
ಅಮೃತಧಾರೆ (Amruthadhaare) ಮಲ್ಲಿ ಮತ್ತು ಸುನಿಲ್ ಎಂಗೇಜ್ಮೆಂಟ್ ಆಗಿದೆ. ಎಲ್ಲವನ್ನೂ ತೂಗಿ, ಹಿಂದೆ-ಮುಂದೆ ನೋಡಿ ವಿಚಾರಿಸಿ ಮುಂದೆ ಹೆಜ್ಜೆ ಇಡುವ ಭೂಮಿಕಾಗಾಗಲೀ, ಗೌತಮ್ಗಾಗಲೀ ಸುನಿಲ್ ಜೈದೇವನ ಕಡೆಯವನು, ಅವನು ಮಲ್ಲಿಯನ್ನು ಮೋಸ ಮಾಡ್ತಿದ್ದಾನೆ ಎನ್ನುವ ಕಲ್ಪನೆ ಕೂಡ ಬರಲೇ ಇಲ್ಲ. ಅಷ್ಟಕ್ಕೂ ಸುನಿಲ್ ಮಲ್ಲಿಯನ್ನು ಮೊದಲೇ ಪ್ರೀತಿಸ್ತಾ ಇದ್ದ. ಆದರೆ ಆತನಿಗಿಂತ ತುಂಬಾ ದೊಡ್ಡವಳಾಗಿರುವ ಮಲ್ಲಿಯ ಜೊತೆ ಈಗ ಎಂಗೇಜ್ಮೆಂಟ್ ಮಾಡಿಕೊಂಡಿರುವುದು ಮಾತ್ರ ಜೈದೇವನಿಂದಾಗಿ.
ಜೈದೇವನ ಪತ್ನಿಯೇ ಮಲ್ಲಿ ಎನ್ನುವ ಸತ್ಯ ಸುನಿಲ್‌ಗೆ ತಿಳಿದಿದೆ. ಆತ ಮುಂದೆ ಏನು ಹೆಜ್ಜೆ ಇಡುತ್ತಾನೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ. ಅದೇ ಇನ್ನೊಂದೆಡೆ, ಆತ ಜೈದೇವ ಹೇಳಿದಂತೆ ಕೇಳಿ ಮಲ್ಲಿಯನ್ನು ಲವ್ ಮಾಡ್ತಿರೋ ವಿಷಯ ಭೂಮಿಕಾ- ಗೌತಮ್ಗೂ ಗೊತ್ತಾಗಬೇಕಿದೆ. ಅದನ್ನು ಖುದ್ದು ಸುನಿಲ್ ಹೇಳಿದರೆ ಎಲ್ಲರೂ ಸರಿಯಾಗುತ್ತೆ,ಆದರೆ ಬೇರೆಯವರ ಮೂಲಕ ಈ ವಿಷ್ಯ ಗೊತ್ತಾದರೆ ಮತ್ತೆ ಮಲ್ಲಿ ಬದುಕಲ್ಲಿ ಅಲ್ಲೋಲ-ಕಲ್ಲೋಲವೇ ಸರಿ.
ಇವುಗಳ ನಡುವೆಯೇ, ಇದೀಗ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ (Anvita Sagar) ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮಲ್ಲಿ ಮತ್ತು ಸುನಿ ಎಂಗೇಜ್ಮೆಂಟ್ ಶೂಟಿಂಗ್ ದಿವಸ ಏನೇನು ನಡೆಯಿತು ಎನ್ನುವುದನ್ನು ತೋರಿಸಲಾಗಿದೆ.
ಶೂಟಿಂಗ್ ಸಮಯದಲ್ಲಿ ಅಪ್ಪಿ ಪಾತ್ರಧಾರಿ ನಟಿ ಫುಲ್ ಸುಸ್ತಾಗಿ ಬಾಯಿ ಬಿಟ್ಟು ಮಲಗಿರುವುದನ್ನು ನೋಡಬಹುದು. ಇನ್ನೊಂದೆಡೆ ಪಾರ್ಥ ಸೇರಿದಂತೆ ಇತರರು ಹೇಗೆ ಮೇಕಪ್ ಮಾಡಿಕೊಳ್ತಾರೆ, ಕ್ಯಾಮೆರಾಮೆನ್ಗಳು ಶೂಟಿಂಗ್ ಹೇಗೆ ಸೆಟ್ ಮಾಡಿಕೊಳ್ತಾರೆ, ಅಪ್ಪು ಮತ್ತು ಮಿಂಚು ಹೇಗೆ ಜಾಲಿಮೂಡ್ನಲ್ಲಿ ಇದ್ದಾರೆ, ಎಲ್ಲವನ್ನೂ ನೋಡಬಹುದಾಗಿದೆ. ಅದರ ವಿಡಿಯೋ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.