ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತಾಯಿ ಆಗುತ್ತಿದ್ದಾಳೆ. ಈಗ ಈ ಮಗು ಬದುಕುತ್ತಾ? ಇಲ್ಲವಾ? ಎಂದು ಕಾದು ನೋಡಬೇಕಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಈಗ ತಾಯಿಯಾಗುತ್ತಿದ್ದಾಳೆ. ಗೌತಮ್ ಖುಷಿಗೆ ಈಗ ಪಾರವೇ ಇಲ್ಲದಂತಾಗಿದೆ. ಗೌತಮ್-ಭೂಮಿಕಾ ಮದುವೆ ನಡೆಯಲೇಬಾರದು ಅಂತ ಹೊಂಚು ಹಾಕ್ತಿದ್ದ ಶಕುಂತಲಾಗೆ ಈಗ ಅಜ್ಜಿ ಅಂತ ಕರೆಯೋಕೆ ಒರ್ವ ಅತಿಥಿ ಆಗಮನವಾಗ್ತಿದೆ.
ಗೌತಮ್-ಭೂಮಿಕಾ ಮರು ಮದುವೆ!
ಗೌತಮ್ ಆಸ್ತಿ ಹೊಡೆಯೋಕೆ ಇಷ್ಟು ವರ್ಷಗಳ ಕಾಲ ನಾಟಕ ಮಾಡ್ತಿದ್ದ ಶಕುಂತಲಾ, ಈಗ ಇನ್ನೊಂದು ನಾಟಕ ಶುರು ಮಾಡಬೇಕಿದೆ. ಧರ್ಮಕ್ಕೆ ಜಯ ಎನ್ನುವಂತೆ ಶಕುಂತಲಾಳ ಎಲ್ಲ ಕುತಂತ್ರಗಳೂ ಮಣ್ಣುಪಾಲಾದವು. ಭೂಮಿಕಾಳ ಬ್ರೇನ್ ವಾಶ್ ಮಾಡಿ ಗೌತಮ್-ಮಧುರಾ ಮದುವೆ ಮಾಡಬೇಕು ಅಂತ ಶಕುಂತಲಾ ಪ್ಲ್ಯಾನ್ ಹಾಕಿದ್ದಳು. ಇಷ್ಟು ವರ್ಷಗಳಿಂದ ತಾಯಿ ಮಾತೇ ವೇದವಾಕ್ಯ ಎನ್ನುತ್ತಿದ್ದ ಗೌತಮ್ ಮೊದಲ ಬಾರಿಗೆ ತಾಯಿ ಮಾತನ್ನು ಮುರಿದಿದ್ದಾನೆ. ಕೊನೆಗೂ ಅವನು ಭೂಮಿಕಾಗೆ ಮತ್ತೆ ತಾಳಿ ಕಟ್ಟಿದ್ದಾನೆ.
ಮಗು ಬರ್ತಿದೆ!
ಮಧುರಾ ಜೊತೆ ಮೊದಲೇ ಮಾತಾಡಿಕೊಂಡು ಅವನು ಇನ್ನೊಂದು ಮದುವೆ ಆಗುವ ನಾಟಕ ಮಾಡಿದ್ದನು. ಈ ವಿಷಯ ಶಕುಂತಲಾಗೆ ಅರ್ಥ ಆದಾಗ ಅಕ್ಷರಶಃ ಸಿಡಿಲು ಎರಗಿದಂತಾಗಿತ್ತು. ಈಗ ಮಗು ಬರ್ತಿದೆ, ಮುಂದೆ ಏನ್ ಮಾಡ್ತಾರೆ?
ಜಯದೇವ್ ಸುಮ್ನೆ ಇರ್ತಾನಾ?
ಗೌತಮ್‌ನಿಂದ ತನಗೆ ಅಧಿಕಾರ ಸಿಗ್ತಿಲ್ಲ, ಎಲ್ಲ ಆಸ್ತಿ ಅವನ ಬಳಿ ಇದೆ ಅಂತ ಜಯದೇವ್ ಯಾವಾಗಲೂ ಹೊಟ್ಟೆಕಿಚ್ಚು ಪಡುತ್ತಿರುತ್ತಾನೆ, ಆಸ್ತಿ ಹೊಡೆಯೋಕೆ ಒಂದಿಲ್ಲೊಂದು ಸಂಚು ಮಾಡುತ್ತಿರುತ್ತಾನೆ. ಈಗ ಅವನಿಗೆ ಕಾಂಪಿಟೇಶನ್ ಕೊಡೋಕೆ ಇನ್ನೊಂದು ಮಗು ಬರುತ್ತಿದೆ ಅಂದ್ರೆ ಅವನು ಸುಮ್ನೆ ಇರ್ತಾನಾ?
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಮಗು ಸಾಯಿಸೋಕೆ ಪ್ಲ್ಯಾನ್!
ಭೂಮಿಕಾ ಹೊಟ್ಟೆಯಲ್ಲಿರುವ ಮಗು ಸಾಯಿಸಬೇಕು ಅಂತ ಅವನು ಪ್ಲ್ಯಾನ್ ಮಾಡುತ್ತಿದ್ದಾನೆ. ನಾನೇ ಇದರ ಸಾರಥ್ಯವಹಿಸ್ತೀನಿ ಅಂತ ಆ ಕಳ್ಳ ಮಾವನಿಗೂ ಹೇಳಿದ್ದಾನೆ. ಹಾಗಾದರೆ ಮುಂದೆ ಏನಾಗಬಹುದು?
ಗೌತಮ್-ಭೂಮಿಕಾಗೆ ಖುಷಿ!
ಮನೆಗೆ ಮಗು ಬರ್ತಿದೆ, ನಾನು ಅಪ್ಪ ಆಗ್ತಿದ್ದೀನಿ, ಈ ಮನೆಯಲ್ಲಿ ಹುಟ್ಟೋ ಮೊದಲ ಮಗು ನನ್ನ ಅಪ್ಪ ಆಗಿರ್ತಾರೆ ಅಂತ ಗೌತಮ್ ಸಿಕ್ಕಾಪಟ್ಟೆ ಉತ್ಸುಕನಾಗಿದ್ದಾನೆ. ಮನೆಯ ಕೆಲಸಗಾರರಿಗೆ ಅವನು ಇನ್ಮುಂದೆ ಚೆನ್ನಾಗಿ ಕೆಲಸ ಮಾಡಬೇಕು, ಮನೆ ಕೆಲಸ ಅಂತ ತಿಳಿದುಕೊಂಡು ಮಾಡಬೇಕು ಅಂತ ಪಾಠ ಕೂಡ ಮಾಡಿದ್ದಾನೆ. ಗೌತಮ್ ಉತ್ಸಾಹ ನೋಡಿ ಭೂಮಿಕಾಗೆ ಸ್ವರ್ಗದಲ್ಲಿ ಇರೋ ಥರ ಫೀಲ್ ಆಗ್ತಿದೆ.
Amruthadhaare Serial: ಮದುವೆಯಾಗ್ತಿದ್ದಂತೆ ಗುಡ್‌ನ್ಯೂಸ್ ಕೊಟ್ಟ ಭೂಮಿಕಾ; ನಡುಗಿಹೋದ ಶಕುಂತಲಾ!
ಕಥೆ ಏನು?
ಗೌತಮ್ ಹಾಗೂ ಭೂಮಿಕಾ ತಮ್ಮ ಮನೆಯವರ ಖುಷಿಗೋಸ್ಕರ ಮದುವೆ ಆದರು. ಆಗಲೇ ಇವರಿಬ್ಬರಿಗೂ ಸ್ವಲ್ಪ ಮದುವೆ ವಯಸ್ಸು ದಾಟಿತ್ತು. ಗೌತಮ್‌ಗೆ ಮದುವೆಯಾದರೆ ಅವನ ಆಸ್ತಿ ನನ್ನ ಮಕ್ಕಳಿಗೆ ಸಿಗೋದಿಲ್ಲ ಅಂತ ಮಲತಾಯಿ ಶಕುಂತಲಾ ಹೊಂಚು ಹಾಕಿದ್ದಳು. ಈಗ ಗೌತಮ್‌ಗೆ ಮದುವೆಯಾಗಿ ತಂದೆ ಕೂಡ ಆಗ್ತಿದ್ದಾನೆ.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ನಟಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ನಟಿ ವನಿತಾ ವಾಸು, ಮಧುರಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ಅವರು ನಟಿಸಿದ್ದಾರೆ.