ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

Published : Nov 22, 2024, 12:05 PM IST
ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ  ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

ಸಾರಾಂಶ

 ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋಗಿದ್ರೆ ಏನ್‌ ಮಾಡ್ತೀರಾ ಎಂದು ದೃಷ್ಟಿಬೊಟ್ಟು  ನಟ ವಿಜಯ್ ಸೂರ್ಯ ಕೊಟ್ಟ ತರ್ಲೆ ಉತ್ತರ ಏನು ಗೊತ್ತಾ?   

ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ.  ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.  

 ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ.  ಇದೀಗ ಕೀರ್ತಿ ನಾರಾಯಣ ಶೋನಲ್ಲಿ ವಿಜಯ್‌ ಸೂರ್ಯ ಅವರಿಗೆ ತರ್ಲೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ತಮಾಷೆಯಾಗಿಯೇ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಕೇಳಿರೋ ಪ್ರಶ್ನೆ ಎಂದ್ರೆ, ಒಂದು ವೇಳೆ ನಿಮಗೆ ಮದುವೆಯಾಗಿರಲಿಲ್ಲ ಎಂದುಕೊಳ್ಳಿ. ಹುಡುಗಿಗೆ ತಾಳಿ ಕಟ್ಟುವ ಸಮಯದಲ್ಲಿ ಪಂಚೆ ಉದುರಿ ಹೋಗ್ತಿತ್ತು.  ನಿಮಗೆ ಎರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು ಎಂದುಕೊಳ್ಳಿ. ತಾಳಿ ಕಟ್ಟುತ್ತಿದ್ರೋ, ಉದುರಿ ಹೋಗ್ತಿರೋ ಪಂಚೆಯನ್ನು ಸರಿ ಮಾಡಿಕೊಳ್ತಿದ್ರೋ ಕೇಳಿದ್ರೆ ವಿಜಯ್‌ ಅವರು ಕೂಡಲೇ, ತಾಳಿ ಕಟ್ಟುತ್ತಿದ್ದೆ. ಏಕೆಂದರೆ ಪಂಚೆಯಂತೂ ಉದುರಿ ಹೋಗಿ ಮಾನ ಹೋಗಿ ಆಗಿದೆ. ತಾಳಿ ಕಟ್ಟುವ ಮುಹೂರ್ತ ವೇಸ್ಟ್‌ ಮಾಡಲು ಇಷ್ಟವಿಲ್ಲ. ಅದಕ್ಕೆ ಆದದ್ದು ಆಗಲಿ ಎಂದು ತಾಳಿನೇ ಕಟ್ಟುತ್ತಿದ್ದೆ ಎಂದಿದ್ದಾರೆ. 

ನನ್ನ ನಟನೆ ನೋಡ್ಲಿಲ್ಲ, ಟ್ಯಾಲೆಂಟ್‌ ನೋಡ್ಲಿಲ್ಲ ಎನ್ನುತ್ತಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಿಲನಾ ಓಪನ್‌ ಮಾತು!

ಇನ್ನು ವಿಜಯ್ ಅವರ ಮದುವೆ ಲೈಫ್‌ ಕುರಿತು ಹೇಳುವುದಾದರೆ, ಇವರ ಪತ್ನಿ ಹೆಸರು ಚೈತ್ರಾ ಶ್ರೀನಿವಾಸ. 2019ರ ಫೆಬ್ರವರಿ 14ರಂದು  ಚೈತ್ರಾ ಶ್ರೀನಿವಾಸ್ ಅವರನ್ನು ವಿಜಯ್ ಮದುವೆ ಆಗಿದ್ದರು. ಇವರದ್ದು ಅರೇಂಜ್ಡ್‌ ಮ್ಯಾರೇಜ್. ಚೈತ್ರಾ ಅವರು ಸಾಫ್ಟ್‌ವೇರ್ ಉದ್ಯೋಗಿ. ಕ್ಯಾಮರಾ, ಸಾರ್ವಜನಿಕ ಜೀವನದಿಂದ ಚೈತ್ರಾ ಅವರು ತುಂಬ ದೂರ ಇದ್ದಾರೆ.   2020ರ ಫೆಬ್ರವರಿ 14ರಂದು ವಿಜಯ್ ಸೂರ್ಯ, ಚೈತ್ರಾ ಶ್ರೀನಿವಾಸ್ ಅವರಿಗೆ ಗಂಡು ಮಗು ಜನಿಸಿತ್ತು. ಕಳೆದ ವರ್ಷ ಎರಡನೇ ಮಗು ಜನಿಸಿದೆ. ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು. ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದರು.  

ವಿಜಯ್‌ ಅವರ ಸಿನಿ ಬದುಕಿನ ಕುರಿತು ಹೇಳುವುದಾದರೆ,  ಧಾರಾವಾಹಿಗಳಿಂದ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ನಟ ವಿಜಯ್ ಸೂರ್ಯ ಅವರು ಕ್ರೇಜಿಲೋಕದಲ್ಲಿ ನಟಿಸಿದ್ದರು. ಈ ಸಿನಿಮಾದ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಸಿಕ್ಕಿತ್ತು.  ಇಷ್ಟಕಾಮ್ಯ ಚಿತ್ರದ ಮೂಲಕ ನಾಯಕ ನಟನಾದರು.  ಇದಾದ ನಂತರ ಕೆಲವು  ಕದ್ದುಮುಚ್ಚಿ, ಗಾಳಿಪಟ-2 ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆದರೆ, ವಿಜಯ್ ಸೂರ್ಯಗೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾದಲ್ಲಿ ಯಶಸ್ಸು ಸಿಗಲಿಲ್ಲ. ಆದ್ದರಿಂದ ಸೀರಿಯಲ್‌ಗೆ ಮರಳಿದ್ದಾರೆ. 

ಬೆಕ್ಕು ಅಡ್ಡ ಬರೋದು, ವಿಧವೆ ಎದುರಿಗೆ ಬರೋದು... ವ್ಹಾವ್‌ ಅದೆಷ್ಟು ಚೆಂದ ಹೇಳಿದ್ರಿ ಡುಮ್ಮಾ ಸರ್‍!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!