅಂಥೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ರೆಡ್‌ ಡ್ರೆಸ್‌ನಲ್ಲಿ ಶಿಲಾ ಬಾಲಿಕೆಯಾದ ನಿವೇದಿತಾ ಗೌಡ, ಕಾಮೆಂಟ್‌ ಸೆಕ್ಷನ್‌ ಮಾತ್ರ ನೋಡೋದಲ್ಲ!

ನೀವು ಈ ರೀತಿಯಲ್ಲಿ ಸೀರೆಯುಟ್ಟುಕೊಂಡು ಎಲ್ಲಾ ತೋರಿಸುತ್ತಿದ್ದರೆ, ಸಿಂಗಲ್ಸ್‌ಗಳ ಜನ್ಮ ಹಾಳಾಗಿ ಹೋಗುತ್ತೆ ಎಂದು ಮತ್ತೊಬ್ಬರು ಬರೆದಿದ್ದಾರೆ. 'ನಿನ್ನನ ನೋಡಿ ಉರಕೊಳರು ಒಬ್ಬಾರ ಇಬ್ಬಾರ ನೀ ಮಾತ್ರ ನಮ್ಮ ರಾಜಕುಮಾರಿ ಮುದ್ದು ಗೊಂಬೆ..' ಎಂದು ನಿವೇದಿತಾ ರೀಲ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!